Uttara Pradesh: ಇಸ್ಲಾಂ ಆಳ್ವಿಕೆ ಆಸೆ.! ನರಕ ತೋರಿಸ್ತೀನಿ ನುಗ್ಗಿ ಹೊಡೆದು ಹಾಕಿ.!ಯೋಗಿ ಆರ್ಭಟ

ಉತ್ತರ ಪ್ರದೇಶದಲ್ಲಿ ಕೋಲಾಹಲ ಎಬ್ಬಿಸಿರೋ ಮುಸ್ಲೀಮರ ಈ ಒಂದೇ ಒಂದು ಪದ ಯುಪಿ ಸಿಎಮ್‌ ಯೋಗಿ ಆದಿತ್ಯಾನಾಥ್‌ ನಿದ್ದೆಗೆಡಿಸಿದೆ. ಭಾರತದಲ್ಲಿ ಇಸ್ಲಾಂ ಆಳ್ವಿಕೆ ತರೋ ಕನಸು ಇದ್ದರೆ ನರಕಕ್ಕೆ ದಾರಿ ತೋರಿಸ್ತೀನಿ ಎಂದು ಯೋಗಿ ಆದಿತ್ಯಾನಾಥ್‌ ಗುಡುಗ್ತಿದ್ದಾರೆ.

ರಾಷ್ಟ್ರ ದ್ರೋಹದ ಕೆಲಸ ಯಾರೇ ಮಾಡಲಿ ಅವ್ರನ್ನು ನೇರವಾಗಿ ನರಕಕ್ಕೆ ಟಿಕೆಟ್‌ ಕೊಟ್ಟು ಕಳಿಸ್ತೀನಿ ಎಂದು ಆರ್ಭಟಿಸ್ತಿರೋ ಯೋಗಿ ಆದಿತ್ಯಾನಾಥ್‌, ಬರೇಲಿ ಜನ್ರಿಗೆ ತೊಂದ್ರೆ ಕೊಟ್ಟರೆ ನಮ್ಮದೇ ಸ್ಟೈಲ್‌ನಲ್ಲಿ ಉತ್ತರ ಕೊಡ್ತೀನಿ ಇಲ್ಲಿ ಅದಕ್ಕೆ ಅವಕಾಶ ಇಲ್ಲ. ಇಂತಹ ಕಿಡಿಗೇಡಿಗಳ ವಿರುದ್ಧ ಹೇಗೆ ವ್ಯವಹರಿಸಬೇಕು ಅನ್ನೋದು ನನಗೆ ಗೊತ್ತಿದೆ ಎಂದು ರೊಚ್ಚಿಗೆದ್ದು ಸಿಎಮ್‌ ಯೋಗಿ ಆದಿತ್ಯನಾಥ್‌ ಅಬ್ಬರಿಸ್ತಿದ್ಧಾರೆ. ಭಾಷಣಗಳ ಮೂಲಕ ಐ ಲವ್‌ ಮಹಮ್ಮದ್‌ ಪೋಸ್ಟರ್‌ಗಳ ಮೂಲಕ ಕೋಮುವಾದ ಬಿತ್ತುತ್ತಿರುವ ಕಿಡಿಗೇಡಿಗಳಿಗೆ ಪಾಠ ಕಲಿಸ್ತಿದ್ದಾರೆ.

ಅಸಲಿಗೆ ಏನಿದು ಐ ಲವ್‌ ಮಹಮ್ಮದ್‌.!

