R. Ashok: ಅಧಿಕಾರ ಹಂಚಿಕೆ ಆಗದಿದ್ದರೆ ಬೇರೆ ದಾರಿ ಎಂದು ಡಿಕೆ ಶಿವಕುಮಾರ್ ಬೆದರಿಕೆ: ಆರ್.ಅಶೋಕ್
ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಬಿಜೆಪಿಯಿಂದ ಡಿಸಿಎಂ ಸ್ಥಾನದ ಆಫರ್ ಬಂದಿತ್ತು ಎಂಬ ಹೇಳಿಕೆಗೆ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಕೌಂಟರ್ ಕೊಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನ ಪಡೆಯುವ ಉದ್ದೇಶದಿಂದ ಡಿಸಿಎಂ ಡಿ.ಕೆ.ಶಿವಕುಮಾರ್ ಪಕ್ಷದ ಹಿರಿಯ ನಾಯಕರಿಗೆ ಬೆದರಿಕೆ ಸಂದೇಶ ನೀಡಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬೆದರಿಸಲು ಡಿ.ಕೆ.ಶಿವಕುಮಾರ್ ಕರೆ ಬಂದಿದೆ ಎಂದು ಹೇಳಿದ್ದಾರೆ. ನವೆಂಬರ್ ಕ್ರಾಂತಿಯ ಸಮಯದಲ್ಲೇ ಈ ರೀತಿ ಮಾತಾಡುತ್ತಿದ್ದಾರೆ. ಅವರಿಗೆ ಯಾರು ಫೋನ್ ಮಾಡಿದ್ದರು ಎಂಬುದನ್ನು ವಿವರವಾಗಿ ತಿಳಿಸಲಿ ಎಂದು ಹೇಳಿದರು.
ಮುಖ್ಯಮಂತ್ರಿ ಸ್ಥಾನ ನೀಡಬೇಕೆಂಬ ಉದ್ದೇಶದಿಂದ ಅವರು ಪಕ್ಷದ ಹಿರಿಯರಿಗೆ ಧಮಕಿ ಹಾಗೂ ಸವಾಲು ಹಾಕುತ್ತಿದ್ದಾರೆ. ಒಂದು ವೇಳೆ ಅಧಿಕಾರ ಹಂಚಿಕೆ ಆಗದಿದ್ದರೆ, ಡಿಕೆ ಶಿವಕುಮಾರ್ ಬೇರೆ ದಾರಿ ಹಿಡಿಯಬಹುದು ಎಂಬ ಸಂದೇಶವನ್ನು ಈ ಹೇಳಿಕೆಯ ಮೂಲಕ ನೀಡಿದ್ದಾರೆ ಎಂದು ಹೇಳಿದರು.