Dharmasthala case: ಮಹೇಶ್ ತಿಮರೊಡ್ಡಿಗೆ ಬಿಗ್ ರೀಲಿಫ್..! ಬಲವಂತದ ಬಂಧನ ಇಲ್ಲ.. ಕೋರ್ಟ್ ಆದೇಶ
ಮಹೇಶ್ ತಿಮರೊಡ್ಡಿ ಬೆಂಬಿಲಿಗರಿಗೆ ಇದೊಂದು ಬಿಗ್ ಬ್ರೇಕಿಂಗ್ ಸುದ್ದಿ ಅಂದ್ರೆ ತಪ್ಪಾಗೋದಿಲ್ಲ. ಈಗಾಗ್ಲೇ ಪುತ್ತೂರಿನ ಎಸಿ ಸ್ಟೆಲ್ಲಾ ವರ್ಗೀಸ್ ಅವ್ರು ಮಹೇಶ್ ತಿಮರೊಡ್ಡಿ ಅವ್ರನ್ನು ಗಡಿಪಾರು ಮಾಡಬೇಕೆಂದು ಹೊರಡಿಸಿದ್ದ ಆದೇಶಕ್ಕೆ ಸಂಬಂಧಪಟ್ಟಂತೆ ಮಧ್ಯಂತರ ತೀರ್ಪು ಹೊರ ಬಂದಿದೆ. ಸೌಜನ್ಯ ಹೋರಾಟಗಾರರಿಗೆ ಹಾಗೂ ಮಹೇಶ್ ತಿಮರೊಡ್ಡಿ ಫಾಲ್ಲೋವರ್ಸ್‌ಗೆ ಗುಡ್ ನ್ಯೂಸ್ ಸಿಕ್ಕಿದೆ. ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆಯ ಸಂಸ್ಥಾಪಕಾಧ್ಯಕ್ಷ ಮಹೇಶ್ ತಿಮರೊಡ್ಡಿ ಅವ್ರನ್ನು ಒಂದು ವರ್ಷಗಳ ಕಾಲ ಉತ್ತರ ಕರ್ನಾಟಕದ ಗಡಿ ಭಾಗಕ್ಕೆ, ಅದೂ ಕೂಡ ಬಿಸಿಲ ಸೀಮೆ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿಗೆ ಗಡಿಪಾರು ಮಾಡಲು ಆದೇಶ ಹೊರಡಿಸಲಾಗಿತ್ತು.
ಇದೀಗ ಈ ಆದೇಶಕ್ಕೆ ಸಂಬಂಧಪಟ್ಟಂತೆ ಸೆ.18 ರಂದು ಹೊರಡಿಸಲಾಗಿದ್ದ ಈ ಆದೇಶ ಕಾನೂನಿಗೆ ವಿರುದ್ಧವಾಗಿದೆ. ಒಬ್ಬ ವ್ಯಕ್ತಿಯ ವಿರುದ್ಧ ಉದ್ದೇಶಪೂರಿತವಾಗಿ ಕುಗ್ಗಿಸೋ ಪ್ರಯತ್ನಗಳಾಗಿವೆ ಎಂದೇ ಬಿಂಬಿಸಲಾಗಿತ್ತು. ಹಾಗಾಗಿ ಮಹೇಶ್ ತಿಮರೊಡ್ಡಿ ಮಧ್ಯಂತರ ತಡೆ ಕೋರಿ ಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್‌ನಲ್ಲಿ ಅರ್ಜಿ ಕೂಡ ಸಲ್ಲಿಸಿದ್ರು. ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶಕ್ಕೆ ಮಧ್ಯಂತರ ತಡೆ ನೀಡಲು ತಮ್ಮ ವಕೀಲರ ಮೂಲಕ ಸೆ.29 ರಂದು ಹೈಕೋರ್ಟ್ ನಲ್ಲಿ ರಾಜ್ಯ ಸರಕಾರ, ಪುತ್ತೂರು ಎಸಿ, ಡಿವೈಎಸ್ಪಿ, ಬೆಳ್ತಂಗಡಿ ಇನ್‌ಸ್ಪೆಕ್ಟರ್ ಪ್ರತಿವಾದಿಯಾಗಿಸಿ ಅರ್ಜಿ ಕೂಡ ಸಲ್ಲಿಕೆ ಮಾಡಿದ್ರು.
ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ಏಕಸದಸ್ಯ ಪೀಠದ ಎದುರು ಮಧ್ಯಂತರ ತಡೆ ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದು, ಸೆ.30ರಂದು ನ್ಯಾಯಪೀಠದಲ್ಲಿ ವಿಚಾರಣೆಗೆ ಕೂಡ ಬಂದಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್‌ನಿಂದ ಗುಡ್ ನ್ಯೂಸ್ ಹೊರ ಬಿದ್ದಿದೆ. ಅಕ್ಟೋಬರ್ 08 ರವರೆಗೆ ಬಲವಂತವಾಗಿ ಯಾವುದೇ ಕ್ರಮ ತೆಗೆದುಕೊಳ್ಳುವಂತಿಲ್ಲ. ಹಾಗೂ ಅರೆಸ್ಟ್ ಮಾಡುವಂತಿಲ್ಲ. ಅಲ್ಲದೆ ಈ ಅರ್ಜಿ ಸೆಪ್ಟೆಂಬರ್ 09 ಕ್ಕೆ ವಿಚಾರಣೆಗೆ ಬರಲಿದೆ ಎಂದು ಆದೇಶ ನೀಡಿದೆ. ಈ ಆದೇಶದ ಮೂಲಕ ಮಹೇಶ್ ತಿಮರೊಡ್ಡಿ ಅವ್ರಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಮಹೇಶ್ ತಿಮರೊಡ್ಡಿ ಅವ್ರ ಮನೆಗೆ ಹೋಗಿ ಒಟ್ಟು ಮೂರು ನೋಟೀಸ್ ಅಂಟಿಸಿ ಬಂದಿದ್ದ ಪೊಲೀಸರಿಗೆ ತೀವ್ರ ಹಿನ್ನೆಡೆಯಾಗಲಿದೆ ಎಂದೇ ಭಾವಿಸಲಾಗ್ತಿದೆ. ಸೆ. 16 ರಂದು ಬೆಳ್ತಂಗಡಿ ಪೊಲೀಸರು ಆರ್ಮ್ಸ್ ಆಕ್ಟ್ ಅಡಿಯಲ್ಲಿ ಮಹೇಶ್ ತಿಮರೊಡ್ಡಿ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಈ ಕೇಸ್‌ನಲ್ಲಿ ಈಗಾಗ್ಲೇ ಎಸ್‌ಐಟಿ ಅಧಿಕಾರಿಗಳು ಮೂರು ಬಾರಿ ನೋಟೀಸ್ ನೀಡಿದ್ಧಾರೆ. ಅದರೂ ತಿಮರೋಡಿ ವಿಚಾರಣೆಗೆ ಹಾಜರಾಗಿಲ್ಲ.
ಆಗಸ್ಟ್ 26ರಂದು ಎಸ್‌ಐಟಿ ತಂಡ ತಿಮರೋಡಿ ಮನೆಯಲ್ಲಿ 12 ಗಂಟೆಗಳ ಕಾಲ ತೀವ್ರ ಶೋಧ ನಡೆಸಿತು. ಈ ಸಂದರ್ಭದಲ್ಲಿ ಮನೆಯಲ್ಲಿ ಎರಡು ತಲವಾರುಗಳು ಮತ್ತು ಒಂದು ಏರ್ ಗನ್ (ಬಂದೂಕು) ಸೇರಿದಂತೆ ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದರ ಜೊತೆಗೆ ಸಿಸಿಟಿವಿ ಹಾರ್ಡ್ ಡಿಸ್ಕ್, ಚಿನ್ನಯ್ಯ ಬಳಸುತ್ತಿದ್ದ ಮೊಬೈಲ್ ಫೋನ್, ನಾಲ್ಕು ಮೊಬೈಲ್ ಫೋನ್‌ಗಳು ಮತ್ತು ಲ್ಯಾಪ್‌ಟಾಪ್ ಹಾರ್ಡ್ ಡಿಸ್ಕ್‌ಗಳನ್ನೂ ಜಪ್ತಿ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದೇ ಮಂಗಳೂರು ಸಿಟಿ ಸಿವಿಲ್ ಕೋರ್ಟ್‌ನಲ್ಲಿ ವಿಚಾರಣೆ ಇರೋದ್ರಿಂದ ಇದಕ್ಕೆ ಸಂಬಂಧಪಟ್ಟಂತೆ ಕೂಡ ಆದೇಶ ಹೊರ ಬೀಳಲಿದೆ.
