Bengaluru: ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿನಿ ಮೇಲೆ ಜೂನಿಯರ್ ವಿದ್ಯಾರ್ಥಿಯಿಂದಲೇ ಅತ್ಯಾಚಾರ: ಆರೋಪಿ ಬಂಧನ
ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿ ಮೇಲೆ ಅದೇ ಕಾಲೇಜಿನ ಜ್ಯೂನಿಯರ್ ವಿದ್ಯಾರ್ಥಿ ಅತ್ಯಾಚಾರ ಎಸಗಿದ್ದು, ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಸೀನಿಯರ್ ವಿದ್ಯಾರ್ಥಿನಿಯನ್ನು ಕಾಲೇಜಿನ ಶೌಚಾಲಯಕ್ಕೆ ಜೂನಿಯರ್ ವಿದ್ಯಾರ್ಥಿ ಎಳೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಸದ್ಯ ಆರೋಪಿ ಜೀವನ್ ಗೌಡ ಎಂಬಾತನನ್ನು ಹನುಮಂತನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇಬ್ಬರಿಗೂ ಮೂರು ತಿಂಗಳ ಹಿಂದೆ ಪರಿಚಯವಾಗಿತ್ತು ಎನ್ನಾಲಾಗಿದೆ.
ದಿನಾಂಕ 10-10-2025 ರಂದು ಬೆಳಿಗ್ಗೆ 8.55ಕ್ಕೆ ತರಗತಿಗೆ ಹಾಜರಾಗಿದ್ದ ಸಂತ್ರಸ್ತೆ ಆರೋಪಿ ಜೀವನ್ನಿಂದ ಕೆಲವೊಂದು ಸಾಮಗ್ರಿಗಳನ್ನು ಕಲೆಕ್ಟ್ ಮಾಡಿಕೊಳ್ಳಬೇಕಾಗಿದ್ದು, ಲಂಚ್ ಬ್ರೇಕ್ನಲ್ಲಿ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾಳೆ. ಹೀಗೆ ಲಂಚ್ ವೇಳೆಯಲ್ಲಿ ಭೇಟಿಯಾದಾಗ ಆರೋಪಿಯು ಸಂತ್ರಸ್ತೆಯ ಬಳಿ ಸ್ವಲ್ಪ ಮಾತನಾಡಬೇಕೆಂದು ಹೇಳಿದ್ದಾನೆ. ನಂತರ ಆಕೆಯನ್ನು ಬಲವಂತವಾಗಿ ವಾಶ್ ರೂಮ್ ಒಳಗೆ ಕರೆದುಕೊಂಡು ಡೋರ್ ಲಾಕ್ ಮಾಡಿ ಅತ್ಯಾಚಾರ ಎಸಗಿದ್ದಾನೆ.
ಘಟನೆಯಿಂದ ಆಘಾತಗೊಂಡ ವಿದ್ಯಾರ್ಥಿನಿ ಈ ವಿಚಾರವನ್ನು ಆಪ್ತ ಸ್ನೇಹಿತರ ಬಳಿ ಹೇಳಿಕೊಂಡಿದ್ದಾಳೆ. ಅವರು ಆಕೆಗೆ ಧೈರ್ಯ ತುಂಬಿ ಪೋಷಕರಿಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ. ನಂತರ ಪೊಷಕರ ಜತೆ ಹನುಮಂತನಗರ ಠಾಣೆಗೆ ತೆರಳಿ ಸಂತ್ರಸ್ತೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಡಿದ್ದಾರೆ. ಬಳಿಕ ಆರೋಪಿಯನ್ನು ಬಂಧಿಸಲಾಗಿದೆ.