Dharmasthala:ಪಂಚಾಯತಿ ಅಧ್ಯಕ್ಷರಿಗೆ ಎಸ್ಐಟಿ ಬುಲಾವ್. ಓಡೋಡಿ ಬಂದ 4 ಗ್ರಾ.ಪಂ. ಅಧ್ಯಕ್ಷರು
ಧರ್ಮಸ್ಥಳ ಸಾಮೂಹಿಕ ಶವಗಳನ್ನು ಹೂತಿಟ್ಟ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಈಗಾಗ್ಲೇ ಧರ್ಮಸ್ಥಳ ದೌರ್ಜನ್ಯ ವಿರೋಧಿ ಸಂಘಟನೆಗಳು ನ್ಯಾಯ ಸಮಾವೇಶಗಳನ್ನು ಮಾಡ್ತಾ ಅಲ್ಲಿ ನಿಗೂಢವಾಗಿ ನಡೀತಾ ಇರೋ ಅಕ್ರಮಗಳ ಬಗ್ಗೆ ಜನರಿಗೆ ಅರಿವು ಮೂಡಿಸೋ ಕೆಲಸ ಮಾಡ್ತಿವೆ. ಇತ್ತ ಕಲಬುರ್ಗಿಯಲ್ಲೂ ಅತಿ ದೊಡ್ಡ ಸಮಾವೇಶದ ಮೂಲಕ ವೇದವಲ್ಲಿ, ಪದ್ಮಲತಾ, ಸೌಜನ್ಯ ಪ್ರಕರಣಗಳ ನಗ್ನಸತ್ಯಗಳನ್ನು ತಿಳಿದುಕೊಳ್ಳಲು ಎಸ್ಐಟಿ ಮುಂದಾಗ್ಬೇಕು ಎಂದು ಆಗ್ರಹಿಸಿವೆ. ಚಿನ್ನಯ್ಯ ಸುಳ್ಳು ಸಾಕ್ಷ್ಯವನ್ನು ನುಡಿದಿದ್ದಾನೆ ಅನ್ನೋ ಗೊಂದಲದ ನಡುವೆಯೂ ಮಟ್ಟಣ್ಣನವರ್ ಹಾಗೂ ನವೀನ್ ಸೂರಿಂಜೆ ನೇತೃತ್ವದಲ್ಲಿ ಹೋರಾಟಗಳು ಮಾತ್ರ ನಿಲ್ಲುತ್ತಿಲ್ಲ.
ಈ ಎಲ್ಲಾ ಗೊಂದಲಗಳ ನಡುವೆಯೂ ಚಿನ್ನಯ್ಯನ ಹೇಳಿಕೆಗಳ ಆಧಾರದ ಮೇಲೆ ಎಸ್ಐಟಿ ಮತ್ತೊಂದು ಹೊಸ ತನಿಖೆ ಶುರು ಮಾಡೋದಾಗಿ ನಿರ್ಧರಿಸಿದೆ ಎಂದು ಹೇಳಲಾಗ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ಪೋಸ್ಟ್ನಲ್ಲಿ ವರದಿಯೊಂದು ಪ್ರಕಟವಾಗಿದ್ದು, ಎಸ್ಐಟಿ ತನಿಖೆಯನ್ನು ಇಲ್ಲಿಗೆ ನಿಲ್ಲಿಸಲಾಗುತ್ತೆ ಎನ್ನುವ ಚರ್ಚೆಗಳಲ್ಲಿ ಯಾವುದೇ ಹುರುಳಿಲ್ಲ ಅನ್ನೋದು ಸ್ಪಷ್ಟವಾಗಿದೆ.
