Dharmasthala:ಧರ್ಮಸ್ಥಳ ಮಾಹಿತಿ ಕೇಂದ್ರಕ್ಕೂ ನೊಟೀಸ್‌! ಸಂಸ್ಥೆಯ ಮಾಜಿ ಉದ್ಯೋಗಿಗಳಿಗೆ ನೊಟೀಸ್‌. ಬೆಳ್ತಂಗಡಿ ನಿ. ಪೊಲೀಸರಿಗೆ ಸಮನ್ಸ್‌..!

ಧರ್ಮಸ್ಥಳ ಗ್ರಾಮದಲ್ಲಿ ಅಕ್ರಮವಾಗಿ ಸಾಮೂಹಿಕ ಅಂತ್ಯಕ್ರಿಯೆ ಕೇಸ್‌ಗೆ ಸಂಬಂಧಪಟ್ಟಂತೆ ಎಕ್ಸ್‌ಕ್ಲೂಸಿವ್‌ ಅಪ್ಡೇಟ್‌ ಒಂದು ಸಿಕ್ಕಿದ್ದು ನಿಗೂಢತೆಯ ಜಾಡು ಇನ್ನು ವಿಶಾಲವಾಗ್ತಾ ಸಾಗ್ತಿದೆ. ಅಲ್ಲಿ ಹಲವಾರು ಅನುಮಾನಗಳನ್ನು ವ್ಯಕ್ತಪಡಿಸಿದ್ದನ್ನೇ ದಾಖಲೆಗಳಾಗಿ ಎಸ್‌ಐಟಿ ಪರಿಗಣಿಸದೆ, ಅದರ ವಿಸ್ತಾರ ಇನ್ನು ಎಷ್ಟಿದೆ ಅನ್ನೋದನ್ನು ಅರಿಯಲು ಎಸ್‌ಐಟಿ ಮುಂದಾಗ್ತಿದೆ. ಈಗಾಗ್ಲೇ ಮೊಹಂತಿ ಬ್ಯಾಕ್‌ ಟು ಬ್ಯಾಕ್‌ ಮೀಟಿಂಗ್‌ ನಡೆಸಿ ಪೊಲೀಸ್‌ ಅಧಿಕಾರಿಗಳಿಗೆ ಹಾಗೂ ಎಸ್‌ಐಟಿ ಸಿಬ್ಬಂಧಿಗಳಿಗೆ ಖಡಕ್‌ ಸಂದೇಶವನ್ನು ಕೊಟ್ಟಿದ್ದಾರೆ ಅನ್ನೋ ಮಾಹಿತಿ ಸಿಗ್ತಾ ಇವೆ. ಇನ್ನು ಹೆಚ್ಚಿನದಾಗಿ ಧರ್ಮಸ್ಥಳ ಸಂಸ್ಥೆಗೆ ಸಂಬಂಧಪಟ್ಟಂತೆ ಅನೇಕ ಮಾಹಿತಿಗಳನ್ನು ಕಲೆ ಹಾಕ್ತಿರೋ ಎಸ್‌ಐಟಿ ಟೀಮ್‌ ಧರ್ಮಸ್ಥಳ ಸಂಸ್ಥೆಯ ಅನೇಕ ಮಾಜಿ ಹಾಗೂ ಹಾಲಿ ಎಂಪ್ಲಾಯ್‌ಗಳನ್ನು ತನಿಖೆಗೆ ಒಳಪಡಿಸಿದೆ ಅನ್ನೋ ಸ್ಪೋಟಕ ಮಾಹಿತಿಳಗಳು ಲಭ್ಯವಾಗ್ತಿವೆ.

