VijayThalapathy:ಕರೂರ್ ದುರಂತ.ನಟ ವಿಜಯ್ ಫಸ್ಟ್ ವೀಡಿಯೋ ರಿಯಾಕ್ಷನ್.!
ತಮಿಳುನಾಡಿನ ಕರೂರಿನಲ್ಲಿ ನಡೆದ ಭೀಕರ ಕಾಲ್ತುಳಿತಕ್ಕೆ ಸಂಬಂಧಪಟ್ಟಂತೆ ನಟ ವಿಜಯ್ ಫಸ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ. 39 ಜನ ಅಮಾಯಕ ಜೀವ ಬಲಿ ತೆಗೆದುಕೊಂಡ ರ್ಯಾಲಿ ಸಂಬಂಧ ನೋವಿನ ನುಡಿಗಳನ್ನು ಹಂಚಿಕೊಂಡಿದ್ದಾರೆ. ದುರಂತ ನಡೆದ ನಂತ್ರ ಮೊದಲ ಬಾರಿಗೆ ಮೌನ ಮುರಿದಿದ್ದು ತುಂಬಾ ನೋವಾಗಿದೆ ಎಂದು ಭಾವುಕರಾಗಿದ್ದಾರೆ.
ವಿಜಯ್ ಹೇಳಿದ್ದೇನು..!?
ಈ ಸಮಯದಲ್ಲಿ ರಾಜಕೀಯ ಮಾಡೋದು ಸರಿಯಲ್ಲ. ಈ ಘಟನೆಯಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ನನ್ನ ಮೇಲೆ ಕೋಪ ಇದ್ದರೆ ತೀರಿಸಿಕೊಳ್ಳಿ. ಆದ್ರೆ ನನ್ನ ಅಭಿಮಾನಿಗಳನ್ನು ಟಾರ್ಗೆಟ್ ಮಾಡಬೇಡಿ. ಶೀಘ್ರದಲ್ಲೇ ಗಾಯಾಳುಗಳನ್ನು ಭೇಟಿ ಮಾಡುತ್ತಾನೆ. ವಿನಾ ಕಾರಣ ನನ್ನ ಮೇಲ್ ಎಫ್ಐಆರ್ ಮಾಡಲಾಗಿದೆ. ವಿಜಯ್ ಮಾತನಾಡಿರೋ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೋಡಿ.