Dharmasthala: ಅಬ್ಬಬ್ಬಾ! ಒಂದೇ ದಿನ 72 ಶ★ವ ದಫನ್. ಧರ್ಮಸ್ಥಳದಲ್ಲಿ ಮತ್ತೊಂದು ಭೀಕರ ಸತ್ಯ..!
ಧರ್ಮಸ್ಥಳ ಕೇಸ್ಗೆ ಸಂಬಂಧಪಟ್ಟಂತೆ ಇವತ್ತು ಮತ್ತೆ ದೂರು ಸಲ್ಲಿಸಿರೋ ಗಿರೀಶ್ ಮಟ್ಟಣ್ಣವರ್ ಕೆಲವು ಅಚ್ಚರಿ ವಿಷ್ಯಗಳನ್ನು ಹಂಚಿಕೊಂಡಿದ್ದಾರೆ. ಅಸಲಿಗೆ ಧರ್ಮಸ್ಥಳ ಸುತ್ತಾಮುತ್ತಾ ಧಫನ್ ಮಾಡಲಾಗಿರೋ ಮೃತದೇಹಗಳಿಗೆ ಸಂಬಂಧಪಟ್ಟಂತೆ ಕೆಲವು ಸಂಶಯಗಳಿದ್ದು ಅವುಗಳನ್ನು ಮಾಧ್ಯಮಗಳ ಮುಂದೆ ತರೋ ಪ್ರಯತ್ನ ಮಾಡಿದ್ದಾರೆ. ಇನ್ನು ಈ ಕೇಸ್ಗೆ ಸಂಬಂಧಪಟ್ಟಂತೆ ಎಸ್ಐಟಿಗೂ ದೂರು ಸಲ್ಲಿಸಿದ್ದಾರೆ. ಸೌಜನ್ಯಾ ತಾಯಿ ಕುಸುಮಾವತಿ ಹಾಗೂ ಗಿರೀಶ್ ಮಟ್ಟಣ್ಣವರ್ ಸೇರಿ ಸೌಜನ್ಯಾಳಿಗೆ ಇದೇ ರೀತಿಯ ಅನ್ಯಾಯ ಆಗಿದೆ ಎಂದು ಎಸ್ಐಟಿ ಗಮನಕ್ಕೆ ತಂದಿದ್ದಾರೆ.
1990 ರಿಂದ 2021 ರವರೆಗೆ ಧರ್ಮಸ್ಥಳ ಹಾಗೂ ಸುತ್ತಮುತ್ತ ಪತ್ತೆಯಾಗಿರೋ ಕನಿಷ್ಟ 74 ಅನ್ನ್ಯಾಚುರಲ್ ಡೆಡ್ ಬಾಡೀಸ್ಗಳನ್ನು ಹೂತಿರೋ ಬಗ್ಗೆಯೇ ಸ್ಪೋಟಕ ಸತ್ಯವೊಂದನ್ನು ಹಂಚಿಕೊಂಡಿದ್ದಾರೆ. ಈ ಮೃತದೇಹಗಳೆಲ್ಲಾ ಪತ್ತೆಯಾದ ದಿನವೇ ಸಮಾಧಿ ಮಾಡಲಾಗಿದೆ. ಇದು ಔಪಚಾರಿಕವಾಗಿ ಪಂಚಾಯತ್ ನಲ್ಲಿರೋ ಸ್ಪಷ್ಟ ದಾಖಲೆಗಳು. ದಾಖಲೆಗಳ ಆಧಾರದಲ್ಲೇ ಈ ಅಚ್ಚರಿ ಸತ್ಯಗಳನ್ನು ರಿವೀಲ್ ಮಾಡಲಾಗ್ತಿದ್ದು, ಮೃತದೇಹಗಳು ಪತ್ತೆಯಾದ ದಿನವೇ ಧಫನ್ ಮಾಡಿರೋ ಪ್ರಕ್ರಿಯೆಗಳಲ್ಲಿ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಿದ್ದಾರಾ..? ಎಫ್ಎಸ್ಎಲ್ ಟೆಸ್ಟ್ ಮಾಡಲಾಗಿದ್ಯಾ..? ಕಾನೂನು ಶಿಷ್ಟಾಚಾರಗಳನ್ನು ಪಾಲನೆ ಮಾಡಲಾಗಿದ್ಯಾ..? ಈ ಎಲ್ಲಾ ಗಂಭೀರ ಪ್ರಶ್ನೆಗಳು ಅನೇಕ ಅನುಮಾನಗಳನ್ನು ಹುಟ್ಟಿಸ್ತಾ ಇವೆ.
