Pakisthan:ಏಷ್ಯಾಕಪ್ ಹಣ ಭಯೋ★ತ್ಪಾದಕರಿಗೆ..!? “ಇನ್ಯಾವುತ್ತು ಕ್ರಿಕೆಟ್ ಆಡಲ್ಲ”- ಪಾಕ್
ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಪಾಕ್ ಕ್ರಿಕೇಟಿಗರು ಮೈದಾನದಲ್ಲಿ ಹುಚ್ಚಾಟವನ್ನೂ ಮೆರೆದು ಕೊನೆಗೂ ಗೂಡು ಸೇರಿದ್ದಾರೆ. ಆದ್ರೆ ಹುಟ್ಟು ಬುದ್ದಿ ಸುಟ್ಟರೂ ಹೋಗೋದಿಲ್ಲ ಅನ್ನೋ ಮಾತು ಸುಳ್ಳಲ್ಲ. ಕೊನೆಗೂ ಪಾಕಿಸ್ಥಾನ ಕ್ರಿಕೆಟ್ ಮಂಡಳಿಯು ಏಷ್ಯಾ ಕಪ್ನಲ್ಲಿ ಬಂದ ಹಣವನ್ನು ತೆಗೆದುಕೊಂಡು ಹೋಗಿ ಭಯೋತ್ಪಾದನೆಗೆ ಸುರಿಯೋ ನಿರ್ಧಾರಕ್ಕೆ ಬಂದಿದೆ. ತಾನು ಎಂದಿಗೂ ಇಂತಹ ದುಷ್ಕ್ರೃತ್ತ ಗಳಿಗೆ ಸಪೋರ್ಟ್ ಮಾಡ್ತೀವಿ ಅನ್ನೋದನ್ನು ಜಗತ್ತಿನ ಮುಂದೆ ಮತ್ತೆ ಸಾರಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇಂದು ಬೆಳಗ್ಗೆ ಅಂತದ್ದೊಂದು ಘೋಷಣೆ ಮಾಡುವ ಮೂಲಕ ಜಗತ್ತಿನ ಮುಂದೆ ತನ್ನ ನಿಲುವೇನೂ ಅನ್ನೋದನ್ನು ವ್ತಕ್ತಪಡಿಸೋ ಮೂಲಕ ಬೆತ್ತಲಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸೆಪ್ಟೆಂಬರ್ 29 ರ ಬೆಳಿಗ್ಗೆ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಒಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದೇ ಇದಕ್ಕೆಲ್ಲಾ ಕಾರಣ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಏಷ್ಯನ್ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಮೊಹ್ಸಿನ್ ನಖ್ವಿ ಕೈಯಿಂದ ಟ್ರೋಫಿ ತೆಗೆದುಕೊಂಡರೆ ಅದೊಂದು ಪಾಪದ ಕಾರ್ಯ ಎನ್ನುವ ಹಠಕ್ಕೆ ಬಿದ್ದಿದ್ದ ಇಂಡಿಯನ್ ಟೀಮ್ ಪಾಕ್ಗೆ ಜಗತ್ತಿನ ಮುಂದೆ ಮುಖಭಂಗ ಮಾಡಿತ್ತು. ಇದಾದ ಮೇಲೆ ನಿಗಿನಿಗಿ ಕೆಂಡವಾಗಿದ್ದ ಪಾಕ್ ಕ್ರಿಕೆಟ್ ಮಂಡಳಿಗೆ ಈ ಎಲ್ಲಾ ನಡೆಗಳು ಕೋಪ ತರಿಸಿದ್ದವು. ಉರಿದುರಿದು ಹೋಗಿದ್ದ ಪಾಕ್ ಕ್ರಿಕೆಟ್ ಮಂಡಳಿ ರನ್ನರ್ ಅಪ್ ಹಣವನ್ನು ಮತ್ತೊಂದು ಕಾರ್ಯಕ್ಕೆ ಉಪಯೋಗಿಸಲು ನಿರ್ಧಾರ ಮಾಡಿದೆ. ಈ ಹೇಯ ಕೃತ್ಯದ ಕೆಲಸಕ್ಕೆ ಭಾರತಾಭಿಮಾನಿಗಳ ಕೆಂಡಾಮಂಡಲವಾಗಿದ್ದಾರೆ. “ಪಾಕಿಸ್ತಾನ ಕ್ರಿಕೆಟ್ ತಂಡವು ತನ್ನ ಏಷ್ಯಾ ಕಪ್ ಫೈನಲ್ ಪಂದ್ಯದ ಶುಲ್ಕವನ್ನು ಮೇ 7 ರ ದಾಳಿಯಲ್ಲಿ ಹುತಾತ್ಮರಾದ ಮುಗ್ಧ ಜನರಿಗೆ ಅರ್ಪಿಸಿದೆ, ಇದರಲ್ಲಿ ಮಕ್ಕಳು ಸೇರಿದಂತೆ ಅನೇಕ ನಾಗರಿಕರು ಸಾವನ್ನಪ್ಪಿದರು. ನಮ್ಮ ಸಂತಾಪ ಮತ್ತು ಪ್ರಾರ್ಥನೆಗಳು ಅವರ ಕುಟುಂಬಗಳೊಂದಿಗೆ ಇವೆ” ಎಂದು ಬರೆದಿದ್ದಾರೆ. ಈ ಪೋಸ್ಟ್ನೊಂದಿಗೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಭಯೋತ್ಪಾದಕರನ್ನು ಬೆಂಬಲಿಸುತ್ತದೆ ಎಂದು ಸಾಬೀತುಪಡಿಸಿದೆ.
ಮೇ 7 ರಂದು, ಭಾರತೀಯ ಸಶಸ್ತ್ರ ಪಡೆಗಳು ಆಪರೇಷನ್ ಸಿಂಧೂರ್ ಅಡಿಯಲ್ಲಿ ಒಂಬತ್ತು ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿದವು, ಹಲವಾರು ಪ್ರಮುಖ ಭಯೋತ್ಪಾದಕರ ನೆತ್ತರು ಹರಿಸಿ ಪ್ರಾಣ ತೆಗೆದವು. ಕಾರ್ಯಾಚರಣೆಯ ಸಮಯದಲ್ಲಿ ಮಸೂದ್ ಅಜರ್ ಕುಟುಂಬದ ಸದಸ್ಯರು ಸಹ ಕೊಲ್ಲಲ್ಪಟ್ಟರು. ಇದು ವಿಶ್ವದ ಮುಂದೆ ಸತ್ಯ ಅನ್ನೋದು ಗೊತ್ತಾಗಿದೆ. ಮಸೂದ್ ಅಜರ್ ಅಮೆರಿಕದಿಂದ ಗೊತ್ತುಪಡಿಸಿದ ಭಯೋತ್ಪಾದಕನಾಗಿದ್ದ. ಈಗ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಈ ಭಯೋತ್ಪಾದಕರ ಕುಟುಂಬಗಳಿಗೆ ತನ್ನ ಹಣವನ್ನು ದಾನ ಮಾಡಲು ನಿರ್ಧರಿಸಿದೆ. ಈ ಹಿಂದೆಯೂ ಮೂರ್ಖ ಪಾಕಿಸ್ಥಾನ ನಾನೇ 6 ಫೈಟರ್ ಜೆಟ್ ಹೊಡೆದುರುಳಿಸಿದೆ ಎಂದು ನಾಚಿಕೆ ಇಲ್ಲದೇ ಬೀಗುತ್ತಾ ಬರ್ತಿದೆ. ಇದೀಗ ಈ ನಡೆಯು ವ್ಯಾಪಕ ಟೀಕೆಗೆ ಒಳಗಾಗಿದೆ.
ಭಾರತದ ವಿರುದ್ಧದ ಹೀನಾಯ ಸೋಲಿನ ನಂತರ, ಪಾಕಿಸ್ತಾನ ಕ್ರಿಕೆಟ್ ತಂಡ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಮೊಹ್ಸಿನ್ ನಖ್ವಿ ತಮ್ಮದೇ ದೇಶದ ಜನರಿಂದ ಟ್ರೋಲ್ ಆಗ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಅಲ್ಲಿನ ಜನರನ್ನು ಮೂರ್ಖರನ್ನಾಗಿಸಲ ಈ ಪ್ಲಾನ್ ಮಾಡಿದೆ. ಸರ್ಕಾರವು ಈ ಹಿಂದೆ ಭಾರತದ ವಿರುದ್ಧ ಏಷ್ಯಾ ಕಪ್ ಗೆದ್ದಿದೆ ಎಂಬ ಸುಳ್ಳನ್ನು ಹರಡಿದಂತೆಯೇ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಈಗ ಭಾರತ ವಿರುದ್ಧದ ಸೋತಿರೋದನ್ನು ಮರೆಮಾಡಲು ಈ ರೀತಿಯ ತಂತ್ರ ಹೆಣೆದಿದೆ ಎನ್ನಲಾಗ್ತಿದೆ.
