Dharmsthala:ಬಂಗ್ಲೆಗುಡ್ಡದಲ್ಲಿ ಮತ್ತೆ ಶೋಧ ಕಾರ್ಯ..! ಪಿಡಬ್ಲ್ಯುಡಿ ಅಧಿಕಾರಿ ಸಮ್ಮುಖದಲ್ಲಿ ಮ್ಯಾಪಿಂಗ್.! #Banglegudda
ಧರ್ಮಸ್ಥಳ ಸಾಮೂಹಿಕ ಶವಗಳನ್ನು ಹೂತಿಟ್ಟ ಆರೋಪಕ್ಕೆ ಸಂಬಂಧಪಟ್ಟಂತೆ ದಿನಕ್ಕೊಂದು ಬೆಳವಣಿಗೆಗಳ ನಡೆಯುತ್ತಿವೆ. ಎಸ್ಐಟಿ ತನಿಖೆಯನ್ನು ಇಲ್ಲಿಗೆ ಮುಗಿಸಲಾಗುತ್ತೆ ಅನ್ನೋ ಚರ್ಚೆಗಳ ನಡುವೆಯೇ, ಎಸ್ಐಟಿ ಸೆಕೆಂಡ್ ಇನ್ನಿಂಗ್ಸ್ ತನಿಖೆ ಶುರು ಮಾಡಿದೆ. ಇಲ್ಲಿವರೆಗೂ ಬುರುಡೆ ತಂದು ಕೊಟ್ಟಿದ್ಯಾರು.? ಎಲ್ಲಿಂದ ತಂದರು..! ಚಿನ್ನಯ್ಯನ ಹಿನ್ನೆಲೆ ಏನು..? ನಿಜಕ್ಕೂ? ಪಿತೂರಿ ಮಾಡಿದ್ರೆ, ಎಲ್ಲೆಲ್ಲಿ ಮೀಟಿಂಗ್ ನಡೆದಿದೆ.? ಇದು ಷಡ್ಯಂತ್ರ ಇಲ್ಲ ಅನ್ನೋದು ಪ್ರೂವ್ ಆದ್ಮೇಲೆ ಚಿನ್ನಯ್ಯ ಸುಳ್ಳು ಸ್ಥಳ ಗುರುತು ಮಾಡಿದ್ಯಾಕೆ.? ಈ ಆಯಾಮದಲ್ಲಿ ಮೊದಲ ತನಿಖೇ ನಡೆದ್ರೆ, ಇದೀಗ ಧರ್ಮಸ್ಥಳದ ಸುತ್ತಾಮತ್ತಾ ಅಸ್ವಾಭಾವಿಕ ಸಾವುಗಳ ಬೆನ್ನತ್ತಿ ಎಸ್ಐಟಿ ವಿಚಾರಣೆ ನಡೆಸ್ತಿದೆ. ಇದೀಗ ಗ್ರಾ.ಪಂ ಬುಡಕ್ಕೆ ಬಂದಿದ್ದು ಎಲ್ಲಾ ದಾಖಲೆಗಳನ್ನು ಎಸ್ಐಟಿ ಮುಂದಿಡಬೇಕಾದ ಅನಿವಾರ್ಯತೆ ಬಂದೊದಗಿದೆ.ನಾಲ್ಕು ಜನರ ತಮ್ಮದೇ ಕಾಲಘಟ್ಟದಲ್ಲಿ ಹೂತಿಟ್ಟ ದಾಖಲೆ ಸಮೇತ ಧಫನ್ ಮಾಡಿದ ಎಲ್ಲಾ ಸಾವಿಗೆ ಎಫ್ಐಆರ್ ಸೇರಿ ರಶೀಧಿ ಸಮೇತ ರಿಜಿಸ್ಟರ್ ಮಾಹಿತಿಗಳನ್ನ್ ಎಸ್ಐಟಿ ಅಧಿಕಾರಿಗಳ ಮುಂದಿಡಬೇಕಾಗಿದೆ.
