Shivamoga: ಮೋರಿ ಕಟ್ಟೆಗೆ ಬಸ್ ಡಿಕ್ಕಿ: ಹಲವರಿಗೆ ಗಾಯ!

ಖಾಸಗಿ ಬಸ್ ವೊಂದರ ಸ್ಟೇರಿಂಗ್ ಜಾಮ್ ಆಗಿ ಚಾಲಕನ ನಿಯಂತ್ರಣ ಕಳೆದುಕೊಂಡು, ರಸ್ತೆ ಬದಿಯ ಮೋರಿಕಟ್ಟೆಗೆ ಡಿಕ್ಕಿ ಹೊಡೆದ ಘಟನೆ ಸಾಗರ ಕಾರ್ಗಲ್ ನಡುವಿನ ಬಚ್ಚಗರ್ ನಲ್ಲಿ ನಡೆದಿದೆ.

ಬಸ್ ಕಾರ್ಗಲ್ ಕಡೆಯಿಂದ ಸಾಗರ ಪಟ್ಟಣಕ್ಕೆ ಆಗಮಿಸುತ್ತಿತ್ತು. ಸುಮಾರು 43 ಪ್ರಯಾಣಿಕರಿದ್ದರು. ದಿಢೀರ್ ಸ್ಟೇರಿಂಗ್ ಜಾಮ್ ಆಗಿದ್ದರಿಂದ, ಬಸ್ ರಸ್ತೆ ಬದಿಯ ಮೋರಿಕಟ್ಟೆಗೆ ಡಿಕ್ಕಿಯಾಗಿ, ಕಟ್ಟೆಯ ಮೇಲೇರಿ ನಿಂತಿದೆ. ಅವಘಡದಲ್ಲಿ ಬಸ್ ಚಾಲಕ, ಕಂಡಕ್ಟರ್ ಹಾಗೂ ಪ್ರಯಾಣಿಕರಿಗೆ ಗಾಯವಾಗಿದೆ. ವಿಷಯತಿಳಿಯುತ್ತಿದ್ದಂತೆ ಪೊಲೀಸ್ ಇಲಾಖೆಯ ಹೆದ್ದಾರಿ

ಗಸ್ತು ವಾಹನ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ವಾಹನದಲ್ಲಿ ಕರ್ತವ್ಯದಲ್ಲಿದ್ದ ಎಎಸ್‌ ಐನಾಗಪ್ಪ ಹಾಗೂ ಚಾಲಕ ಶಿವಾನಂದ ರವರು, ಗಾಯಾಳುಗಳನ್ನು ಸಾಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಸಕಾಲಿಕ ನೆರವಿನಹಸ್ತ ಕಲ್ಪಿಸಿದ್ದಾರೆ. ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೆಚ್ಚುಗೆ : ಹೆದ್ದಾರಿ ಗಸ್ತು

ವಾಹನದ ಸಿಬ್ಬಂದಿಗಳ ಕರ್ತವ್ಯ ಪ್ರಜ್ಞೆಗೆ ಜಿಲ್ಲಾ ರಕ್ಷಣಾಧಿಕಾರಿ ಜಿ ಕೆ ಮಿಥುನ್ ಕುಮಾರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Rakesh arundi

Leave a Reply

Your email address will not be published. Required fields are marked *