FoodOrder:ಫುಡ್ ಆರ್ಡರ್.! ಯುವತಿಯ 80 ಸಾವಿರ ಖೋತಾ..!
ಇತ್ತೀಚೆಗೆ ಸೈಬರ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗ್ತಿವೆ. ಆರ್ಬಿಐ ಗೈಡ್ಲೈನ್ಸ್ ಪ್ರಕಾರ ತುಂಬಾ ಎಚ್ಚರಿಕೆಯಿಂದ ಇರಬೇಕು. ಯಾರಿಗೂ ಸುಖಾಸುಮ್ಮನೇ ಓಟಿಪಿ ನೀಡಬೇಡಿ. ಬ್ಯಾಂಕ್ನಿಂದ ಯಾರೂ ನಿಮಗೆ ಓಟಿಪಿ ಕೇಳೋದಿಲ್ಲ ಎಂದೆಲ್ಲಾ ಏನೇ ಅವೇರ್ನೆಸ್ ಮೂಡಿಸಿದ್ರು, ಚಾಲಾಕಿ ವಂಚಕರು ಜನರನ್ನು ಯಾಮಾರಿಸ್ತಿದ್ದಾರೆ. ಇದೀಗ ಆನ್ಲೈನ್ನಲ್ಲೇ ಫುಡ್ ಆರ್ಡರ್ ಮಾಡಿದ್ದ ಯುವತಿ ಏಕಾಏಕಿ 80 ಸಾವಿರ ಹಣ ಕಳೆದುಕೊಂಡಿದ್ದಾರೆ.
ಫುಡ್ ಆರ್ಡರ್ ಮಾಡಿದಾಗ ತಪ್ಪು ವಿಳಾಸ ನೀಡಿದ್ದ ಯುವತಿ ಕಸ್ಟಮೇರ್ ನಂಬರ್ಗಾಗಿ ಗೂಗಲ್ ಸರ್ಚ್ ಮಾಡಿದ್ದಾರೆ. ಆಗ ಯಾವುದೋ ನಂಬರ್ನಿಂದ ವಾಟ್ಸ್ಅಪ್ ಮೇಸೇಜ್ ಬಂದಿದೆ. ತಕ್ಷಣ ವಾಟ್ಸ್ಅಪ್ನಲ್ಲೇ ಫೋನ್ ಪೇ ಮೊದಲ 5 ಸಂಖ್ಯೆಯ ನಂಬರ್ ಹೇಳಿ ಎಂದಿದ್ದಾನೆ. ಯುವತಿ ನಂಬರ್ ಕೊಡ್ತಾ ಇದ್ದಂತೆ ಬ್ಯಾಂಕ್ ಖಾತೆಯಿಂದ 80 ಸಾವಿರದ 380ರೂಪಾಯಿ ಕಡಿತಗೊಂಡಿದೆ. ಬೆನ್ಜೀರ್ ದೂರು ನೀಡಿದ್ದು, ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ವಂಚನೆ..! ಯುವತಿ ಮೋಸ ಹೋಗಿದ್ದೇಗೆ..!
ಸೆ.27ರಂದು ಮಧ್ಯಾಹ್ನ ಬೆನ್ಜೀರ್, ಝೊಮ್ಯಾಟೊದಲ್ಲಿ ಫುಡ್ ಆರ್ಡರ್ ಮಾಡಿ ಪೇಮೆಂಟ್ ಮಾಡಿದ್ದರು. ವಿಳಾಸ ಟೈಪ್ ಮಾಡೋ ವೇಳೆ ತಪ್ಪಾದ ಹೆಸರು ಟೈಪ್ ಮಾಡಿದ್ರು. ಈ ವಿಚಾರ ಗಮನಕ್ಕೆ ಬಂದ ಕೂಡಲೇ ಆರ್ಡರ್ ಕ್ಯಾನ್ಸಲ್ ಮಾಡಿ ಹಣ ರಿಫಂಡ್ ಮಾಡಿಸಿಕೊಳ್ಳುವ ಸಲುವಾಗಿ ಗೂಗಲ್ನಲ್ಲಿ ಝೊಮ್ಯಾಟೊ ಟೋಲ್ ಫ್ರೀ ನಂಬರ್ಗೆ ಸರ್ಚ್ ಮಾಡಿದ್ದು, ಅಲ್ಲಿಸಿಕ್ಕ ಒಂದು ನಂಬರ್ಗೆ ಕರೆ ಮಾಡಿ ಸುಮ್ಮನಾಗಿದ್ದರು. ಇದಾದ ಸ್ವಲ್ಪ ಸಮಯದ ಬಳಿಕ ಅಪರಿಚಿತನೊಬ್ಬ ವಾಟ್ಸಾಪ್ ಮೂಲಕ ಸಂದೇಶ ಕಳಿಸಿ ಹಣ ರಿಫಂಡ್ ಬಗ್ಗೆ ಚರ್ಚಿಸಿದ್ದ. ಜತೆಗೆ, ಫೋನ್ ಪೇ ಇರುವ ಮೊಬೈಲ್ ನಂಬರ್ನ ಮೊದಲ ಐದು ಸಂಖ್ಯೆಗಳನ್ನು ಹೇಳಿದರೆ ತಕ್ಷಣ ಹಣ ರಿಫಂಡ್ ಆಗಲಿದೆ ಎಂದಿದ್ದ. ಅಪರಿಚಿತನ ಮಾತು ನಂಬಿ ಬೆನ್ಜೀರ್ ಅವರು ಫೋನ್ ಪೇ ನಂಬರ್ ಹೇಳುತ್ತಲೇ ಅವರ ಎರಡು ಬ್ಯಾಂಕ್ ಖಾತೆಗಳಿಂದ 10 ಸಾವಿರ ರೂ. ಹಾಗೂ 70,380 ರೂ. ಕಡಿತಗೊಂಡಿದೆ. ಸದ್ಯ ಯುವತಿ, ಫುಡ್ ಇಲ್ಲ, ಬ್ರೆಡ್ಡು ಇಲ್ಲ. ಇದ್ದ ದುಡ್ಡು ಇಲ್ಲ ಎಂದು ಗೋಳಾಡಿದ್ದಾರೆ