Big Boss: ‘ಬಿಗ್ ಬಾಸ್’ ಮನೆ ಪ್ರವೇಶಿಸಿದ 19 ಸ್ಪರ್ಧಿಗಳ ಹಿನ್ನೆಲೆ, ಅವ್ರ ಪ್ರೊಫೆಷನ್‌ ಬಗ್ಗೆಇಲ್ಲಿದೆ ವಿವರ

ಈ ಬಾರಿಯ ಕನ್ನಡದ ರಿಯಾಲಿಟಿ ಶೋ ಬಿಗ್‌ ಬಾಸ್‌ಗೆ ಒಟ್ಟು 19 ಕಂಟೆಸ್ಟಂಟ್‌ಗಳು ಭಾಗವಹಿಸಿದ್ದಾರೆ. ಯಾರೆಲ್ಲಾ ಬಿಗ್‌ ಬಾಸ್‌ ಪ್ರಿಯಿರಿದ್ದೀರಿ, ನಿಮಗೆಲ್ಲಾ ಕೆಲವು ಕಂಟೆಸ್ಟಂಟ್‌ಗಳ ಪರಿಚಯ ಇರುತ್ತೆ. ಇನ್ನು ಕೆಲವ್ರ ಪರಿಚಯ ಇರೋದಿಲ್ಲ. ಹಾಗಾಗಿ ಈ ಬಾರಿ ಬಿಗ್‌ ಬಾಸ್‌ಗೆ ಎಂಟ್ರಿ ಕೊಟ್ಟಿರೋ ಸ್ಪರ್ಧಿಗಳ ಪೂರ್ವ ಹಿನ್ನೆಲೆ ಏನು.? ಅವ್ರ ಕುಟುಂಬ, ಅವ್ರ ಪ್ರೊಫೆಷನ್‌ ಬಗ್ಗೆ ನೋಡ್ತಾ ಹೋಗೋಣ.

1. ಕರಿ ಬಸಪ್ಪ ಬಾಡಿ ಬಿಲ್ಡರ್. ಇಂಟರ್‌ನ್ಯಾಷನಲ್‌ ಬಾಡಿ ಬಿಲ್ಡರ್‌ ಸ್ಪರ್ಧೆಯಲ್ಲಿ ಗೆದ್ದಿರೋ ಕರಿಬಸಪ್ಪ ಮೂಲತಃ ದಾವಣಗೆರೆಯವ್ರು. ಅನೇಕ ಸಿನಿಮಾಗಳಲ್ಲೂ ವಿಲನ್‌ ರೋಲ್‌ಗಳಲ್ಲಿ ತಮ್ಮ ಬಾಡಿ ಬಿಲ್ಡ್‌ ಮಾಡ್ತಾ ಹೀರೋಗಳ ಜೊತೆ ಫೈಟ್‌ ಮಾಡಿದ್ದಾರೆ. ಇವ್ರ ತಂದೆ ನಗರಸಭೆಯಲ್ಲಿ ಕಸ ಹೊಡೆಯೋ ಕೆಲಸ ಮಾಡ್ತಿದ್ದರು. ಕಾಡಿನ ರಾಜ ಸಿನಿಮಾದಲ್ಲಿ ಟೈಗರ್‌ ಪ್ರಭಾಕರ್‌ ಬಾಡಿ ನೋಡಿ ಸ್ಫೂರ್ತಿ ಪಡೆದವ್ರು. ಇವ್ರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಪೊಲೀಸ್‌ ಇಲಾಖೆಯಲ್ಲಿ ಸ್ಫೋಟ್ಸ್‌ ಕೋಟಾದಲ್ಲಿ ಪೊಲೀಸ್‌ ಆಗಿ ಸೇವೆ ಸಲ್ಲಿಸಿದ್ದಾರೆ. ಮಿಸ್ಟರ್‌ ವರ್ಲ್ಡ್‌, ಪಾಕಿಸ್ತಾನ ಇಂಟರ್‌ನ್ಯಾಷನಲ್‌ ದೇಹದಾರ್ಡ್ಯ ಸ್ಪರ್ಧೆಯಲ್ಲೂ ಗೆದ್ದಿದ್ದಾರೆ. ಇವ್ರಿಗೆ ಏಕಲವ್ಯ ಪ್ರಶಸ್ತಿ ಕೂಡ ಲಭಿಸಿದೆ. ಇತ್ತೀಚೆಗೆ ಪ್ರಜ್ವಲ್‌ ದೇವರಾಜ್‌ ಸಿನಿಮಾದಲ್ಲೂ ಆಕ್ಟ್‌ ಮಾಡಿದ್ದರು. ಹೀಗೆ ಅನೇಕ ಹಳೆ ಸಿನಿಮಾಗಳಲ್ಲೂ ಸೈಡ್‌ರೋಲ್‌ನಲ್ಲಿ ಕಾಣಿಸಿಕೊಂಡಿದ್ಧಾರೆ.