ಫೈನಲ್ ಮ್ಯಾಚ್ ಸೋತಮೇಲೂ ರನ್ನರ್ ಅಪ್ ಚೆಕ್ನಾ ಸ್ವೀಕರಿಸದೆ ಕ್ಯಾಪ್ಟನ್ ಸಲ್ಮಾನ್ ಅಲಿ ಆಘಾ ವೇದಿಕೆಯಿಂದ್ಲೇ ಬಿಸಾಕಿ, ಇದೀಗ ಈ ಹಣದಲ್ಲೇ ಭಾರತ ವಿರೋಧಿ ಕುಟುಂಬಗಳ ಪೋಷಣೆ ಮಾಡಲು ಹೊರಟಿದೆ.
ಇನ್ನೊಂದ್ಕಡೆ.. ನಾವು ಇನ್ನೇಂದೂ ಭಾಋತದ ಜೊತೆ ಕ್ರಿಕೇಟ್ ಆಡೋದಿಲ್ಲ ಅನ್ನೋ ತೀರ್ಮಾನಕ್ಕೆ ಪಾಕ್ ಕ್ರಿಕೆಟ್ ಮಂಡಳಿ ಬರೋ ಸಾಧ್ಯತೆಗಳು ದಟ್ಟವಾಗಿವೆ. “ಪಾಕಿಸ್ತಾನ ಮಂಡಳಿಯು ‘ನಾವು ಭಾರತದ ವಿರುದ್ಧ ಎಂದಿಗೂ ಆಡಬಾರದು’ ಎಂದು ತಕ್ಷಣ ಹೇಳಬೇಕು. ಐಸಿಸಿ ಏನು ಕ್ರಮ ತೆಗೆದುಕೊಳ್ಳುತ್ತದೆ ಎಂದು ನೋಡೋಣ. ಇಷ್ಟೆಲ್ಲಾ ನಡೆದ ನಂತ್ರ ನಿಮಗೆ ಬೇರೆ ಇನ್ನೇನು ಬೇಕು? ಆದರೆ ಬಿಸಿಸಿಐ ವ್ಯಕ್ತಿಯು ಐಸಿಸಿಯನ್ನು ರೂಲ್ ಮಾಡ್ತಿದೆ -ಅವರು ಹೇಗೆ ಕ್ರಮ ತೆಗೆದುಕೊಳ್ತಾರೆ.? ಇತರ ಮಂಡಳಿಗಳು ಒಗ್ಗೂಡಬೇಕು, ನಾವು ಇದನ್ನು ಕ್ರಿಕೆಟ್ನಲ್ಲಿ ನೋಡಲು ಸಾಧ್ಯವಿಲ್ಲ. ಕ್ರೀಡೆಗಳನ್ನು ಯಾರ ಮನೆಯಲ್ಲೂ ಆಡುವುದಿಲ್ಲ. ಬೇರೆ ರಾಷ್ಟ್ರಗಳು ಆಡದಿದ್ದರೆ, ಯಾವುದೇ ಹಣ ಬರುವುದಿಲ್ಲ, ”ಎಂದು ಅಕ್ಮಲ್ ಟೀಮ್ ಇಂಡಿಯಾ ನಡೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
“ಎಲ್ಲಾ ಮಂಡಳಿಗಳು ಒಗ್ಗೂಡಿ ಭಾರತದ ವಿರುದ್ಧ ಕ್ರಮ ಕೈಗೊಳ್ಳಬೇಕು. ಆದರೆ ಕ್ರಿಕೆಟ್ ಪ್ರಸಾರಕರ ಮೇಲೆ ನಡೆಯುತ್ತದೆ. ಅವರಿಗೆ ಪಾಕಿಸ್ತಾನ ಮತ್ತು ಭಾರತದಿಂದ ಹೆಚ್ಚಿನ ಹಣ ಸಿಗುತ್ತದೆ. ಪಾಕಿಸ್ತಾನ ನಾವು ಭಾರತದೊಂದಿಗೆ ಆಡುವುದಿಲ್ಲ ಎಂದು ಹೇಳಿದರೆ, ಪ್ರಸಾರಕರು ರಸ್ತೆಗೆ ಬರುತ್ತಾರೆ. ಮೈದಾನದ ಒಳಗೆ, ಭಾರತ ಗೆದ್ದಿದೆ, ಆದರೆ ಅದರ ಹೊರಗೆ, ಅವರು ಸೋತಿದ್ದಾರೆ. ಇದನ್ನೆಲ್ಲ ಮಾಡುವ ಬದಲು ಅವರು ಟೂರ್ನಮೆಂಟ್ ಆಡಲು ಬರದಿರಬಹುದು. ಯಾರಿಗೆ ಅಪಖ್ಯಾತಿ ಬರುತ್ತದೆ? ಇಡೀ ಭಾರತ, ಮಾತ್ರ. ಭಾರತದಲ್ಲಿ ಧ್ವನಿ ಎತ್ತುವ ಸಂವೇದನಾಶೀಲ ಜನರಿದ್ದಾರೆ ಎಂದು ನನಗೆ ತಿಳಿದಿದೆ” ಎಂದು ಬಸಿತ್ ಅಲಿ ಹೇಳಿದರು.
ಇತ್ತ ಭಾರತ ಗೆಲ್ತಿದ್ದಂತೆ ಹೊತ್ತಿ ಉರಿದ ಪಿಓಕೆ..!
ಪಾಕಿಸ್ತಾನವು ಪಾಕ್ ಆಕ್ರಮಿತ ಕಾಶ್ಮೀರವನ್ನು ಟ್ರೋಫಿಯಂತೆ ಪ್ರದರ್ಶಿಸುತ್ತದೆ, ಆದರೆ ಸತ್ಯವೆಂದರೆ ಪಾಕಿಸ್ತಾನ ಸರ್ಕಾರ ಮತ್ತು ವ್ಯವಸ್ಥೆಯ ವಿರುದ್ಧ ಅಲ್ಲಿನ ಜನರಲ್ಲಿ ಅಸಮಾಧಾನ ಹೆಚ್ಚುತ್ತಿದೆ. ಪ್ರಸ್ತುತ, ಪಾಕಿಸ್ತಾನದಲ್ಲಿ ನೆಲೆಸಿರುವ ಕಾಶ್ಮೀರಿ ನಿರಾಶ್ರಿತರಿಗೆ ಮೀಸಲಾಗಿರುವ 12 ವಿಧಾನಸಭಾ ಸ್ಥಾನಗಳನ್ನು ರದ್ದುಗೊಳಿಸುವುದು, ಜಲವಿದ್ಯುತ್ ಒಪ್ಪಂದಗಳ ಮರುಪರಿಶೀಲನೆ, ಹಣದುಬ್ಬರ, ಹಿಟ್ಟು ಸಬ್ಸಿಡಿಗಳು ಮತ್ತು ವಿದ್ಯುತ್ ದರಗಳನ್ನು ಸ್ಥಳೀಯ ಉತ್ಪಾದನಾ ವೆಚ್ಚಗಳಿಗೆ ಜೋಡಿಸುವುದರ ವಿರುದ್ಧ ಗಮನಾರ್ಹ ಆಕ್ರೋಶ ವ್ಯಕ್ತವಾಗಿದೆ. ಪ್ರತಿಭಟನೆಗಳಿಗೆ ಹೆದರಿ, ಪಾಕಿಸ್ತಾನಿ ಸೇನೆಯು ಪಿಒಕೆಯಲ್ಲಿ ಧ್ವಜ ಮೆರವಣಿಗೆಗಳನ್ನು ನಡೆಸುತ್ತಿದೆ ಮತ್ತು ಜನಸಮೂಹ ಸೇರುವುದನ್ನು ತಡೆಯಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಈ ಚಳುವಳಿ ದಂಗೆ ಮತ್ತು ಸ್ವಾತಂತ್ರ್ಯದ ಬೇಡಿಕೆಯಾಗಿ ಬದಲಾಗಬಹುದು ಎಂದು ಪಾಕಿಸ್ತಾನಿ ಸರ್ಕಾರ ಮತ್ತು ಮಿಲಿಟರಿಗೆ ಪುಕ ಪುಕ ಶುರುವಾಗಿದೆ.