ಇನ್ನು ಧರ್ಮಸ್ಥಳ ಗ್ರಾಮದಲ್ಲಿ ಈಗಾಗ್ಲೇ ಕಾರ್ಯನಿರ್ವಹಿಸಿರೋ ಪಿಎಸ್‌ಐಗಳು ಕಾನ್‌ಸ್ಟೇಬಲ್‌ಗಳು ಸೇರಿದಂತೆ ವಿವಿಧ ಗ್ರೇಡ್‌ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಿ ವಿಚಾರಣೆ ಮಾಡಿದೆ. ಧರ್ಮಸ್ಥಳ ಹಾಗೂ ಪೊಲೀಸ್‌ ಸ್ಟೇಷನ್‌ಗಳಲ್ಲಿ ವರ್ಕ್‌ ಮಾಡಿರೋ 40ಕ್ಕೂ ಹೆಚ್ಚಿನ ಪೊಲೀಸ್‌ ಅಧಿಕಾರಿಗಳಿಗೆ ಈಗಾಗ್ಲೇ ಸಮನ್ಸ್‌ ಜಾರಿ ಮಾಡಿದ್ದು ತನಿಖೆಯ ಭಾಗವಾಗಿ ಅವ್ರನ್ನು ವಿಚಾರಣೆಗೆ ಒಳಪಡಿಸಲಿದೆ ಅನ್ನೋ ಅಚ್ಚರಿ ಮಾಹಿತಿಗಳು ಬೆಳಕಿಗೆ ಬರ್ತಾ ಇವೆ. ಹಾಗಾಗಿ ಧರ್ಮಸ್ತಳ ಕೇಸ್‌ ಚಾರ್ಜ್‌ ಶೀಟ್‌ ಊಹೆಗೂ ಮೀರಿದ ದಾಖಲೆಗಳ ಪುಟಗಳಾಗಿ ಬದಲಾಗಬಹುದು.ಇದು ಕೇಲವ ಚಿನ್ನಯ್ಯ, ಗಿರೀಶ್‌ ಮಟ್ಟಣ್ಣವರ್‌, ಸಮೀರ್‌ ಸೇರಿದಂತೆ್ ಮಹೇಶ್‌ ತಿಮರೊಡ್ಡಿ ಸೇರಿದಂತೆ ಕೆಲವೊಬ್ಬರಿಗೆ ಮಾತ್ರ ಸೀಮಿತವಾದ ತನಿಖೆ ಮಾತ್ರವಲ್ಲ. ಇದೊಂದು ವ್ಯಾಪಕವಾಗಿ ವಿಸ್ತರಿಸಿಕೊಳ್ತಿರೋ ತನಿಖೆ. ಇದು ವೆನ್‌ಲಾಕ್‌ ಆಸ್ಪತ್ರೆ, ಬೆಳ್ತಂಗಡಿ ಅಸ್ಪತ್ರೆ, ಕೆ.ಎಸ್‌ ಹೆಗ್ಡೆ ಮೆಡಿಕಲ್‌ ಆಸ್ಪತ್ರೆಯನ್ನು ವ್ಯಾಪಿಸಿದ್ದು ಹಲವು ಅನುಮಾನಗಳಿಗೂ ಉತ್ತರ ಕಂಡುಕೊಳ್ಳಬೇಕಿದೆ.


ಇಲ್ಲಿ ಯಾರೂ ಕೂಡ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನಲಾಗ್ತಿದ್ದು, ಇದು ನಾಳೆ ಯಾರ ಹೆಗಲೇರುವುದೋ ಅನ್ನೋ ಕಾತರ ಎಸ್‌ಐಟಿ ತನಿಖೆಯಲ್ಲಿ ಬಯಲಾಗ್ತಾ ಹೋಗ್ತಿದೆ. ಧರ್ಮಸ್ಥಳದ ನಿವೃತ್ತ ಪೊಲೀಸ್‌ ಅಧಿಕಾರಿಗಳು ಎಸ್‌ಐಟಿಗೆ ಉತ್ತರ ಕೊಡಬೇಕಾದ ಅನಿವಾರ್ಯತೆ ಎದುರಾಗಿದೆ. ಅಲ್ಪ ಅಕ್ರಮವನ್ನು ಮುಚ್ಚಿಡಲು ದೊಡ್ಡ ಸುಳ್ಳಿನ ಮೊರೆ ಹೋದ್ರೆ ಎಲ್ಲಾ ಅಕ್ರಮಗಳು ಬೆತ್ತಲಾಗುವ ಸಾಧ್ಯತೆಗಳು ಕೂಡ ಇವೆ. ಹಾಗಾಗಿ ನಿವೃತ್ತ ಪೊಲೀಸ್‌ ಅಧಿಕಾರಿಗಳು ತಮ್ಮ ಸೇವಾವಧಿಯಲ್ಲಿ ಮಾಡಿದ ಎಡವಟ್ಟುಗಳಿಗೆ ನಿಖರ ಕಾರಣಗಳನ್ನು ಕೊಡ್ಲೇಬೇಕಾಗಿದೆ.


