Gilliyar-Harish Bhyrappa: ಗಿಳಿಯಾರ್-ಹರೀಶ್ ಭೈರಪ್ಪ ಭಾರೀ ಗಲಾಟೆ ಎಸ್.ಜೆ ಪಾರ್ಕ್ ಸ್ಟೇಷನ್ನಲ್ಲಿ ದೂರು.!
ಕಳೆದ ದಿನ ಮೇನ್ಸ್ಟ್ರೀಮ್ ಚಾನೆಲ್ ಪ್ಯಾನೆಲ್ನಲ್ಲಿ ಕೂತು ಚರ್ಚೆ ನಡೆಸಬೇಕಾದ ಸಮಯದಲ್ಲಿ ಗಲಾಟೆಯೊಂದು ನಡೆದಿದೆ ಅನ್ನೋ ಸುದ್ದಿ ಹೆಚ್ಚಾಗಿ ಚರ್ಚೆಯಾಯ್ತು. ಆದ್ರೆ, ಯಾವ ಕಾರಣಕ್ಕೆ ಅನ್ನೋ ಮಾಹಿತಿಗಳೇ ಎಲ್ಲೂ ವೈರಲ್ ಆಗಲಿಲ್ಲ. ಆದ್ರೆ, ಇಬ್ಬರ ಫೇಸ್ಬುಕ್ ಖಾತೆಗಳಲ್ಲಿ ನಿಮಗ್ಯಾರೋ ಸರಿಯಾಗಿ ಬೆಂಡೆತ್ತಿದರಂತೆ, ನಿಮಗ್ಯಾರೋ ಸರಿಯಾಗಿ ಪಾಠ ಕಲಿಸಿದರಂತೆ. ನಿಮಗ್ಯಾರೋ ಪೆಟ್ಟು ಕೊಟ್ಟರಂತೆ ನಿಜಾನಾ ಅನ್ನೋ ಮಾತುಗಳು ಮಾತ್ರ ಚರ್ಚೆಗೆ ಎಡೆ ಮಾಡಿಕೊಟ್ಟವು. ಅಸಲಿಗೆ ಈ ಘಟನೆ ನಡೆದಿದ್ದು ನಿಜಾನಾ..? ಏನಿದು ಗಲಾಟೆ ಅನ್ನೋ ಕಂಪ್ಲೀಟ್ ವಿವರ ಇಲ್ಲಿದೆ.
ಇತ್ತೀಚೆಗೆ ಮೇನ್ಸ್ಟ್ರೀಮ್ ಮಾಧ್ಯಮಗಳಲ್ಲಿ ನಡೆಯೋ ಡಿಬೆಟ್ಗಳು ಕೇವಲ ನಾಯಕರ, ಬುದ್ಧಿಜೀವಿಗಳ ಸಿದ್ಧಾಂತಗಳ ಸಮರ್ಥ ಅಭಿಪ್ರಾಯಗಳನ್ನು ಹೊರಹಾಕಲು ಇರುವ ವೇದಿಕೆಯಾಗದೇ, ಅದೊಂದು ಕುಸ್ತಿಯ ಅಖಾಡವಾಗಿರೋದನ್ನು ಗಮನಿಸಿದ್ದೇವೆ. ದೊಡ್ಡ ದೊಡ್ಡ ಚಾನೆಲ್ಗಳು ಕೂಡ ಹೆಚ್ಚು ಬಾಯಿ ಇರೋರನ್ನೇ ಡಿಬೆಟ್ಗೆ ಕರಿಸುತ್ತಾರೆ. ಇನ್ನೇನು ಕೊರಳಪಟ್ಟಿಗೆ ಕೈ ಹಾಕೇಬಿಟ್ಟರು ಎನ್ನುವಂತೆ ವೀಕ್ಷಕರನ್ನು ಪ್ರಚೋದಿಸಿ ಚಾನಲ್ ಮೇಲಿನ ಅಟೆನ್ಷನ್ ಗ್ರಾಬ್ ಮಾಡುವ ಮಾಧ್ಯಮಗಳ ತಂತ್ರಗಾರಿಕೆಯೂ ಜನಸಾಮಾನ್ಯರಿಗೆ ಅರ್ಥವಾಗದ ವಿಷ್ಯವೇನಲ್ಲ. ಆದ್ರೂ ಕಳೆದ ದಿನ ಅಂದ್ರೆ ಗುರುವಾರ ಮಧ್ಯಾಹ್ನ ಇಂತದ್ದೊಂದು ಘಟನೆ ಮೇನ್ಸ್ಟ್ರೀಮ್ ಚಾನೆಲ್ ಡಿಬೆಟ್ನಲ್ಲಿ ಕೂತ ಗೆಸ್ಟ್ಗಳ ನಡುವೆ ನಡೆದಿದೆ.
