Suicide: ಪತಿ ಕಿರುಕುಳ ತಾಳಲಾರದೇ ಮಗನೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ
ಪತಿ ಕಿರುಕುಳ ತಾಳಲಾರದೇ ಮಗನ ಜೊತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೋಟೆ ಜಿಲ್ಲೆಯ ಕೆರೂರು ಪಟ್ಟಣದಲ್ಲಿ ನಡೆದಿದೆ.
ತಾಯಿ ಫಾತಿಮಾ(21) ಮತ್ತು ಪುತ್ರ ಅಬ್ದುಲ್ (3) ಮೃತರು. ಪತಿ ಮಸ್ತಾನ್ ಸಾಬ್ ಕಿರುಕುಳಕ್ಕೆ ಬೇಸತ್ತು ಫಾತಿಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮಸ್ತಾಬ್ ಸಾಬ್ ವಿರುದ್ಧ ಪೋಷಕರು ಆರೋಪ ಮಾಡಿದ್ದಾರೆ.
ಕಳೆದ 8 ವರ್ಷದ ಹಿಂದೆ ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು.ಇತ್ತೀಚೆಗೆ ಪತಿ ಕಿರುಕುಳ ತಾಳಲಾರದೇ ಮಗನನ್ನು ಕರೆದುಕೊಂಡು ಫಾತಿಮಾ ತವರಿಗೆ ಬಂದಿದ್ದಳು. ಮಗಳು ಫಾತಿಮಾ ಸಾವಿಗೆ ಪತಿ ಕಿರುಕುಳವೇ ಕಾರಣ ಎಂದು ಪೋಷಕರು ಆರೋಪಿಸಿದ್ದು, ಕೆರೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.