Suicide: ತಂದೆಯನ್ನ ಕಳೆದುಕೊಂಡ ಮಗಳು ಮನನೊಂದು ಆತ್ಮಹತ್ಯೆ

ತಂದೆಯನ್ನು ಕಳೆದುಕೊಂಡ ಮಗಳು ಮನನೊಂದು ತಾನೂ ಸಹ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. 22 ವರ್ಷಯ ವಿದ್ಯಾರ್ಥಿನಿ ಸ್ವರ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸ್ವರ್ಣ ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಎಂಎಸ್‌ಸಿ ಪದವಿ ವ್ಯಾಸಂಗ ಮಾಡುತ್ತಿದ್ದಳು. ಕಳೆದ 3 ತಿಂಗಳ ಹಿಂದೆ ಅವಳ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆಯಿಂದ ಮಾನಸಿಕವಾಗಿ ಕುಗ್ಗಿದ್ದ ಸ್ವರ್ಣ, ಕಾಲೇಜು ಹಾಸ್ಟೆಲ್ನೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ನಂತರ ಮನೆಗೆ ಬಂದಿದ್ದ ಸ್ವರ್ಣಳನ್ನು ಆಕೆಯ ತಾಯಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮಗಳು ಸ್ವರ್ಣ ಶನಿವಾರ ತಡರಾತ್ರಿ ಸಾವನ್ನಪ್ಪಿದ್ದಾಳೆ.

ಗಂಡ ಮತ್ತು ಮಗಳನ್ನು ಕಳೆದುಕೊಂಡಿರುವ ಸ್ವರ್ಣಳ ತಾಯಿಗೆ ದಿಕ್ಕೇ ತೋಚದಂತಾಗಿದೆ. ಅಕ್ಕನ ಸಾವಿನಿಂದ ತಮ್ಮ ಸಹ ಕುಗ್ಗಿ ಹೋಗಿದ್ದು, ತಾಯಿ ಮಗ ಇಬ್ಬರೂ ಆತಂಕಕ್ಕೊಳಗಾಗಿದ್ದಾರೆ. ಒಂದೇ ಕುಟುಂಬದಲ್ಲಿ ಕೆಲವೇ ತಿಂಗಳಗಳ ಅಂತರದಲ್ಲಿ ಎರಡು ಆತ್ಮಹತ್ಯೆಯ ಘಟನೆಗಳು ಸಂಭವಿಸಿದ್ದು, ತಾಯಿಯನ್ನು ದಿಕ್ಕುತೋಚದ ಸ್ಥಿತಿಗೆ ತಂದಿದೆ.





Rakesh arundi

Leave a Reply

Your email address will not be published. Required fields are marked *