ಉತ್ತರ ಪ್ರದೇಶದ ಕಾನ್ಪುರದಲ್ಲಿ ಪ್ರವಾದಿ ಮೊಹಮ್ಮದ್ ಅವರ ಜನ್ಮದಿನವಾದ ಈದ್ ಮಿಲಾದ್ ಉನ್ ನಬಿ ಹಬ್ಬದ ಪ್ರಯುಕ್ತ ಮೆರವಣಿಗೆ ನಡೆದ ಸಂದರ್ಭದಲ್ಲಿ ಆದ ಎಡವಟ್ಟು. ಮೆರವಣಿಗೆಯಲ್ಲಿ ‘ಐ ಲವ್ ಮೊಹಮ್ಮದ್’ ಎಂಬ ಬರಹ ಇರುವ ನಾಮಫಲಕ ಬಳಸಲಾಗಿತ್ತು. ಇದಕ್ಕೆ ಹಿಂದೂ ಸಮಾಜದ ಕೆಲವರಿಂದ ಆಕ್ಷೇಪ ವ್ಯಕ್ತವಾಗಿತ್ತು. ಮುಸ್ಲಿಂ ಯುವಕರು ಹಿಂದೂ ಧಾರ್ಮಿಕ ಪೋಸ್ಟರ್ ಹರಿದಿದ್ದಾರೆ ಎನ್ನುವ ಸುದ್ದಿ ಕೂಡ ಹರಿದಾಡಿತ್ತು. ಗಲಾಟೆ ಶುರುವಾದ ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಫಲಕ ತೆಗೆಸಿದ್ದರು. ಸಾಮರಸ್ಯ ಕದಡಿದ ಆರೋಪದಲ್ಲಿ 24 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ರು.

ಈ ನಂತ್ರ ಕಾನ್ಪುರ ಮುಸ್ಲಿಮರು ಆಕ್ರೋಶ ವ್ಯಕ್ತಪಡಿಸಿ ಧರಣಿ ಮಾಡಿದ್ದರು. ಶಾಂತಿಯುತವಾಗಿ ಐ ಲವ್ ಮೊಹಮ್ಮದ್ ಪೋಸ್ಟರ್ ಪ್ರದರ್ಶನ ಮಾಡಲು ಕರೆ ನೀಡಿದ್ದರು. ಇದೀಗ ಈ ವಿಷ್ಯವೇ ಇಡೀ ದೇಶವನ್ನೇ ವ್ಯಾಪಸಿ ಐ ಲವ್‌ ಮಹದೇವ್‌ ವರ್ಸಸ್‌ ಐ ಲವ್‌ ಮಹಮ್ಮದ್‌ ಅಭಿಯಾನವಾಗಿ ಬದಲಾಗಿದೆ. ಬೆಣ್ಣೆ ನಗರಿ ದಾವಣಗೆರೆಯಲ್ಲೂ ಕೋಮುವಾದ ಪ್ರಚೋದಿಸುವ ಬ್ಯಾನರ್ ಅಳವಡಿಸಿ ಹಿಂದೂ ಸಮುದಾಯದ ಮನೆಗಳನ್ನು ಟಾರ್ಗೆಟ್ ಮಾಡಿ ಕಲ್ಲು ತೂರಾಟ ನಡೆಸಲಾಗಿದೆ ಎಂದು ಆರೋಪ ಮಾಡಲಾಗಿದೆ.

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊತ್ತಿಕೊಂಡ ಈ ಒಂದು ಸಣ್ಣ ಕಿಡಿ, ಇಂದು ಉತ್ತರಖಂಡ, ಮಹಾರಾಷ್ಟ್ರ, ತೆಲಂಗಾಣ, ಕರ್ನಾಟಕಕ್ಕೂ ವ್ಯಾಪಿಸಿ ದಳ್ಳುರಿಯಾಗುತ್ತಿದೆ. ಬೀದಿಗಳಲ್ಲಿ ಪ್ರತಿಭಟನೆ, ರ‍್ಯಾಲಿ, ಪೊಲೀಸ್ ಘರ್ಷಣೆ, ಕಲ್ಲು ತೂರಾಟ, ನೂರಾರು ಜನರ ಮೇಲೆ ಎಫ್‌ಐಆರ್. ಹಾಗಾದ್ರೆ, ಪ್ರವಾದಿಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ಘೋಷಣೆ, ದೇಶಾದ್ಯಂತ ಇಂತಹ ದೊಡ್ಡ ಮಟ್ಟದ ಅಶಾಂತಿಗೆ, ಸಾಮೂಹಿಕ ಆಂದೋಲನಕ್ಕೆ ಕಾರಣವಾಗಿದ್ದಾದರೂ ಯಾಕೆ?, ಈ ಬ್ಯಾನರ್‌ನ ಹಿಂದಿರುವ ಅಸಲಿ ಕಥೆಯೇನು?

ಈ ನಡುವೆ ಬರೇಲಿಯ ಈ ಹಿಂಸಾತ್ಮಕ ಸಂಘರ್ಷಗಳಿಗೆ ಕಾರಣನಾದವನನ್ನು ತಾಜೀಮ್‌ನಲ್ಲಿ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಯೋಗಿ ಆದಿತ್ಯಾನಾತ್‌ ನುಗ್ಗಿ ಹೊಡೆಯಿರಿ ಎಂದಿದ್ದಾರೆ. ತಾಜೀಮ್‌ ಪೊಲೀಸರ ಮೇಲೆ ಗುಂಡು ಹಾರಿಸಿದ ಘಟನೆ ಕೂಡ ನಡೆದಿದೆ. ಆತ ದನಸಾಗಾಣೆಯನ್ನೇ ಕಸುಬು ಮಾಡ್ಕೊಂಡಿದ್ದ ಅನ್ನೋದು ತನಿಖೆಯಿಂದ ಗೊತ್ತಾಗಿದೆ. ಐ ಲವ್‌ ಮಹಮ್ಮದ್‌ ವಿವಾದದ ಸಂಬಂಧ ಶೀಘ್ರ ಪ್ರತಿಭಟನೆಗೆ ಕರೆ ಕೊಟ್ಟಿದ್ದ ತೌಕೀರ್‌ ರಜಾ ಖಾನ್‌ ಆದೇಶವನ್ನು ರದ್ದುಗೊಳಿಸಿ ಹೋರಾಟವನ್ನು ಹತ್ತಿಕ್ಕಲಾಗಿದೆ.

ಒಟ್ಟಾರೆ 81 ಜನ್ರನ್ನು ಬಂಧಿಸಿದ್ದು ಯಾರೇ ತಪರಾಕಿ ಹಾಕಿದ್ರು ಅವ್ರ ವಿರುದ್ಧ ಎಫ್‌ಐಆರ್‌ ಹಾಕಲಾಗ್ತಿದೆ. ಹೆಚ್ಚವರಿ ಪೊಲೀಸ್‌ ನಿಯೋಜನೆ ಮೂಲಕ ಬಾಲ ಬಿಚ್ಚದಂತೆ ತಡೆ ಹಿಡಿಯಲಾಗ್ತಿದೆ. ಸಹರಾನ್‌ಪುರ ಸಂಸದ ಇಮ್ರಾನ್ ಮಸೂದ್ ಅವರು ತಮ್ಮ ಸಹೋದ್ಯೋಗಿ ಶಹನವಾಜ್ ಖಾನ್ ಅವರೊಂದಿಗೆ ಬರೇಲಿಗೆ ತೆರಳುತ್ತಿದ್ದಾಗ ಆತನನ್ನು ಬಂಧಿಸಿ ಗೃಹಬಂಧನದಲ್ಲಿರಿಸಲಾಗಿದೆ. ಪೊಲೀಸರು ಮನೆಯಿಂದಹೊರಗೆ ಬರಲು ಕೂಡ ಬಿಡದೇ ಕಟ್ಟು ನಿಟ್ಟಿನ ಕ್ರಮಗಳನ್ನು ಜರುಗಿಸ್ತಿದ್ದಾರೆ.

