Yogi Adityanath: ಮತ್ತೆ ಬುಲ್ಡೋಜರ್ ನುಗ್ಗಿಸಿದ ಯೋಗಿ..! ಮುಸ್ಲೀಂ ನಾಯಕನ ಕೋಟಿ ಪ್ಯಾಲೇಸ್ ಧ್ವಂಸ
ಉತ್ತರ ಪ್ರದೇಶದಲ್ಲಿ ಐ ಲವ್ ಮಹಮ್ಮದ್ ಪೋಸ್ಟರ್‌ಗಳ ಮೂಲಕ ಇಸ್ಲಾಂ ಆಳ್ವಿಕೆಗೆ ಪರೋಕ್ಷವಾಗಿ ಪ್ರಚೋದನೆ ನೀಡ್ತಿದ್ದ ಹಾಗೂ ಹಿಂದೂ ಸಮುದಾಯಗಳನ್ನು ಕೆರಳಿಸಲು ಮುಂದಾಗ್ತಿದ್ದ ನಾಯಕರ ಮೇಲೆ ಯೋಗಿ ಆದಿತ್ಯನಾಥ್ ಮತ್ತೆ ರೊಚ್ಚಿಗೆದ್ದಿದ್ದಾರೆ. ಈ ಭರತ ಭೂಮಿಯ ಮಣ್ಣಲ್ಲಿ ಇಸ್ಲಾಂ ಆಳ್ವಿಕೆ ಹೇರಲು ಮುಂದಾದ್ರೆ ಡೈರೆಕ್ಟ್ ನರಕಕ್ಕೆ ಟಿಕೆಟ್ ಎಂದು ಘರ್ಜಿಸಿದ್ದ ಯುಪಿ ಸಿಎಮ್ ಯೋಗಿ ಆದಿತ್ಯಾನಾಥ್ ಮತ್ತೆ ಬುಲ್ಡೋಜರ್ ಅಸ್ತ್ರ ಪ್ರಯೋಗ ಮಾಡಿದ್ದಾರೆ.
ನಾನಿರೋದೆ ಹೀಗೆ..ನನ್ನ ಕಾನೂನೂ ಹೀಗೆ ಎನ್ನುವ ಹಾಗೆ ಸಿಡಿದೆದ್ದಿರೋ ಯೋಗಿ ಆದಿತ್ಯಾನಾಥ್ ಗಲಭೆ ಮಾಡ್ತಿದ್ದ ಮನೆಗಳ ಮೇಲೆ ಬುಲ್ಡೋಜರ್ ಅಸ್ತ್ರ ಪ್ರಯೋಗ ಮಾಡ್ತಿದ್ದಾರೆ. ಮುಂದಿನ ಪ್ರಧಾನಿ ಆಕಾಂಕ್ಷಿ ಯುಪಿ ಯೋಗಿ ಆದಿತ್ಯಾನಾಥ್ ಅವ್ರೇ ಆಗಬೇಕು ಅನ್ನೋ ಮಟ್ಟಿಗೆ ಹಿಂದೂ ಸಂಘಟನೆಗಳ ಒತ್ತಾಯದ ಬೆನ್ನಲ್ಲೇ, ಸುಗಮ ಆಡಳಿತಕ್ಕೆ ಯಾರಾದ್ರೂ ಅಡ್ಡಿ ಪಡಿಸಲು ಮುಂದಾದ್ರೆ ಯಾವ ರೀತಿ ಕ್ರಾಂತಿಕಾರಿ ನಿರ್ಧಾರಗಳನ್ನು ತೆಗೆದುಕೊಳ್ತೀನಿ ಅನ್ನೋದನ್ನು ಮತ್ತೆ ಯೋಗಿ ಆದಿತ್ಯಾನಾಥ್ ಪ್ರೂವ್ ಮಾಡಿದ್ದಾರೆ. ಅಕ್ರಮ ಒತ್ತುವರಿ ತೆರವು, ಅಪರಾಧ ಕೃತ್ಯಗಳ ವಿರುದ್ಧ ಸಮರ ಸಾರಿರುವ ಯೋಗಿ ಆದಿತ್ಯನಾಥ್, ಅಪರಾಧಿಗಳ ಪಾಲಿಗೆ ಸಿಂಹಸ್ವಪ್ನವಾಗಿ ಬದಲಾಗಿದ್ದಾರೆ.