ಈಗಾಗ್ಲೇ ಎಸ್ಐಟಿ ಟೀಮ್ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಲಾಗಿದೆ ಅನ್ನೋ ಗಾಳಿಸುದ್ದಿಗಳು ಕೇಳಿಬರ್ತಾ ಇದ್ದವು. ಇದೀಗ ಧರ್ಮಸ್ಥಳ ಕೇಸ್ನಲ್ಲಿ ಎಸ್ಐಟಿ ಯಾವುದೇ ಮಧ್ಯಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿಲ್ಲ ಅನ್ನೋ ಮಾಹಿತಿಗಳು ಹೊರಬಿದ್ದಿವೆ. ಇದರ ಬೆನ್ನಲ್ಲೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತ (BNSS) 2023 ರ ಸೆಕ್ಷನ್ 183 ರ ಅಡಿಯಲ್ಲಿ ಬೆಳ್ತಂಗಡಿ ನ್ಯಾಯಾಲಯದಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಲಾದ ಆರೋಪಿ ಚಿನ್ನಯ್ಯನ ಹೊಸ ಹೇಳಿಕೆಯ ಕುರಿತು ಹೊಸ ತನಿಖೆಯನ್ನು ಪ್ರಾರಂಭಿಸಲಿದೆ ಅನ್ನೋ ಸ್ಫೋಟಕ ಮಾಹಿತಿ ಹೊರ ಬಿದ್ದಿದ್ದು ಅಂತಿಮವಾಗಿ ಎಸ್ಐಟಿ ಮುಂದಿನ ನಡೆ ಈ ಎಲ್ಲಾ ಗೊಂದಲಗಳನ್ನು ಬೆಗೆಹರಿಸಬೇಕಾಗಿದೆ.
ಚಿನ್ನಯ್ಯ ಕೊಟ್ಟ ಹೇಳಿಕೆಯಲ್ಲಿ ಏನಿದೆ. ಹಾಗಾದ್ರೆ, ಇನ್ಯಾವ ಅಚ್ಚರಿ ಮಾಹಿತಿಗಳನ್ನು ಆತ ಬಾಯ್ಬಿಟ್ಟಿದ್ದಾನೆ, ಸೌಜನ್ಯ ಕೇಸ್ ಬಗ್ಗೆಯೂ ವೀಡಿಯೋಗಳಲ್ಲಿ ಆತ ಅನೇಕ ಆಶ್ಚರ್ಯಕರ ಮಾಹಿತಿಗಳನ್ನು ಹೊರ ಹಾಕಿರೋದ್ರಿಂದ ಅದಕ್ಕೆ ಸಂಬಂಧಪಟ್ಟಂತೆ ಎಸ್ಐಟಿಗೆ ಯಾವುದಾದ್ರೂ ಹೊಸ ಲೀಡ್ ಸಿಕ್ಕಿದೆಯಾ ಅನ್ನೋದನ್ನು ಕಾದು ನೋಡ್ಬೇಕಾಗಿದೆ.
ಧರ್ಮಸ್ಥಳ ಪ್ರಕರಣದಲ್ಲಿ ಇಲ್ಲಿವರೆಗೂ ಚಾರ್ಜ್ ಶೀಟ್ ಸಲ್ಲಿಕೆಯಾಗಿಲ್ಲ. ಇದೇ ಆಧಾರದಲ್ಲಿ ಚಿನ್ನಯ್ಯನ ಹೊಸ ಸ್ಟೇಟ್ಮೆಂಟ್ ಮೇಲೆ ಮತ್ತೊಂದು ದಿಕ್ಕಿನಲ್ಲಿ ತನಿಖೆ ಸಾಗಲಿದೆ ಅನ್ನೋ ನಿರ್ಧಾರಕ್ಕೆ ಏಕಾಏಕಿಯಾಗಿ ಬರೋದಿಕ್ಕೆ ಆಗೋದಿಲ್ಲ. ಅದನ್ನು ಪರಿಶೀಲನೆ ಮಾಡಬೇಕಾಗುತ್ತದೆ. ಏಕೆಂದರೆ, ಈಗಾಗ್ಲೇ ಆತನ ಮೇಲೆ ಸುಳ್ಳು ಸಾಕ್ಷ್ಯ ನುಡಿದ ಆಧಾರದ ಮೇಲೆ ಕೇಸ್ ಕೂಡ ದಾಖಲಾಗಿದೆ. ಆದ್ರೆ, ಆತನಿಗೆ ಕಾನೂನಾತ್ಮಕ ಭರವಸೆ ಸಿಕ್ಕರೆ, ಎಸ್ಐಟಿ ಆತನಿಗೆ ಧೈರ್ಯ ತುಂಬಿದ್ದೇ ಆದಲ್ಲಿ ಮತ್ತಷ್ಟು ಸತ್ಯ ಸಂಗತಿಗಳನ್ನು ಮ್ಯಾಜಿಸ್ಟ್ರೇಟ್ ಮುಂದೆ ಒಪ್ಪಿಕೊಂಡಿರೋ ಸಾಧ್ಯತೆಗಳಿದೆ. ಅದಕ್ಕಾಗಿಯೇ ಮೂರು ದಿನಗಳ ಕಾಲ ವೀಡಿಯೋ ರೆಕಾರ್ಡಿಂಗ್ ಹಾಗು ಸ್ವಇಚ್ಚಾ ಹೇಳಿಕೆಗಳನ್ನು ನಿರಂತರವಾಗಿ ದಾಖಲಿಸಲಾಗಿದೆ.
