Harasument: ನಟಿಗೆ ಲೈಂಗಿಕ ಕಿರುಕುಳ: ನಟ, ನಿರ್ದೇಶಕ ಹೇಮಂತ್ ಬಂಧನ
ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಪ್ರಕರಣಗಳು ಹೊಸದೆನಲ್ಲ. ಇದೀಗ ಕನ್ನಡ ಚಿತ್ರರಂಗದಲ್ಲಿ ಅಂತದೊಂದು ಘಟನೆ ನಡೆದಿದೆ. ಸಿನಿಮಾ ಮಾಡುವುದಾಗಿ ಹೇಳಿ ಕರೆಸಿಕೊಂಡು ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಸ್ಯಾಂಡಲ್‌ವುಡ್ ನಟ, ನಿರ್ದೇಶಕ, ನಿರ್ಮಾಪಕ ಹೇಮಂತ್ ಅವರನ್ನು ರಾಜಾಜಿ ನಗರ ಪೊಲೀಸರು ಬಂಧಿಸಿದ್ದಾರೆ.
ದೂರಿನಲ್ಲಿ ಹೇಳಿರುವಂತೆ, 2022ರಲ್ಲಿ ನಟಿಗೆ ನಟ ಹೇಮಂತ್ ಪರಿಚಯ ಆಗಿದ್ದರು. ರಿಚ್ಚಿ ಎಂಬ ಚಿತ್ರದಲ್ಲಿ ನಟಿಗೆ ಅವಕಾಶ ನೀಡಿದ್ದರು. ಸಂಭಾವನೆಯಾಗಿ 2 ಲಕ್ಷ ನೀಡೋದಾಗಿ ಅಗ್ರಿಮೆಂಟ್ ಮಾಡಿಕೊಂಡು, ಮುಂಗಡವಾಗಿ 60 ಸಾವಿರ ಹಣ ಕೂಡ ನೀಡಿದ್ದರು. ಬಳಿಕ ಕೊಟ್ಟ ಚೆಕ್ ಬೌನ್ಸ್ ಆಗಿದೆ ಎಂದು ನಟಿ ದೂರಿನಲ್ಲಿ ಆರೋಪ ಮಾಡಿದ್ದಾರೆ.
ಚಿತ್ರೀಕರಣ ತಡವಾಗಿದ್ದಕ್ಕೆ ನಟಿಗೆ ಬೇಸರವಾಗಿತ್ತು. ಈ ವೇಳೆ ಹೇಮಂತ್ ನ ಬಣ್ಣ ಬಯಲಾಗಿದೆ. ನಟಿಗೆ ಅಶ್ಲೀಲ ಬಟ್ಟೆ ಧರಿಸುವಂತೆ, ಅಶ್ಲೀಲವಾಗಿ ನಟಿಸುವಂತೆ ಒತ್ತಡ ಹೇರಲು ಶುರು ಮಾಡಿದ್ದಾರೆ. ಅಲ್ಲದೆ ನಟಿಯೊಂದಿಗೆ ಅಸಭ್ಯಾವಾಗಿ ವರ್ತಿಸಿದ್ದಾರೆ. ಇದನ್ನು ವಿರೋಧಿಸಿದರೂ ಆತ ಕಿರುಕುಳ ಮುಂದುವರೆಸಿದರು ಎಂದು ನಟಿ ಆರೋಪ ಮಾಡಿದ್ದಾರೆ.
ಸಿನಿಮಾ ಪ್ರಚಾರಕ್ಕಾಗಿ ಮುಂಬೈಗೆ ಕರೆದುಕೊಂಡು ಹೋಗಿದ್ದ ವೇಳೆ ಕಿರುಕುಳ ನೀಡಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಬಳಿಕ ರೌಡಿಗಳನ್ನು ಬಿಟ್ಟು ಬೆದರಿಸಿದ್ರು. ಸೆನ್ಸಾರ್ ಆಗದ ದೃಶ್ಯಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ನಟಿ ದೂರು ನೀಡಿದ್ದಾರೆ. ಸದ್ಯ ಪೊಲೀಸರು ನಟ ಹೇಮಂತ್‌ರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.