B.K Hariprasad: ಆರ್‌ಎಸ್‌ಎಸ್‌ ಭಾರತದ ತಾಲಿಬಾನ್: ಬಿ ಕೆ ಹರಿಪ್ರಸಾದ್!

ಆರ್‌ಎಸ್‌ಎಸ್ ಅವರು ಭಾರತ ದೇಶದ ತಾಲಿಬಾನಿಗಳು. ಅವರು ಸರ್ಕಾರದಲ್ಲಿ ನೋಂದಾಯಿಸದ ಸಂಘಟನೆ. ನಾವು ಇಷ್ಟೆಲ್ಲ ಹೇಳುತ್ತಿದ್ದೇವೆ. ಅವರು ತಮ್ಮ ಸಂಸ್ಥೆ ರಿಜಿಸ್ಟರ್ ಆಗಿರುವುದನ್ನು ತೋರಿಸಲಿ. ನೋಂದಣಿ ಮಾಡಿಕೊಳ್ಳದೆ, ಸರ್ಕಾರದ ಅನುಮತಿ ಪಡೆಯದೆ ಸರ್ಕಾರಿ ಜಾಗಗಳಲ್ಲಿ ತಮ್ಮ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಆರೋಪಿಸಿದ್ದಾರೆ.

ಸರ್ಕಾರಿ ಜಾಗಗಳಲ್ಲಿ ಯಾವುದೇ ರೀತಿಯ ಕಾರ್ಯಕ್ರಮ ನಡೆಸುವ ಮೊದಲು ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯ. ಆರ್‌ಎಸ್‌ಎಸ್ ಸಂಘಟನೆ ಕರ್ನಾಟಕ ರಾಜ್ಯದಾದ್ಯಂತ ನಿರಂತರವಾಗಿ ಶಾಖೆಗಳನ್ನು ನಡೆಸುತ್ತಿದೆ. ಆದರೆ ಈ ಕಾರ್ಯಕ್ರಮಗಳಿಗೆ ಯಾವುದೇ ಅಧಿಕೃತ ಅನುಮತಿ ಪಡೆಯದೆ ಸರ್ಕಾರಿ ಜಾಗಗಳನ್ನು ಬಳಸುತ್ತಿರುವುದು ಕಾನೂನು ಉಲ್ಲಂಘನೆ ಎಂದು ಆರೋಪಿಸಿದರು.

ಆರ್‌ಎಸ್‌ಎಸ್ ಅವರು ಭಾರತ ದೇಶದ ತಾಲಿಬಾನಿಗಳು. ಅವರು ಸರ್ಕಾರದಲ್ಲಿ ನೋಂದಾಯಿಸದ ಸಂಘಟನೆ. ನಾವು ಇಷ್ಟೆಲ್ಲ ಹೇಳುತ್ತಿದ್ದೇವೆ. ಅವರು ತಮ್ಮ ಸಂಸ್ಥೆ ರಿಜಿಸ್ಟರ್ ಆಗಿರುವುದನ್ನು ತೋರಿಸಲಿ. ನೋಂದಣಿ ಇಲ್ಲದೆ ಇಷ್ಟು ವರ್ಷಗಳಿಂದ ಸರ್ಕಾರಿ ಜಾಗಗಳಲ್ಲಿ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಪ್ಯಾಲೇಸ್ತೀನ್ ಪರವಾಗಿ ಪ್ರತಿಭಟನೆ ನಡೆಸುವ ಜನರನ್ನು ಪೊಲೀಸರಿಂದ ತಕ್ಷಣವೇ ಬಂಧಿಸಲಾಗುತ್ತದೆ. ಆದರೆ, ಆರ್‌ಎಸ್‌ಎಸ್ ಶಾಖೆಗಳನ್ನು ಸರ್ಕಾರಿ ಮೈದಾನಗಳಲ್ಲಿ ನಡೆಸಲು ಪೊಲೀಸರು ಅನುಮತಿ ನೀಡುತ್ತಾರೆ. ಈ ಧೋರಣೆಯನ್ನೇ ನಾವು ಪ್ರಶ್ನಿಸುತ್ತಿದ್ದೇವೆ ಎಂದು ಹೇಳಿದರು.

ತಮಿಳುನಾಡಿನಲ್ಲಿ ಶಾಲಾ-ಕಾಲೇಜುಗಳಲ್ಲಿ ಕಾರ್ಯಕ್ರಮ ನಡೆಸಲು ಹೋದ ಆರ್‌ಎಸ್‌ಎಸ್ ಸದಸ್ಯರ ಮೇಲೆ ಸರ್ಕಾರ ಕ್ರಮ ತೆಗೆದುಕೊಂಡಿದೆ. ಅವರನ್ನು ಬಂಧಿಸಿ ಕೇಸ್‌ಗಳನ್ನೂ ದಾಖಲಿಸಲಾಗಿದೆ. ಇದೇ ರೀತಿಯ ಕ್ರಮವನ್ನು ಕರ್ನಾಟಕದಲ್ಲಿಯೂ ಕೈಗೊಳ್ಳಬೇಕು ಎಂದು ಹೇಳಿದರು.





Rakesh arundi

Leave a Reply

Your email address will not be published. Required fields are marked *