Attack: ಜೆಡಿಎಸ್ ನಾಯಕ ಪ್ರತಾಪ್ ರಾವ್ ಪಾಟೀಲ್ ಪುತ್ರ ಶಿವರಾಜ್ ಪಾಟೀಲ್ ಸೇರಿ 35 ಮಂದಿ ವಿರುದ್ಧ ಎಫ್ಐಆರ್ ದಾಖಲು
ಕರ್ನಾಟಕದ ಜೆಡಿಎಸ್ ರಾಷ್ಟ್ರೀಯ ಉಪಾಧ್ಯಕ್ಷ ಪ್ರತಾಪ್ ರಾವ್ ಪಾಟೀಲ್ ಅವರ ಪುತ್ರ ಶಿವರಾಜ್ ಪಾಟೀಲ್ ಸೇರಿದಂತೆ 35 ಜನರ ವಿರುದ್ಧ ಎಫ್ಐಆರ್ ದಾಖಲಾದೆ. ಪ್ರಕರಣವು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಗುಂಪು ಕಟ್ಟಿಕೊಂಡು ಮಹಿಳೆ ಮತ್ತು ವೃದ್ಧರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.
ಜಮೀನು ವಿಚಾರವಾಗಿ ಉಂಟಾದ ವಿವಾದದಿಂದಾಗಿ ಶಿವರಾಜ್ ಪಾಟೀಲ್ ಸೇರಿ 35 ಮಂದಿಯ ಗುಂಪೊಂದು ಮಹಿಳೆ ಮತ್ತು ವೃದ್ಧರ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದಾರೆ. ಆರೋಪಿಗಳು ದೊಣ್ಣೆ, ಕಲ್ಲುಗಳನ್ನು ಬಳಸಿ ದಾಳಿ ಮಾಡದ್ದಾರೆ. ದಾಳಿಯಲ್ಲಿ ಮಹಿಳೆ ಮತ್ತು ವೃದ್ಧರ ಗಂಭೀರವಾಗಿ ಗಾಯಾಗೊಂಡಿದ್ದರು. ಸದ್ಯ ಗಾಯಾಳುಗಳನ್ನು ಗೋಕಾಕ್ನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ನಾಲ್ಕು ಎಕ್ಕರೆ ಭೂಮಿ ವಿಚಾರವಾಗಿ ಕಳೆದ 20 ವರ್ಷದಿಂದ ವಿವಾದವು ನಡೆಯುತ್ತಿತ್ತು. ಇಟ್ನಾಳ ಗ್ರಾಮದಲ್ಲಿ ಭೂಮಿ ಸಂಬಂಧಿತ ತಕರಾರುಗಳು ತೀವ್ರಗೊಂಡಿದೆ. ಆರೋಪಿಗಳು ಗುಂಪು ಕಟ್ಟಿಕೊಂಡು ಮನೆಗಳ ಮೇಲೆ ಕಲ್ಲುಗಳನ್ನು ಎಸೆದು, ಧಮ್ಕಿ ಹಾಕಿದ್ದು ಅಲ್ಲದೇ ಹಲ್ಲೆ ಮಾಡಿದ್ದಾರೆ.
ಜೆಡಿಎಸ್ನ ಪ್ರಮುಖ ನಾಯಕರಾದ ಪ್ರತಾಪ್ ರಾವ್ ಪಾಟೀಲ್ ಅವರು ಪುತ್ರ ಶಿವರಾಜ್ ಪಾಟೀಲ್ ಪ್ರಮುಖ ಆರೋಪಿಯಾಗಿದ್ದು, ಸದ್ಯ ಇಬ್ಬರು ಆರೋಪಿಗಳನ್ನು ಮಾತ್ರ ಪೊಲೀಸರು ಬಂದಿಸಿದ್ದಾರೆ. ಶಿವರಾಜ್ ಸೇರಿದಂತೆ ಉಳಿದವರನ್ನು ಬಂಧಿಸಲು ಹಿಂಜರಿಯುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಪೊಲೀಸರು ಪ್ರಕರಣವನ್ನು ಪರಿಶೀಲಿಸಿದ್ದು, ಐಪಿಸಿ ಸೆಕ್ಷನ್ 147, 323, 354 (ಮಹಿಳೆಯರ ಮೇಲೆ ದೌರ್ಜನ್ಯ) ಸೇರಿದಂತೆ ಕೇಸ್ ದಾಖಲಿಸಿಕೊಂದಿದ್ದಾರೆ.