Japan: ತನ್ನ ಕ್ಲಾಸ್​ಮೇಟ್​ನ ತಾಯಿಯನ್ನೇ ಮದುವೆಯಾದ ಯುವಕ..!

ಪ್ರೀತಿಗೆ ವಯಸ್ಸು, ಜಾತಿ, ಬಡವ, ಶ್ರೀಮಂತ ಎಂಬ ಹಂಗಿಲ್ಲ ಅಂತಾರೆ ಅದು ಈ ಇಬ್ಬರ ಜೀವನದಲ್ಲಿ ನಿಜವಾಗಿದೆ. ಜಪಾನ್​​ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಯುವಕನೊಬ್ಬ ತನ್ನ ಸಹಪಾಠಿಯ ತಾಯಿಯನ್ನೇ ಮದುವೆಯಾಗಿರುವ ಘಟನೆ ವರದಿಯಾಗಿದೆ. ತನಗಿಂತ 21 ವರ್ಷ ದೊಡ್ಡವಳನ್ನು ವರಿಸಿದ್ದಾರೆ.

ಜಪಾನ್​​ನ ಶಿಜುವೊಕಾ ಪ್ರಾಂತ್ಯದ 33 ವರ್ಷದ ​ಇಸಾಮು ಟೊಮಿಯೋಕಾ 54 ವರ್ಷದ ಮಿಡೋರಿಳನ್ನು ಮೊದಲು ತನ್ನ ಶಾಲೆಯ ದಿನಗಳಲ್ಲಿ ಪೇರೇಂಟ್ಸ್​ ಮೀಟಿಂಗ್​ನಲ್ಲಿ ಭೇಟಿಯಾಗಿದ್ದನು. ಬಳಿಕ ಇಬ್ಬರು ಅವರವರ ಕೆಲಸ ಮಾಡಿಕೊಂಡಿದ್ದರು. ಹಲವಾರು ವರ್ಷಗಳ ಬಳಿಕ ಒಮ್ಮೆ ಆಕಸ್ಮಿಕವಾಗಿ ಬ್ಯೂಟಿ ಸಲೂನ್​ಗೆ ಹೋಗಿದ್ದಾಗ ಇಬ್ಬರ ಮಧ್ಯೆ ಮತ್ತೆ ಸಂಪರ್ಕ ಏರ್ಪಟ್ಟು, ಪ್ರೀತಿಯಾಗಿ ಅರಳಿತ್ತು.

ಇತ್ತೀಚೆಗಷ್ಟೇ ಮಿಡೋರಿ ತನ್ನ ಪತಿಯಿಂದ ಡಿವೋರ್ಸ್ ಪಡೆದಿದ್ದಳು. ಇದರ ಬೆನ್ನಲ್ಲೇ ​ಇಸಾಮು ಭೇಟಿಯೂ ಅವಳ ಜೀವನದಲ್ಲಿ ಹೊಸ ಅಲೆಯನ್ನು ಎಬ್ಬಿಸಿತ್ತು. ಬ್ಯೂಟಿ ಸಲೂನ್​ನಲ್ಲಿ ಮಿಡೋರಿಳನ್ನು ನೋಡಿದಾಗ ಅಳೆಯ ನೆನಪನ್ನು ಮಾಡಿಕೊಂಡಿದ್ದಾರೆ. ವಯಸ್ಸಿನ ಅಂತರ ಮನಸ್ಸಿಗೆ ಬಂದರೂ ಪ್ರವಾಸಿ ತಾಣಗಳಿಗೆ, ಹೋಟೆಲ್​ಗಳಿಗೆ ಸುತ್ತಾಡಿದ್ದರಿಂದ ಇಬ್ಬರ ನಡುವೆ ಬಾಂಧವ್ಯ ಬಲವಾಗುತ್ತ ಹೋಗಿತ್ತು. ಕೊನೆಗೆ ಇಬ್ಬರೂ ಮದುವೆಯಾಗಲು ನಿರ್ಧರಿಸಿದಾಗ ಮಿಡೋರಿ ಕುಟುಂಬದಲ್ಲಿ ಸಾಕಷ್ಟು ವಿರೋಧಗಳು ಕೇಳಿಬಂದವು.

ಮಿಡೋರಿಗೆ ಈಗ 54 ವರ್ಷ ನೀವು ನಿಮ್ಮದೇ ಆದ ಸ್ವಂತ ಮಗುವನ್ನು ಹೊಂದಲು ಸಾಧ್ಯವಿಲ್ಲ, ನಿನಗಿನ್ನೂ 30 ವರ್ಷ ನಿನ್ನ ವಯಸ್ಸಿನವಳನ್ನೇ ಮದುವೆಯಾಗಬಹುದಲ್ಲಾ ಎಂದು ಇಸಾಮುಗೆ ಹಲವರು ಬುದ್ಧಿವಾದ ಹೇಳಿದ್ದರು. ಆದರೆ ಇಸಾಮು ತನ್ನ ಪ್ರೀತಿ ಎಂಥಹದ್ದು ಎಂದು ತೋರಿಸಲು ಆಕೆಗಾಗಿ ದುಬಾರಿ ಮನೆಯೊಂದು ಖರೀದಿ ಮಾಡಿದನು. ಅದಲ್ಲದೇ ನಾವು ಒಟ್ಟಿಗೆ ಬಾಳುತ್ತೇವೆ ಎಂದು ಮಹಿಳೆಯ ಕುಟುಂಬಸ್ಥರಿಗೆ ಹೇಳಿದನು.

ಹೀಗಾಗಿ ಈ ಇಬ್ಬರು 2024ರ ಜುಲೈನಲ್ಲಿ ಅಧಿಕೃತವಾಗಿ ಮದುವೆಯಾದರು. ಇಸಾಮು, ಮಿಡೋರಿಗಿಂತ ಚಿಕ್ಕವನಾದರೂ ಆಕೆಯ ಮಗಳಿಗೆ ಮಲತಂದೆಯಾಗಿದ್ದಾನೆ. ಮಲತಂದೆ ಆಗಿರುವುದು ಅಷ್ಟೇ ಅಲ್ಲ, ಆಕೆಯ ನಾಲ್ವರು ಮೊಮ್ಮಕ್ಕಳಿಗೆ ಅಜ್ಜ ಕೂಡ ಆಗಿದ್ದಾರೆ.

Rakesh arundi

Leave a Reply

Your email address will not be published. Required fields are marked *