Hassan : ಹಾಸನದಲ್ಲಿ ಭಯಾನಕ ಸ್ಫೋಟ! ಬೆಚ್ಚಿಬಿದ್ದ ಸ್ಥಳೀಯರು, ಆಗಿದ್ದೇನು?
ಹಾಸನ ಜಿಲ್ಲೆಯಲ್ಲಿ ನಿಗೂಢ ಸ್ಫೋಟ ಸಂಭವಿಸಿದೆ. ಆಲೂರು ತಾಲ್ಲೂಕಿನ ಹಳೆ ಆಲೂರಿನಲ್ಲಿ ಈ ಭಯಾನಕ ಘಟನೆ ನಡೆದಿದ್ದು, ದಂಪತಿಗಳಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ತಾಲ್ಲೂಕಿನ 29 ಸೋಮವಾರ ರಾತ್ರಿ ವೇಳೆ ಈ ಘಟನೆ ಸಂಭವಿಸಿದೆ, ಮನೆಯೊಳಗೆ ಏಕಾಏಕಿ ಸ್ಪೋಟಗೊಂಡಿದ್ದು, ಅಕ್ಕಪಕ್ಕದ ಜನರನ್ನ ಬೆಚ್ಚಿಬೀಳಿಸುವಂತೆ ಮಾಡಿದೆ. ಖಾಸಗಿ ಕಂಪನಿ ಉದ್ಯೋಗಿಯಾದ ಸುದರ್ಶನ್ ಆಚಾರ್, ಪತ್ನಿ ಕಾವ್ಯ ತಮ್ಮ ಇಬ್ಬರು ಮಕ್ಕಳ ಜೊತೆಯಲ್ಲಿ ವಾಸವಿದ್ದರು. ಸ್ಫೋಟದ ತೀವ್ರತೆಗೆ ಮನೆ ಒಳಗಿದ್ದೆಲ್ಲಾ ವಸ್ತುಗಳು ಚಲ್ಲಾಪಿಲ್ಲಿಯಾಗಿದೆ. ಮನೆಯಲ್ಲಿದ್ದವರಿಗೆ ತೀವ್ರವಾಗಿ ಗಾಯಗಳಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಘಟನೆಯ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದು, ಜೊತೆಗೆ ಬಾಂಬ್ ಸ್ಕ್ವಾಡ್ ತಂಡ ಕೂಡ ಹಾಸನಕ್ಕೆ ಭೇಟಿ ಕೊಟ್ಟಿದ್ದೆ ಎನ್ನಲಾಗುತ್ತಿದೆ. ಮೆಲ್ನೋಟಕ್ಕೆ ಇದೊಂದು ಸಿಲಿಂಡರ್ ಬ್ಲಾಸ್ಟ್ ರೀತಿ ಕಾಣಿಸುತ್ತಿದೆ ಎಂದು ಪೊಲೀಸರು ತಿಳಿಸಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಸ್ಫೋಟದ ತೀವ್ರತೆಗೆ ಇಡೀ ಮನೆ ಧ್ವಂಸಗೊ0ಡಿದ್ದು, ಭಯಂಕರ ಸೌಂಡ್ ಬಂದಿದೆ. ಶಬ್ಧದ ತೀವ್ರತೆಗೆ ಮನೆಯ ಶೀಟ್‌ಗಳು ಮರದ ಮೇಲಿತ್ತು, ಸಿಲಿಂಡರ್ ಗ್ಯಾಸ್ ಸ್ಫೋಟಗಿಂತಲೂ ಭಯಾನಕವಾಗಿತ್ತು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.