Actor Jayakrishnan: ಕ್ಯಾಬ್ ಚಾಲಕನಿಗೆ ಟೆರರಿಸ್ಟ್ ಎಂದ ಮಲಯಾಳಂ ನಟನ ಬಂಧನ
ಮಂಗಳೂರಿನ ಕ್ಯಾಬ್ ಚಾಲಕನಿಗೆ ಟೆರರಿಸ್ಟ್ ಎಂದು ನಿಂದಿಸಿದ ಆರೋಪದ ಮೇಲೆ ಮಲಯಾಳಂ ನಟ ಜಯಕೃಷ್ಣನ್ ಅವರನ್ನು ಬಂಧಿಸಲಾಗಿದೆ. ಜಯಕೃಷ್ಣನ್ ಸೇರಿ ಮೂವರ ಮೇಲೆ ದೂರು ದಾಖಲು ಮಾಡಲಾಗಿತ್ತು. ಈಗ ಪೊಲೀಸರು ನಟನ ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಸೆ.09ರಂದು ಮಂಗಳೂರಿಗೆ ಬಂದಿದ್ದ ಜಯಕೃಷ್ಣನ್, ಸಂತೋಷ್ ಅಬ್ರಾಹಂ, ವಿಮಲ್ ಊಬರ್ ಬುಕ್ ಮಾಡಿದ್ದರು. ಊಬರ್ ಕ್ಯಾಬ್ ಚಾಲಕ ಶಫೀಕ್ ಅಹ್ಮದ್ ಕರೆ ಮಾಡಿ ಎಲ್ಲಿಗೆ ಬರಬೇಕು ಎಂದು ಕೇಳಿದಾಗ, ಅವರು ಮೊದಲು ಹಿಂದಿಯಲ್ಲಿ ಮಾತನಾಡಿದ್ದರು. ಶಫೀಕ್ ಕನ್ನಡದಲ್ಲಿ ಮಾತನಾಡಿದಾಗ, ಮಲಯಾಳಂನಲ್ಲಿ ಮಾತನಾಡುವಂತೆ ಜಯಕೃಷ್ಣನ್ ಸೂಚಿಸಿದ್ದರು.
ಈ ವೇಳೆ ಜಯಕೃಷ್ಣನ್ ತನ್ನನ್ನು ಮುಸ್ಲಿಂ ಟೆರರಿಸ್ಟ್ ಎಂದೆಲ್ಲ ನಿಂದಿಸಿದ್ದಾರೆ ಎಂದು ಶಫೀಕ್ ಅಹ್ಮದ್ ಆರೋಪಿಸಿದ್ದಾರೆ. ಮುಸ್ಲಿಂ ತೀವ್ರವಾದಿ, ಟೆರರಿಸ್ಟ್ ಎಂದು ಅಪಹಾಸ್ಯ ಮಾಡಿದ್ದಾರೆ. ಅಲ್ಲದೆ ನನ್ನ ತಾಯಿಯನ್ನು ಗುರಿಯಾಗಿಸಿಕೊಂಡು ಮಲಯಾಳಂನಲ್ಲಿ ಅವಾಚ್ಯ ಭಾಷೆಯನ್ನು ಬಳಸಿದ್ದಾರೆ ಎಂದು ದೂರು ನೀಡಿದ್ದಾನೆ.
ಜಯಕೃಷ್ಣನ್ ಅನೇಕ ಕ್ಯಾಬ್ ಚಾಲಕರಿಗೂ ಇದೇ ರೀತಿ ಆಟ ಆಡಿಸಿದ್ದಾರೆ ಎನ್ನಲಾಗಿದೆ. ಶಫೀಕ್ ಅಹ್ಮದ್ ಸಲ್ಲಿಸಿದ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 352, 353(2)ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಜಯಕೃಷ್ಣನ್‌ನನ್ನು ಪೊಲೀಸರು ಬಂಧಿಸಿದ್ದಾರೆ.