ಈ ಎಲ್ಲಾ ತಿರುವುಗಳ ನಡುವೆ ಮತ್ತೆ ಬಂಗ್ಲೆಗುಡ್ಡದಲ್ಲಿ ಶೋಧ ಕಾರ್ಯಾಚರಣೆ ಶುರುವಾಗಿದೆ. ವಿಜಯ ದಶಮಿಗೂ ಮುನ್ನ ಮಂಗಳವಾರ ಸಂಜೆ ಬಂಗ್ಲೆಗುಡ್ಡ ಎಸ್ಐಟಿ ಟೀಮ್ ಧೀಡೀರ್ ಆಗಮಿಸಿದ್ದು, ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಪಿಡಬ್ಯುಡಿ ಇಂಜಿನಿಯರ್ ಜತೆ ಬಂಗ್ಲೆಗುಡ್ಡದ ಅರಣ್ಯ ಪ್ರದೇಶಕ್ಕೆ ಎಂಠ್ರಿ ಕೊಟ್ಟಿದ್ದ ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸ್ತಿದೆ. ಈ ಹಿಂದೆ ಪರಿಶೀಲನೆ ನಡೆಸಿದ ಸ್ಥಳದಲ್ಲೇ ಏಳು ಮೃತದೇಹಗಳ ಅವಶೇಷಗಳು ಪತ್ತೆಯಾಗಿದ್ದವು. ಈ ಹಿನ್ನಲೆಯಲ್ಲಿ ಸ್ಥಳದ ಮ್ಯಾಪ್ ತಯಾರಿಸಲು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಎಸ್.ಐ.ಟಿ ಅಧಿಕಾರಿಗಳು ತೆರಳಿ ಸತತ ಅರ್ಧ ಗಂಟೆಗೂ ಹೆಚ್ಚು ಕಾರ್ಯ ನಿರ್ವಹಿಸಿದ್ದಾರೆ.
ಅಸಲಿಗೆ ವಾಮಾಚಾರದ ಸುದ್ದಿಯೂ ಕೂಡ ಹರಿದಾಡ್ತಿದ್ದು, ಬಂಗ್ಲೆಗುಡ್ಡದ ಮೇಲೆ ಸಿಕ್ಕಿರೋ ಮೃತದೇಹಗಳಲ್ಲಿ ಒಂದು ಸುಟ್ಟ ಮೃತದೇಹವಾಗಿದೆ. ಎಲ್ಲವೂ ಮೇಲ್ಭಾಗದಲ್ಲೇ ಸಿಕ್ಕಿದ್ದು, ಹರಿದ ಪ್ಯಾಂಟ್ ಕೂಡ ಅರೆಬೆರೆ ಸುಟ್ಟ ಪರಿಸ್ಥಿತಿಯಲ್ಲಿದೆ. ಹಾಗಾಗಿ ಅಲ್ಲಿನ ಫೋಟೋಗಳು ಎಕ್ಸ್ಕ್ಲೂಸಿವ್ ಆಗಿ ಬೆಂಗಳೂರುಪೋಸ್ಟ್ .ಕಾಮ್ ನಲ್ಲಿ ಪ್ರಕಟವಾಗಿದ್ದವು. ಹಾಗೂ ಅಲ್ಲಿ ರುಂಡವನ್ನು ಭಾಗ ಮಾಡಿ ವಾಮಾಚಾರ ಮಾಡುವ ಪ್ರಕ್ರಿಯೆ , ಮತ್ತೊಂದು ಸುಟ್ಟು ಹೂಳುವ ಒಂದು ಪ್ರಕ್ರಿಯೇ ವಾಮಾಚಾರಗಳಲ್ಲಿದೆ. ಈ ರೀತಿಯ ವಾಮಾಚಾರವೇನಾದ್ರೂ ಬಂಗ್ಲೆಗುಡ್ಡದ ಮೇಲೆ ನಡೆದಿದ್ಯಾ..? ಅಥವಾ ಈ ಮೃತದೇಹಗಳ ಹಿಂದಿನ ಅಸಲಿ ಕಥೆ ಏನು ಅನ್ನೋದನ್ನು ಎಸ್ಐಟಿ ಪತ್ತೆ ಹಚ್ತಿದೆ.