ಡಿಬೇಟ್ನಲ್ಲಿ ಎಂದಿನಂತೆ ವಸಂತ್ ಗಿಳಿಯಾರ್, ಅಬ್ದುಲ್ ರಜಾಖ್, ಹರೀಶ್ ಭೈರಪ್ಪ ಸೇರಿದಂತೆ ಕೆಲವರು ಕೂತಿದ್ದರು. ವಸಂತ್ ಗಿಳಿಯಾರ್ ಬಗ್ಗೆ ನಿಮಗೆಲ್ಲಾ ತಿಳಿದೇ ಇದೆ. ಸೌಜನ್ಯಾ ಹೋರಾಟಗಾರರಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರೋ ಕೆಲವ್ರು ಬುರುಡೆ ಗ್ಯಾಂಗ್ನಾ ಸದಸ್ಯರು ಹಾಗೂ ಸಂತೋಷ್ ರಾವ್ ಅವ್ರೇ ಸೌಜನ್ಯಾ ಕೃತ್ಯ ಎಸಗಿದ್ದು ಅಂತಾ ಗಟ್ಟಿಯಾಗಿ ಮೊದ್ಲಿನಿಂದ್ಲೂ ವಾದ ಮಾಡ್ತಾ ಬರ್ತಿರೋ ವ್ಯಕ್ತಿ. ಇನ್ನು ಬೈರಪ್ಪ ಹರೀಶ್ ಸೌಜನ್ಯ ಪರ ಹೋರಾಟಗಾರರಲ್ಲಿ ಗುರುತಿಸಿಕೊಂಡಿರೋ ವ್ಯಕ್ತಿ. ಅಬ್ದುಲ್ ರಜಾಖ್ ರನ್ನು ಲೆಫ್ಟಿಸ್ಟ್ ಸಾಲಿನಲ್ಲಿ ಅನೇಕರು ಸೇರಿಸಿಬಿಟ್ಟಿದ್ದಾರೆ. ಮುಸ್ಲೀಂ ವಿರೋಧಿ ನೀತಿ ವಿರುದ್ಧ ಮಾಧ್ಯಮಗಳಲ್ಲಿ ಧನಿ ಎತ್ತಿದ ಲೀಡರ್ ಎನ್ನಬಹುದು.
ಅಸಲಿಗೆ ಆಗಿದ್ದೇನು..?