2. ರಕ್ಷಿತಾ ಶೆಟ್ಟಿ ಕರಾವಳಿಯ ಕುವರಿ ರಕ್ಷಿತಾ ಶೆಟ್ಟಿ ಇದೀಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ರಕ್ಷಿತಾ ಅವರಿಗೆ ಕನ್ನಡ ಸ್ಪಷ್ಟವಾಗಿ ಬರುವುದಿಲ್ಲ. ಆದರೆ ತುಳು ಭಾಷೆ ಮಾತನಾಡುತ್ತಾರೆ. ಬಲೆ ಬಲೆ ಎನ್ನುತ್ತ ವ್ಲಾಗ್ ಮಾಡುವ ಇವರಿಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಫಾಲೋವರ್ಸ್ ಇದ್ದಾರೆ. ಕನ್ನಡ ಹಾಗೂ ತುಳು ಎರಡೂ ಭಾಷೆಯಲ್ಲಿ ಇವರು ವ್ಲಾಗ್ ಮಾಡಿ ಫೇಮಸ್ ಆಗಿದ್ದಾರೆ. ಮಂಗಳೂರಿನಲ್ಲಿ ಹುಟ್ಟಿದ್ದಾದರೂ ಬೆಳೆದಿದ್ದು ಮುಂಬೈನಲ್ಲಿ. ಇವರ ತಾಯಿಯ ತವರು ಮನೆ ಮಂಗಳೂರು. ಇವರು ಬಿಬಿಎಂ ಓದಿದ್ದು ರಾಷ್ಟ್ರೀಯ ಕ್ರೀಡಾಪಟು ಕೂಡ ಹೌದು. ರಕ್ಷಿತಾ ತುಳು ಟಾಕ್ಸ್‌ ಅನ್ನೋ ಪೇಜ್‌ ಮೂಲಕ ಹಲವು ಕಂಟೆಂಟ್‌ ಕ್ರಿಯೇಟ್‌ ಮಾಡ್ತಿರ್ತಾರೆ.

3. ಮಾಳು ನಿಪ್ಪನಾಳ ‘ನಾ ಡ್ರೈವರಾ, ನೀ ನನ್ನ ಲವ್ವರಾ’ ಹಾಡಿನ ಖ್ಯಾತಿಯ ದೇಸಿ ಸಿಂಗರ್ ಮಾಳು ನಿಪನಾಳ. ಯೂಟ್ಯೂಬ್‌ ಮೂಲಕ ಜನಪ್ರಿಯತೆ ಪಡೆದವರು. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ನಿಪನಾಳ ಗ್ರಾಮದ ಅಪ್ಪಟ ಹಳ್ಳಿಯ ಪ್ರತಿಭೆ. ಇವರ ‘ನಾ ಡ್ರೈವರಾ, ನೀ ನನ್ನ ಲವ್ವರಾ’ ಎಂಬ ಹಾಡು ಇಡೀ ಕರ್ನಾಟಕದಲ್ಲಿ ಸಂಚಲನ ಸೃಷ್ಟಿಸಿತ್ತು. ವಿಶೇಷವಾಗಿ ಉತ್ತರ ಕರ್ನಾಟಕದ ಜನ ಫಿದಾ ಆಗಿದ್ದರು. ಯೂಟ್ಯೂಬ್ ಒಂದರಲ್ಲೇ ಬರೋಬ್ಬರಿ 250 ಮಿಲಿಯನ್ಸ್ ವೀವ್ಸ್ ಕಂಡು ಮನೆಮಾತಾದರು.

ಇನ್ನೊಂದು ವಿಶೇಷ ಅಂದರೆ ಇವರ ಯೂಟ್ಯೂಬ್ ಚಾನಲ್ಗೆ 2 ಮಿಲಿಯನ್ಗಿಂತಲೂ ಹೆಚ್ಚು ಸಬ್ಸ್ಕ್ರೈಬರ್ಸ್ ಇದ್ದಾರೆ. ಯೋಗರಾಜ್ ಭಟ್ ನಿರ್ದೇಶನ ‘ಕರಟಕ ದಮನಕ’ ಚಿತ್ರದ ಜನಪ್ರಿಯ ಹಾಡು ‘ಹಿತ್ತಲಕ ಕರೀಬ್ಯಾಡ್ ಮಾವ’ ಈ ಹಾಡನ್ನು ಹಾಡಿದ್ದು ಮಾಳು ನಿಪನಾಳ. ಮಾಳು ಚಿಕ್ಕವಯಸ್ಸಿನಲ್ಲಿ ಡೊಳ್ಳು ಕಲಾವಿದ. ‘ನಾನು 12ನೇ ವಯಸ್ಸಿನಿಂದಲೇ ಹಾಡುತ್ತಿದ್ದೆ. ಜಾತ್ರೆಗಳಲ್ಲಿ ಹಾಡುತ್ತಿದ್ದೆ. ನಂತರ ನನಗೆ ಬೇಡಿಕೆ ಹೆಚ್ಚಾಗುತ್ತ ಬಂದು, ಬೆಳಗಾವಿ ಜಿಲ್ಲೆಯ ಒಂದು ಹಳ್ಳಿಯನ್ನೂ ನಾನು ಬಿಟ್ಟಿಲ್ಲ. ಎಲ್ಲಾ ಕಡೆ ಹಾಡಿದ್ದೇನೆ ಎಂದಿದ್ದಾರೆ. ನನ್ನನ್ನು ಹೊರದೇಶದಲ್ಲೂ ಫೇಮಸ್ ಮಾಡಿದ್ದು ‘ನಾ ಡ್ರೈವರಾ ಸಾಂಗ್’. ಜೊತೆಗೆ ‘ಹಿತ್ತಲಕ ಕರೀಬ್ಯಾಡ್ ಮಾವ’ ಎಂಬ ಹಾಡು ಕೂಡ ಜನಪ್ರಿಯತೆ ತಂದುಕೊಟ್ಟಿತು. ನಾನು ಮದುವೆ ಆಗಿರುವ ಹುಡುಗಿ ಕೂಡ ಸಿಂಗರ್. ನಮ್ಮಿಬ್ಬರದ್ದು ಲವ್ ಮ್ಯಾರೇಜ್. ನಾನೇ ಮೊದಲು ಪ್ರಪೋಸ್ ಮಾಡಿದ್ದು. ನನಗೆ ಇಬ್ಬರು ಮಕ್ಕಳಿದ್ದಾರೆ. ನಮ್ಮ ಮನೆ ಮಳೆಗೆ ಸೋರುತ್ತಿತ್ತು. ಈಗ ದೊಡ್ಡ ಮನೆ ಕಟ್ಟಿಸಿದ್ದೇನೆ. ಕಟ್ಟಿಸಿರುವ ಹೊಸ ಮನೆ ಯೂಟ್ಯೂಬ್‌ನಿಂದ ಬಂದ ಆದಾಯ ಎಂದಿದ್ದಾರೆ.