ಪಿಡಬ್ಯುಡಿ ಇಲಾಖೆಯವ್ರು ಅಲ್ಲಿ ರಸ್ತೆ ಕಾಮಗಾರಿ,, ಹಾಗೂ ಮೂಲಸೌಕರ್ಯಗಳ ಅಭಿವೃದ್ದಿಗ ಕಾಮಗಾರಿಗಳೇನಾದ್ರೂ ನಡೆದಿದ್ಯಾ ಅನ್ನೋ ಕುರಿತಾಗಿ ತನಿಖೇ ನಡೀತಾ ಇದೆ. ಇದ್ರ ಬೆನ್ನಲ್ಲೆ ಬಂಗ್ಲೆಗುಡ್ಡದಲ್ಲಿ ಯಾವುದಾದ್ರೂ ಅಪರಿಚಿತ ಶವಗಳನ್ನು ಹೂತಿದ್ದಕ್ಕೆ ಯಾವುದಾದ್ರೂ ದಾಖಲೆ ಇದ್ಯಾ..? ಅಥವಾ ಅಲ್ಲಿ ಜನರು ಪ್ರಾಣಕಳೆದುಕೊಳ್ಳುವುದಕ್ಕೆ ಆಯ್ಕೆ ಮಾಡಿಕೊಳ್ತಿದ್ದರು ಅನ್ನೋದಕ್ಕೆ ಯಾವುದಾದ್ರೂ ಪುರಾವೆ ಇದ್ಯಾ ಅನ್ನೋ ನಿಟ್ಟಿನಲ್ಲಿ ಪಂಚಾಯತ್ ಮಾಜಿ ಅಧ್ಯಕ್ಷರಾದ ಕೇಶವ್ ಬೆಳಾಲ್, ಪ್ರಭಾಕರ್ ಪೂಜಾರಿ, ಗೀತಾ,ಚಂದನ್ ಕಾಮತ್ ಅವ್ರನ್ನು ವಿಚಾರಣೆ ಮಾಡ್ತಿದೆ. ಇದು ಔಪಚಾರಿಕ ವಿಚಾರಣೆ ಅಲ್ಲ. ಕೆಲವು ಮಹತ್ವದ ಮಾಹಿತಿ ದೊರೆತ ಹಿನ್ನೆಲೆಯಲ್ಲೇ ಇವ್ರನ್ನೆಲ್ಲಾ ಎಸ್ಐಟಿ ಟೀಮ್ ಕಛೇರಿಗೆ ಕರೆಸಿಕೊಂಡಿದೆ.ವಿಟ್ಟಲ್ ಗೌಡ ತೋರಿಸಿದ ಮೃತದೇಹಗಳು, ಹಾಗೂ ಚಿನ್ನಯ್ಯ ಪಾಯಿಂಟ್ ನಂ6 ಹಾಗೂ 11ಎ ಜಾಗದಲ್ಲಿ ಸಿಕ್ಕ ಅವಶೇಷಗಳಿಗೂ ಯಾವುದಾದ್ರೂ ಸಂಬಂಧ ಕಲ್ಪಿಸಬಹುದಾದ ಮಾಹಿತಿ ಸಿಗಬಹುದೇ ಎಂದು ಮಾಜಿ ಪಂಚಾಯತ್ ಅಧ್ಯಕ್ಷರನ್ನು ವಿಚಾರಣೆ ಮಾಡ್ತಿದೆ.
