Sexual-Harrsment: ಚಿಕಿತ್ಸೆಗೆ ಬಂದ ಯುವತಿಗೆ ಲೈಂಗಿಕ ಕಿರುಕುಳ: ಆರೋಪಿ ಡಾಕ್ಟರ್ ಅರೆಸ್ಟ್

ಚಿಕಿತ್ಸೆ ನೀಡುವ ನೆಪದಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಚರ್ಮರೋಗ ತಜ್ಞನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಡಾ. ಪ್ರವೀಣ್ ಬಂಧಿತ ಚರ್ಮರೋಗ ತಜ್ಞ. ಬೆಂಗಳೂರಿನ ಆಸ್ಟಿನ್ ಟೌನ್ ನಿವಾಸಿ. ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ದೂರಿನ ಪ್ರಕಾರ, ಮೂರು ದಿನಗಳ ಹಿಂದೆ ವೈದ್ಯನ ಬಳಿ ಯುವತಿ ಚಿಕಿತ್ಸೆಗಾಗಿ ಭೇಟಿ ನೀಡಿದ್ದಳು. ಚಿಕಿತ್ಸೆಯ ನೆಪದಲ್ಲಿ ವೈದ್ಯನು ಅನುಚಿತವಾಗಿ ಸ್ಪರ್ಶಿಸಿದ್ದಾರೆ. ಹಲವಾರು ಬಾರಿ ತನ್ನನ್ನು ತಬ್ಬಿಕೊಂಡು ಮುತ್ತಿಟ್ಟಿದ್ದಾರೆ ಹಾಗೂ ನನ್ನ ಜತೆಗೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ.

ಪರೀಕ್ಷೆ ಮಾಡಬೇಕು ಎಂದು ವೈದ್ಯರು ತನ್ನ ಬಟ್ಟೆ ಬಿಚ್ಚುವಂತೆ ಒತ್ತಾಯಿಸಿದ್ದಾರೆ. ಖಾಸಗಿಯಾಗಿ ಸಮಯ ಕಳೆಯಲು ಹೋಟೆಲ್ ರೂಮ್​​ಗೆ ಬರುವಂತೆ ಹೇಳಿದರು ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ. ಯುವತಿ ನೀಡಿದ ದೂರಿ ಅನ್ವಯ ಡಾ. ಪ್ರವೀಣ್ ಅವರನ್ನು ಅಶೋಕ್ ನಗರ ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Rakesh arundi

Leave a Reply

Your email address will not be published. Required fields are marked *