ಮುಸ್ಲೀಂ ನಾಯಕನ ಮನೆಗಳನ್ನು ದ್ವಂಸ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಭಂಗ, ಸಾರ್ವಜನಿಕ ಆಸ್ತಿಗೆ ನಷ್ಟ ಉಂಟು ಮಾಡಿದ ಆರೋಪದ ಮೇಲೆ ಐ ಲವ್ ಮಹಮ್ಮದ್ ಹೋರಾಟದಲ್ಲಿ ನೇರ ಆರೋಪಿಯಾಗಿದ್ದ ಹಾಗೂ ಗಲಭೆ ಎಬ್ಬಿಸಿ ಅರೆಸ್ಟ್ ಆಗಿದ್ದ ಡಾ.ನಸೀಫ್ ಖಾನ್ ಅಹ್ಮದ್ ಮನೆ ಪುಡಿ ಪುಡಿಯಾಗಿವೆ. ಇನ್ನೊಮ್ಮೆ ಬಾಲ ಬಿಚ್ಚದಂತೆ ಕಠಿಮ ಕ್ರಮಕ್ಕೆ ಮುಂದಾಗಿರೋ ಯೋಗಿ ಆದಿತ್ಯಾನಾಥ್ ಆತನಿಗೆ ಸೇರಿದ ಎಲ್ಲಾ ಅಕ್ರಮ ಆಸ್ತಿಪಾಸ್ತಿಗಳನ್ನು ನೆಲಸಮ ಮಾಡಿದ್ದಾರೆ. ಬುಲ್ಡೋಜರ್ ಯಾರ ಮಾತನ್ನು ಕೇಳದೇ ಸರ್ಕಾರದ ಆದೇಶದಂತೆ ದ್ವಂಸ ಮಾಡಿವೆ.
ಪೊಲೀಸರ ಬಿಗಿ ಭದ್ರತೆಯಲ್ಲಿ ಬರೇಲಿ ನಗಾರಾಭಿವೃದ್ಧಿ ಪ್ರಾಧೀಕಾರದ ಜಂಟಿ ಕಾರ್ಯದರ್ಶಿ ನೇತೃತ್ವದಲ್ಲಿ ಅಕ್ರಮವಾಗಿ, ಕಾನೂನು ಬಾಹಿರವಾಗಿ ಕಟ್ಟಲಾಗಿದ್ದ ರಾಜಾ ಪ್ಯಾಲೇಸ್ ಸೇರಿದಂತೆ ಹಲವು ಕಟ್ಟಡಗಳನ್ನು ಮುಲಾಜಿಲ್ಲದೇ ಹೊಡೆದು ಹಾಕಲಾಯಿತು. ಮುಸ್ಲೀಂ ನಾಯಕರು ಐ ಲವ್ ಮಹಮ್ಮದ್ ಪೋಸ್ಟರ್ ಹಿಡಿದು ಇದೇ ವೇಳೆ ಡಿಸಿ ಕಚೇರಿ ಎದುರು ಪ್ರತಿಭಟನೆ ಮಾಡಿದ್ರು ಕೂಡ ಕ್ಯಾರೆ ಎನ್ನದೇ ಯೋಗಿ ಆದಿತ್ಯಾನಾಥ್ ಕಟ್ಟಡಗಳನ್ನು ನೆಲಸಮಗೊಳಿಸೋದನ್ನು ಮಾತ್ರ ನಿಲ್ಲಿಸಲಿಲ್ಲ.
ನಮ್ಮ ಕಾನೂನಿಗೆ ಸೋಲಲೇಬೇಕು. ಇಲ್ಲಿನ ರಸ್ತೆ, ಚರಂಡಿಗಳನ್ನು ಒತ್ತುವರಿ ಮಾಡಿದ್ದಲ್ಲದೇ , ಇದೇ ಮಣ್ಣಿಗೆ ದ್ರೋಹ ಬಗೆಯಲು ಮುಂದಾದ್ರೆ ಎಚ್ಚರಿಕೆ ಮಾತ್ರ ಅಲ್ಲ, ಬುಲ್ಡೋಜರ್ ಮಾತಾಡುತ್ತದೆ ಎಂದಿರೋ ಯೋಗಿ ಬುಲ್ಡೋಜರ್ ನುಗ್ಗಿಸೋ ಮೂಲಕ ಎಲ್ಲರ ಚಳಿ ಬಿಡಿಸಿದ್ದಾರೆ. ಇತ್ತೀಚೆಗೆ ಇದೇ ನಸೀಫ್ ಖಾನ್ ಅಹ್ಮದ್, ಇತ್ತೆಹದ್ ಇ ಮಿಲ್ಲತ್ ಕೌನ್ಸಿಲ್ ಅಧ್ಯಕ್ಷ ಮೌಲಾನಾ ತೌಕೀರ್ ರಾಜಾಖಾನ್ ನಿವಾಸದ ಮನೆ ಬಳಿ ಅಳಡವಡಿಸಿದ್ದ ಪೋಸ್ಟರ್ ವಿಚಾರದಲ್ಲಿ ಮೂಗು ತೂರಿಸಿದ್ದ. ಸೆ.26 ರಂದು ನಡೆದ ಗಲಭೆಯಲ್ಲಿ ಈತನ ಪಾತ್ರ ಪ್ರಮುಖವಾಗಿತ್ತು. ಅಪ್ಪ ನಫೀಸ್ ಹಾಗೂ ಮಗ ಫಾರ್ಮಾನ್ ಖಾನ್ ಸೇರಿದಂತೆ 81 ಜನ್ರನ್ನು ಜೈಲಿಗೆ ಅಟ್ಟಲಾಗಿತ್ತು.