ಇನ್ನು ಮಹೇಶ್ ಶೆಟ್ಟಿ ತಿಮರೊಡ್ಡಿ ಮನೆಯಲ್ಲಿ ಪತ್ತೆಯಾದ ಅಕ್ರಮ ಶಸ್ತ್ರಾಸ್ತಗಳ ಕೇಸ್ಗೆ ಸಂಬಂಧಪಟ್ಟಂತೆ,ತಿಮರೊಡ್ಡಿ ಪರ ವಕೀಲರಾದ ದಿನೇಶ್ ಹೆಗ್ಡೆ ಉಳೆಪಾಡಿ ಅವ್ರು ಪ್ರತಿವಾದ ಮಾಡಿದರು. ಜಾಮೀನು ನೀಡಲೇಬಾರದು ಎಂದು ಆಕ್ಷೇಪಣೆ ಎತ್ತಿದ ಸರ್ಕಾರಿ ಪರ ವಕೀಲರ ವಾದಕ್ಕೆ, ದಿನೇಶ್ ಅವ್ರು ಕೊಟ್ಟಿರೋ ದೂರಿಗೆ ಯಾವುದೇ ಪುರಾವೆಗಳನ್ನು ಒದಗಿಸಿಲ್ಲ. ವಶಪಡಿಸಿಕೊಂಡಿರೋ ಶಸ್ತ್ರಾಸ್ತ್ರಗಳ ದಾಖಲೆಗಳನ್ನು ಒದಗಿಸಿಲ್ಲ. ವಶಪಡಿಸಿಕೊಂಡ ವಸ್ತುಗಳು ಆರ್ಮ್ಸ್ ಆಕ್ಟ್ ಅಡಿಯಲ್ಲಿ ಬರುತ್ತವೆಯೇ ಅನ್ನೋದನ್ನು ನೋಡಬೇಕಾಗುತ್ತದೆ. ಅವೆಲ್ಲಾ ಧೋಷಪೂರಿತವಾಗಿದ್ರೆ, ಕೆಲಸಕ್ಕೆ ಬರದ ಆಯುಧಗಳಾಗಿದ್ದರೆ ದೂರು ಅಥವಾ ಎಫ್ಐಆರ್ ದಾಖಲಿಸಿಕೊಳ್ಳುವುದ್ರಲ್ಲ್ ಅರ್ಥವೇ ಇಲ್ಲ. ಇಂತ ಅಪರಾಧಕ್ಕೆ ಎರಡು ವರ್ಷ ಗರಿಷ್ಠ 7 ವರ್ಷ ಶಿಕ್ಷೆ ಮಾತ್ರ ಇರೋದು. ಆದ್ದರಿಂದ ಜಾಮೀನು ಮಂಜೂರು ಮಾಡಿ ಎಂದಿದ್ದಾರೆ.
ಈ ಕೇಸ್ಗೆ ಸಂಬಂಧಪಟ್ಟಂತೆ ಸರ್ಕಾರಿ ವಕೀಲರು ಮತ್ತೆ ಸಮಯ ಕೇಳಿದ್ದರಿಂದ ಈ ಕೇಸ್ ಅಕ್ಟೋಬರ್ 04ಕ್ಕೆ ಮುಂದೂಡಿಕೆಯಾಗಿದೆ. ಒಟ್ಟಾರೆ ಮಹೇಶ್ ಶೆಟ್ಟಿ ತಿಮರೊಡ್ಡಿ ಅವ್ರಿಗೆ ರಿಲ್ಯಾಕ್ಸ್ ಸಿಗಲು ಇನ್ನು ಸಮಯಾವಕಾಶ ಬೇಕಾಗಿದೆ. ಇನ್ನು ಚಿನ್ನಯ್ಯ ಮ್ಯಾಜಿಸ್ಟ್ರೇಟ್ ಮುಂದೆ ಕೊಟ್ಟಿರೋ ಸ್ಟೇಟ್ಮೆಂಟ್ಗಳ ಆಧಾರದಲ್ಲಿ ಜಯಂತ್ ಮತ್ತೊಂದು ಸತ್ಯ ಬಿಚ್ಚಿಟ್ಟಿದ್ದಾರೆ.
ಬುರುಡೆ ಪ್ರಕರಣದ ಚಿನ್ನಯ್ಯ ಆಮಿಷಗಳ ಮೂಲಕ ದಾರಿ ತಪ್ಪಿದ್ದಾನೆ. ಅವನು ಮೊದಲು ಸತ್ಯವನ್ನೇ ಹೇಳಿದ್ದಾನೆ.ಈಗ ಮಾತ್ರ ದಾರಿ ತಪ್ಪಿಸುವ ಹೇಳಿಕೆ ನೀಡುತ್ತಿದ್ದಾನೆ.
