Criket: ಪಾಕ್ ಟೀಮ್ ಗೆ ಭಾರೀ ಮುಖಭಂಗ ನರಿಬುದ್ಧಿಯ ದೇಶಕ್ಕೆ ತಕ್ಕಪಾಠ..!
ಏಷ್ಯಾ ಕಪ್ ಟೂರ್ನಿಮೆಂಟ್ ನಲ್ಲಿ ಬರೋಬ್ಬರಿ 41 ವರ್ಷಗಳ ಬಳಿಕೆ ಇಂಡೋ ಪಾಕ್ ಫೈನಲ್ ಮ್ಯಾಚ್‌ನಲ್ಲಿ ಪಾಕಿಸ್ತಾನವನ್ನು ಮಣ್ಣು ಮುಕ್ಕಿಸಿದ ಭಾರತ ಕೊನೆಗೂ ಟ್ರೋಫಿಗೆ ಮುತ್ತಿಕ್ಕಿತು. ಇದು ಸ್ವಾಭಿಮಾನದ ಪ್ರಶ್ನೆ ನಮ್ಮನ್ನು ಪದೇ ಪದೇ ತಮ್ಮ ನೀಚ ಬುದ್ದಿಯಿಂದ ಭಾರತಕ್ಕೆ ದ್ರೋಹ ಬಗೀತಾ ಇರೋ ಪಾಕಿಸ್ಥಾನಕ್ಕೆ ಇದು ತಕ್ಕ ಪಾಠ.
ಇದು ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಇಂತದ್ದೊಂದ ಘಟನೆ ನಡೆದಿದೆ. ಈ ಮೂಲಕ ಪಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಟೀಮ್ ಇಂಡಿಯಾ ಸೇಡು ತೀರಿಸಿಕೊಂಡಿದೆ. ನಿನ್ನೆ ಪ್ರತಿಯೊಬ್ಬರು ಕೂಡ ರೋಮಾಂಚಕ ಪಂದ್ಯದಲ್ಲಿ ಕೊನೆ ಓವರ್‌ನಲ್ಲಿ ಸಿಡಿಸಿದ ಸಿಕ್ಸ್ ಹಾಗೂ ಕೊನೆಯ ಬಾಲ್‌ನಲ್ಲಿ ರಿಂಕು ಸಿಂಗ್ ಸಿಡಿಸಿದ ಫೋರ್ ನಂತ್ರ ಇಡೀ ಭಾರತ ಪಾಕಿಸ್ಥಾನದ ಸೊಕ್ಕಡಿಗಿಸಿದೆ ಎಂದೇ ಬಣ್ಣಿಸಲಾಗಿದೆ.
ತಿಲಕ್ ಹಾಗೂ ದುಬೆ ಅವ್ರ ಸಮೋಯೋಚಿತ ಪಾರ್ಟ್ನರ್ ಶಿಪ್ ತಂಡವನ್ನು ಗೆಲುವಿನ ದಡ ಸೇರಿಸಿದೆ. ಈ ನಡುವೆ ಇನ್ನೇನು ಟ್ರೋಫಿ ವಿತರಣೆ ಮಾಡಲಾಗುತ್ತೆ. ಸೂರ್ಯಕುಮಾರ್ ಯಾದವ್ ಟ್ರೋಫಿಗೆ ಮುತ್ತಿಕ್ಕಿ ಮಾತಾಡ್ತಾರೆ ಎಂದು ಎಲ್ಲರೂ ಕ್ರಿಕೆಟ್ ಲೈವ್ ನೋಡ್ತಾ ಇದ್ದರೆ. ಲೈವ್ ಸ್ಟ್ರೀಮ್ ಎಂಡ್ ಆಗೋಯ್ತು. ಕೊನೆಗೆ ಫೋರ್ಥ್ ಅಂಪೈರ್‌ನಲ್ಲಿ ಮಾತಾಡ್ತಿದ್ದ ರವಿಶಾಸ್ತ್ರಿ ಕೂಡ ಇಷ್ಟೊಂದು ತಡ ಯಾಕೆ. ಪಂದ್ಯ ಮುಗಿದು 40 ನಿಮಿಷ ಕಳೆದೋಗಿದೆ ಎಂದು ಗರಂ ಕೂಡ ಆದ್ರು. ಆದ್ರೆ, ಅಸಲಿಗೆ ಅಲ್ಲಿ ನಡೆದಿದ್ದೇ ಬೇರೆ.
ಪಾಕ್ ಸಚಿವನಿಂದ ನಾವು ಟ್ರೋಫಿ ತೆಗೆದುಕೊಳ್ಳೋದಿಲ್ಲ ಅಂತಾ ಭಾರತ ಖಂಡಾತುಂಡವಾಗಿ ಹೇಳಿಬಿಡ್ತು. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಎಸಿಸಿ ಅಧ್ಯಕ್ಷ ಹಾಗೂ ಪಾಕಿಸ್ಥಾನ ಮಿನಿಸ್ಟರ್ ಮೊಹ್ಲಿನ್ ನಖ್ವಿ ಅವರಿಂದ ನಾವು ಟ್ರೋಫಿ ತೆಗೆದುಕೊಳ್ಳೋದಿಲ್ಲ ಎಂದು ಪಟ್ಟು ಹಿಡಿಯಿತು. ಎಮಿರೇಟ್ಸ್ ಕ್ರಿಕೆಟ್ ಬೋರ್ಡ್ ಉಪಧ್ಯಕ್ಷ ಖಾಲಿದ್ ಅಲ್ ಝರೋನಿ ಈ ವೇಳೆ ಅಲ್ಲೀ ಹಾಜಾರಿದ್ರು. ಅವ್ರಿಂದ ಬೇಕಾದ್ರೆ ನಾವು ಪ್ರಶಸ್ತಿ ಸ್ವೀಕಾರ ಮಾಡ್ತೀವಿ ಎಂದು ಭಾರತ ತನ್ನ ಅಭಿಪ್ರಾಯ ತಿಳಿಸಿತ್ತು. ಆದ್ರೆ, ತಾನೇ ಟ್ರೋಫಿ ಹಸ್ತಾಂತರ ಮಾಡಬೇಕು ಎಂದು ನಖ್ವಿ ಕೂಡ ಹಠ ಹಿಡಿದಿದ್ದರಿಂದ ಭಾರತ ಟ್ರೋಫಿ ತೆಗೆದುಕೊಳ್ಳಲೇ ಇಲ್ಲ.
ಸುಮಾರು ಒಂದು ಗಂಟೆ ಕಾಲ ಈ ಚರ್ಚೆ ನಡೆದ್ರು ಕೂಡ ಯಾವುದೂ ಸಫಲವಾಗಿಲ್ಲ. ಇನ್ನೊಂದ್ಕಡೆ ಕ್ರೀಡಾಂಗಣದಲ್ಲಿದ್ದ ಪ್ರತಿಯೊಬ್ಬ ಭಾರತೀಯ ಅಭಿಮಾನಿಗಳು ಕೂಡ ನಖ್ವಿ ವಿರುದ್ಧ ಘೋಷಣೆಗಳನ್ನು ಕೂಡ ಕೂಗ್ತಿದ್ದರು. ಆತನಿಂದ ಟ್ರೋಫಿ ಎತ್ತಿ ಹಿಡಿಯೋದಕ್ಕೆ ನಮ್ಮ ಸಹಮತಿ ಇಲ್ಲ ಅನ್ನೋದನ್ನು ಗಟ್ಟಿಯಾಗಿ ವ್ಯಕ್ತ ಪಡಿಸ್ಥಾ ಇದ್ದರು. ನಖ್ವಿ ಅವ್ರನ್ನು ಅಪಹಾಸ್ಯ ಮಾಡುತ್ತಾ ದೇಶಭಕ್ತಿಯ ಘೋಷಣೆಗಳನ್ನು ಕೂಗ್ತಿದ್ದರು. ಮ್ಯಾಚ್ ಮುಗಿದ ಮೇಲೆ ಭಾರತ ಈ ಟ್ರೋಫಿ ವಿಚಾರವಾಗಿಯೇ 1 ಗಂಟೆ ಕಾಲ ಡ್ರೆಸ್ಸಿಂಗ್ ರೂಮ್ ನಲ್ಲಿಯೇ ಕಾಲ ಕಳೆಯಿತು.