ಒಂದು ಕೇಸ್‌ನಲ್ಲಿ ತಾತ್ಕಾಲಿಕ ರಿಲೀಫ್ ಸಿಕ್ಕಿರೋದ್ರಿಂದ, ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಿಲೀಫ್ ಸಿಗಲಿದ್ಯಾ ಅನ್ನೋದನ್ನು ಕಾದು ನೋಡ್ಬೇಕಾಗಿದೆ. ಇನ್ನು ಏರ್ ಗನ್ ಅನ್ನೋದು ಮಂಗ್ಯಗಳನ್ನು ಓಡಿಸೋ ಬಂದೂಕಾಗಿದ್ದು, ಅದನ್ನು ಯಾವುದೇ ಲೈಸೆನ್ಸ್ ಇಲ್ಲದೇ ಮನೆಯಲ್ಲಿ ಹೊಂದಬಹುದು. ಆದರಿಂದ ಈ ಕೇಸ್‌ನಲ್ಲೂ ಕೋರ್ಟ್‌ನಲ್ಲಿ ರಿಲೀಫ್ ಸಿಗಲಿದೆ ಎನ್ನಲಾಗ್ತಿದೆ. ನೋಟೀಸ್ ನೀಡಿದ್ರೂ ಪೊಲೀಸ್ ವಿಚಾರಣೆಗೆ ಹಾಜರಾಗಿಲ್ಲ ಅನ್ನೋದನ್ನೆ ನೆಪವಾಗಿಟ್ಟುಕೊಂಡು, ನೋಟೀಸ್ ನೀಡದಯೇ ಬಂಧಿಸಲು ಪೊಲೀಸರು ಮಹೇಶ್ ತಿಮರೊಡ್ಡಿ ಅವ್ರನ್ನು ತಲಾಶ್ ನಡೆಸಲಾಗ್ತಿದೆ. ಹಾಗಾಗಿ ಇವತ್ತು ಸಂಜೆಯ ಇಯರಿಂಗ್ ಕೆಲವು ಮಹತ್ವದ ತಿರುವುಗಳನ್ನು ಪಡೆದುಕೊಳ್ಳಲಿದೆ.
ಇನ್ನು ಗಿರೀಶ್ ಮಟ್ಟಣ್ಣನವರ್ ಅವ್ರ ಪತ್ನಿಯನ್ನು ಎಸ್‌ಐಟಿ ವಿಚಾರಣೆ ನಡೆಸಿದ್ದು ಕೇವಲ 5000 ಸಾವಿರ ಟ್ರಾನ್ಸಕ್ಷನ್ ಬಿಟ್ಟರೆ ಯಾವುದೂ ಅವ್ರ ಖಾತೆಯಿಂದ ಶೇರ್ ಆಗಿಲ್ಲ ಅನ್ನೋದು ಗೊತ್ತಾಗಿದೆ. ಎಸ್‌ಐಟಿ ಎಲ್ಲಾ ಪ್ರಶ್ನೆಗಳಿಗೆ ಮುಕ್ತವಾಗಿ ಮಾತನಾಡಿದ ಗಿರೀಶ್ ಮಟ್ಟಣ್ಣನವರ್ ಪತ್ನಿ ರಿಲ್ಯಾಕ್ಸ್ ಮೋಡ್‌ನಲ್ಲಿದ್ದಾರೆ. ಎಸ್‌ಐಟಿ ತುಂಬಾ ಪ್ರಾಮಾಣಿಕವಾಗಿ ತನಿಖೆ ನಡೆಸ್ತಾ ಇದೆ ಎಂದು ಅವನಿಯಾನ, ನಮ್ಮದೇ ಚಾನಲ್‌ಗೆ ರಿಯಾಕ್ಟ್ ಮಾಡಿದ್ದಾರೆ. ನಾವು ಯಾವುದೇ ಷಡ್ಯಂತ್ರದಲ್ಲಿ ಭಾಗಿಯಾಗಿಲ್ಲ ಎಂದಿದ್ದಾರೆ.
ಗಿರೀಶ್ ಮಟ್ಟಣ್ಣನವರ್ ಪತ್ನಿ ಹಾಕಿದ್ರಾ ಹಣ?
