Bigg Boss: ಜಾಲಿವುಡ್ ಸ್ಟುಡಿಯೋ ಮುಂದೆ ಕನ್ನಡ ಪರ ಸಂಘಟನೆಗಳ ಪ್ರತಿಭಟನೆ

ಅಂತು ಬಿಗ್‌ ಬಾಸ್‌ಗೆ ಅಂಟಿದ್ದ ಗ್ರಹಣ ಬಿಡ್ತು ಅಂತಾ ಅನೇಕರು ರಿಲ್ಯಾಕ್ಸ್‌ ಆಗೊ ಹೊತ್ತಲ್ಲೇ ಮತ್ತೆ ಗ್ರಹಣ ಬಿಗ್‌ ಬಾಸ್‌ ಜಾಲಿವುಡ್‌ ಸ್ಟುಡಿಯೋಸ್‌ಗೆ ವಕ್ಕರಿಸಿದೆ. ಕನ್ನಡ ಪರ ಹೋರಾಟಗಾರರು ಮತ್ತೆ ಬಿಗ್‌ ಬಾಸ್‌ ಮನೆಗೆ ನುಗ್ಗಲು ಪ್ರಯತ್ನ ಪಟ್ಟಿದ್ದಾರೆ.

ಕಿಚ್ಚ ಸುದೀಪ್‌ ಎಂಠ್ರಿ ಮೇರೆಗೆ ಡಿಕೆ ಶಿವಕುಮಾರ್‌ ಬಿಗ್‌ ಬಾಸ್‌ಗೆ ಒಂದು ವಾರದ ರಿಲ್ಯಾಜ್ಸ್‌ ಕೊಟ್ಟು ಬಿಗ್‌ ಬಾಸ್‌ ಚಾಲೂ ಮಾಡಲು ಅವಕಾಶ ಕೊಟ್ಟಿದ್ದರು ಎನ್ನಲಾಗಿತ್ತು. ಇದೀಗ ಮುಖ್ಯದ್ವಾರದ ಗೇಟ್‌ ಅನ್ನೇ ಮುರಿಯೋಕೆ ಕನ್ನಡ ಪರ ಹೋರಾಟಗಾರರು ಮುಂದಾಗಿದ್ದಾರೆ. ಬಿಗ್‌ ಬಾಸ್‌ ನಡೀ ಕೂಡದು ಎಂದು ಪಟ್ಟು ಹಿಡಿದಿದ್ದಾರೆ.

ಮಧ್ಯ ರಾತ್ರಿಯೇ ಬಿಗ್‌ ಬಾಸ್‌ ಮನೆ ಒಳಗೆ ಎಂಟ್ರಿ ಕೊಟ್ಟಿದ್ದ ಬಿಗ್‌ ಬಾಸ್‌ ಕಂಟೆಸ್ಟಂಟ್‌ಗಳಿಗೆ ಮತ್ತೆ ಆತಂಕ ಶುರುವಾಗಿದೆ. ಜಾಲಿವುಡ್‌ ಸ್ಟುಡಿಯೋಸ್‌ ಮುಂಭಾಗ ರಣಾಂಗಣದ ವಾತಾವರಣ ನಿರ್ಮಾಣವಾಗಿದೆ. ಗೇಟ್‌ ಹತ್ತಿ ಬಿಗ್‌ ಬಾಸ್‌ ಒಳಗೆ ನುಗ್ಗಿದಂತ ಕನ್ನಡ ಪರ ಹೋರಾಟಗಾರರು ಆಕ್ರೋಶ ಹೋರ ಹಾಕಿದ್ದಾರೆ.

ಬಿಗ್‌ ಬಾಸ್‌ ಮನೆಯತ್ತ ನುಗ್ಗಿದ ಪ್ರತಿಭಟನಾಕಾರರು ಒತ್ತಾಯ ಮಾಡ್ತಿದ್ದಾರೆ. ಸರ್ಕಾರ ಕನ್ನಡ ವಿರೋಧಿ ನೀತಿ ಅನುಸರಿಸ್ಥಾ ಇದೆ. ಕಾನೂನು ಮೀರಿ ಚಟುವಟಿಕೆ ನೀಡೀತಾ ಇದೆ ಎಂದು ಆಕ್ರೋಶ ಹೋರ ಹಾಕಿದ್ದಾರೆ.

Rakesh arundi

Leave a Reply

Your email address will not be published. Required fields are marked *