ಇದು ಕ್ರಿಕೆಟ್ ಇತಿಹಾಸದಲ್ಲಿ ಈ ರೀತಿ ನಾಟಕೀಯ ಬೆಳವಣಿಗೆಗಳು ನಡೆದಿದ್ದು ಇದೇ ಮೊದಲ ಬಾರಿ. ಅಷ್ಟಕ್ಕೂ ಈ ಮಿನಿಸ್ಟರ್ ನಖ್ವಿ ಅವ್ರ ಮೇಲ್ಯಾಕೆ ಭಾರತೀಯ ಕ್ರಿಕೆಟ್ ಆಟಗಾರರ ಕೋಪ ಅನ್ನೋದನ್ನು ಹೇಳ್ತ ಹೋಗ್ತೀನಿ. ಇತ್ತೀಚಿಗೆ ಈ ನಖ್ವಿ ಭಾರತ ವಿರೋಧಿ ಪೋಸ್ಟ್ ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡ್ತಾ ವಿವಾದ ಸೃಷ್ಟಿ ಮಾಡಿದ್ರು. ನಖ್ವಿ ಟ್ರೋಫಿ ಪ್ರಧಾನ ಮಾಡಿದ್ರೆ ನಾವು ಟ್ರೋಫಿ ತೆಗೆದುಕೊಳ್ಳೋದಿಲ್ಲ ಅನ್ನೋದನ್ನು ಎಸಿಸಿಗೆ ಭಾರತ ಮೊದಲೇ ಹೇಳಿತ್ತು.
ಇತ್ತೀಚೆಗೆ ಇದೇ ಮಿನಿಸ್ಟರ್ ನಖ್ವಿ ಅವ್ರು ಕ್ರಿಶ್ವಿಯನ್ ರೋನಾಲ್ಡೋ ಅವ್ರ ವಿಮಾನ ಅಪಘಾತ ಸಂಭ್ರಾಮಾಚರಣೆಯ ಫೋಟೋ ಹಾಕಿ ವೀಡಿಯೋಗಳನ್ನು ಶೇರ್ ಮಾಡಿದ್ದರು. ಇದು ಆಪರೇಷನ್ ಸಿಂಧೂರ್ ದಾಳಿಯಲ್ಲಿ ಪಾಕಿಸ್ಥಾನ ಭಾರತದ ಆರು ಫೈಟರ್ ಜೆಟ್ ಹೊಡೆದು ಹಾಕಿದೆ ಅನ್ನೋದನ್ನು ಪರೋಕ್ಷವಾಗಿ ಉಲ್ಲೇಖ ಮಾಡೋದಾಗಿದೆ. ಹಾಗಾಗಿಯೇ ಇಂತದ ಭಾರತ ವಿರೋಧಿ ಸಚಿವನಿಂದ ನಾವು ಪ್ರಶಸ್ತಿ ಪಡೆದರೆ ಅದಕ್ಕೆ ಅರ್ಥವೇ ಇರೋದಿಲ್ಲ ಅನ್ನೋದು ಭಾರತದ ನಿರ್ಧಾರವಾಗಿತ್ತು.
