Shivamoga: ಅರಣ್ಯಾ ಇಲಾಖೆ ಅಧಿಕಾರಿ ಕಚೇರಿ ಎದುರು ರೈತರ ಆಕ್ರೋಶ
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿಯೂ ಕಾಡಾನೆಗಳ ಹಾವಳಿ ಮುಂದುವರೆದಿದ್ದು, ಆನೆ ಹಾವಳಿ ತಡೆಯದ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಗ್ರಾಮಗಳ ಜನರು ಪ್ರತಿಭಟನೆ ನಡೆಸಿದ್ದಾರೆ.
ದಿಢೀರ್ ಜಮೀನುಗಳಿಗೆ ನುಗ್ಗುತ್ತಿರುವ ಕಾಡಾನೆಗಳು ಬೆಳೆ ನಾಶಗೊಳಿಸುತ್ತಿವೆ. ಇದರಿಂದ ಅಡಿಕೆ, ಬಾಳೆ, ಭತ್ತ, ಕಬ್ಬು ಬೆಳೆದಿದ್ದ ರೈತರು ಕಂಗಾಲಾಗಿದ್ದಾರೆ. ಫಸಲಿಗೆ ಬರುತ್ತಿರುವ ಬೆಳೆ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ನಮ್ಮ ಪ್ರತಿಭಟನೆಗೆ ಅರಣ್ಯಾಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.
ಜಿಲ್ಲೆಯ ಬೇಳೂರು, ಪುರುದಾಳು, ದರ‍್ಗಾಂಬ ಕಾಲೋನಿಯ ಗ್ರಾಮಸ್ಥರು ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಎಫ್‌ಒ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದು, ಕಾಡಾನೆಗಳ ದಾಳಿಯಿಂದ ನಾಶವಾಗಿರುವ ಬೆಳೆಗಳನ್ನ ಡಿಎಫ್‌ಒ ಕಚೇರಿಯ ಮುಂದಿಟ್ಟು ಅಧಿಕಾರಿಗಳ ವಿರುದ್ಧ ಸಿಟ್ಟು ಹೊರಹಾಕಿದ್ದಾರೆ. ಜೊತೆಗೆ ಎಸಿಎಫ್ ಜೊತೆ ರೈತರು ವಾಗ್ವಾದ ಕೂಡ ನಡೆಸಿದ್ದಾರೆ.
ಕಾಡಾನೆಗಳ ಹಾವಳಿ ತಡೆಗೆ ಹಲವು ಬಾರೀ ಮನವಿ ಮಾಡಿದ್ದರು ಅರಣ್ಯಾ ಇಲಾಖೆಯ ಅಧಿಕಾರಿಗಳು ತಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ರೊಚ್ಚಿಗೆದ್ದಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಶಾರದಾ ಪೂರ್ಯನಾಯ್ಕ್ ಕೂಡ ಭೇಟಿ ನೀಡಿದ್ದು, ಕೂಡಲೇ ಕಾಡಾನೆಗಳ ಹಾವಳಿಗೆ ಅರಣ್ಯಾಧಿಕಾರಿಗಳು ಕ್ರಮಕೈಗೊಳ್ಳಬೇಕಿದೆ. ರೈತರ ನೆರವಿಗೆ ನಿಲ್ಲಬೇಕೆಂದು ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ.
ಆನೆಗಳ ಹಾವಳಿ ತಡೆಗೆ ಕಂದಕ ನಿರ್ಮಿಸ ಬೇಕು, ಇಲ್ಲದಿದ್ದರೆ ಜಮೀನಿಗೆ ನುಗ್ಗಿ ಲೂಟಿ ಮಾಡುತ್ತಿರುವ ಆನೆಗಳನ್ನ ಸೆರೆಹಿಡಿದು ಬೇರೆಡೆಗೆ ಸ್ಥಳಾಂತರ ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.