4. ಮಾತಿನ ಮಲ್ಲಿ ಮಲ್ಲಮ್ಮ ಯಾದಗಿರಿ ಜಿಲ್ಲೆಯ, ಸುರಪುರ ತಾಲೂಕಿನ ಸಣ್ಣ ಹಳ್ಳಿಯವರು. ಕೆಲಸಕ್ಕೆಂದು ಬೆಂಗಳೂರಿಗೆ ಬಂದವರು. ಅವರು ತಮ್ಮ ಮಾತಿನ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ್ರು. ಮಲ್ಲಮ್ಮ ಅವರು ತಮ್ಮದೇ ಆದ ಇನ್ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ 1.69 ಲಕ್ಷ ಹಿಂಬಾಲಕರು ಅವರಿಗೆ ಇದ್ದಾರೆ. ಯೂಟ್ಯೂಬ್ ಚಾನೆಲ್ಗೆ 16 ಸಾವಿರ ಹಿಂಬಾಲಕರು ಇದ್ದಾರೆ. ಮಲ್ಲಮ್ಮ ಟಾಕ್ಸ್ ಅನ್ನೋದು ಅವರ ಯೂಟ್ಯೂಬ್ ಚಾನೆಲ್ ಹೆಸರು. ಮಾತಿನ ಮಲ್ಲಿ ಎಂದೇ ಫೇಮಸ್‌ ಆಗಿರುವ ಮಲ್ಲಮ್ಮ ಉತ್ತರ ಕರ್ನಾಟಕದವರು. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ರೀಲ್ಸ್‌ ಮೂಲಕ ವೈರಲ್‌ ಆಗಿರುವ ಮಲ್ಲಮ್ಮ ಇನ್ನೊಸೆಂಟ್‌ ಇನ್‌ಫ್ಲುಯೆನ್ಸರ್‌ ಅಂದರೆ ತಪ್ಪಾಗೋದಿಲ್ಲ. ತಮ್ಮ ಸರಳ ಜೀವನಶೈಲಿ, ಹಾಸ್ಯಮಯ ರೀಲ್ಸ್‌ ಮತ್ತು ಹಳ್ಳಿ ಸಂಸ್ಕೃತಿಯನ್ನ ಪ್ರತಿಬಿಂಬಿಸುವ ವಿಡಿಯೋಗಳ ಮೂಲಕ ಫೇಮಸ್‌ ಆಗಿದ್ದಾರೆ. ಮಲ್ಲಮ್ಮನಿಗೆ ಪಲ್ಲವಿ ಮೇಡಂ ಹಾಗೂ ಮನೋಜ್‌ ಅನ್ನೋ ಸೀರಿಯಲ್‌ ನಟ ಆ‍ಶ್ರಯ ನೀಡಿದ್ಧಾರೆ.

5. ಚಂದ್ರಪ್ರಭ ಹಾಸ್ಯ ಶೋಗಳ ಮೂಲಕ ಫೇಮಸ್ ಆದ ಚಂದ್ರಪ್ರಭ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಅವರು ಇತ್ತೀಚೆಗೆ ಕೆಲಸ ಇಲ್ಲದೆ ಗಾರೆ ಕೆಲಸ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಮಜಭಾರತ ಕ್ಯಾತಿಯ ಡಬಲ್ ಮೀನಿಂಗ್ ಚಂದ್ರ ಪ್ರಭ ಎಂದೇ ಖ್ಯಾತಿ ಪಡೆದಿರೋ ಕಲಾವಿದ ಇವ್ರು. ‘ಗಿಚ್ಚಿ ಗಿಲಿಗಿಲಿ’ ಹಾಗೂ ‘ಮಜಾ ಭಾರತ’ ಶೋಗಳಲ್ಲಿ ಮಿಂಚಿರುವ ನಟ ಚಂದ್ರಪ್ರಭ. ಇನ್ನು ಚಂದ್ರಪ್ರಭ ಮದುವೆಯಾಗಿರುವ ಹುಡುಗಿ ಹೆಸರು ಭಾರತಿ ಪ್ರಿಯಾ. ದೇವಸ್ಥಾನದಲ್ಲಿ ಸಿಂಪಲ್‌ ಆಗಿ ಮದುವೆ ಆಗಿದ್ರು. ಆದ್ರೆ, ಇದೆಲ್ಲವನ್ನು ಗುಟ್ಟಾಗಿ ಇಟ್ಟಿದ್ರು. ಕೆಂಪಕ್ಕಾ, ನಿಂಗಕ್ಕ, ಕರಗಕ್ಕ, ಕಾಳಕ್ಕ ಅನ್ನೋ ಇವ್ರ ಸ್ಟೆಪ್‌ ಸಿಕ್ಕಾಪಟ್ಟೆ ಫೇಮಸ್‌.