ಬೈರಪ್ಪ ಹರೀಶ್ಗೂ, ವಸಂತ್ ಗಿಳಿಯಾರ್ಗೂ ಡಿಬೇಟ್ ಸಮಯದಲ್ಲಿ ಮಾತಿಗೆ ಮಾತು ಬೆಳೆದು ವಾಗ್ವಾದ ವಿಕೋಪಕ್ಕೆ ತಲುಪಿತ್ತು. ನಂತ್ರ ಇದನ್ನು ಸಮಾಧಾನಪಡಿಸಿದ ಆಂಕರ್ ಸಹಜಸ್ಥಿತಿಗೆ ತರೋ ಪ್ರಯತ್ನ ಪಟ್ಟಿದ್ದರು. ಡಿಬೇಟ್ ಮುಗಿದ್ಮೇಲೆ ಚಾನೆಲ್ನಾ ಹೊರಗೆ ಮತ್ತೆ ಮಾತಿಗೆ ಮಾತು ಬೆಳೆದಿದೆ. ಕೊನೆಗೆ ವಸಂತ್ ಗಿಳಿಯಾರ್ ಬೆಂಬಲಿಗರು ಚಾನೆಲ್ ಮುಂಭಾಗದಲ್ಲಿ ಸೇರಿದ್ದರು. ಭೈರಪ್ಪ ಹರೀಶ್, ವಸಂತ್ ಗಿಳಿಯಾರ್ ನಡುವಿನ ವಾಗ್ವಾದ ಒಂದು ಹಂತದಲ್ಲಿ ಕೊರಳ ಪಟ್ಟಿ ಹಿಡಿಯುವ ಹಂತಕ್ಕೂ ತಲುಪಿತ್ತು ಅನ್ನೋದನ್ನು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಸ್ಥಳಿಯ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ಎಲ್ಲರನ್ನು ವಾಪಾಸ್ ಕಳಿಸಿದ್ದಾರೆ. ನಂತರ ವಸಂತ್ ಗಿಳಿಯಾರ್ ಬೈರಪ್ಪ ಹರೀಶ್ ವಿರುದ್ಧ ಎಸ್ಜೆ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇತ್ತಾ ಹರೀಶ್ ಬೈರಪ್ಪ ಕೂಡ ಎಸ್ಜೆ ಪಾರ್ಕ್ ಪೊಲೀಸ್ ಸ್ಟೇಷನ್ಗೆ ಹೋಗಿ ಎಫ್ಐಆರ್ ದಾಖಲಿಸಲು ಮುಂದಾಗಿದ್ದಾರೆ. ಆದ್ರೆ, ಪೊಲೀಸರು ಎಫ್ಐಆರ್ ದಾಖಲಿಸದೆ ದೂರು ಸ್ವೀಕರಿಸಿಕೊಂಡು ಕಳಿಸಿದ್ದಾರೆ. ಕೊನೆಗೆ ಬೈರಪ್ಪ ಹರೀಶ್ ಡಿಸಿಪಿ ಕಚೇರಿಗೂ ಹೋಗಿ ದೂರು ನೀಡೋ ಪ್ರಯತ್ನ ಪಟ್ಟಿದ್ದಾರೆ ಎನ್ನಲಾಗ್ತಿದೆ.
ಸೌಜನ್ಯಾ ಕೇಸ್ಗೆ 13 ವರ್ಷ ತುಂಬಿದ ದಿನವೇ ಇಂತದ್ದೊಂದು ಅಹಿತಕರ ಘಟನೆ ನಡೆದಿದೆ. ರಾಜ್ಯದ ಮೂಲೆ ಮೂಲೆಗಳಲ್ಲಿ ಸೌಜನ್ಯಾ ಜನಾಗ್ರಹ ಪ್ರತಿಭಟನೆ ಶಾಂತಿಯಿಂದ ಜನರಿಗೆ ತುಪುವಲ್ಲಿ ಯಶಸ್ವಿಯಾಗಿದೆ. ಆದ್ರೆ, ಯಾರೂ ಸೌಜನ್ಯ ಪರ ಹಾಗೂ ವಿರೋಧಿ ಬಣದವ್ರು ಎಂದು ಗುರಿತಿಸಿಕೊಂಡಿದ್ರೋ ಅವ್ರು ಕಿತ್ತಾಡಿಕೊಂಡು ಡಿಬೇಟ್ಗಿದ್ದ ಶೋಭೆ ಕಳೆ ಹೋಗುವಂತಾಗಿದೆ.
