Karnataka Government: ಉದ್ಯೋಗಾಕ್ಷಿಗಳಿಗೆ ದಸರಾ ಗಿಫ್ಟ್..! 3 ವರ್ಷ ಸಡಿಲಿಕೆ..!
ಇತ್ತೀಚೆಗೆ ಧಾರವಾಡದಲ್ಲಿ ನಡೆದ ಉದ್ಯೋಗಾಕ್ಷಿಗಳ ಹೋರಾಟ ಬೇಡಿಕೆಗಳ ಬೆನ್ನಲ್ಲೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ದಸರಾ ಗಿಫ್ಟ್ ನೀಡಿದೆ. ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೂ ಅನ್ವಯವಾಗುವಂತೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಿದೆ. ಈಗಾಗ್ಲೇ ಇದಕ್ಕೆ ಸಂಬಂಧಪಟ್ಟಂತೆ ಅಧಿಕೃತ ಆದೇಶ ಹೊರ ಬಿದ್ದಿದೆ. ಆದೇಶದ ದಿನಾಂಕದಿಂದ ಮುಂದಿನ ದಿನಾಂಕ 31:12:2027ರವರೆಗೆ ನೇರ ನೇಮಕಾತಿ ಅರ್ಜಿಗಳನ್ನು ಆಹ್ವಾನಿಸುವ ನೋಟಿಫಿಕೇಷನ್ಗಳಂತೆ ಆಯ್ಕೆ ಪ್ರಕ್ರಿಕೆಯಲ್ಲಿ ಭಾಗವಹಿಸೋ ಎಲ್ಲಾ ಅಭ್ಯರ್ಥಿಗಳಿಗೂ ಅನ್ವಯವಾಗಲಿದೆ.
ಸರ್ಕಾರ ಯಾವುದೇ ಇಲಾಖೆಯಲ್ಲಿ ನೇಮಕಾತಿ ಪ್ರಕ್ರಿಯೆ ಮಾಡದೇ ಇದ್ದಿದ್ದರಿಂದ ಲಕ್ಷಾಂತರ ಯುವಕರು ಆತಂಕಗೊಂಡಿದ್ದರು. ವಯೋಮಿತಿ ಮೀರುತ್ತಿರುವ ಹಿನ್ನೆಲೆಯಲ್ಲಿ ಉದ್ಯೋಗಾಕ್ಷಿಗಳು ನಿರುದ್ಯೋಗದ ಭೀತಿ ಎದುರಿಸ್ತಾ ಇದ್ದರು.
ವಯೋಮಿತಿ ಸಡಿಲಿಕೆ ಎಷ್ಟು?
- ಸಾಮಾನ್ಯ ವರ್ಗ – 35 ವರ್ಷದಿಂದ 38 ವರ್ಷ
- ಒಬಿಸಿ – 38 ವರ್ಷದಿಂದ 41 ವರ್ಷ
- ಎಸ್ಸಿ/ಎಸ್ಟಿ/ಪ್ರವರ್ಗ-1 – 40 ವರ್ಷದಿಂದ 43 ವರ್ಷ
ಶಿಕ್ಷಕರ ನೇಮಕಾತಿ
• SC/ST/OBC 42 ಇತ್ತು, 45 ಆಗಲಿದೆ
• ಸಾಮಾನ್ಯ – 40 ಇತ್ತು, 43 ಆಗಲಿದೆ
SDA/FDA/ಗ್ರೂಪ್ ಸಿ ಹುದ್ದೆ
• SC/ST/OBC – 35 ಇತ್ತು, 38 ಆಗಲಿದೆ
• ಸಾಮಾನ್ಯ – 37 ಇತ್ತು, 40 ಆಗಲಿದೆ
ಪೊಲೀಸ್ ಕಾನ್ಸ್ ಟೇಬಲ್ ನೇಮಕಾತಿ
• SC/ST/OBC – 27 ಇತ್ತು, 30 ಆಗಲಿದೆ
• ಸಾಮಾನ್ಯ – 25 ಇತ್ತು, 28 ಆಗಲಿದೆ
ಪೊಲೀಸ್ ಸಭ್ ಇನ್ಸ್ ಪೆಕ್ಟರ್
• SC/ST/OBC – 32 ಇತ್ತು, 35 ಆಗಲಿದೆ
• ಸಾಮಾನ್ಯ – 30 ಇತ್ತು, 33 ಆಗಲಿದೆ
ಕೆಎಎಸ್
• SC/ST/OBC 40 ಇತ್ತು, 43 ಆಗಲಿದೆ
• ಸಾಮಾನ್ಯ 37 ಇತ್ತು, 40 ಆಗಲಿದೆ