6. ಅಶ್ವಿನಿ ಗೌಡ ಕನ್ನಡದ ಹೋರಾಟಗಾರ್ತಿ 5 ಧಾರಾವಾಹಿ, 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 5000ಕ್ಕೂ ಹೆಚ್ಚು ಸೀರೆಗಳು, ಕಾಸ್ಟ್ಲಿ ವಾಚ್‌ಗಳ ಕಲೆಕ್ಷನ್‌ ಇಟ್ಟಿರೊ ಇವ್ರು ಇತ್ತೀಚೆಗೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ಧಾರೆ. ರಾಜಾಹುಲಿ, ಒಡೆಯ, ಚೆಡ್ಡಿದೋಸ್ತ್‌ ಸಿನಿಮಾಗಳಲ್ಲಿ ಆಕ್ಟ್‌ ಮಾಡಿದ್ದಾರೆ. ಅಶ್ವಿನಿ ಗೌಡ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ, ನಿರ್ಮಾಪಕಿ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಪ್ರಮುಖ ಕಾರ್ಯದರ್ಶಿ. ಇವರು ಕನ್ನಡಪರ ಹೋರಾಟಗಳಿಂದ ಗುರುತಿಸಿಕೊಂಡಿದ್ದಾರೆ. ಜೊತೆಗೆ ಇವರು ಎ.ಎಂ.ಜಿ ಪ್ರೊಡಕ್ಷನ್ ಹೌಸ್ ಹೊಂದಿದ್ದಾರೆ. ಮಹಾಪರ್ವ, ರಾಧಾಶ್ಯಾಮ ಸೇರಿದಂತೆ ಅನೇಕ ಸೀರಿಯಲ್‌ಗಳಲ್ಲಿ ಆಕ್ಟ್‌ ಮಾಡಿದ್ದಾರೆ.

7. ಮಿರ್ಚಿ ಆರ್ಜೆ ಅಮಿತ್ ರೇಡಿಯೋ ಮಿರ್ಚಿಯಲ್ಲಿ ಆರ್‌ಜೆ ಆಗಿ ಕೆಲಸ ಮಾಡ್ತಿದ್ದಾರೆ. ಚಿಕ್ಕವಯಸ್ಸಿನಿಂದಲೂ ನನಗೆ ರೇಡಿಯೋ ಅಂದ್ರೆ ಆಸೆ ಇತ್ತು. ನಾನು ಕಾಲೇಜಿನಲ್ಲಿ ಓದುವಾಗ ಕ್ಯಾಶುವಲ್‌ ಆಗಿ ನನ್ನನ್ನ ‘ಬಂದ ನೋಡು ರೇಡಿಯೋ’ ಅನ್ನುತ್ತಿದ್ದರು. ಅದೇ ನನಗೆ ಪ್ರೊಫೆಶನ್ ಆಗುತ್ತೆ ಅಂತ ಗೊತ್ತಿರಲಿಲ್ಲ ಎಂದಿದ್ದಾರೆ ಆರ್‌ಜೆ ಅಮಿತ್. ಸಖತ್‌ ಅಟಿಟ್ಯೂಡ್‌ ಕಾಲೇಜಿನಲ್ಲಿ ಹೋರಾಟ ಮಾಡೇ ನ್ಯಾಷನಲ್‌ ಅವಾರ್ಡ್‌ ಗಿಟ್ಟಿಸಿದ್ದಾರೆ. ಮಾತಲ್ಲಿ ಕೊಳೆ ಇಲ್ಲ ಅನ್ನೋ ಸ್ಟ್ರೈಟ್‌ ಫಾರ್ವರ್ಡ್‌. ತಂದೆ ಜತೆ ಸದಾ ಜಗಳ ಆಡ್ತಾ ಇರ್ತಾರಂತೆ.

