Jahnavi: ಎಂತೆಂಥಾ ಫೋಟೋ ಕಳಿಸ್ತಿದ್ದಳು ಗೊತ್ತಾ? ಬಿಗ್ ಬಾಸ್ ಜಾಹ್ನವಿ ಮಾಜಿ ಪತಿ ಆರೋಪ
ಆಂಕರ್ ಜಾಹ್ನವಿ ಈ ಬಾರಿಯ ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿ. ಆದ್ರೆ ಅವ್ರ ಖಾಸಗಿ ವಿಷ್ಯಗಳೇ ಸೋಶಿಯಲ್ ಮೀಡಿಯಾಗಳಲ್ಲಿ ಹೆಚ್ಚಾಗಿ ಚರ್ಚೆಗೆ ಕಾರಣವಾಗಿದೆ. ಆಂಕರ್ ಜಾಹ್ನವಿ ಬಿಗ್ ಬಾಸ್‌ಗೆ ಗ್ರ್ಯಾಂಡ್ ಎಂಟ್ರಿ ಕೊಡುವಾಗ್ಲೇ ಸಂಸಾರದ ಬಗ್ಗೆ ಹಂಚಿಕೊಂಡಿದ್ರು.
ನನ್ ಗಂಡ ಎಂತವ್ನು, ಯಾರ ಜೊತೆ ಸಂಬಂಧ ಇತ್ತು. ಎರಡನೇ ಸಂಬಂಧದ ಬಗ್ಗೆಯೂ ಹಂಚಿಕೊಂಡು ಅನೇಕ ಆಪಾದನೆಗಳನ್ನು ಪತಿಯ ಬಗ್ಗೆ ಮಾಡಿದ್ರು. ನನ್ನ ಜೊತೆ ಮದ್ವೆಯಾದಾಗ್ಲೇ ಆತ ಮದ್ವೆಯಾಗಿ ಮಗು ಕೂಡ ಹೊಂದಿದ್ದ ಅನ್ನೋ ಅರೋಪಗಳನ್ನೆಲ್ಲಾ ಮಾಡಿದ್ದರು.
ಈ ಎಲ್ಲಾ ವಿಷ್ಯಗಳಿಗೆ ಕಾರ್ತಿಕ್ ಹಾಲಿ ಪತ್ನಿಯೂ ಗರಂ ಆಗಿದ್ದು ಅವ್ರೂ ಕೂಡ ಅನೇಕ ವಾಹಿನಿಗಳಲ್ಲಿ ಆಂಕರ್ ಆಗಿ ಕೆಲಸ ಮಾಡಿದ್ದಾರೆ. ಇನ್ನು ಜಾಹ್ನವಿ ಕ್ಯಾರೆಕ್ಟರ್ ಏನು ಅನ್ನೋದನ್ನು ಹಾಲಿ ಪತಿ ಕಾರ್ತಿಕ್ ಮೂಲಕವೇ ಉತ್ತರ ಕೊಡಿಸೋ ಕೆಲಸ ಮಾಡಿದ್ದಾರೆ.
ಮಾಧ್ಯಮ ಒಂದರ ಸಂದರ್ಶನದಲ್ಲಿ ಮಾತನಾಡಿರುವ ಜಾಹ್ನವಿಯ ಮಾಜಿ ಪತಿ ಕಾರ್ತಿಕ್, ‘ಮದುವೆ ಆದ ಹೊಸತರಲ್ಲಿ ಎಲ್ಲವೂ ಚೆನ್ನಾಗಿತ್ತು, ಚಿತ್ರದುರ್ಗದಲ್ಲಿ ನಮ್ಮ ಉದ್ಯಮ ಇತ್ತು, ಬೆಂಗಳೂರಿನಲ್ಲಿ ನಾನು ಐಟಿ ಕೆಲಸದಲ್ಲಿದ್ದೆ. ಆದರೆ ಮದುವೆ ಆಗಿ ಕೆಲ ಸಮಯದ ಬಳಿಕ ನನ್ನ ತಾಯಿಯೊಟ್ಟಿಗೆ ಜಾಹ್ನವಿಗೆ ಹೊಂದಾಣಿಕೆ ಆಗದ ಕಾರಣ ಜಾಹ್ನವಿ ಬಲವಂತದಿಂದ ಬೇರೆ ಮನೆ ಮಾಡಿಸಿದರು. ಅತ್ತೆ ಕಂಡ್ರೆ ಅವಳಿಗೆ ಆಗ್ತಾ ಇರಲಿಲ್ಲ. ಬಳಿಕ ಸ್ವಂತ ಮನೆ ಬೇಕೆಂದು ಪಟ್ಟು ಹಿಡಿದಳು. ಆ ಕಾರಣ ನಾನು ಅಪಾರ್ಟ್ಮೆಂಟ್ ಒಂದನ್ನು ಪಡೆದುಕೊಂಡೆ’ ಎಂದಿದ್ದಾರೆ.
