Road Accident: ಬಿಎಂಟಿಸಿ ಬಸ್ ಹರಿದು 9 ವರ್ಷದ ಬಾಲಕಿ ಸಾವು

ಬಿಎಂಟಿಸಿ ಬಸ್ ಹರಿದ ಪರಿಣಾಮ 9 ವರ್ಷದ ಬಾಲಕಿ ಸ್ಥಳಲ್ಲೇ ಸಾವನ್ನಪ್ಪಿವ ಘಟನೆ ಬೆಂಗಳೂರಿನ ರಾಜಾಜಿನಗರದ 1ನೇ ಬ್ಲಾಕ್​ನಲ್ಲಿ ​ನಡೆದಿದೆ. ಮೃತ ಬಾಲಕಿಯನ್ನು ಭುವನಾ ಎಂದು ಗುರುತಿಸಲಾಗಿದೆ.

ಬಾಲಕಿ ರಾಜಾಜಿನಗರದ ಪಾಂಚಜನ್ಯ ವಿದ್ಯಾಪೀಠ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು ಎನ್ನಲಾಗಿದೆ. ಬಸ್​ ಡಿಕ್ಕಿ ಆಗುತ್ತಿದ್ದಂತೆ ಬಾಲಕಿ ಸಾವನ್ನಪ್ಪಿದ್ದಾಳೆ. ಇತ್ತ ಡ್ರೈವರ್ ಸ್ಥಳದಿಂದ ಪರಾರಿ ಆಗಿದ್ದಾನೆ.

ಬಾಲಕಿಯ ಪೋಷಕರು ಜೋಳ ಮಾರಿಕೊಂಡು ಮಗಳನ್ನು ಓದಿಸುತ್ತಿದ್ದರು. ಇವರು ಮಹಾಲಕ್ಷ್ಮೀ ಲೇಔಟ್‌ನ ಬೋವಿ ಪಾಳ್ಯದಲ್ಲಿ ವಾಸಿಸುತ್ತಿದ್ದರು. ಸದ್ಯ ಮೃತದೇಹವನ್ನು ಎಂ.ಎಸ್‌. ರಾಮಯ್ಯ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಚಾಲಕನ ಅಜಾಗರೂಕತೆಯಿಂದ ಮಗು ಬಲಿಯಾಗಿದೆ. ಸದ್ಯ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಕಳೆದ ನಾಲ್ಕು ದಿನಗಳ ಹಿಂದಷ್ಟೇ ಕಮಲಾನಗರದಲ್ಲಿ ಬಿಎಂಟಿಸಿ ಬಸ್‌ನ ಬ್ರೇಕ್‌ ಫೇಲ್ಯೂರ್‌ ಆಗಿ ನಂದಿನಿ ಪಾರ್ಲರ್‌ಗೆ ನುಗ್ಗಿದ ಘಟನೆ ನಡೆದಿತ್ತು. ಬಸ್‌ನಲ್ಲಿ ಇಪ್ಪತ್ತು ಮಂದಿ ಪ್ರಯಾಣಿಕರಿದ್ದರು. ಯಾವುದೇ ಪ್ರಾಣಹಾನಿಯಾಗಿರಲಿಲ್ಲ.

Rakesh arundi

Leave a Reply

Your email address will not be published. Required fields are marked *