8. ಡಾಗ್ ಸತೀಶ್ ಸಿಲಿಕಾನ್‌ ಸಿಟಿಯ ಶ್ವಾನಪ್ರೇಮಿ ಸತೀಶ್‌ ಐಷಾರಾಮಿ ಲೈಫ್‌ಸ್ಟೈಲ್‌ ಮುಖಾಂತರವೇ ಎಲ್ಲರ ಗಮನ ಸೆಳೆದವ್ರು. ಭಾರತೀಯ ನಾಯಿ ಸಾಕುವವರ ಸಂಘದ ಅಧ್ಯಕ್ಷರಾಗಿರೋ ಸತೀಶ್‌ ಬಳಿ ಅಪರೂಪದ ನಾಯಿಗಳಿವೆ. ಹಲವು ವರ್ಷಗಳ ಹಿಂದೆಯೇ ನಾಯಿಗಳನ್ನು ಸಾಕುವುದನ್ನು ನಿಲ್ಲಿಸಿದ್ದರೂ, ಸತೀಶ್ ತಮ್ಮ ಅಪರೂಪದ ನಾಯಿಗಳನ್ನು ಪ್ರಾಣಿ ಪ್ರಿಯರಿಗೆ ಉಡುಗೊರೆಯಾಗಿ ನೀಡುವ ಮೂಲಕ ಹಣ ಸಂಪಾದಿಸ್ತೀನಿ ಎಂದಿದ್ದರು. ಇನ್ನು ಈ ದುಬಾರಿ ‍ಶ್ವಾನಗಳ ಮೂಲಕ ಅನೇಕ ಕಾರ್ಯಕ್ರಮಗಳನ್ನು ಅಟೆಂಡ್‌ ಮಾಡುವ ಸತೀಶ್‌ 30 ನಿಮಿಷಗಳ ಕಾರ್ಯಕ್ರಮಕ್ಕೆ 2 ಲಕ್ಷಕ್ಕೂ ಅಧಿಕ ಹಣ ತೆಗೆದುಕೊಳ್ಳುತ್ತಾರಂತೆ. ಐದು ಗಂಟೆಗಳ ಕಾರ್ಯಕ್ರಮಕ್ಕೆ 10 ಲಕ್ಷಕ್ಕೂ ಅಧಿಕ ಹಣ ಸಂಪಾದನೆ ಮಾಡುತ್ತಾರಂತೆ. ಇನ್ನು ನಾನು ನಾಯಿಯನ್ನು ಏಳು ಎಕರೆ ವಿಸ್ತೀರ್ಣದ ದೊಡ್ಡ ಬಂಗಲೆಯಲ್ಲಿ ಸಾಕುತ್ತಿದ್ದೇನೆ. ಆ ಮನೆಯಲ್ಲಿ ಇತರ ನಾಯಿ ತಳಿಗಳೂ ವಾಸಿಸುತ್ತಿವೆ. ತಮ್ಮ ಸಾಕುಪ್ರಾಣಿಗಳ ರಕ್ಷಣೆಗಾಗಿ, ಅವರು ತಮ್ಮ ಮನೆಯ ಸುತ್ತಲೂ 10 ಅಡಿ ಎತ್ತರದ ಗೋಡೆಯನ್ನು ನಿರ್ಮಿಸಿದ್ದೇನೆ ಎಂದಿದ್ದರು. 24/7 ಸಿಸಿಟಿವಿ ಕ್ಯಾಮೆರಾ ಕೂಡ ಅಳವಡಿಕೆ ಮಾಡಿದ್ದೇನೆ ಎಂದಿದ್ದರು.

19. ಅಶ್ವಿನಿ ‘ಮುದ್ದು ಲಕ್ಷ್ಮೀ’ ಧಾರಾವಾಹಿ ಮೂಲಕ ಫೇಮಸ್ ಆದ ಅಶ್ವಿನಿ ಅವರು ದೊಡ್ಮನೆಗೆ ಬಂದಿದ್ದಾರೆ. ಚಿಕ್ಕವಯಸ್ಸಲ್ಲೇ ತಂದೆ ತಾಯಿ ಬಿಟ್ಟು ಬೆಂಗಳೂರಿಗೆ ಬಂದು ನೆಲೆಸಿದ ಧೈರ್ಯವಂತೆ. ಪೋಷಕರ ವಿರೋಧ ಕಟ್ಟಿಕೊಂಡು ಸ್ವಂತಂತ್ರವಾಗಿ ಬದುಕ್ತಿರೋ ನಟಿ. ಆಂಕರ್‌ ಆಗಿಯೂ ಕೂಡ ಕೆಲಸ ಮಾಡಿದ್ದಾರೆ.

10. ಧ್ರುವಂತ್ ನಟ ಕಮ್ ಮಾಡೆಲ್ ಆಗಿರುವವರು ಧ್ರುವಂತ್ ಇವರ ನಿಜನಾಮ ಚರಿತ್ ಬಾಳಪ್ಪ ಪೂಜಾರಿ. ಇವರು ಹುಟ್ಟಿದ್ದು ಬಂಟ್ವಾಳದಲ್ಲಿ, ಬೆಳೆದಿದ್ದು ಕೊಡಗಿನಲ್ಲಿ. ತಂದೆ ಬಾಳಪ್ಪ ಪೂಜಾರಿ. ತಾಯಿ ಪ್ರೇಮಾ ಬಾಳಪ್ಪ. ಎಂಬಿಎ ಓದಿರುವ ಧ್ರುವಂತ್‌ಗೆ ಕೈತುಂಬಾ ಸಂಬಳ ಸಿಗುವ ಕೆಲಸದಲ್ಲಿದ್ದರು. ಆದರೆ, ಅದನ್ನ ಬಿಟ್ಟು ನಟನಾ ಕ್ಷೇತ್ರಕ್ಕೆ ಕಾಲಿಟ್ಟರು. ಸ್ಮಾರ್ಟ್ ಅಂಡ್ ಹ್ಯಾಂಡ್ಸಮ್ ಆಗಿರುವ ಧ್ರುವಂತ್ ಮೇಲೆ ಇತ್ತೀಚೆಗಷ್ಟೇ ಗಂಭೀರ ಆರೋಪ ಕೇಳಿಬಂದಿತ್ತು. ‘ಬ್ಲಾಕ್‌ಮೇಲ್ ಮಾಡಿ, ಹಣ ಸುಲಿಗೆ ಮಾಡಿದ್ದಲ್ಲದೆ ಲೈಂಗಿಕ ಕಿರುಕುಳ ನೀಡಿದ್ದಾರೆ’ ಎಂದು ಆರೋಪಿಸಿ ಮಹಿಳೆಯೊಬ್ಬರು ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಗೆ ಧ್ರುವಂತ್‌ ವಿರುದ್ಧ ದೂರು ನೀಡಿದ್ದರು. ಇದಕ್ಕೂ ಮುನ್ನ ವಿವಾಹಿತನಾಗಿದ್ದರೂ ಕಿರುತೆರೆ ಕಲಾವಿದೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಹಲ್ಲೆ ನಡೆಸಿದ್ದ ಆರೋಪದ ಮೇಲೆ ಪೊಲೀಸ್‌ ಠಾಣೆ ಮೇಟ್ಟಿಲೇರಿದ್ದರು. ಕಲಾವಿದೆ ಮಂಜುಶ್ರೀ ಎಂಬುವರನ್ನ ಧ್ರುವಂತ್ ಮದುವೆಯಾಗಿದ್ದರು. 2022ರಲ್ಲಿ ಪತ್ನಿಯಿಂದ ಧ್ರುವಂತ್ ವಿಚ್ಛೇದನ ಪಡೆದಿದ್ದಾರೆ.