ಸದ್ಯ ವ್ಯಕ್ತವಾಗ್ತಿರೋ ಅನುಮಾನಗಳಲ್ಲಿ ಧರ್ಮಸ್ಥಳ ಹಾಗೂ ಸುತ್ತಾಮುತ್ತಾ ಒಟ್ಟಾರೆಯಾಗಿ 72 ಮೃತದೇಹಗಳನ್ನು ಸಿಕ್ಕದಿನವೇ ಹೂಳಲಾಗಿದ್ದರೆ. ಆದರೆ 2018 ರಲ್ಲಿ ಬೇರೆ ಬೇರೆ ದಿನ ಪತ್ತೆಯಾದ ಎರಡು ಶವಗಳನ್ನು ಒಂದೇ ದಿನ ಕೆ.ಎಸ್ ಹೆಗ್ಡೆ ಸ್ಮಶಾನದಲ್ಲಿ ಸಮಾಧಿ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗೆ ಸೇರಿದ ಸ್ಮಶಾನದಲ್ಲಿ ಮೃತದೇಹಗಳನ್ನು ಯಾಕೆ ಹೂಳಲಾಗಿದೆ ಅನ್ನೋ ಶಾಕಿಂಗ್ ಸಂಗತಿ ಹಲವು ಗೊಂದಲಗಳನ್ನು ಉಂಟು ಮಾಡಿದೆ. ಖಾಸಗಿ ಆಸ್ಪತ್ರೆಯಲ್ಲಿ ಯಾವ ವಿಷ್ಯಕ್ಕೆ ಧಫನ್ ಮಾಡಲಾಗಿದೆ ಅನ್ನೋ ಮಾಹಿತಿಯನ್ನು ಪಂಚಾಯತ್ ದಾಖಲೆಗಳಲ್ಲಿ ಉಲ್ಲೇಖವನ್ನೇ ಮಾಡಿಲ್ಲ. ಅದ್ರ ಬಗ್ಗೆ ರಿಜಿಸ್ಟರ್ನಯೂ ಬರೆಯಲಾಗಿಲ್ಲ. ಆಸ್ಪತ್ರೆ ಬೆಳ್ತಂಗಡಿಯಿಂದ ಸುಮಾರು 60 ಕಿಮೀ ದೂರದಲ್ಲಿದೆ. ಹಾಗೂ ಅಷ್ಟು ದೂರದ ಆಸ್ಪತ್ರೆಗೆ ಯಾಕೆ ಕಳಿಸಿಕೊಡಲಾಯ್ತು ಅನ್ನೋ ಗೊಂದಲ ಉಂಟಾಗಿದೆ.
ಇನ್ನು ಪಂಚಾಯತ್ ಒಂದೇ ದಿನ ಹೂಳಲಾಗಿದ್ದರು ಸಮಾಧಿ ಸ್ಥಳ ಯಾವುದು ಅನ್ನೋದನ್ನು ಮೆನ್ಷನ್ ಮಾಡಿಲ್ಲ. ಇದೂ ಕೂಡ ಹಲವು ಅನುಮಾನಗಳನ್ನು ಮೂಡಿಸ್ತಿದೆ. ಈ ವಿಷಯವನ್ನು ಈಗ ಸಂತ್ರಸ್ತೆ ಸೌಜನ್ಯಾಳ ತಾಯಿ ಕುಸುಮಾವತಿ ವಿಶೇಷ ತನಿಖಾ ತಂಡದ (ಎಸ್ಐಟಿ) ಗಮನಕ್ಕೂ ತಂದಿದ್ದಾರೆ. ಸೌಜನ್ಯಾಳನ್ನು 2012 ರಲ್ಲಿ ಕೊಲ್ಲಲಾಯಿತು. ಕುಸುಮಾವತಿ ಶನಿವಾರ ಎಸ್ಐಟಿಗೆ ಸಲ್ಲಿಸಿದ ಅರ್ಜಿಯಲ್ಲಿ ಈ ಅನುಮಾನಾಸ್ಪದ ಸಾವುಗಳ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಕೋರಿದ್ದಾರೆ. ಕುಸುಮಾವತಿಯ ಅರ್ಜಿಯಲ್ಲಿ ತನ್ನ ಅಪ್ರಾಪ್ತ ಮಗಳಿಗೂ ಅದೇ ಸ್ಥಿತಿ ಎದುರಾಗಿದೆ ಎಂದು ಒತ್ತಿ ಹೇಳಿದ್ದಾರೆ.