ಈ ಬಾರಿ ಏಷ್ಯಾ ಕಪ್‌ನಲ್ಲಿ ಪಾಕಿಸ್ಥಾನ ಅನೇಕ ಸಂದರ್ಭಗಳಲ್ಲಿ ಆಪರೇಷನ್ ಸಿಂಧೂರ್ ಘಟನೆಯನ್ನೇ ವ್ಯಂಗ ಮಾಡಿದೆ. ಗುಜರಾತ್ ವಿಮಾನ ಪಥನವನ್ನು ಸನ್ನೆ ರೂಪದಲ್ಲಿ ಕಿಂಡಲ್ ಮಾಡಿದೆ. ಈ ರೀತಿಯ ಘಟನೆಗಳೇ ಭಾರತೀಯ ಆಟಗಾರರನ್ನು ಕೆರಳಿಸಿದೆ. ಅದಕ್ಕಾಗಿ ಭಾರತ ಮಾಡಿದ್ದು ಸರಿಯಾಗಿದೆ ಎಂದು ಅನೇಕರು ಸಮರ್ಥಿಸಿಕೊಳ್ತಾ ಇದ್ದಾರೆ.
ಇತ್ತ ಟ್ರೋಫಿ ತೆಗೆದುಕೊಳ್ಳದೇ ಅನೇಕ ಬೌಲರ್‌ಗಳನ್ನು ಭಾರತ ಟೀಕಿಸುವ ಮೂಲಕ ತಕ್ಕ ಪಾಠ ಕಲಿಸಿದೆ. ಅಬ್ರಾರ್ ಅಹ್ಮದ್ ಪಾಕಿಸ್ಥಾನ ಬೌಲರ್ ಸ್ಯಾಮ್ಸನ್ ವಿಕೆಟ್ ತೆಗೆದ ಮೇಲೆ ಪೆವಿಲಿಯನ್ ಕಡೆ ಕಳಿಸುವ ತಲೆ ಸನ್ನೆ ಮಾಡಿ ಭಾರತದ ಆಟಗಾರನಿಗೆ ವ್ಯಂಗ ಮಾಡಿದ್ರು. ಇದನ್ನೇ ಇಂಡಿಯನ್ ಕ್ರಿಕೆಟ್ ಪ್ಲೇಯರ್ಸ್ ಕೊನೆಗೆ ಸಮಾರಂಭ ಮುಗಿದ್ಮೇಲೆ ಇಮ್ಮಿಟೇಟ್ ಮಾಡಿ ಪಾಠ ಕಲಿಸಿದ್ದಾರೆ. ಭಾರತದ ಆಟಗಾರರಿಗೆ ಕಪ್ ನೀಡಲು ನಖ್ವಿ ವೇದಿಕೆಗೆ ಬಂದಾಗ ಟೀಂ ಇಂಡಿಯಾ ಆಟಗಾರರು ವೇದಿಕೆಯಿಂದ 10-15 ಅಡಿ ದೂರ ನಿಂತು ವಿರೋಧ ವ್ಯಕ್ತಪಡಿಸಿದ್ದಾರೆ.
ಪಂದ್ಯ ಮುಗಿದ ಒಂದು ಗಂಟೆ ಬಳಿಕ ಪ್ರಶಸ್ತಿ ವಿತರಣೆ ಸಮಾರಂಭ ಆರಂಭವಾಯಿತು. 
ಮೊದಲಿಗೆ ಪಾಕಿಸ್ಥಾನ ಆಟಗಾರರಿಗೆ ರನ್ನರ್ ಆಪ್ ಬಹುಮಾನ ವಿತರಣೆ ಮಾಡಲಾಯಿತು. ಈ ವೇಳೆ, ಪಾಕ್‌ನ ಪ್ರತಿ ಆಟಗಾರರು ವೇದಿಕೆ ಮೇಲೆ ಬಂದಾಗಲೂ ‘ಮೋದಿ… ಮೋದಿ, ಇಂಡಿಯಾʼ ಎಂದು ಪ್ರೇಕ್ಷಕರು ಘೋಷಣೆ ಕೂಗಿದ್ದಾರೆ. ಇದರಿಂದ ಪಾಕ್ ಆಟಗಾರರು ತೀವ್ರ ಮುಜುಗರಕ್ಕೊಳಗಾದರು. ರನ್ನರ್ ಅಪ್ ಬಹುಮಾನಕ್ಕೆ ಬಂದ ಪಾಕ್ ಕ್ಯಾಪ್ಟನ್ ಸಲ್ಮಾನ್ ಬಾಂಗ್ಲಾ ಕ್ರಿಕೆಟ್ ಮುಖ್ಯಸ್ಥರಿಂದ ಚೆಕ್‌ನ್ನು ಪಡೆದು ವೇದಿಕೆ ಮೇಲೆಯೇ ಹರಿದು ಎಸೆದಿದ್ದಾರೆ.