ನನ್ನ ಕೆಲಸ ಹೋಗಿ, ಊರಿನ ಉದ್ಯಮವೂ ಡಲ್ ಆದ ಬಳಿಕ ಜಾಹ್ನವಿ ವರ್ತನೆಯೇ ಕಂಪ್ಲೀಟ್ ಬದಲಾಯ್ತು. ಜಾಹ್ನವಿ ಉದ್ಯೋಗಕ್ಕೆ ಹೋಗಿ ಕೆಲ ಕಾಲ ಮನೆಯ ಇಎಂಐ ಅನ್ನು ಸಹ ಕಟ್ಟಿದರು. ಆದರೆ ಇಡೀ ಮನೆಯ ಸಾಲ ಅವರೇ ತೀರಿಸಿದರು ಅನ್ನೋದು ಮಾತ್ರ ಸುಳ್ಳು, 60 ಸಾವಿರ ಸಂಬಳದಲ್ಲಿ 1.50 ಕೋಟಿಯ ಫ್ಲ್ಯಾಟ್ ಖರೀದಿ ಮಾಡಲು ಸಾಧ್ಯನಾ? ಎಂದು ಕಾರ್ತಿಕ್ ಮತ್ತೆ ಪ್ರಶ್ನೆ ಮಾಡಿದ್ದಾರೆ.
ಕುಡಿದು ಬಂದು ಜಾಹ್ನವಿಯ ಮೇಲೆ ಹಲ್ಲೆ ಮಾಡಿದ ವಿಷಯದ ಬಗ್ಗೆ ಮಾತನಾಡಿರುವ ಅವರು, ‘ಹೌದು, ಹಲ್ಲೆ ಮಾಡಿರುವುದು ನಿಜ. ನಾನು ಜೊತೆಗಿದ್ದಾಗಲೂ ಬೇರೊಬ್ಬ ಗಂಡಸಿನ ಜೊತೆಗೆ ಸಲುಗೆಯಿಂದ ಆಕೆ ಇರ್ತಾ ಇದ್ದಳು. ಅವಳು ತೀರಾ ಖಾಸಗಿ ಫೋಟೊಗಳನ್ನು ಹಂಚಿಕೊಳ್ಳುವುದು ನಾಣು ಕಣ್ನಾರೆ ಕಂಡಾಗ ಹೇಗೆ ಸುಮ್ಮನಿರೋದು. ಅದನ್ನು ಹೇಳಲು ಕಷ್ಟವಾಗ್ತಿದೆ. ಅಂತಾ ಫೋಟೋಗಳನ್ನು ನೋಡಿದಾಗ ನನಗೆ ಸಿಟ್ಟು ಬಂದು ಹಾಗೆ ಮಾಡಿದ್ದೇನೆ’ ಎಂದು ತಪ್ಪೊಪ್ಪಿಕೊಂಡಿದ್ದಾರೆ.
ನನ್ನ ತಂದೆ, ತಾಯಿ ಮೊಮ್ಮಗನನ್ನು ನೋಡಲು ಬಂದಾಗ ಕನಿಷ್ಟ ಸೌಜನ್ಯವನ್ನೂ ಆಕೆ ತೋರಿಸಲಿಲ್ಲ. ವಿಚ್ಛೇದನ ಆಗಿ ವರ್ಷಗಳೇ ಆದರೂ ಸಹ ನನ್ನ ಬಗ್ಗೆ ಮಾಹಿತಿಗಳನ್ನು ಕಲೆ ಹಾಕಿ ಹೀಗೆ ರಿಯಾಲಿಟಿ ಶೋಗಳಲ್ಲಿ ಮಾತನಾಡುತ್ತಿರುವುದು ಗಮನಿಸಿದರೆ ಅವರದ್ದು ವಿಕೃತ ಮನಸ್ಸು ಎಂಬುದು ಅರ್ಥವಾಗುತ್ತದೆ. ಮಗನ ಶಿಕ್ಷಣಕ್ಕೆ ವರ್ಷಕ್ಕೆ ಇಂತಿಷ್ಟು ಹಣ ಕೊಡಬೇಕೆಂದು ಕೋರ್ಟ್ ಹೇಳಿದೆ. ಅದರಂತೆ ನಾನು ಅವರ ಖಾತೆಗೆ ಹಣ ಹಾಕುತ್ತಿದ್ದೇನೆ. ಎಷ್ಟೇ ಆಗಲಿ ಅವನು ನನ್ನ ಮಗ. ಆದರೆ ಜಾಹ್ನವಿ ತಮ್ಮ ಪಾಡಿಗೆ ತಾವು ಇದ್ದರೆ ಒಳ್ಳೆಯದು. ಹೀಗೆ ನನ್ನ ಬಗ್ಗೆ, ನನ್ನ ಕುಟುಂಬದ ಬಗ್ಗೆ ಇಲ್ಲ ಸಲ್ಲದ್ದು ಹೇಳಿದರೆ ನಮ್ಮ ಕುಟುಂಬಕ್ಕೆ ಸಮಸ್ಯೆ ಆಗುತ್ತದೆ’ ಎಂದಿದ್ದಾರೆಕಾರ್ತಿಕ್.
