Mysore: ಲೈಂಗಿಕತೆಗೆ ಋತುಮತಿಯಾದ ಬಾಲಕಿ ಪೂರೈಕೆ: ಜಾಲ ಪತ್ತೆ
ಅನೈತಿಕ ಚಟುವಟಿಕೆಗೆ ಬಾಲಕಿಯರ ಪೂರೈಸುತ್ತಿದ್ದ ಜಾಲವನ್ನು ಮೈಸೂರು ಪೊಲೀಸರು ಭೇಧಿಸಿದ್ದಾರೆ. ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
‘ಋತುಮತಿಯಾದ 12-13 ವರ್ಷದ ಬಾಲಕಿಯರ ಜೊತೆ ಲೈಂಗಿಕ ಸಂಪರ್ಕ ನಡೆಸಿದೆ ಮಾನಸಿಕ ಕಾಯಿಲೆಗಳು, ಲೈಂಗಿಕ ಕಾಯಿಲೆಗಳು ದೂರ ಆಗುತ್ತಾವೆ ಎಂಬ ಮೂಢನಂಬಿಕೆ ಹೊಂದಿದ್ದ ಶ್ರೀಮಂತ ವೃದ್ಧರು, ಪುರುಷರು, ವಯಸ್ಕರಿಗೆ ಬಾಲಕಿಯನ್ನು ಪೂರೈಸುತ್ತಿದ್ದ ಓರ್ವ ಮಹಿಳೆ ಹಾಗೂ ಓರ್ವ ಪುರುಷನನ್ನುಮೈಸೂರು ಪೊಲೀಸರು ಬಂಧಿಸಿದ್ದಾರೆ
‘ಗ್ರಾಹಕರಿಗೆ ವಾಟ್ಸ್‌ಆ್ಯಪ್ ವಿಡಿಯೊ ಕರೆ ಮಾಡಿ, ಬಾಲಕಿಯನ್ನು ಮಹಿಳೆಯು ಜಾಲದ ಮಧ್ಯವರ್ತಿಯೊಬ್ಬರಿಗೆ ತೋರಿಸುತ್ತಿದ್ದಳು. ಈ ವಿಷಯವು ಸಂಸ್ಥೆಯ ಮಾಹಿತಿದಾರರೊಬ್ಬರಿಗೆ ತಿಳಿಯಿತು. ಆರೋಪಿಯನ್ನು ಪತ್ತೆ ಮಾಡಿ, ಅದಕ್ಕಾಗಿ ನಕಲಿ ಉದ್ಯಮಿ ವೇಷದಲ್ಲಿ ವಿಜಯನಗರ ಠಾಣೆ ಪೊಲೀಸರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಜಂಟಿ ಕಾರ್ಯಾಚರಣೆ ನಡೆಸಲಾಯಿತು’ ಎಂದು ಒಡನಾಡಿ ಸೇವಾ ಸಂಸ್ಥೆಯ ಸ್ಪ್ಯಾನ್ಸಿ ತಿಳಿಸಿದರು.
‘ಬೆಂಗಳೂರು, ಮೈಸೂರು ಹಾಗೂ ತಾಲ್ಲೂಕು ಮಟ್ಟದಲ್ಲಿನ ಸ್ಲಂಗಳು, ಶ್ರಮಿಕರು, ಬಡವರು, ವಲಸಿಗರು, ಸಿಂಗಲ್ ಪೇರೆಂಟ್ ಕುಟುಂಬಗಳ ಬಾಲಕಿಯರನ್ನು ಹುಡುಕುವ ಕೃತ್ಯವನ್ನು ಜಾಲವು ಮಾಡುತ್ತಿತ್ತು. ಬಾಲಕಿ ಋತುಮತಿಯಾದಾಗ ಪಾಲಕರು ನಡೆಸುವ ಆರತಿ ಕಾರ್ಯಕ್ರಮವನ್ನು ಜಾಲವು ಗಮನಿಸುತ್ತಿತ್ತು’ ಎಂದು ಮಾಹಿತಿ ನೀಡಿದರು.
ಅಪ್ರಾಪ್ತ ಬಾಲಕಿ ಜೊತೆ ಲೈಂಗಿಕ ಸಂಪರ್ಕಕ್ಕೆ ಓರ್ವ ಮಹಿಳೆ ಹಾಗೂ ಓರ್ವ ಪುರುಷ 20 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಋತುಮತಿಯಾದ ಅಪ್ರಾಪ್ತ ಬಾಲಕಿಯನ್ನು ಬೆಂಗಳೂರಿನ ನಿವಾಸಿ ಶೋಭಾ ಎಂಬಾಕೆ ಟಾರ್ಗೆಟ್ ಮಾಡಿದ್ದರು. ಈಕೆಯ ಜೊತೆಗೆ ತುಳಸೀಕುಮಾರ್ ಎಂಬಾತನನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಬಾಲಕಿಯನ್ನು ರಕ್ಷಿಸಿ ಬಾಲಮಂದಿರದಲ್ಲಿ ಇರಿಸಲಾಗಿದ್ದು, ತನಿಖೆ ನಡೆಯುತ್ತಿದೆ.