Kantara Chapter-1: ಪ್ರೇಕ್ಷಕನ ಮೇಲೆ ದೈವ..! ಪ್ರೇಕ್ಷಕರೆಲ್ಲಾ ಶಾಕ್..!
ಕಾಂತಾರ ಸೀಕ್ವೆಲ್ ಕ್ಲೈಮ್ಯಾಕ್ಸ್‌ನಲ್ಲಿ ರಿಷಬ್ ನಟನೆಗೆ ಅನೇಕರು ತಲೆದೂಗಿ ಮಂತ್ರಮುಗ್ಧರಾಗಿದ್ದರು. ಸಿನಿಮಾ ನೋಡುವಾಗ್ಲೇ ಅನೇಕರ ಮೈಮೇಲೆ ದೈವ ಬಂದಂತೆ ವರ್ತಿಸಿದ್ದರು. ಇದೀಗ ಕಾಂತಾರ 1 ಪ್ರೀಕ್ವೆಲ್ ಸಿನಿಮಾ ಪದರ್ಶನಕ್ಕೂ ಮುನ್ನ ಅಭಿಮಾನಿಯೊಬ್ಬನ ಮೇಲೆ ದೈವ ಬಂದಂತೆ ವರ್ತಿಸಿದ್ದಾನೆ. ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಥಿಯೇಟರ್ ಮುಂದೆ ರಿಷಬ್ ʼಓʼ ಎಂದು ಕೂಗುವುದನ್ನೆ ಆಕ್ಟ್ ಮಾಡಿ ತೋರಿಸುತ್ತಾ ನಟಿಸುವ ವೀಡಿಯೋಗೆ ಅನೇಕರು ಕಮೆಂಟ್ಸ್ ಮಾಡ್ತಿದ್ದಾರೆ. ಕೆಲವ್ರು ಇದೆಲ್ಲಾ ನಾಟಕ ಎಂದರೆ, ಇನ್ನು ಕೆಲವರು ದೈವ ಲೀಲೆ ಎಂದಿದ್ದಾರೆ. ಇನ್ನು ಕೆಲವ್ರು ಎಲ್ಲ ಡ್ರಾಮಾ.! ಸೋಶಿಯಲ್ ಮೀಡಿಯಾದಲ್ಲಿ ಹೀರೋ ಆಗೋ ಹುಚ್ಚು ಎಂದು ವ್ಯಂಗವಾಡಿದ್ದಾರೆ. ಏನೇ ಆಗಲಿ ಸಿನಿಮಾ ಕ್ರೇಜ್‌ಗೆ ಇನ್ನು ಏನೇನ್ ನೋಡ್ಬೇಕೋ ಅನ್ನೋ ಕುತೂಹಲ ಅನೇಕರಲ್ಲಿ ಮನೆ ಮಾಡಿದೆ.