ಎಸ್‌ಐಟಿ ಪಕ್ಷಪಾತಿ ತನಿಖೆ ಮಾಡ್ತಿದೆ, ಕೇವಲ ಸೌಜನ್ಯ ಹೋರಾಟಗಾರರನ್ನು ಟಾರ್ಗೆಟ್‌ ಮಾಡಿ ಇನ್ವಿಸ್ಟಿಗೇಷನ್‌ ಮಾಡ್ತಿದೆ ಎಂಬ ಭಾವನೆ ಶುದ್ಧ ಸುಳ್ಳು. ಎಸ್‌ಐಟಿ ಈ ಕಾರ್ತಕರ್ತರೊಂದಿಗೆ ಯಾವುದೇ ಲಿಂಕ್‌ ಇಲ್ಲದ ಅನೇಕ ವ್ಯಕ್ತಿಗಳನ್ನು ತನಿಖೆ ಮಾಡಿದೆ. ಅನುಮಾನಿತ ಎಲ್ಲರಿಗೂ ಸಮನ್ಸ್‌ ಜಾರಿ ಮಾಡಿದೆ. ಇಲ್ಲಿವರೆಗೂ 200ಕ್ಕೂ ಹೆಚ್ಚು ವ್ಯಕ್ತಿಗಳನ್ನು ತನಿಖೆಗೆ ಒಳಪಡಿಸಿದ್ದು, ಎಲ್ಲರನ್ನೂ ಹುಟ್ಟಿನಿಂದ ಇಲ್ಲಿವರೆಗಿನ ಎಲ್ಲಾ ಮಾಹಿತಿಗಳು, ಟ್ರಾವೆಲ್‌ ಹಿಸ್ಟರಿ, ಫ್ಯಾಮಿಲಿ ಬ್ಯಾಕ್‌ರೌಂಡ್ಸ್‌, ಎಜುಕೇಷನ್‌,ಅಕೌಂಟ್‌ ಟ್ರಾನ್ಸಕ್ಷನ್‌ ಸೇರಿ ದಾಖಲೆ ಸಮೇತ ಕಲೆ ಹಾಕಿದೆ. ಪೊಲೀಸರಲ್ಲದೆ, ಧರ್ಮಸ್ಥಳ ಸಂಸ್ಥೆಯ ಮಾಜಿ ಮತ್ತು ಹಾಲಿ ಉದ್ಯೋಗಿಗಳನ್ನು ಮತ್ತು ಮಾಹಿತಿ ಕೇಂದ್ರದ ಕಾರ್ಮಿಕರನ್ನು ಸಹ ಎಸ್‌ಐಟಿ ವಿಚಾರಣೆಗೆ ಒಳಪಡಿಸಿದೆ ಎಂದು ಬೆಂಗಳೂರು ಪೋಸ್ಟ್‌ ಡಾಟ್‌ ಕಾಮ್‌ನಲ್ಲಿ ಸುದ್ದಿ ಪ್ರಸಾರವಾಗಿದ್ದು ಇನ್ನಷ್ಟು ಕುತೂಹಲ ಮೂಡಿಸಿದೆ.


