Tumakuru: ಹಣಕ್ಕಾಗಿ ಪತ್ನಿ ಪೀಡಿಸ್ತಾಳೆಂದು ಫೇಸ್​ಬುಕ್​ ಲೈವ್​ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಪತಿ

ಪತ್ನಿ ಕಿರುಕುಳ ನೀಡುತ್ತಿದ್ದಾಳೆ ಎಂದು ಆರೋಪಿಸಿ ವ್ಯಕ್ತಿಯೋರ್ವ ಫೇಸ್​ಬುಕ್ ಲೈವ್​ ಮಾಡಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತುಮಕೂರಿನ ಜಯನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಲ್ಮಾನ್ ಪಾಷಾ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಆತನಿಗೆ ಚಿಕಿತ್ಸೆ ನೀಡಲಾಗ್ತಿದೆ.

AIMIM ಪಕ್ಷದ ತುಮಕೂರು ಜಿಲ್ಲಾಧ್ಯಕ್ಷನಾಗಿರುವ ಸೈಯದ್ ಬುರ್ಹಾನ್ ಉದ್ದೀನ್ ಜೊತೆ ಸೇರಿ ಪತ್ನಿ ಫರ್ದೋಸ್ ಹೆಚ್ಚಿನ ಹಣಕ್ಕಾಗಿ ತನ್ನ ಪೀಡಿಸುತ್ತಿದ್ದಾಳೆ. ಅಲ್ಲದೇ ಆಕೆಗೆ ಬುರ್ಹಾನ್ ಜೊತೆ ಅಕ್ರಮ ಸಂಬಂಧ ಇದ್ದು ವಿದೇಶಿ ಕೆಲಸ ಬಿಟ್ಟು ತುಮಕೂರಿಗೆ ಬಂದರೂ ಇಬ್ಬರು ಮಕ್ಕಳನ್ನ ತೋರಿಸುತ್ತಿಲ್ಲ ಎಂದು ಸೈಯದ್ ಆರೋಪಿಸಿದ್ದಾರೆ.

ಕಳೆದ 4 ವರ್ಷಗಳ ಹಿಂದಷ್ಟೇ ಸೈಯದ್ ನಿಕತ್ ಫರ್ದೋಸ್ ಎಂಬಾಕೆ ಜೊತೆ ಸಲ್ಮಾನ್ ಪಾಷಾ ವಿವಾಹ ನಡೆದಿತ್ತು. ಮದುವೆ ಬಳಿಕ 2 ವರ್ಷ ಇಬ್ಬರು ಸಂತೋಷವಾಗಿಯೇ ಇದ್ದರು. ಬಳಿಕ ಈತನಿಗೆ ವಿದೇಶದಲ್ಲಿ ಕೆಲಸ ಸಿಕ್ಕಿತ್ತು. ಪತ್ನಿ ಎರಡನೇ ಮಗುವಿನ ಗರ್ಭಿಣಿಯಾದಾಗ ಸಲ್ಮಾನ್​ ಕುವೈತ್ಗೆ​ ಕೆಲಸಕ್ಕೆ ತೆರಳಿದ್ದ. ಬಳಿಕ ಸೈಯದ್ ನಿಕತ್ ಫರ್ದೋಸ್ ತಾಯಿ ಮನೆಗೆ ತೆರಳಿದ್ದಾರೆ. ಗಂಡ ವಿದೇಶಕ್ಕೆ ಹೋದಮೇಲೆ ಸಂಸಾರದಲ್ಲಿ ಬಿರುಕು ಮೂಡಿದೆ ಎನ್ನಲಾಗಿದೆ.

ವಿಚ್ಛೇದನ ನೀಡು ಎಂದು ಪತ್ನಿ ಹೇಳುತ್ತಿದ್ದು, ತುಮಕೂರು ಮಹಿಳಾ ಠಾಣೆ ಪೊಲೀಸರು ಸಹ ಹೆಂಡತಿ ಕುಟುಂಬಕ್ಕೆ ಬೆಂಬಲ ನೀಡುತ್ತಿದ್ದಾರೆ ಎನ್ನುವುದು ಸಲ್ಮಾನ್ ಪಾಷಾ ಆರೋಪ ಮಾಡಿ ಸೊಸೈಡ್ ಗೆ ಯತ್ನಿಸಿದ್ದಾರೆ.

ಇನ್ನು ಸೈಯದ್ ನದ್ದು ಎಲ್ಲ ನಾಟಕ. ಈ ಹಿಂದೆ ಸೋಪಿನ ನೀರು ಕುಡಿದು ಅವರು ಡ್ರಾಮಾ ಮಾಡಿದ್ದರು ಎಂದು ಪತ್ನಿ ಫರ್ದೋಸ್ ಗಂಡನ ಆರೋಪಕ್ಕೆ ಕೌಂಟರ್ ಕೊಟ್ಟಿದ್ದಾರೆ.

Rakesh arundi

Leave a Reply

Your email address will not be published. Required fields are marked *