ಚಿನ್ನಯ್ಯನ ಮಗಳ ಅಕೌಂಟ್‌ಗೆ ಗಿರೀಶ್ ಮಟ್ಟಣ್ಣನವರ್ ಪತ್ನಿ, ಭವ್ಯತಾ ಅಕೌಂಟ್‌ನಿಂದ 4,150 ರೂಪಾಯಿ ಹಣ ವರ್ಗಾವಣೆ ಮಾಡಲಾಗಿದೆ ಎಂದು ಸುದ್ದಿ ಮಾಡಲಾಗ್ತಿದೆ. ಬಸ್ ನಲ್ಲಿ ಓಡಾಡಲು ಖರ್ಚಿಗೆ ಹಣ ಕೇಳಿದ್ದು, ಈ ಹಿನ್ನಲೆ ಈ ವರ್ಗಾವಣೆ ನಡೆದಿದೆ ಎನ್ನಲಾಗ್ತಿದೆ. ಎಸ್ ಐ ಟಿ ಯಿಂದ ವರ್ಗಾವಣೆ ನಡೆದ ಬಗ್ಗೆ ಚಿನ್ನಯ್ಯ ಮಗಳು ಭವ್ಯತಾಗೆ ಅಧಿಕಾರಿಗಳು ಪ್ರಶ್ನೆ ಕೇಳಿದ್ರು. ಮಟ್ಟಣ್ಣನವರ್ ಅವ್ರು ಬಸ್ ಖರ್ಚಿಗಾಗಿ ಹಣ ನೀಡಿದ್ರು ಎಂದು ಭವ್ಯತಾ ಹೇಳಿದ್ದಾರೆ ಎನ್ನಲಾಗ್ತಿದೆ. ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಬೆಂಗಳೂರು ಸರ್ವೀಸ್ ಅಪಾರ್ಟ್ಮೆಂಟ್ ಸಿಬ್ಬಂದಿಯನ್ನು ವಿಚಾರಣೆ ಮಾಡಲು ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಕರೆಸಿ ಹೇಳಿಕೆ ದಾಖಲು ಮಾಡಲಾಗಿದೆ. ಇತ್ತೀಚೆಗೆ ಚಿನ್ನಯ್ಯನನ್ನು ಕರೆತಂದು ಬೆಂಗಳೂರಿನ ಸರ್ವೀಸ್ ಅಪಾರ್ಟ್‌ಮೆಂಟ್ನಲ್ಲಿ ಮಹಜರು ನಡೆಸಲಾಗಿತ್ತು.
ಹೋಮ್ ಮಿನಿಸ್ಟರ್ ಅಚ್ಚರಿ ರಿಯಾಕ್ಷನ್..!
ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣದಲ್ಲಿ ಶೀಘ್ರದಲ್ಲಿ ಇಡೀ ತನಿಖೆಯನ್ನು ಮುಗಿಸಬೇಕು ಅಂತ ಎಸ್ಐಟಿಗೆ ತಿಳಿಸಿದ್ದೇವೆ. ಷಡ್ಯಂತ್ರ ಮಾಡಿದ ಆರೋಪ ಎದುರಿಸುವವರ ಬಂಧನಕ್ಕೆ ಕಾನೂನು ತೊಡಕುಗಳು ಏನೇನಿದೆಯೋ ಅದರ ಬಗ್ಗೆ ನಾನು ಇನ್ನೂ ಚರ್ಚೆ ಮಾಡಿಲ್ಲ. ಎಫ್‌ಎಸ್‌ಎಲ್ ವರದಿ ಇನ್ನೂ ಬಂದಿಲ್ಲ ಎಂದು ತಿಳಿಸಿದ್ದಾರೆ. ಬಂದವರೆಲ್ಲ ದೂರು ಕೊಡೋದು ಅರ್ಜಿ ಕೊಡೋದು ಆಗ್ತಿದೆ. ಅಲ್ಲದೆ ಹೇಳಿಕೆಗಳನ್ನು ಕೊಡಲಾಗ್ತಿದೆ. ಇದಕ್ಕೆಲ್ಲ ಅಂತ್ಯ ಹಾಡಲು ಹೇಳಿದ್ದೇವೆ ಎಂದು ಇದೇ ವೇಳೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಾಪತ್ತೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, “ನಾವು ಏನೇ ಮಾಡಿದರೂ ಕಾನೂನು ಚೌಕಟ್ಟಿನಲ್ಲೇ ಮಾಡಬೇಕು. ಗಡೀಪಾರು ವಿಚಾರವನ್ನು ಅವರು ಕೋರ್ಟಿನಲ್ಲಿ ಪ್ರಶ್ನಿಸಿದ್ದಾರೆ, ಅದೇನಾಗುತ್ತೆ ಅಂತ ನೋಡೋಣ” ಎಂದು ರಿಯಾಕ್ಟ್ ಮಾಡಿದ್ರು. ನಾವು ಎಸ್ಐಟಿಗೆ ನಾಳೆಯೇ ತನಿಖೆ ಮುಗಿಸಿ ಅಂತ ಹೇಳಕ್ಕಾಗಲ್ಲ. ಎಲ್ಲವನ್ನೂ ನೋಡಿಕೊಂಡು ಎಸ್ಐಟಿನವ್ರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ನೇರವಾಗೇ ಉತ್ತರ ಕೊಟ್ಟಿದ್ದಾರೆ.