Darshan:ದರ್ಶನ್ ಪಲ್ಲಂಗ ಕೇಳಿದ್ರೆ ಕೊಡೋದಕ್ಕೆ ಆಗಲ್ಲ..! ಅಚ್ಚರಿ ವಾದ-ಪ್ರತಿವಾದ
ಜೈಲಿನಲ್ಲಿ ನಂಗೆ ಸರಿಯಾಗಿ ಹಾಸಿಗೆ ದಿಂಬು ಕೊಡ್ಥಾ ಇಲ್ಲ ಅಂತಾ ಆರೋಪ ಮಾಡಿದ್ದ ನಟ ದರ್ಶನ್ ದೂರಿಗೆ ಸಂಬಂಧಪಟ್ಟಂತೆ ಇಂದು ಕೋರ್ಟ್ನಲ್ಲಿ ವಿಚಾರಣೆ ನಡೆಯಿತು. ಈ ಸಂದರ್ಭದಲ್ಲಿ ಸರ್ಕಾರಿ ಪರ ವಕೀಲರಾದ ಪ್ರಸನ್ನ ಕುಮಾರ್ ಹಾಗೂ ದರ್ಶನ್ ಪರ ವಕೀಲರಾದ ಸುನೀಲ್ ಕುಮಾರ್ ನಡುವೆ ವಾದ ಪ್ರತಿವಾದ ನಡೆಯಿತು. ಒಂದು ಹಂತದಲ್ಲಿ ವಿಕೋಪಕ್ಕೆ ಹೋದ ರೀತಿಯಲ್ಲಿ ಪ್ರತಿವಾದಗಳು ನಡೆದವು.
ಎ2 ಆರೋಪಿ ದರ್ಶನ್, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹಾಸಿಗೆ ದಿಂಬು ವಿಚಾರವಾಗಿ ಬೆಂಗಳೂರಿನ ಸೆಷನ್ಸ್ ಕೋರ್ಟ್ನಲ್ಲಿ ಅರ್ಜಿ ವಿಚಾರಣೆ ನಡೆದಿದೆ.
ದರ್ಶನ್ ಪರ ವಕೀಲ ಸುನೀಲ್ ಕುಮಾರ್ ವಾದ:
- ಈಗ್ಲೂ ನಟ ದರ್ಶನ್ ಕ್ವಾರೈಂಟೈನ್ ಸೆಲ್ನಲ್ಲಿದ್ದಾರೆ
- 14 ದಿನ ಮಾತ್ರ ಇಲ್ಲಿಡಬಹುದು
- ಇವ್ರಿಗೆ ಒಂದು ನ್ಯಾಯ, ಬೇರೆಯವ್ರಿಗೆ ಒಂದು ನ್ಯಾಯ
- ನಮಗೇನು ಚಿನ್ನದ ಮಂಚ ಬೇಕಿಲ್ಲ. ಹಾಸಿಗೆ ಕೊಡಿ ಸಾಕು
ಸರ್ಕಾರಿ ಪರ ವಕೀಲ ಪ್ರಸನ್ನಕುಮಾರ್ ಪ್ರತಿವಾದ
- ಕ್ವಾರೈಂಟೈನ್ ಸೆಲ್ನಲ್ಲಿರೋ ಅವಕಾಶವಿದೆ
- ಚಿನ್ನದ ಮಂಚ ಕೊಡೋದಕ್ಕೆ ಆಗಲ್ಲ.
- ಏನು ಕೊಡಬೇಕು ಅನ್ನೋದನ್ನು ಅವ್ರೇಳಲಿ
- ಆ ಸೆಲ್ ಕೂಡ ಜೈಲಿನ ಒಂದು ಭಾಗ
- ರಿಸ್ಕ್ ನೋಡಿಕೊಂಡು ಅಲ್ಲಿಟ್ಟಿರುತ್ತಾರೆ
ಇಬ್ಬರ ವಾದ ಪ್ರತಿವಾದ ಆಲಿಸಿ ಅಕ್ಟೋಬರ್ 09ಕ್ಕೆ ಅರ್ಜಿ ಆದೇಶವನ್ನು ಕಾಯ್ದಿರಿಸಿದೆ.