ಮಸೀದಿ ಪ್ರಾರ್ಥನೆಗೂ ಬಿಡದಂತೆ ಹಿಂಸಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲಾಗ್ತಿದೆ ಎಂದು ಯೋಗಿ ಸರ್ಕಾರದ ವಿರುದ್ದ ಮುಸ್ಲೀಂ ನಾಯಕರು ಆಕ್ರೋಶ ಹೊರ ಹಾಕ್ತಿದ್ದಾರೆ. ಪೊಲೀಸರು ಇದುವರೆಗೆ 180 ಹೆಸರಿಸಲಾದ ಮತ್ತು 2,500 ಹೆಸರಿಸದ ವ್ಯಕ್ತಿಗಳ ವಿರುದ್ಧ 10 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಯೋಗಿ ಆದತ್ಯನಾಥ್‌ ಸಖತ್‌ ಫೈಯರ್‌ ಆಗಿರೋದು ಗೊತ್ತಾಗ್ತಿದೆ. ಸರ್ಕಾರ ಯಾರದ್ದು ಅಂತ ಮೌಲಾನ ಮರೆತಿದ್ದಾರೆ. ತಲೆಮಾರುಗಳು ನೆನಪಿನಲ್ಲಿಟ್ಟುಕೊಳ್ಳೋ ಪಾಠ ಕಲಿಸುತ್ತೇವೆ’ ಎಂದು ಆಕ್ರೋಶ ಹೊರ ಹಾಕ್ತಿದ್ದಾರೆ. “ಬರೇಲಿಯಲ್ಲಿ, ಒಬ್ಬ ಮೌಲಾನಾ ಅಧಿಕಾರದಲ್ಲಿ ಯಾರು ಇದ್ದಾರೆ ಎಂಬುದನ್ನು ಮರೆತಿದ್ದಾರೆ. ಅವರು ದಿಗ್ಬಂಧನ ಹೇರುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ದಿಗ್ಬಂಧನ ಅಥವಾ ಕರ್ಫ್ಯೂ ಎರಡೂ ನಡೆಯುವುದಿಲ್ಲ ಎಂದು ನಾವು ಸ್ಪಷ್ಟಪಡಿಸಿದ್ದೇವೆ. ಅವರು ಹೀಗೆಯೇ ಮುಂದುವರೆದರೆ ಅವರ ಭವಿಷ್ಯದ ಪೀಳಿಗೆಗಳು ಸಹ ಗಲಭೆಯ ಕಲ್ಪನೆಯನ್ನು ಮರೆಯುವಂತೆ ನಾವು ಪಾಠ ಕಲಿಸುತ್ತೇವೆ” ಎಂದು ಗುಡುಗಿದ್ದಾರೆ.