11. ಧನುಷ್ ಗೀತಾ ಧಾರಾವಾಹಿಯಲ್ಲಿ ಧನುಷ್ ಅವರು ನಟಿಸಿದ್ದರು. ಧನುಶ್ ಅವರು ತುಂಬು ಕುಟುಂಬದಲ್ಲಿ ಬದುಕುತ್ತಿರುವ ವ್ಯಕ್ತಿ. ಅಪ್ಪ ಹಾಗೂ ಅಮ್ಮನೊಂದಿಗೆ ಧನುಶ್ ಅವರಿಗೆ ಆತ್ಮೀಯತೆ ಇದೆಯಂತೆ. ‘ನಾನು ಅಮ್ಮನ ಮಗ’ ಎನ್ನುವ ಧನುಶ್, ಅಮ್ಮನ ಮಾತನ್ನು ಎಂದಿಗೂ ಮೀರುವುದಿಲ್ಲವಂತೆ. ಅಮ್ಮನೊಂದಿಗೆ ಬಹಳ ಆತ್ಮೀಯತೆ ಧನುಶ್ ಅವರಿಗೆ ಇದೆ. ಧನುಶ್ ಅವರು ಮದುವೆಯಾಗಿ ಒಂದೂವರೆ ವರ್ಷಗಳಾಗಿವೆಯಷ್ಟೆ. ಆಷಾಡಮಾಸದಲ್ಲಿ ಬಿಟ್ಟರೆ ಗಂಡನನ್ನು ಬಿಟ್ಟು ಇದ್ದಿದ್ದೇ ಇಲ್ಲವಂತೆ. ಆದರೆ ಈಗ ಮೊದಲ ಬಾರಿಗೆ ಇಷ್ಟು ದಿನಗಳ ಕಾಲ ಪತಿಯನ್ನು ಬಿಟ್ಟು ಇರಲಿದ್ದಾರೆ. ಧನುಶ್ ಸಹ ಪತ್ನಿಯನ್ನು ಬಹಳ ಪ್ರೀತಿಸುತ್ತಾರಂತೆ. ಆಕೆ ಶಾಂತವಾಗಿದ್ದು, ನನ್ನನ್ನು ಶಾಂತವಾಗಿಟ್ಟಿರುತ್ತಾಳೆ, ಅವಳು ಖುಷಿಯಾಗಿದ್ದು, ನನ್ನನ್ನು ಖುಷಿಯಾಗಿ ಇರಿಸಿದ್ದಾಳೆ ಎಂದಿದ್ದಾರೆ ಧನುಶ್

12. ಗಿಲ್ಲಿ ನಟ. ಗಿಲ್ಲಿʼ ನಟನ ನಿಜವಾದ ಹೆಸರು ʻನಟರಾಜ್‌ʼ. ʻಕಾಮಿಡಿ ಕಿಲಾಡಿಗಳು ಸೀಸನ್‌ 4ʼರಲ್ಲಿ ರನ್ನರ್‌ ಅಪ್‌, ʻಭರ್ಜರಿ ಬ್ಯಾಚುಲರ್ಸ್‌ʼ ಹಾಗೂ ʻಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ʼ ಶೋಗಳಲ್ಲಿ ಸ್ಪರ್ಧಿಸಿದ್ದರು. ಇತ್ತೀಚೆಗೆ ʻಕ್ವಾಟ್ಲೆ ಕಿಚನ್ʼ ಶೋನಲ್ಲಿಯೂ ಗಿಲ್ಲಿ ಕಾಣಿಸಿಕೊಂಡಿದ್ದರು.ಇವರು ಮಂಡ್ಯ ಜಿಲ್ಲೆಯ ಮಳವಳ್ಳಿಯ ಮಟದಪುದ ರೈತಾಪಿ ಕುಟುಂಬಕ್ಕೆ ಸೇರಿದವರು, ಮತ್ತು ಕಾಮಿಡಿ ಮೂಲಕ ಗಮನ ಸೆಳೆದರು. ಅವರು ಎಸ್.ಎಸ್.ಎಲ್.ಸಿ ನಂತರ ಐಟಿಐ ಓದಿದ್ದು, ಬಳಿಕ ‘ಕಾಮಿಡಿ ಕಿಲಾಡಿಗಳು ಸೀಸನ್ 4’ ಶೋನಲ್ಲಿ ಭಾಗವಹಿಸಿ ರನ್ನರ್-ಅಪ್ ಆದರು. ನಂತರ ‘ಭರ್ಜರಿ ಬ್ಯಾಚುಲರ್ಸ್’, ‘ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್’, ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಮುಂತಾದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ.