ಅರ್ಜಿಯಲ್ಲಿ ನೇತ್ರಾವತಿ ನದಿ, ಸ್ನಾನಘಟ್ಟ, ಧರ್ಮಸ್ಥಳ ಬಸ್ ನಿಲ್ದಾಣ, ಪಾರ್ಕಿಂಗ್ ಪ್ರದೇಶಗಳು ಮತ್ತು ಬಾಹುಬಲಿ ಬೆಟ್ಟದ ಬಳಿಯ ಅರಣ್ಯ ಪ್ರದೇಶಗಳಂತಹ ವಿವಿಧ ಸ್ಥಳಗಳಲ್ಲಿ ಮೃತ ದೇಹಗಳು ಸಿಕ್ಕಿದ್ದು, ಅದರಲ್ಲಿ ಐವರು ಭಿಕ್ಷುಕರು ಅಥವಾ ಗುರುತಿಸಲಾಗದ ವ್ಯಕ್ತಿಗಳು ಎಂದು ವಿವರಿಸಲಾದ – 74 ಪ್ರಕರಣಗಳನ್ನು ಪಟ್ಟಿ ಮಾಡಿದೆ. ಪ್ರತಿಯೊಂದು ನಮೂದು ಪತ್ತೆಯಾದ ದಿನಾಂಕ ಮತ್ತು ಸಮಾಧಿ ಮಾಡಿದ ದಿನಾಂಕ ಒಂದೇ ಎಂದು ತೋರಿಸುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ, ಧರ್ಮಸ್ಥಳ ಪೊಲೀಸರು ಅದೇ ದಿನ ಗ್ರಾಮ ಪಂಚಾಯಿತಿಗೆ ಅಧಿಕೃತ ಪತ್ರಗಳ ಮೂಲಕ ಮಾಹಿತಿ ನೀಡಿದ್ದಾರೆ. ಹಾಗಾಗಿ ,ವಿಸ್ತೃತ ತನಿಖೆ, ಮರಣೋತ್ತರ ಪರೀಕ್ಷೆಯ ವಿವರಗಳು ಅಥವಾ ಗುರುತಿಸುವಿಕೆಯ ಪ್ರಯತ್ನವನ್ನು ಉಲ್ಲೇಖಿಸದೆ ತಕ್ಷಣವೆ ಸಮಾಧಿ ಮಾಡಲು ಸೂಚಿಸಿದ್ದಾರೆ.
ಈಗ ಸಿಕಿರೋ ದಾಖಲೆಗಳು 1990 ರಿಂದ 2021 ರವರೆ ಅಂದ್ರೆ ಮೂರು ದಶಕಗಳಲ್ಲಿ ನಿಗೂಢ ಸಾವುಗಳು ನಡೆದಿದೆ ಎನ್ನಲಾಗಿದೆ. ನದಿಗಳು, ದೇವಾಲಯದ ಆವರಣಗಳು ಮತ್ತು ಸಾರ್ವಜನಿಕ ಪ್ರದೇಶಗಳಿಂದ ಹೊರತೆಗೆಯಲಾದ ಶವಗಳನ್ನು ತ್ವರಿತವಾಗಿ ಸಮಾಧಿ ಮಾಡಲಾಗಿದೆ. ತಕ್ಷಣ ಪತ್ತೆಯಾದ ಕೆಲವೇ ಗಂಟೆಗಳಲ್ಲಿ ಹಲವಾರು ಪ್ರಕರಣಗಳ ಮೃತರನ್ನು “ಭಿಕ್ಷುಕ,” “ಪ್ರಜ್ಞಾಹೀನ,” ಅಥವಾ “ಆತ್ಮಹತ್ಯೆ” ಎಂದು ವಿವರಿಸಿವೆ. ಆದರೆ ಯಾವುದೇ ದೃಢೀಕರಣ ಮಾಹಿತಿಗಳನ್ನು ನೀಡಲಾಗಿಲ್ಲ ಎಂದು ಆರೋಪಿಸಲಾಗಿದೆ. ಕರ್ನಾಟಕದ ಅತ್ಯಂತ ಗೌರವಾನ್ವಿತ ಯಾತ್ರಾ ಕೇಂದ್ರಗಳಲ್ಲಿ ಒಂದಾದ ಕ್ಷೇತ್ರ. ಅಲ್ಲಿ ಇಂತಹ ಅಸ್ವಾಭಾವಿಕ ಸಾವುಗಳನ್ನು ಮುಚ್ಚಿಹಾಕುವುದು ಮತ್ತು ಗುರುತಿಸಲಾಗದ ದೇಹಗಳನ್ನು ಸರಿಯಾಗಿ ನಿರ್ವಹಿಸದಿರುವ ಬಗ್ಗೆ ಸಾರ್ವಜನಿಕರಲ್ಲಿ ಕಳವಳ ಹೆಚ್ಚುತ್ತಿರುವ ಮಧ್ಯೆ ಈ ಸ್ಫೋಟಕ ಸತ್ಯಾಂಶಗಳನ್ನು ಹೊರಗೆಳೆಯಲಾಗ್ತಿದೆ ಎಂದು ದೂರು ನೀಡಲಾಗಿದೆ.