Diaper:ಮಕ್ಕಳಿಗೆ ಡೈಪರ್ ಹಾಕಿದಾಗ ಚರ್ಮ ಕೆಂಪಾದರೆ, ಏನು ಪರಿಹಾರ..?
ಮಗು ಜನಿಸಿದ ಮೊದಲ ಆರೇಳು ವರ್ಷ ತುಂಬಾ ಕೇರ್ ಮಾಡಬೇಕಾಗುತ್ತದೆ. ಆರೋಗ್ಯದಲ್ಲಿ ಏನೇ ಬದಲಾವಣೆ ಕಂಡ್ರು ಎಚ್ಚರಿಕೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಸೂಕ್ಷ್ಮವಾಗಿರೋ ಮಕ್ಕಳ ಚರ್ಮದ ಬಗ್ಗೆಯೂ ಅಷ್ಟೆ ಖಾಳಜಿ ವಹಿಸಬೇಕು. ಮಗು ಬಳಸುವ ನೀರ್,ಮೈಗೆ ಲೇಪಿಸುವ ಕೊಬ್ಬರ್ ಎಣ್ಣೆ, ಧರಿಸಿವು ಉಡುಪುಗಳ ವಿಷ್ಯವಾಗಿಯೂ ಅಷ್ಟೆ ಜಾಗರೂಕರಾಗಿರಬೇಕು. ಒಂದು ವೇಳೆ ಮಗುವಿಗೆ ಡೈಪರ್ ಹಾಕಿದಾಗ ಚರ್ಮದ ಮೇಲೆ ಕೆಂಪು ಗುಳ್ಳೆಗಳು ಆದರೆ ಮನೆ ಮದ್ದೇನು..? ಏನು ಪರಿಹಾರ..? ಕೆಲವು ಸರಳ ಸಲಹೆಗಳ ಮೂಲಕ ಡೈಪರ್ ನಿಂದ ಉಂಟಾಗುವ ದದ್ದುಗಳನ್ನು ಕಡಿಮೆ ಮಾಡಬಹುದು. ಈ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ.
ತಾಯಿ ಎದೆ ಹಾಲು:-
ಡೈಪರ್‌ನಿಂದ ದದ್ದುಗಳೇನಾದ್ರೂ ಉಂಟಾಗಿದ್ರೆ, ತಾಯಿಯ ಎದೆ ಹಾಲನ್ನು ದದ್ದುಗಳಿರೋ ಜಾಗದಲ್ಲಿ ಸ್ವಲ್ಪ ಸ್ವಲ್ಪವೇ ಹಚ್ಚಬೇಕು. ಇದ್ರಿಂದ ಕೆಂಪಾದ ಭಾಗವು ವಾಸಿಯಾಗುತ್ತದೆ. ತಾಯಿ ಹಾಲು ಅಮೃತಕ್ಕೆ ಸಮ.
ತೆಂಗಿನ ಎಣ್ಣೆ:-
ಇದು ಎಲ್ಲರ ಮನೆಯಲ್ಲೂ ಪ್ರತಿ ನಿತ್ಯ ಬಳಸುತ್ತಲೇ ಇರುತ್ತೀರಿ. ತೆಂಗಿನ ಎಣ್ಣೆಯನ್ನು ಡೈಪರ್ ಹಾಕುವ ಮೊದಲೇ ದದ್ದುಗಳಿಗೆ ಹಚ್ಚಿದರೆ ಉರಿ, ತುರಿಕೆ, ಕಡಿತ ಕಡಿಮೆಯಾಗುತ್ತದೆ.
ವ್ಯಾಸಲೀನ್:-
ವ್ಯಾಸಲಿನ ಬಳಸೋದ್ರಿಂದ ಕೆಂಪಾದ ದದ್ದುಗಳ ಸುಡು ಅನುಭವ, ತುರಿಕೆ, ಉರಿ ಅನುಭವಗಳನ್ನು ಕಡಿಮೆ ಮಾಡಬಹುದು.