13. ಜಾನ್ವಿ ಮೊದಲು ನ್ಯೂಸ್ ಚಾನೆಲ್‌ಗಳಲ್ಲಿ ಆಂಕರ್ ಆಗಿ ಕೆಲಸ ಮಾಡಿದವರು. ಬಳಿಕ ರಿಯಾಲಿಟಿ ಶೋಗಳಲ್ಲಿ ಹಾಗೂ ಸಿನಿಮಾಗಳ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ನಿರೂಪಕಿ ಜಾನ್ವಿ ಅವರು ಕನ್ನಡದ ಕೆಲ ಮಾಧ್ಯಮಗಳಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದ್ದರು. ಆ ಬಳಿಕ ʼನನ್ನಮ್ಮ ಸೂಪರ್‌ಸ್ಟಾರ್‌ʼ, ʼಗಿಚ್ಚಿ ಗಿಲಿಗಿಲಿʼ ಶೋನಲ್ಲಿಯೂ ಭಾಗಿಯಾಗಿದ್ದರು. ಅಷ್ಟೇ ಅಲ್ಲದೆ ʼಅಧಿಪತ್ರʼ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಇತ್ತೀಚೆಗೆ ತಮ್ಮ ಮಾಜಿ ಪತಿ ಕಾರ್ತಿಕ್‌ರಿಂದ ಡಿವೋರ್ಸ್‌ ಪಡೆದು ಮತ್ತು ಎರಡನೇ ಮದುವೆಯ ಗಾಸಿಪ್‌ಗಳಿಂದ ಸುದ್ದಿಯಾಗಿದ್ದರು. ಮಾಜಿ ಪತಿಗೆ ಈಗಾಗ್ಲೇ ಮದ್ವೆಯಾಗಿದೆ. ಸಕಲೇಶಪುರದಲ್ಲಿ ಜಾನ್ವಿ ಕಾಲೇಜಿಗೆ ಫಸ್ಟ್‌ ಬಂದಿದ್ದರಂತೆ. ಗೋಲ್ಡ್‌ ಮೆಡಲ್‌ ಕೂಡ ತಗೊಂಡಿದ್ದರಂತೆ.

14. ಕಾವ್ಯಾ ಶೈವ ಕೆಆರ್‌ ಪೇಟೆ ಮೂಲದ ನಟಿ. ಕೊತ್ತಲವಾಡಿ ಸಿನಿಮಾ ಹೀರೋಇನ್.‌ ಕೆಂಡಸಂಪಿಗೆ ಧಾರವಾಹಿ ಮೂಲಕ ಚಿರಪರಿಚಿತ. ಕಾವ್ಯಾ ಶೈವ ಅವ್ರಿಗೆ ಕುಟುಂಬವೇ ಎಲ್ಲಾ, ಅವರೇ ನನ್ನ ಪ್ರಪಂಚ. ನಮ್ಮ ಕುಟುಂಬದವರೆಲ್ಲಾ ಗ್ರಾಮೀಣ ಹಿನ್ನೆಲೆಯವರು. ನಮ್ಮ ತಂದೆ ತುಂಬಾ ಸ್ಟ್ರಿಕ್ಟ್. ಕಾಲೇಜಿನಲ್ಲಿ ಇರುವಾಗಲೇ ನನಗೆ ನಟನೆ ಮೇಲೆ ಆಸಕ್ತಿ ಬಂತು. ಆದರೆ ಆರಂಭದಲ್ಲಿ ನಾನು ನಟನೆ ಮಾಡುವುದಕ್ಕೆ ಮನೆಯವರು ಒಪ್ಪಿಗೆ ನೀಡಲಿಲ್ಲ. ಬಳಿಕ ಎಲ್ಲರನ್ನು ಕನ್ವಿನ್ಸ್ ಮಾಡಿ, ಒಪ್ಪಿಸಿ ಆಡಿಷನ್ ನೀಡಲು ಶುರು ಮಾಡಿದೆ ಎಂದಿದ್ದಾರೆ.

15. ಮಂಜು ಭಾಷಿಣಿ ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯಲ್ಲಿ ನೆಗೆಟಿವ್‌ ಶೇಡ್‌ನ ಬಡ್ಡಿ ಬಂಗಾರಮ್ಮ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಮಂಜು ಭಾಷಿಣಿ . ಸಿಲ್ಲಿ ಲಲ್ಲಿ ಲಲಿತಾಂಬ ಪಾತ್ರದಲ್ಲಿ ಸಿಕ್ಕಾಪಟ್ಟೆ ಫೇಮಸ್‌ ಆಗಿದ್ರು.

16. ರಾಶಿಕಾ ಶೆಟ್ಟಿ ಕೆಲ ತಿಂಗಳ ಹಿಂದಷ್ಟೆ ಬಿಡುಗಡೆ ಆಗಿರುವ ಯೋಗರಾಜ್ ಭಟ್ ನಿರ್ದೇಶನದ ಸಿನಿಮಾ ‘ಮನದ ಕಡಲು’ ಸಿನಿಮಾನಲ್ಲಿ ನಾಯಕಿಯಾಗಿ ನಟಿಸಿದ್ದರು. ನಟಿ ರಮ್ಯಾ ಹಾಗೂ ರಕ್ಷಿತಾ ಅವರು ಒಟ್ಟಿಗೆ ನಟಿಸಿದ್ದ ಕವಿತಾ ಲಂಕೇಶ್ ನಿರ್ದೇಶನ ಮಾಡಿದ್ದ ‘ತನನಂ-ತನನಂ’ ಸಿನಿಮಾನಲ್ಲಿ ರಾಶಿಕಾ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು.