ಚಿನ್ನಯ್ಯನ ಹಳೆಯ ಹೇಳಿಕೆಗಳ ಆಧಾರದ ಮೇಲೆ ಅನೇಕ ದೂರುಗಳು ಮತ್ತೆ ಮತ್ತೆ ಸಲ್ಲಿಕೆ ಆಗ್ತಿರೋದ್ರಿಂದ ಇದು ಮತ್ತೆ ಟ್ವಿಸ್ಟ್ ಪಡೆದುಕೊಳ್ಳುವ ಸಾಧ್ಯತೆ ಇದೆ. ಈಗಾಗ್ಲೇ ಈ ಕೇಸ್ನಲ್ಲಿ ಯಾವುದೇ ಷಡ್ಯಂತ್ರವಾಗಲಿ, ಪಿತೂರಿಯಾಗಲಿ ಅನ್ನೋದು ಕೋರ್ಟ್ ಮುಂದೆಯೇ ಎಸ್ಐಟಿ ಪರ ವಕೀಲರಾದ ಜಗದೀಶ್ ಒಪ್ಪಿಕೊಂಡಿದ್ದಾರೆ.
ಗಿರೀಶ್ ಮಟ್ಟಣ್ಣನವರ್, ಮಹೇಶ್ ತಿಮರೋಡಿ ವಿರುದ್ಧ ತಿರುಗಿಬಿದ್ದಿದ್ದ ಕೇಸ್ ನೇರಾನೇರವಾಗಿ ಚಿನ್ನಯ್ಯ ಸುಳ್ಳು ಸ್ಥಳಗಳನ್ನು ಪತ್ತೆ ಹಚ್ಚಿದ ಆರೋಪದಲ್ಲಿ ಆತನ ಕುತ್ತಿಗೆಗೆ ಬಂದಿದೆ. ಕೆಲವು ದಿನಗಳ ಹಿಂದೆ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ತನಿಖೆಯಿಂದಾಗಿ ಸತ್ಯ ಹೊರಹೊಮ್ಮಿದೆ ಎಂದು ಹೇಳಿಕೊಂಡಿದ್ದರು ಮತ್ತು ಎಸ್ಐಟಿ ರಚಿಸಿದ್ದಕ್ಕಾಗಿ ಸರ್ಕಾರಕ್ಕೆ ಧನ್ಯವಾದಗಳನ್ನು ಸಹ ಅರ್ಪಿಸಿದ್ದರು. ಆದ್ರೆ, ಈ ಕೇಸ್ನಲ್ಲಿ ಇನು ಸತ್ಯಾಂಶಗಳು ಬರಲು ಸಾಕಷ್ಟು ಸಮಯದ ಅಗತ್ಯವಿದೆ ಎನ್ನಲಾಗ್ತಿದೆ.
ಇನ್ನು ಅಚ್ಚರಿಯ ಸಂಗತಿ ಎಂದರೆ..