ಪಾಕಿಸ್ಥಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಮುಖ್ಯಸ್ಥರೂ ಆಗಿರುವ ಮೊಹ್ಸಿನ್ ನಖ್ವಿ ಕೈಯಿಂದ ಪ್ರಶಸ್ತಿ ಸ್ವೀಕರಿಸಲು ಭಾರತ ನಿರಾಕರಿಸಿದ್ದಕ್ಕೆ ಬಿಸಿಸಿಐ ಕಾರ್ಯದರ್ಶಿ ದೇವಾಜಿತ್ ಸೈಕಿಯಾ ಸ್ಪಷ್ಟ ಕಾರಣವನ್ನು ನೀಡಿದ್ದಾರೆ. “ನಮ್ಮ ದೇಶದ ವಿರುದ್ಧ ಯುದ್ಧವನ್ನು ಮಾಡುತ್ತಿರುವ ದೇಶದ ಪ್ರತಿನಿಧಿಯಿಂದ ನಾವು ಪ್ರಶಸ್ತಿ ಸ್ವೀಕರಿಸಲು ಸಾಧ್ಯವಿಲ್ಲ. ಇದು ನಮ್ಮ ದೇಶದ ಸಶಸ್ತ್ರ ಪಡೆಗಳಿಗೆ ನಾವು ಸಲ್ಲಿಸುವ ಗೌರವ,” ಎಂದಿರು ಅವರು, “ಹೀಗಾಗಿ ನಾವು ಟ್ರೋಫಿಯನ್ನು ನಿರಾಕರಿಸಿದೆವು,” ಎಂದು ಹೇಳಿದ್ದಾರೆ.
ಒಟ್ಟು 147 ರನ್ ಟಾರ್ಗೆಟ್ ಕೊಟ್ಟಿದ್ದ ರೋಮಾಂಚನಕಾರಿ ಪಂದ್ಯ ಕೊನೆಗೆ ಹೈವೋಲ್ಟೇಜ್ ಮ್ಯಾಚ್ ಆಗಿ ಬದಲಾಗಿತ್ತು. ಕೊನೆಯ ಓವರ್‌ನಲ್ಲಿ ಹ್ಯಾರಿಸ್ ರಾಫ್ ಎಸೆತದಲ್ಲಿ ಆರು ಬಾಲ್‌ಗಳಿಗೆ 10 ರನ್ ಬೇಕಾಗಿತ್ತು. ತಿಲಕ್ ಮೊದಲ ಎಸೆತದಲ್ಲೇ ಸಿಕ್ಸ್ ಸಿಡಿಸಿ ಕೋಟ್ಯಂತರ ಭಾರತೀಯ ಹೃದಯ ಬಿಡಿತ ನಿರಾಳ ಮಾಡಿದ್ರು. ಇನ್ನು ರಿಂಕು ಸಿಂಗ್ ಮೂರು ಬಾಲ್‌ಗೆ ಒಂದು ರನ್ ಬೇಕಾಗಿದ್ದಾಗ ಫೋರ್ ಹೊಡೆದು ನಾನು ವಿನ್ನಿಂಗ್ ರನ್ ಹೊಡೆಯುತ್ತೇನೆ ಎಂದು ಮೊದಲೇ ಕೊಟ್ಟ ಮಾತನ್ನು ಉಳಿಸಿಕೊಂಡ್ರು.