“ಗಂಡನನ್ನು ಬಿಟ್ಟು ಬೇರೆ ವ್ಯಕ್ತಿ ಜೊತೆ ನೀವು ಕಮ್ಯೂನಿಕೇಷನ್‌ನಲ್ಲಿದ್ದಾಗ ಯಾರು ಸಹಿಸಿಕೊಳ್ತಾರೆ? ಡೀಟೇಲ್ಡ್ ಆಗಿ ಹೇಳೋದಕ್ಕೆ ನನಗೆ ಇಷ್ಟವಿಲ್ಲ ನಾನು ಹೇಳೋಕೆ ಹೋಗೋದಿಲ್ಲ. ಅವಳು ಕೆಳಮಟ್ಟಕ್ಕೆ ಇಳಿದು ಮಾತನಾಡುತ್ತಾಳೆ ಅಂದರೆ, ಆ ರೀತಿ ಮಾಡೋದಕ್ಕೆ ನನಗೆ ಇಷ್ಟವಿಲ್ಲ. ಅವಳೊಬ್ಬಳು ಹೆಣ್ಣು, ನಾನು ಅದನ್ನ ರೆಸ್ಪೆಕ್ಟ್ ಮಾಡ್ತೀನಿ. ಅವಳು ಏನೇನೋ ಸ್ಟೇಟ್‌ಮೆಂಟ್ಸ್ ಕೊಡಬಹುದು ಆದರೆ, ಅದು ಫ್ಯಾಕ್ಸ್ಟ್ ಅಲ್ಲ.
ಅವಳು ಪರಪುರುಷರ ಜೊತೆ ಮಾತನಾಡುತ್ತಿರಬೇಕಾದರೆ, ನೋಡಿಕೊಂಡು ಸುಮ್ಮನೆ ಅಂತು ಇರೋಕಾಗಲ್ಲ. ಹಾಗಾಗಿ ಕುಡಿದು ಹೊಡೆದಿದ್ದೇನೆ” ಎಂದು ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಕಾರ್ತಿಕ್ ಹೇಳಿಕೊಂಡಿದ್ದಾರೆ. “ಮಾತನಾಡುವುದು, ಪರ್ಸನಲ್ ಫೋಟೋಸ್ ಶೇರ್ ಮಾಡೋದು ಯಾವ ಗಂಡ ಸಹಿಸಿಕೊಳ್ತಾರೆ? ಯಾರೋ ಹೇಳಿರೋದು ಅಲ್ಲ, ನನ್ನ ಮುಂದೆಯೇ ಮಾಡಿರೋದು ಅದು” ಎಂದು ಆಂಕರ್ ಜಾಹ್ನವಿ ವಿರುದ್ಧ ಮಾಜಿ ಪತಿ ಕಾರ್ತಿಕ್ ಗಂಭೀರ ಆರೋಪ ಮಾಡಿದ್ದಾರೆ.
“ಒಂದು ಮನುಷ್ಯನಿಗೆ ಇನ್‌ಕಮ್ ಇಲ್ಲ, ಒಂದೂವರೆ ಕೋಟಿ ರೂಪಾಯಿ ಸಾಲ ಇದೆ ಅಂದರೆ ಫ್ರಸ್ಟ್ರೇಶನ್ ಆಗಲ್ವಾ? ಮನೆಯಲ್ಲಿ ನೆಮ್ಮದಿ ಇಲ್ಲ ಅಂದಾಗ ಮನುಷ್ಯ ಏನು ಮಾಡ್ತಾನೆ? ಹೌದು.. ಕುಡಿದು ಹೊಡೆದಿದ್ದೀನಿ. ಹೊಡೆಯೋದಕ್ಕೆ ಕಾರಣ ಇರಬೇಕು ಅಲ್ವಾ? ಗಂಡನನ್ನ ಬಿಟ್ಟು ಬೇರೆಯವನಿಗೆ ಪ್ರಯಾರಿಟಿ ಕೊಟ್ಟಾಗ, ಯಾರಿಗೆ ಆದರೂ ಸೈಕ್ ಆಗುತ್ತೆ. ನನಗೆ ಇನ್‌ಕಮ್ ಚೆನ್ನಾಗಿದ್ದಾಗ ಅವಳು ಚೆನ್ನಾಗಿದ್ದಳು. ನನಗೆ ಬ್ಯುಸಿನೆಸ್ ಕೈ ಹಿಡಿಯಲಿಲ್ಲ, ಸಾಲಗಳು ಜಾಸ್ತಿ ಆಯ್ತು. ಅವಾಗ ಅವಳು ಡೈವರ್ಟ್ ಆದಳು ಅಂತೆನಿಸುತ್ತದೆ” ಎಂದರು ಕಾರ್ತಿಕ್.