ಧರ್ಮಸ್ಥಳದ ವೈಶಾಲಿ ಲಾಡ್ಜ್ನಲ್ಲಿ 2018 ರಲ್ಲಿ ನಿಧನರಾದ ದಂಪತಿಗಳ ಡೆತ್ ನೋಟ್ನಲ್ಲಿ, ಪ್ರಜಾಪ್ರಭುತ್ವದಲ್ಲಿನ ಕೊಳೆಯನ್ನು ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆ ಅವರಿಂದ ಮಾತ್ರ ಸ್ವಚ್ಛಗೊಳಿಸಲು ಸಾಧ್ಯ ಎಂದು ಬರೆದುಕೊಳ್ಳಲಾಗಿದೆ. ಮೃತ್ಯುಜಯ ಪಾಟೀಲ್ (60) ಮತ್ತು ನೇತ್ರಾವತಿ ಎಂ (55) ಎಂದು ಗುರುತಿಸಲಾದ ದಂಪತಿಗಳು ಪ್ರಮುಖ ಕಾಂಗ್ರೆಸ್ ನಾಯಕರ ನಿಕಟ ಸಂಬಂಧಿಗಳಾಗಿದ್ದರು.
ಮೇ 10, 2018 ರಂದು ಆನ್ಲೈನ್ನಲ್ಲಿ ಪ್ರಕಟವಾದ ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ದಂಪತಿಗಳು ಮೇ 7 ರಂದು ವೈಶಾಲಿ ಅತಿಥಿ ಗೃಹದಲ್ಲಿ ಕೊಠಡಿ ಬಾಡಿಗೆಗೆ ಪಡೆದರು ಮತ್ತು ಮರುದಿನ ಶವವಾಗಿ ಪತ್ತೆಯಾಗಿದ್ದರು. ಅವರು ಪ್ರತಿಕ್ರಿಯಿಸದ ನಂತರ ಲಾಡ್ಜ್ ಉಸ್ತುವಾರಿ ಬಾಗಿಲು ಒಡೆದು ನೋಡಿದರು. ದಂಪತಿಗಳು ಹಾವೇರಿ ಜಿಲ್ಲೆಯ ಬ್ಯಾಡಗಿಯವರು ಎಂದು ಗೊತ್ತಾಯಿತು. ಅವ್ರು ಬರೆದಿಟ್ಟ ಪತ್ರದಲ್ಲಿ “ಹಣ ಮತ್ತು ಮದ್ಯದ ಮುಕ್ತ ಹರಿವಿನಿಂದಾಗಿ, ರಾಜಕಾರಣಿಗಳು ಮತ್ತು ರಾಜಕೀಯವು ತುಂಬಾ ಕೆಳಮಟ್ಟಕ್ಕೆ ಇಳಿದಿದೆ. ಇದು ಪ್ರಜಾಪ್ರಭುತ್ವವನ್ನು ಹಾಳುಮಾಡಿದೆ. ಈ ಬೆಳವಣಿಗೆಯಿಂದ ನಾವು ಅತೃಪ್ತರಾಗಿದ್ದೇವೆ ಮತ್ತು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರಿಂದ ಮಾತ್ರ ಅದನ್ನು ಶುದ್ಧೀಕರಿಸಲು ಸಾಧ್ಯ.” ಘಟನೆಗೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದಂಪತಿಯ ಸಂಬಂಧಿಯೊಬ್ಬರು blrpost.com ಗೆ ಮಂಗಳೂರು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಶವಗಳನ್ನು ಹಸ್ತಾಂತರಿಸಲಾಯಿತು ಮತ್ತು ಈ ಘಟನೆ ಅನೇಕರನ್ನು ಬೆಚ್ಚಿಬೀಳಿಸಿದೆ ಎಂದು ಹೇಳಿದರು. “ದಂಪತಿಗಳು ಸಂತೋಷವಾಗಿ ಕಾಣಿಸಿಕೊಂಡರು, ಮತ್ತು ಇದು ಆಶ್ಚರ್ಯಕರವಾಗಿತ್ತು” ಎಂದು ಸಂಬಂಧಿಕರು ಹೇಳಿದರು. ಅವರ ಮಕ್ಕಳು ಪ್ರಸ್ತುತ ವಿದೇಶದಲ್ಲಿದ್ದಾರೆ.