2017 ರಿಂದ, ತಮ್ಮ ಸರ್ಕಾರವು ಗಲಭೆಕೋರರನ್ನು “ಒಬ್ಬೊಬ್ಬರಾಗಿ, ಅವರು ಅರ್ಥಮಾಡಿಕೊಳ್ಳುವ ಭಾಷೆಯಲ್ಲಿ” ನಿಭಾಯಿಸುತ್ತಾ ಬಂದಿದೆ. ಇದು ಉತ್ತರ ಪ್ರದೇಶದ ಬೆಳವಣಿಗೆಯ ಕಥೆಗೆ ಶಕ್ತಿ ತುಂಬಿದ ಶಾಂತಿ ಮತ್ತು ಭದ್ರತೆಯ ಹೊಸ ಯುಗವನ್ನು ಪ್ರಾರಂಭಿಸಿದೆ. ಆದರೆ ರಾಜ್ಯದ ಅಭಿವೃದ್ದಿ ಕೆಲವರಿಗೆ ರುಚಿಸುತ್ತಿಲ್ಲ. ಹೀಗಾಗಿ ಅವರು ಪ್ರತಿಭಟನೆ ಹೆಸರಲ್ಲಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಇಂತಹ ದುರಾತ್ಮಗಳಿಗೆ ಡೆಂಟಿಂಗ್ ಪೇಟಿಂಗ್ ಮಾಡುವ ಅವಶ್ಯಕತೆ ಇದೆ. ಇದಕ್ಕಾಗಿ ಕಾಯ್ದೆಗಳಿಗೆ ತಿದ್ದುಪಡಿ ತಂದು ಸರಿಪಡಿಸಬೇಕಿದೆ. ಇದೇ ರೀತಿ ಬರೇಲಿಯಲ್ಲಿ ಇಂತಹ ಡೆಂಟಿಂಗ್ ಪೇಟಿಂಗ್ ನಡೆದಿದೆ. ಧಮ್ಕಿ ಹಾಕಿ ಬಲವಂತವಾಗಿ ಪ್ರತಿಭಟನೆ ನಡೆಸುತ್ತೇವೆ ಎಂದರೆ ನಾವು ಒಪ್ಪಿಕೊಳ್ಳುತ್ತೇವೆ ಎಂದು ಕೊಂಡಿದ್ದಾರೆ. ಆದರೆ ಅವರು ಬಹುಶಃ ರಾಜ್ಯದಲ್ಲಿ ಯಾವ ಸರ್ಕಾರ ಇದೆ ಎಂಬುದನ್ನು ಮರೆತಂತಿದೆ ಎಂದು ಹೇಳಿದರು.

ಅಂತೆಯೇ ಇದು ಯಾವ ರೀತಿಯ ಪ್ರತಿಭಟನೆ. ನೀವು ಇಡೀ ವ್ಯವಸ್ಥೆಯನ್ನೇ ಸ್ಥಗಿತಗೊಳಿಸಲು ಮುಂದಾಗಿದ್ದೀರಿ. ಇಂತಹ ಪ್ರವೃತ್ತಿ ಉತ್ತರ ಪ್ರದೇಶದಲ್ಲಿ ನಡೆಯುವುದಿಲ್ಲ. 2017ರ ಮೊದಲು ನಡೆಯುತ್ತಿತ್ತು. ಆದರೆ ಈಗ ಅದು ನಡೆಯುವುದಿಲ್ಲ. ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಅವರಿಗೆ ಪಾಠ ಕಲಿಸುತ್ತೇವೆ ಎಂದು ಯೋಗಿ ಆದಿತ್ಯಾನಾಥ್ ಹೇಳಿದ್ದಾರೆ.

ಎಚ್ಚರಿಕೆ ಯೋಗಿಗೆ..!
ಮೌಲಾನಾ ತೌಕೀರ್ ರಜಾ ಖಾನ್ ಮತ್ತು ಇತರ ಯುವಕರನ್ನು ಬಿಡುಗಡೆ ಮಾಡದಿದ್ದರೆ, ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಯೋಗಿ ಸರ್ಕಾರವು ರಾಜಕೀಯವಾಗಿ ಹಿನ್ನಡೆಯನ್ನು ಎದುರಿಸಬೇಕಾಗುತ್ತದೆ ಎಂದು ಅದೀಬ್ ರಾಜಕೀಯ ಎಚ್ಚರಿಕೆಯನ್ನೂ ನೀಡಿದ್ದಾರೆ.ಯುಪಿಯಲ್ಲಿ ಹಬ್ಬಗಳ ಸಮಯದಲ್ಲಿ ನಮ್ಮ ನೆಮ್ಮದಿಯನ್ನು ಹಾಳು ಮಾಡಲು ಪ್ರಯತ್ನ ಪಟ್ಟರೆ ಮುಂದಿನ ಕ್ರಮಗಳು ಭೀಕರವಾಗಿರುತ್ತವೆ ಎಂದಿದ್ದಾರೆ.

Rakesh arundi

Leave a Reply

Your email address will not be published. Required fields are marked *