Grihalakshmi: ಗೃಹಲಕ್ಷ್ಮಿ ಹಣದಿಂದ ವಾಷಿಂಗ್ ಮಷಿನ್ ಖರೀದಿಸಿದ ಮಹಿಳೆ: ನನ್ನ ಹಬ್ಬದ ಸಂಭ್ರಮ ಇಮ್ಮಡಿಯಿತು ಎಂದ ಸಿಎಂ

ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆಯಿಂದ ಬಂದ ಹಣವನ್ನು ಕೂಡಿಟ್ಟು,  ಮಹಿಳೆಯೊಬ್ಬರು ಮನೆಗೆ ಹೊಸ ವಾಷಿಂಗ್ ಮಷಿನ್ ಖರೀದಿಸಿದ್ದಾರೆ. ಈ ಕುರಿತ ವಿಡಿಯೋವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ದಕ್ಷಿಣದ ರಾಮನಗರದಲ್ಲಿ  ಮಹಿಳೆ ಬಿ.ಕೆ.ತುಳಸಿಯವರಿಗೆ ಗೃಹಲಕ್ಷ್ಮಿ ಯೋಜನೆಯಡಿ ಬಂದ ಏಳು ತಿಂಗಳ ಹಣವನ್ನು ಕೂಡಿಟ್ಟು, ವಾಷಿಂಗ್‌ ಮಷಿನ್‌ ಖರೀದಿಸಿ ಆಯುಧ ಪೂಜೆಯ ದಿನದಂದು ಅದಕ್ಕೆ ಪೂಜೆ ಮಾಡಿರುವ ವಿಡಿಯೋ ವೈರಲ್‌ ಆಗಿದೆ. ಅದನ್ನು ಸಿಎಂ ಸಿದ್ದರಾಮಯ್ಯ ಮತ್ತು ಸಿಎಂ ಆಫ್‌ ಕರ್ನಾಟಕ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಸಿಎಂ ಸಿದ್ದರಾಮಯ್ಯ ಎಕ್ಸ್‌ ಖಾತೆ: ಗೃಹಲಕ್ಷ್ಮಿ ಹಣದಲ್ಲಿ ವಾಷಿಂಗ್‌ ಮಷಿನ್‌ ಖರೀದಿ

ರಾಮನಗರದ ಗ್ಯಾರಂಟಿ ಯೋಜನೆಯ ಫಲಾನುಭವಿ ಮಹಿಳೆ ಬಿ.ಕೆ.ತುಳಸಿ ಅವರು ಕಳೆದ ಏಳು ತಿಂಗಳ ಗೃಹಲಕ್ಷ್ಮಿ ಹಣ ಕೂಡಿಟ್ಟು ಮಹಾನವಮಿಯ ದಿನ ಹೊಸ ವಾಷಿಂಗ್ ಮೆಷಿನ್ ಖರೀದಿಸಿ, ಪೂಜಿಸುತ್ತಿರುವ ವೀಡಿಯೋ ನನ್ನ ಹಬ್ಬದ ಸಂಭ್ರಮವನ್ನು ಇಮ್ಮಡಿಯಾಗಿಸಿತು.

ಸ್ತ್ರೀಸಬಲೀಕರಣದ ಆಶಯದೊಂದಿಗೆ ಜಾರಿಗೆ ಕೊಟ್ಟ ಗೃಹಲಕ್ಷ್ಮಿ ಯೋಜನೆಯು ಸ್ತ್ರೀಶಕ್ತಿಯನ್ನು ಆರಾಧಿಸುವ ನವರಾತ್ರಿಯಲ್ಲಿ ಮಹಿಳೆಯೊಬ್ಬರ ಸಂಭ್ರಮಕ್ಕೆ ಕಾರಣವಾಗಿರುವುದು ಹೆಚ್ಚು ಅರ್ಥಪೂರ್ಣ ಮತ್ತು ಸಾರ್ಥಕವೆನಿಸಿದೆ. ಇಂತಹ ಇನ್ನಷ್ಟು ಕುಟುಂಬಗಳ ಖುಷಿಗೆ ನಮ್ಮ ಯೋಜನೆ ಸಾಕ್ಷಿಯಾಗಲಿ ಎಂದು ಆಶಿಸುತ್ತೇನೆಂದು ತಿಳಿಸಿದ್ದಾರೆ.

Rakesh arundi

Leave a Reply

Your email address will not be published. Required fields are marked *