ಧರ್ಮಸ್ಥಳ ಸಂಸ್ಥೆಯು ನಡೆಸುವ ಲಾಡ್ಜ್‌ಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳನ್ನು ಸಹ ಎಸ್‌ಐಟಿ ವಿಚಾರಣೆಗೆ ಒಳಪಡಿಸಿದೆ. ವಿಚಾರಣೆಗೆ ಕರೆಸಲು ಸಾಕಷ್ಟು ಆಧಾರಗಳಿದ್ದರೆ ಮಾತ್ರ ಎಸ್‌ಐಟಿ ಇಂತಹ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸುತ್ತದೆ ಅನನ್ನೋದನ್ನು ನಾವಿಲ್ಲಿ ಖಾತ್ರಿಪಡಿಸಿಕೊಳ್ಳಬಹುದು. ಇದರರ್ಥ SIT ಅವರನ್ನು ಮತ್ತೆ ಕರೆಸಲು, ತಂಡಕ್ಕೆ ಹೆಚ್ಚುವರಿ ಮಾಹಿತಿಗಳ ಅಗತ್ಯವಿದೆ ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕು. ಇನ್ನು ಎಸ್‌ಐಟಿಗೆ ಹೊಸ ಪುರಾವೆಗಳೇನಾದ್ರೂ ಸಿಕ್ಕಿದ್ರೆ, ಅಥವಾ ಏನಾದ್ರೂ ಹಿಂಟ್‌ ಸಿಕ್ಕರೆ, ಡಾಟ್ಸ್‌ ಏನಾದ್ರೂ ಕೆನೆಕ್ಟ್‌ ಆದ್ರೆ ಅವ್ರನ್ನೆಲ್ಲಾ ಮತ್ತೊಮ್ಮೆ ಕರೆಸಲೂಬಹುದು. ಸ್ನೇಹಿತರೆ ಚಿನ್ನಯ್ಯ ಸುಳ್ಳು ಸಾಕ್ಷ್ಯ ಹಾಗೂ ಫೋರ್ಜರಿ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆತನನ್ನು ಬಂಧಿಸಲಾಗಿದೆ ಅನ್ನೋ ಮಾಹಿತಿ ನಿಮಗೆಲ್ಲಾ ತಿಳಿದೇ ಇದೆ. ಇನ್ನು ಆತನ 183 ಸ್ಟೇಟ್‌ಮೆಂಟ್‌ ಎರೆಡೆರಡು ಬಾರಿ ಪಡೆದಿರೋದ್ರಿಂದ ಆತನ ಸ್ಟೇಟ್‌ಮೆಂಟ್‌ ಕೂಡ ಗೊಂದಲಮಯವಾಗಿ ಉಳಿದಿವೆ. ಈ ಎಲ್ಲಾ ಆಯಾಮದಲ್ಲೂ ಎಸ್‌ಐಟಿ ತನಿಖೆಯ ದಿಕ್ಕು ಸಾಗಿದ್ದು ಚಿನ್ನಯ್ಯ ಉಲ್ಟಾ ಹೊಡೆಯಲು ಇರಬಹುದಾದ ಸಕಾರಣಗಳೇನು ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ.


ಸ್ನೇಹಿತರೆ, ಇನ್ನು ಗಮನಿಸಬೇಕಾದ ಸಂಗತಿಯೊಂದಿದೆ.ಸಿಕ್ಕಿರೋ ಡಾಟಾಗಳು ಹೇಳುವಂತೆ, 2016 ರಿಂದ 2025 ರವರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ 640 ಅಸಹಜ ಮರಣ ವರದಿಗಳು (UDR) ದಾಖಲಾಗಿದ್ದರೆ, 2001 ರಿಂದ 2012 ರವರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ 474 UDR ಗಳು ದಾಖಲಾಗಿವೆ. 2016 ರವರೆಗೆ ಧರ್ಮಸ್ಥಳವು ಪೂರ್ಣ ಪ್ರಮಾಣದ ಪೊಲೀಸ್ ಠಾಣೆಯನ್ನು ಹೊಂದಿರಲಿಲ್ಲ; ಕೇವಲ ಪೊಲೀಸ್ ಠಾಣೆ ಮಾತ್ರ ಇತ್ತು ಮತ್ತು ಅಲ್ಲಿಯವರೆಗೆ ಬೆಳ್ತಂಗಡಿಯಲ್ಲಿ ಎಲ್ಲಾ ಕೇಸ್‌ ದಾಖಲಾಗಿದ್ದವು. ಈ ಎಲ್ಲಾ ಡೌಟ್ಸ್‌ಗಳಿಗೆ ತನ್ನದೇ ಸ್ಟೈಲ್‌ನಲ್ಲಿ ಎಸ್‌ಐಟಿ ಪ್ರಶ್ನೆ ಮಾಡ್ತಿದೆ. ವಿ.ಎಸ್. ಉಗ್ರಪ್ಪ ಸಮಿತಿಯೂ ಸಹ ಈ ವಿಷಯವನ್ನು ಈ ಹಿಂದೆಯೇ ಗಮನ ಹರಿಸಿರೋದ್ರಿಂದ ಈ ತನಿಖೆ ಇನ್ನಷ್ಟು ಮಹತ್ವ ಎನ್ನಿಸ್ತಿದೆ. ಈ ಗ್ರಾಮದಲ್ಲಿ ಬಹಳ ದಿನಗಳಿಂದ ಸಮಾಧಿಯಾಗಿ ಉಳಿದಿರುವ ಸತ್ಯವನ್ನು ಹೊರತೆಗೆಯಲು SIT ಹಗಲಿರುಳು ಶ್ರಮಿಸ್ಥಾ ಇದೆ ಅನ್ನೋದನ್ನು ಮಾತ್ರ ಅಲ್ಲಗಳೆಯುವಂತಿಲ್ಲ.

Rakesh arundi

Leave a Reply

Your email address will not be published. Required fields are marked *