17. ಸ್ಪಂದನಾ ಸೋಮಣ್ಣ ಮೈಸೂರಿನ ಬೆಡಗಿ. ಕರಿಮಣಿ ಸೀರಿಯಲ್ ನಲ್ಲಿ ಸಾಹಿತ್ಯ ಪಾತ್ರದ ಮೂಲಕ ಮಿಂಚಿದ್ದರು. ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಸ್ಪಂದನಾ ನಾನು ನನ್ನ ಕನಸು ಎಂಬ ಕನ್ನಡ ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ತೆಲುಗಿನ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಜೊತೆಗೆ ತೆಲುಗಿನ ನಚ್ಚಾವೆ ವೆಬ್ ಸೀರೀಸ್ ಹಾಗೂ ಹಿಂದಿಯ ಸುನ್ ಲೆ ನಾ ಎಂಬ ಆಲ್ಬಂ ಸಾಂಗ್‌ನಲ್ಲಿ ಹಾಗೂ ಕನ್ನಡ ಸಿನಿಮಾಗಳಲ್ಲೂ ಇವರು ನಟಿಸಿದ್ದಾರೆ.

18. ಕಾಕ್ರೋಚ್ ಸುಧಿ ಬೇರೆ ಯಾರೂ ಅಲ್ಲ ಸ್ಯಾಂಡಲ್ವುಡ್ ನಟ. ಇವರ ಹೆಸರು ಸುಧೀರ್ ಬಾಲರಾಜ್. ಶಿವಣ್ಣ ಅಭಿನಯದ ‘ಟಗರು’ ಸಿನಿಮಾದಲ್ಲಿ ‘ಕಾಕ್ರೋಚ್’ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ‘ಕಾಕ್ರೋಚ್ ಸುಧಿ’ ಎಂದೇ ಖ್ಯಾತರಾದರು. ಇತ್ತೀಚೆಗೆ ಅವರು ನಟಿಸುತ್ತಿರುವ ‘ಚೈಲ್ಡು’ ಚಿತ್ರ ಸೆಟ್ಟೇರಿದೆ. ಅವರು ನಾಯಕರಾಗಿ ನಟಿಸುತ್ತಿರುವ ಮೂರನೇ ಸಿನಿಮಾ ಇದಾಗಿದೆ. ಸುಮಾರು 10ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿರುವ ಕಾಕ್ರೋಚ್, ಬಿಗ್ಬಾಸ್ ಮನೆಗೆ ಎಂಟ್ರಿ ನೀಡಿದ್ದಾರೆ. ‘ಅಲೆಮಾರಿ’ ಸಿನಿಮಾ ಮೂಲಕ ಇಂಡಸ್ಟ್ರೀಗೆ ಕಾಲಿಟ್ಟಿರುವ ಸುಧಿಗೆ ‘ಟಗರು’ ಸಿನಿಮಾ ಹೆಚ್ಚು ಜನಪ್ರಿಯತೆ ತಂದು ಕೊಟ್ಟಿತು. ‘ಸಲಗ’ ಸಿನಿಮಾದಲ್ಲಿ ‘ಸಾವಿತ್ರಿ’ ಪಾತ್ರ ತುಂಬಾ ಫೇಮಸ್ ಆಯಿತು. ಫೋಷಕ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವ ಕಾಕ್ರೋಚ್‌ ಸುಧಿ, ಬರೀ ನಟನಲ್ಲ ಅದ್ಭುತ ಆರ್ಟ್‌ ಕೂಡ ಮಾಡುತ್ತಾರೆ. ವಿಲನ್‌ ರೋಲ್‌ಗಳು, ಕಾಮಿಕ್‌ ಟೈಮಿಂಗ್‌, ಡೈಲಾಗ್‌ ಮತ್ತು ಎನರ್ಜಿ ವೀಕ್ಷಕರನ್ನ ಆಕರ್ಷಿಸುತ್ತವೆ ಅನ್ನೋದ್ರಲ್ಲಿ ಡೌಟಿಲ್ಲ. ನಾನು ತುಂಬಾ ವೈಲೆಂಟು, ತುಂಬಾ ಆ್ಯರೋಗೆಂಟ್ ಎನ್ನುತ್ತ ಬಿಗ್ಬಾಸ್ಗೆ ಎಂಟ್ರಿ ನೀಡಿರುವ ಇವರು, ವೀಕ್ಷಕರ ಕ್ಯೂರಿಯಾಸಿಟಿಯನ್ನ ಹೆಚ್ಚಿಸಿದ್ದಾರೆ.

19. ಅಭಿಷೇಕ್ ಅವರು ವಧು ಧಾರಾವಾಹಿಯಲ್ಲಿ ನಟಿಸಿದ್ದಾರೆ. ಕಳೆದ ವರ್ಷ ಈ ಧಾರಾವಾಹಿ ಆರಂಭ ಆಗಿತ್ತು. ಆ ಬಳಿಕ ಕೊನೆಗೊಂಡಿತು.

Rakesh arundi

Leave a Reply

Your email address will not be published. Required fields are marked *