ಬೆಳ್ತಂಗಡಿ ಪೊಲೀಸರು 21, 25 ಕ್ಕೆ ಕೊಟ್ಟಿದ್ದ ನೋಟಿಸ್ ಗೆ ತಿಮರೋಡಿ ಗೈರಾಗಿದ್ದರು. ಈಗ ಮೂರನೇ ನೋಟಿಸ್ ಸೆಪ್ಟೆಂಬರ್ 29, ಅಂದರೆ ಇಂದು ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಇಂದು ಹಾಜರಾಗದೇ ಇದ್ದರೆ, ತನಿಖೆಗೆ ಸಹಕರಿಸುತ್ತಿಲ್ಲ ಎಂದು ಪ್ರಕರಣ ದಾಖಲಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ ಸೆಷನ್ ಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಯೂ ವಿಚಾರಣೆ ನಡೆಯಲಿದೆ. ತಿಮರೋಡಿ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿ ತಲೆಮರೆಸಿಕೊಂಡಿದ್ದಾರೆ. ಎರಡೆರಡು ಪ್ರಕರಣಗಳಲ್ಲಿ ತಿಮರೋಡಿಗೆ ಸಂಕಷ್ಟ ಎದುರಾಗಿದ್ದು, ಕಾನೂನು ಪ್ರಕಾರ ಬಂಧನಗೊಳಿಸುವ ಸಾಧ್ಯತೆ ಇದೆ.
ನಾಳೆ, ಸೆಪ್ಟೆಂಬರ್ 30 ರಂದು ಮಂಗಳೂರು ಸೆಷನ್ಸ್ ಕೋರ್ಟಿನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಜಾಮೀನು ಮಂಜೂರು ಆಗದೇ ಹೋದರೆ, ಬಂಧನಕ್ಕೆ ಕ್ರಮ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಸೋಮವಾರ ಮಧ್ಯಾಹ್ನವಾದರೂ ವಿಚಾರಣೆಗೆ ತಿಮರೋಡಿ ಹಾಜರಾಗಿಲ್ಲ. ಫೋನ್ ಕೂಡಾ ಸ್ಚಿಚ್ ಆಫ್ ಆಗಿದೆ. ಹೀಗಾಗಿ ಹಾಜರಾಗುವ ಸಾಧ್ಯತೆಯೂ ಕಡಿಮೆ ಇರುವ ಹಿನ್ನೆಲೆ ಪೊಲೀಸರು ತಿಮರೋಡಿಗಾಗಿ ಹುಡುಕಾಟ ತೀವ್ರಗೊಳಿಸಿದ್ದಾರೆ. 2 ತಂಡ ರಚಿಸಿ ವಿಚಾರಣೆ ಮಾಡ್ತಿದ್ದಾರೆ.
ಮಾಜಿ ಅಧ್ಯಕ್ಷರಾದ ಕೇಶವ್ ಬೆಳಾಲ್, ಪ್ರಭಾಕರ ಪೂಜಾರಿ, ಗೀತಾ ಹಾಗೂ ಚಂದನ್ ಕಾಮತ್ ವಿಚಾರಣೆಗೆ ಹಾಜರಾಗಿದ್ದಾರೆ.ಯುಡಿಆರ್ ಪ್ರಕರಣಗಳಲ್ಲಿ ಶವ ಹೂತ ಕೇಸ್ ಗಳಿಗೆ ಬಿಲ್ ಪಾವತಿಯಾಗಿದ್ದು, ಈ ಬಗ್ಗೆ ಮಾಹಿತಿ ಸಂಗ್ರಹಿಸಲು ಹಾಗೂ ತನಿಖೆಗಾಗಿ ಕರೆಸಲಾಗಿದೆ. ಈ ಹಿಂದೆಯೂ ಧರ್ಮಸ್ಥಳ ಗ್ರಾಮ ಪಂಚಾಯತ್ ಸಿಬ್ಬಂದಿಗಳ ವಿಚಾರಣೆ, ದಾಖಲೆಗಳ ಪರಿಶೀಲನೆಯನ್ನು ಎಸ್ಐಟಿ ನಡೆಸಿತ್ತು.