ಡಿವೋರ್ಸ್‌ಗೆ ಕಾರಣವೇನು?
“ಫೈನಾನ್ಶಿಯಲಿ ವೀಕ್ ಆಗಿದ್ದೆ. ಮೂರರಿಂದ ನಾಲ್ಕು ಬ್ಯುಸಿನೆಸ್ ಲಾಸ್ ಆಯ್ತು. ನನ್ನದು ತಪ್ಪು ಇತ್ತು. ಅದಕ್ಕೆ ಅವಳ ಹತ್ತಿರ ಸಾರಿ ಕೂಡ ಕೇಳಿದ್ದೇನೆ. ನಾನು ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದೆ. ಆದರೆ ಅವಳು ಕ್ಷಮಿಸಲಿಲ್ಲ. ಮೂರ್ನಾಲ್ಕು ದಿನ ಮಗ ಮತ್ತು ಜಾಹ್ನವಿ ಮನೆಗೆ ಬಂದಿರಲಿಲ್ಲ. ನೀನು ಇದ್ದರೆ ಮನೆಗೆ ಬರಲ್ಲ, ನೀನು ಮನೆ ಬಿಟ್ಟು ಹೋಗು ಅಂದಿದ್ದಳು. ಸರಿ ಅಂತ ಬಟ್ಟೆ ತಗೊಂಡು ಬಂದಿದ್ದೆ. ಸರಿಹೋಗಬಹುದು ಅಂತ ಒಂದೂವರೆ ವರ್ಷ ನಾನು ಕಾದೆ. ಮಗ ಇದ್ದಾನೆ ಕಾಂಪ್ರಮೈಸ್ ಆಗಿ ಅಂತ ನನ್ನ ಫ್ರೆಂಡ್ಸ್ ಹೇಳಿದ್ದರು. ಅದಕ್ಕೂ ಅವಳು ಕೇರ್ ಮಾಡಲಿಲ್ಲ.
ಅವಳಿಗೆ ಬರೀ ಅಪಾರ್ಟ್‌ಮೆಂಟ್ ಬೇಕು ಅನ್ನೋ ಇನ್ಟೆನ್ಶನ್ ಇತ್ತು ಅಷ್ಟೇ. ಅಪಾರ್ಟ್‌ಮೆಂಟ್ ಟ್ರಾನ್ಸ್‌ಫರ್ ಎಲ್ಲಾ ನನ್ನ ಹೆಸರಲ್ಲಿತ್ತು. ಅವಳ ಹೆಸರಿಗೆ ಮಾಡಿ ಕೊಟ್ಟು, ನಾವು ಡಿವೋರ್ಸ್ ಪಡೆದೆವು” ಎಂದಿದ್ದಾರೆ.
ಡಿವೋರ್ಸ್ ಬಳಿಕ ಮೊಮ್ಮಗನನ್ನು ನೋಡಲು ನಮ್ಮ ತಂದೆ ಫ್ಲ್ಯಾಟ್‌ಗೆ ಹೋಗಿದ್ದರು. ತಂದೆಯವರಿಗೆ 72 ವರ್ಷ ವಯಸ್ಸು. ಅವರನ್ನು ಮನೆಯೊಳಗೆ ಕರೆದುಕೊಳ್ಳದೇ ಹೊರೆಗೆ ನಿಲ್ಲಿಸಿ ಅವಮಾನಿಸಿದ್ದಾರೆ. ಮಗನನ್ನು ಕಳುಹಿಸುವಂತೆ ಹೇಳಿದರು ಕಳುಹಿಸಲಿಲ್ಲ. ಏಪ್ರಿಲ್‌ನಲ್ಲಿ ತಂದ ನಿಧನವಾದ್ರೂ ಅಂತಿಮ ದರ್ಶನಕ್ಕೂ ಬರಲಿಲ್ಲ ಎಂದು ಕಾರ್ತಿಕ್ ಹೇಳಿದ್ದಾರೆ.