Bigg Boss: ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಗೌಡ ಸೇರಿ ನಾಲ್ವರ ವಿರುದ್ಧ ದೂರು ದಾಖಲು
ಬಿಗ್ ಬಾಸ್ ಮನೆಯಲ್ಲಿ ‘S’ ಪದ ಬಳಕೆ ಮಾಡಿದ ಆರೋಪದ ಹಿನ್ನೆಲೆ ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧ ಹಿರಿಯ ವಕೀಲ ಪ್ರಶಾಂತ್ ಮೆತಲ್ ಅವರು ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಕಳೆದವಾರ ಬಿಗ್ ಬಾಸ್ ಮನೆಯಲ್ಲಿ ನಟಿ ಅಶ್ವಿನಿ ಗೌಡ ಮತ್ತು ರಕ್ಷಿತಾ ನಡುವೆ ವಾಗ್ವಾದ ನಡೆದಿತ್ತು. ಈ ವೇಳೆ ಅಶ್ವಿನಿ ಗೌಡ ರಕ್ಷಿತಾಳಿಗೆ ‘ಎಸ್’ ಕ್ಯಾಟಗರಿ ಅನ್ನೋ ಪದ ಬಳಕೆ ಮಾಡಿದ್ದರು. ಈ ವಿಚಾರ ಭಾರಿ ಚರ್ಚೆಯಾಗಿತ್ತು. ಇದೊಂದು ವ್ಯಕ್ತಿತ್ವ ನಿಂದನೆ ಎಂದು ಆರೋಪಿಸಿ ಅಶ್ವಿನಿಗೌಡ, ಕಲರ್ಸ್ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್ , ಕ್ಲಸ್ಟರ್ ಹೆಡ್ ಸುಷ್ಮಾ ಮತ್ತು ಡೈರೆಕ್ಟರ್ ಪ್ರಕಾಶ್ ವಿರುದ್ಧ ದೂರು ನೀಡಿದ್ದರು. ಬಿಡದಿ ಪೊಲೀಸರು ದೂರು ಸ್ವೀಕರಿಸಿ ಎನ್‌ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಿಸಿದ್ದಾರೆ.
ಎಸ್ ಎಂದರೆ ಏನು? ಅದು ಸ್ಲಂ ಅಂತಾನಾ ಅಥವಾ ಎಸ್‌ಎಎಸ್‌ಟಿ ಅಂತಾನಾ? ಆ ಬಗ್ಗೆ ಸ್ಪರ್ಧಿ ಅಶ್ವಿನಿ ಗೌಡ ಅವರು ಕ್ಲಾರಿಫಿಕೇಶನ್ ಕೊಡಬೇಕು. ಅಷ್ಟೇ ಅಲ್ಲ, ಕಲರ್ಸ್ ಚಾನೆಲ್‌ನ ಬಿಗ್ ಬಾಸ್ ಹೆಡ್ ಪ್ರಶಾಂತ್ ನಾಯಕ್, ಕ್ಲಸ್ಟರ್ ಹೆಡ್ ಸುಷ್ಮಾ ಅಥವಾ ಶೋ ಡೈರೆಕ್ಟರ್ ಪ್ರಕಾಶ್ ಅವರಾಗಲೀ ಅವರು ಅದನ್ನ ಡಿಲೀಟ್ ಮಾಡಬೇಕಿತ್ತು ಅಥವಾ ಅದನ್ನು ಮ್ಯೂಟ್ ಮಾಡಬೇಕಿತ್ತು. ಅದರೆ, ಅವರು ಯಾರೂ ಕೂಡ ಈ ಕೆಲಸ ಮಾಡಿಲ್ಲ. ಹೀಗಾಗಿ ನಾನು ಬಿಡದಿ ಪೊಲೀಸ್ ಸ್ಟೇಷನ್‌ನಲ್ಲಿ ಈ ನಾಲ್ಕು ಜನರ ಮೇಲೆ ಕಂಪ್ಲೇಂಟ್ ನೀಡಿದ್ದಿನಿ ಎಂದು ಹೇಳೀದ್ದಾರೆ.