ಬುಮ್ರಾ ಕೊಟ್ಟ ರಿಯಾಕ್ಷನ್ ಅಲ್ಟಿಮೇಟ್
ಸೂಪರ್ ಫೋರ್ಸ್ ಹಂತದಲ್ಲಿ ಭಾರತ-ಪಾಕಿಸ್ತಾನ ಪಂದ್ಯದ ವೇಳೆ, ರೌಫ್ ಭಾರತೀಯ ಅಭಿಮಾನಿಗಳ ಕಡೆಗೆ ‘ವಿಮಾನ ಬೀಳುವ’ ಸನ್ನೆ ಮಾಡಿದ್ದರು. ಆಪರೇಷನ್ ಸಿಂಧೂರ ಸಮಯದಲ್ಲಿ ಆರು ಭಾರತೀಯ ಜೆಟ್ಗಳನ್ನು ಹೊಡೆದುರುಳಿಸಿದ ಪಾಕಿಸ್ತಾನದ ಆಧಾರರಹಿತ ಹೇಳಿಕೆಗಳನ್ನು ಉಲ್ಲೇಖಿಸಿ ಅವರು ಈ ಸನ್ನೆ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಟೀಂ ಇಂಡಿಯಾ ತನ್ನ ಕ್ಷಣಕ್ಕಾಗಿ ಕಾಯುತ್ತಿತ್ತು ಮತ್ತು ಅದು ಬುಮ್ರಾ ಅವರ ಎಸೆತದಲ್ಲಿ ರೌಫ್ ಅವರ ಆಫ್-ಸ್ಟಂಪ್ ಕಿತ್ತುಹಾಕಿದಾಗ ಸಂಭವಿಸಿತು. ನಂತರ ಭಾರತೀಯ ವೇಗಿ ರೌಫ್ಗೆ ತಮ್ಮದೇ ಶೈಲಿಯಲ್ಲಿ ಉತ್ತರ ಕೊಟ್ಟರು.
ಭಾರತ ತಂಡದ ಗೆಲುವಿನ ನಂತರ, ಪ್ರಧಾನಿ ನರೇಂದ್ರ ಮೋದಿ ತಮ್ಮ ತಂಡವನ್ನು ಅಭಿನಂದಿಸಿದ್ದಾರೆ. ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಆಟದ ಮೈದಾನದಲ್ಲಿ ಆಪರೇಷನ್ ಸಿಂಧೂರ. ಅದೇ ಫಲಿತಾಂಶ – ಭಾರತ ಗೆದ್ದಿದೆ! ನಮ್ಮ ಕ್ರಿಕೆಟಿಗರಿಗೆ ಅಭಿನಂದನೆಗಳು’ ಎಂದು ಬರೆದಿದ್ದಾರೆ.
ಪಾಕಿಸ್ತಾನದ ಆಂತರಿಕ ಸಚಿವರೂ ಆಗಿರುವ ನಖ್ವಿ ಈ ಟ್ವೀಟ್ ಅನ್ನು ಸಹಿಸದೆ, ತೀರಾ ಕಳಪೆಯಾಗಿ ಪ್ರತಿಕ್ರಿಯಿಸಿದ್ದಾರೆ. ‘ಯುದ್ಧವು ನಿಮ್ಮ ಹೆಮ್ಮೆಯ ಮಾನದಂಡವಾಗಿದ್ದರೆ, ಪಾಕಿಸ್ತಾನದ ಕೈಯಲ್ಲಿ ನಿಮ್ಮ ಅವಮಾನಕರ ಸೋಲುಗಳನ್ನು ಇತಿಹಾಸವು ಈಗಾಗಲೇ ದಾಖಲಿಸಿದೆ. ಯಾವುದೇ ಕ್ರಿಕೆಟ್ ಪಂದ್ಯವು ಆ ಸತ್ಯವನ್ನು ಪುನಃ ಬರೆಯಲು ಸಾಧ್ಯವಿಲ್ಲ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.