ಗಿಳಿಯಾರ್ ನಿಂದನೆಯನ್ನು ಹರೀಶ್ ಅವರು ಖಂಡಿಸಿದ್ದು, ಇಬ್ಬರ ನಡುವೆ ಕಾವೇರಿದ ವಾಗ್ವಾದ ನಡೆದಿದೆ. ಈ ವೇಳೆ, ಗಿಳಿಯಾರ್ ತನ್ನ ಸ್ನೇಹಿತ ಪುನೀತ್ ಕೆರೆಹಳ್ಳಿಯ ಹಿಂಬಾಲಕರು ಮತ್ತು ಇನ್ನಿತರ ಪುಡಿರೌಡಿಗಳನ್ನು ವಾಹಿನಿಯ ಕಚೇರಿ ಬಳಿಗೆ ಕರೆಸಿಕೊಂಡರು. ಸ್ಥಳಕ್ಕೆ ಬಂದ ಗಿಳಿಯಾರ್ ಬೆಂಬಲಿತರು ಚರ್ಚೆಯಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಅತಿಥಿ ಅಬ್ದುಲ್ ರಜಾಕ್ ಅವರೊಂದಿಗೆ ಗಲಾಟೆ ನಡೆಸಿದರು. ಸುದ್ದಿ ತಿಳಿದು ಪೊಲೀಸ್ ಅಧಿಕಾರಿಗಳು ಹೆಚ್ಚಿನ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ ಪುಂಡರನ್ನು ಠಾಣೆಗೆ ಒಯ್ದಿದ್ದಾರೆ.
ತಾನೇ ಪುಢಾರಿಗಳನ್ನು ಕರೆಸಿಕೊಂಡು ದಾಂಧಲೆ ನಡೆಸಿ, ಸ್ಥಳದಿಂದ ಪರಾರಿಯಾದ ಗಿಳಿಯಾರ್, ಈಗ ಎಸ್ಜೆ ಪೊಲೀಸ್ ಠಾಣೆಗೆ ತೆರಳಿ ಹರೀಶ್ ಅವರ ವಿರುದ್ಧ ದೂರು ದಾಖಲಿಸಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.
ಒಂದು ಚರ್ಚಾ ಕಾರ್ಯಕ್ರಮವನ್ನು ಆಯೋಜಿಸಿ, ಚರ್ಚೆಗೆ ಆಹ್ವಾನಿಸುವ ವಾಹಿನಿಯು ತನ್ನ ಕಚೇರಿಗೆ ಬರುವ ಅತಿಥಿಗಳ ರಕ್ಷಣೆ ಮತ್ತು ಆತ್ಮಗೌರವವನ್ನು ಕಾಪಾಡುವ ಜವಾಬ್ದಾರಿಯನ್ನೂ ಹೊತ್ತಿರುತ್ತದೆ. ಆದರೆ, ಗಲಾಟೆ ನಡೆಯುವ ಸಮಯದಲ್ಲಿ ವಸಂತ್ ಗಿಳಿಯಾರ್ ಬೆಂಬಲಿತ ಪುಡಾರಿಗಳನ್ನು ತನ್ನ ಕಚೇರಿಯ ಆವರಣಕ್ಕೆ ಬಿಟ್ಟುಕೊಂಡ ‘ರಿಪಬ್ಲಿಕ್ ಟಿವಿ’ಯ ಉದ್ದೇಶವೇನಿತ್ತು ಎಂಬ ಪ್ರಶ್ನೆ ಕೇಳಿ ಬರುತ್ತಿದೆ.
ಹರೀಶ್ ಅವರು ವಸಂತ್ ಗಿಳಿಯಾರ್ ವಿರುದ್ಧ ಮಾತ್ರವಲ್ಲದೆ, ‘ರಿಪಬ್ಲಿಕ್ ಟಿವಿ’ಯ ವಿರುದ್ಧವೂ ದೂರು ದಾಖಲಿಸಬೇಕು ಎಂಬ ಸಲಹೆಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬಂದಿವೆ.