Hasan: ಹಾಸನಾಂಬೆ ದರ್ಶನಕ್ಕೆ ಬರುವಾಗ ಕಾರು ತಡೆದಿದ್ದಕ್ಕೆ ಫುಲ್ ಗರಂ ಆದ ಹೆಚ್.ಡಿ ರೇವಣ್ಣ
ಮಾಜಿ ಸಚಿವ ಹೆಚ್.ಡಿ.ರೇವಣ್ಣ ದಂಪತಿ ಹಾಸನಾಂಬೆಯ ದರ್ಶನಕ್ಕೆಂದು ಬರುವಾಗ ತಮ್ಮ ಕಾರನ್ನು ತಡೆದ ಶಿಷ್ಟಾಚಾರ ಪಾಲನೆ ಅಧಿಕಾರಿಗಳ ವಿರುದ್ಧ ಶಾಸಕ ಹೆಚ್.ಡಿ.ರೇವಣ್ಣ ಗರಂ ಆದ ಘಟನೆ ನಡೆದಿದೆ.
ಹೆಚ್.ಡಿ.ರೇವಣ್ಣ ದಂಪತಿ ಹಾಸನಾಂಬೆಯ ದೇವಾಯಲಕ್ಕೆ ತಮ್ಮದೇ ಕಾರಿನಲ್ಲಿ ತಮ್ಮದೇ ಭದ್ರತಾ ವ್ಯವಸ್ಥೆಯೊಂದಿಗೆ ಶಿಷ್ಟಾಚಾರ ಪಾಲನೆ ಅಧಿಕಾರಿಗಳ ಗಮನಕ್ಕೆ ತಾರದೇ ಹಾಸನಾಂಬೆ ದರ್ಶನಕ್ಕೆ ರೇವಣ್ಣ ಆಗಮಿಸಿದ್ದರು. ಹೀಗಾಗಿ ಅವರ ಕಾರನ್ನು ಕಂದಾಯ ಇಲಾಖೆ ಸಿಬ್ಬಂದಿ ತಡೆದಿದ್ದಾರೆ. ಈ ವೇಳೆ ಗರಂ ಆದ ಶಾಸಕರು, ಬಳಿಕ ಕಾರಿನಿಂದ ಇಳಿದು ನಡೆದುಕೊಂಡು ದರ್ಶನಕ್ಕೆ ತೆರಳಿದ್ದಾರೆ.
ಸಾವಿರ ರೂ. ಟಿಕೆಟ್ ಪಡೆದು ನೇರ ದರ್ಶನಕ್ಕೆ ರೇವಣ್ಣ ಆಗಮಿಸಿದ್ದರು. ಬಳಿಕ ಕುಟುಂಬ ಸದಸ್ಯರ ಹೆಸರಿನಲ್ಲಿ ಅರ್ಚನೆ ಮಾಡಿಸಿ ಅರ್ಧ ಗಂಟೆಗೂ ಹೆಚ್ಚು ಕಾಲ ವಿಶೇಷ ಪೂಜೆ ಸಲ್ಲಿಸಿದರು.