Onion:ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರುತ್ತಾ.!ಇಲ್ಲಿದೆ ಸುಲಭ ಪರಿಹಾರ
ಯಾವ ತರಕಾರಿಯಲ್ಲೂ ಇಲ್ಲದೇ ಇರೋ ವಿಭಿನ್ನ, ವಿಶಿಷ್ಟ ಗುಣ ಈರುಳ್ಳಿಯಲ್ಲಿದೆ. ಆರೋಗ್ಯಕ್ಕೂ ಅಷ್ಟೆ ಉಪಕಾರಿ. ಆದ್ರೆ ಈರುಳ್ಳಿ ಕತ್ತರಿಸುವಾಗ ಬರೋ ಕಣ್ಣೀರು ಮಾತ್ರ ಅಡುಗೆಯನ್ನು ಪ್ರೀತಿಯಿಂದ ಮಾಡಲು ಕಿರಿಕಿರಿ ಮಾಡುತ್ತದೆ.ಈರುಳ್ಳಿ ಕತ್ತರಿಸುವಾಗ ಅಳು ಬರುತ್ತಾ? ಇಲ್ಲಿದೆ ಮನೆ ಮದ್ದು. ಸುಲಭ ಪರಿಹಾರ.
ಏನು ಮಾಡಬೇಕು
- ಈರುಳ್ಳಿ ಕತ್ತರಿಸುವ ಮೊದಲು, ಸಿಪ್ಪೆ ಸುಲಿದು 5 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಬೇಕು.
- ಸುಮಾರು 10 ನಿಮಿಷಗಳ ಕಾಲ ರೆಫ್ರಿಜರೇಟರ್ನಲ್ಲಿ ಇಟ್ಟು ತಣ್ಣಗಾಗಿಸಬೇಕು.
- ನಂತ್ರ ಈರುಳ್ಳಿಯ ಸಿಪ್ಪೆ ಸುಲಿದು ಸುಲಭವಾಗಿ ಕತ್ತರಿಸಿದರೂ ಕಣ್ಣೀರು ಬರೋದಿಲ್ಲ.