ಆತನಿಗೆ ಸಹಕರಿಸಲು ವಕೀಲರು ಸಿದ್ಧರಿದ್ದರೂ, ಅವನೇ ಸರಕಾರಿ ವಕೀಲರು ಸಾಕು ಎಂದು ಹೇಳುತ್ತಿದ್ದಾನೆ” ಎಂದು ಸೌಜನ್ಯಾ ಪರ ಹೋರಾಟಗಾರ ಜಯಂತ ಟಿ. ಹೇಳಿದ್ದಾರೆ.
ಧರ್ಮಸ್ಥಳ ಗ್ರಾಮದ ಜಾಗವೊಂದರ ಸರ್ವೆ ಕುರಿತು ಅರ್ಜಿ ಸಲ್ಲಿಸಿದ್ದು ಈ ಬಗ್ಗೆ ಮಾಹಿತಿ ಪಡೆಯಲು ಮಂಗಳವಾರ ತಾಲೂಕು ಕಚೇರಿಗೆ ಬಂದ ಸಂದರ್ಭ ಅವರು ಮಾಧ್ಯಮಗಳ ಜತೆ ಮಾತನಾಡಿದ್ದಾರೆ.
ಸುಜಾತಾ ಭಟ್ ವಿಚಾರದಲ್ಲಿ ಯಾವುದೇ ಷಡ್ಯಂತ್ರ ನಡೆಸಿಲ್ಲ. ನಾನು, ಮಟ್ಟಣ್ಣವರ್ ಅವರ ಬಳಿ ಹೋದದ್ದು ಸತ್ಯ. ಆದರೆ ಅವರಿಗೆ ನಿಜ ವಿಚಾರ ಮೊದಲೇ ಹೇಳಬಹುದಿತ್ತು. ಈ ಪ್ರಕರಣದ ಎಸ್ ಐಟಿ ತನಿಖೆ ನಡೆಯಬಹುದೆಂಬ ವಿಚಾರ ಅವರಿಗೆ ಗೊತ್ತಿರಲಿಲ್ಲ ಎಂಬ ಸತ್ಯ ಬಿಚ್ಚಿಟ್ಟಿದ್ದಾರೆ.
ಊರಿನ ಕೆಲವರು ನಮ್ಮದು ಷಡ್ಯಂತ್ರ ಎಂದು ಹೇಳುತ್ತಿದ್ದಾರೆ ಆದರೆ ಇದು ಎಸ್ಐಟಿ ತನಿಖೆಯಿಂದ ತಿಳಿದು ಬರಬೇಕಿದ್ದು, ಇದಕ್ಕೆ ಉನ್ನತ ಮೂಲಗಳೇ ಉತ್ತರಿಸಬೇಕಾಗಿದೆ. ಮುಂದಿನ ಆರು ತಿಂಗಳಲ್ಲಿ ಸತ್ಯ ಹೊರಗೆ ಬಂದೇ ಬರುತ್ತದೆ. ನನಗೆ ಬಂಧನದ ಬಗ್ಗೆ ಯಾವುದೇ ಭೀತಿ ಇಲ್ಲ. ಬಂಧನವಾದರೆ ಎಲ್ಲಾ ಸತ್ಯ ಹೊರಗೆ ಬರುತ್ತದೆ. ನಮ್ಮದು ನ್ಯಾಯಕ್ಕಾಗಿ ಹೋರಾಟ. ಕಾನೂನಿನ ಅರಿವಿಲ್ಲದೆ ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಲು ಸಿದ್ಧ. ಎಸ್ಐಟಿ ತನಿಖೆ ಉತ್ತಮವಾಗಿ ನಡೆಯುತ್ತಿದ್ದು ಇದಕ್ಕೆ ಪರಸ್ಪರ ಸಹಕಾರ ಅಗತ್ಯವಾಗಿದೆ ಎಂದಿದ್ದಾರೆ.