ಇದೇ ಘಟನೆ ಸಂಬಂಧವಾಗಿ ಆತನ ಮನೆ, ನಿವಾಸಗಳ ಮೇಲೆ ಕಣ್ಣಿಟ್ಟ ಯೋಗಿ ಅಕ್ರಮವಾಗಿ ಕಟ್ಟಲಾಗಿದ್ದ ಕಟ್ಟಡಗಳನ್ನು ನೆಲಸಮ ಮಾಡೋ ಮೂಲಕ ಪಾಠ ಕಲಿಸಿದ್ದಾರೆ. ಈಗಾಗ್ಲೇ ಅಕ್ರಮವಾಗಿ ಸರ್ಕಾರಿ ಒತ್ತುವರಿ ಮಾಡಿಕೊಂಡು ಮಸೀದಿ, ಮದುವೆ ಸಭಾಂಗಣ, ಆಸ್ಪತ್ರೆ, ಕಟ್ಟಡ ತೆರುವುಗೊಳಿಸೋ ಜಿಲ್ಲಾಡಳಿತ ಕ್ರಮಕ್ಕೆ ಅಲಹಬಾದ್ ಹೈಕೋರ್ಟ್ ಕೂಡ ತಡೆ ನೀಡಲು ನಿರಾಕರಿಸಿರೋದ್ರಿಂದ ಯೋಗಿಗೆ ಆನೆ ಬಲ ಬಂದಾಂತಾಗಿದೆ. ಇತ್ತೀಚೆಗೆ ಇದೇ ಸಂಭಲ್ ಜಿಲ್ಲಾಡಳಿತ ಮಸೀದಿಯನ್ನೇ ಕೆಡವಿ ವಶಪಡಿಸಿಕೊಂಡಿತ್ತು. ನೀವು ಇದೇ ರೀತಿ ಭಾರತದಲ್ಲಿ ಒತ್ತಾಯಪೂರ್ವಕವಾಗಿ ಇಸ್ಲಾಂ ಆಡಳಿತ ಹೇರಲು ಕುತಂತ್ರಗಳನ್ನು ಮಾಡ್ತಿದ್ದರೆ, ನೇರವಾಗಿ ನರಕಕ್ಕೆ ಟಿಕೆಟ್ ಕೊಡ್ತೀನಿ ಎಂದಿದ್ದ ಯೋಗಿ ಮಾತುಗಳನ್ನು ಅಕ್ಷರಶಃ ನಡೆದಂತೆ ನುಡಿಯುವ ಸರ್ಕಾರವಾಗಿ ಪರಿಣಾಮಗಳನ್ನು ಬೀರ್ತಾ ಇದೆ.
ಐ ಲವ್ ಮುಹಮ್ಮದ್ ವಿವಾದವು ಸಾಮಾನ್ಯ ಧಾರ್ಮಿಕ ಘೋಷಣೆಯಲ್ಲ, ಬದಲಿಗೆ ಅದು ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಅಂಶಗಳನ್ನು ಒಳಗೊಂಡಿದೆ. ಇದರಿಂದಾಗಿ ಉತ್ತರ ಪ್ರದೇಶ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಶಾಂತಿ-ಸುವ್ಯವಸ್ಥೆಗೆ ಸವಾಲು ಎದುರಾಗ್ತಾ ಇರೋದು. ಉದ್ದೇಶಪೂರ್ವಕವಾಗಿಯೇ ಕರಳಿಸೋ ಘೋಷಣೆ ಇದು ಅನ್ನೋದು ಸ್ಪಷ್ಟವಾಗಿ ಗೊತ್ತಾಗ್ತಿದೆ.