Chhattisgarh: ಹೈವೇ ರೋಡಲ್ಲಿ ಪುಂಡರ ಡೇಂಜರ್ ಸ್ಟಂಟ್ ವೈರಲ್
ಹೇಳೋರಿಲ್ಲ, ಕೇಳೋರಿಲ್ಲ. ಇನ್ನು ಬೇರೆಯವ್ರ ಪ್ರಾಣದ ಬಗ್ಗೆ ಖಾಳಜಿ ಇರೋದಿರಲಿ, ಸ್ವಲ್ಪ ಯಾಮಾರಿದ್ರು ತಮ್ಮ ಪ್ರಾಣವೇ ಹಾರಿ ಹೋಗಲಿದೆ ಅನ್ನೋ ಆತಂಕವೂ ಈ ಹುಡುಗರಿಗೆ ಇಲ್ಲ. ಇತ್ತೀಚೆಗೆ ಇಂತಹ ರೋಡ್ ಸ್ಟಂಟ್ ರೈಡಿಂಗ್ಗಳನ್ನು ನೋಡ್ತಾನೆ ಇರ್ತೀವಿ. ರೋಡು ನಮ್ಮಪ್ಪಂದೇ ಅನ್ನೋ ರೀತಿಯಲ್ಲಿ ಅಪಾಯಕಾರಿ ಸ್ಟಂಟ್ ಮಾಡ್ತಿರೋ ಹುಡುಗರ ವೀಡಿಯೋ ಇದೀಗ ವೈರಲ್ ಆಗಿದೆ.
ಒಂದೇ ಸ್ಕೂಟಿಯಲ್ಲಿ ಐದು ಜನ ಸ್ಟಂಟ್ ಮಾಡ್ತಾ ಸವಾರಿ ಮಾಡ್ತಿದ್ದಾರೆ. ಈ ಘಟನೆಯೂ ಛತ್ತೀಸ್ಗಢದ ಬಿಜಾಪುರ್ನಲ್ಲಿ ನಡೆದಿದ್ದು ಯುವಕರ ಮೇಲೆ ಕ್ರಮ ತೆಗೆದುಕೊಳ್ಳಲು ಆಗ್ರಹ ಕೂಡ ಕೇಳಿ ಬರ್ತಿದೆ.
ಇಲ್ಯಾಸ್ (Ilyas) ಹೆಸರಲ್ಲಿರೋ ಎಕ್ಸ್ ಖಾತೆಯಲ್ಲಿ ಈ ವೀಡಿಯೋ ಶೇರ್ ಮಾಡಲಾಗಿದ್ದು ಈ ಹುಚ್ಚಾಟಕ್ಕೆ ತೀವ್ರ ಟೀಕೆ ಕೇಳಿಬರ್ತಿದೆ.
ಇಲ್ಲಿ ನಾಲ್ವರು ಯುವಕರು ಒಂದೇ ಸ್ಕೂಟರ್ನಲ್ಲಿ ಕುಳಿತುಕೊಂಡಿದ್ದು, ಇನ್ನೊಬ್ಬ ಅವರ ಹೆಗಲ ಮೇಲೆ ಮಲಗಿ ನೇತಾಡುತ್ತಿರೋದನ್ನು ನೋಡಿದ್ರೆ, ಹೊಟ್ಟೆಗೆ ಎಣ್ಣೇ ಇಳಿಸರಬೇಕು ಅನ್ನೋದು ಗೊತ್ತಾಗುತ್ತೆ. ಈ ಐವರು ಯುವಕರು ಅಪಾಯಕಾರಿ ಸ್ಟಂಟ್ ಮಾಡ್ತಾ ಇರೋದನ್ನು ಪಾದಚಾರಿಯೊಬ್ಬರು ಚಿತ್ರೀಕರಿಸಿದ್ದು, ಸ್ಟಂಟ್ ಚೆನ್ನಾಗಿದೆ, ಒಳ್ಳೆಯದಾಗಲಿ ಎಂದಿದ್ದಾರೆ. ಈ ವೇಳೆ ಯುವಕರು ತ್ಯಾಂಕ್ಸ್ ಕೂಡ ಹೇಳಿದ್ದಾರೆ.