Big Boss: ಯಾರಿ ಮಾತಿನ ಮಲ್ಲಿ ಮಲ್ಲಮ್ಮ..! ಬಿಗ್‌ ಬಾಸ್‌ ಮನೆಗೆ ಸೆಲೆಕ್ಟ್‌ ಆಗಿದ್ಯಾಕೆ..!

ಪ್ರತಿ ಬಾರಿಯ ಬಿಗ್‌ ಬಾಸ್‌ ಸೀಸನ್‌ನಂತೆ ಈ ಬಾರಿಯೂ ಕೂಡ ಅನೇಕ ಪ್ರಯೋಗಗಳೊಂದಿಗೆ ಕನ್ನಡದ ಬಿಗ್‌ ಬಾಸ್‌ ಸೀಸನ್‌ 12 ಗ್ರ್ಯಾಂಡ್‌ ಓಪನಿಂಗ್‌ ಕಾಣ್ತಿದೆ. ಕೆಲವೊಬ್ರಿಗೆ ಬಿಗ್‌ ಬಾಸ್‌ ರಿಯಾಲಿಟಿ ಶೋ ಡೈಲಿ ರೋಟೀನ್‌ ಅದ್ರೆ, ಇನ್ನು ಕೆಲವೊಬ್ಬರಿಗೆ ಬಿಗ್‌ ಬಾಸ್‌ ರುಚಿಸೋದೇ ಇಲ್ಲ. ಅನೇಕ ಪರ ವಿರೋಧಗಳ ನಡುವೆ ಟಾಪ್‌ ರಿಯಾಲಿಟಿ ಶೋಗಳಲ್ಲಿ ಕನ್ನಡದ ಬಿಗ್‌ ಬಾಸ್‌ ರಿಯಾಲಿಟಿ ಶೋ ಕೂಡ ಹೌದು.

ಬಿಗ್‌ ಬಾಸ್‌ ರಿಯಾಲಿಟಿ ಶೋ ಈ ಬಾರಿ ಹೇಗಿರುತ್ತೆ, ಯಾರೆಲ್ಲಾ ಬರ್ತಾ ಇದ್ದಾರೆ ಅಂತೆಲ್ಲಾ ಟಿಪ್ಪಣಿ ಕೊಡೋಕೆ ಹೋಗೋದಿಲ್ಲ. ಆದ್ರೆ, ತುಂಬಾ ಚರ್ಚೆಯಾಗ್ತಿರೋ ಬಿಗ್‌ ಬಾಸ್‌ ಕಂಟೆಸ್ಟಂಟ್‌ಗಳಲ್ಲಿ ಒಬ್ಬರಾದ ಮಾತಿನ ಮಲ್ಲಿ ಮಲ್ಲಮ್ಮನ ಪರಿಚಯ ಏನು ಅನ್ನೋದನ್ನು ಹೇಳಲಿಕ್ಕೆ ಬಂದಿದ್ದೇನೆ. ಅಸಲಿಗೆ ಯಾರೂ ಈ ಮಾತಿನ ಮಲ್ಲಮ್ಮ. ಬಿಗ್‌ ಬಾಸ್‌ ಅಂತಾ ಶೋಗೆ ಸೆಲೆಕ್ಟ್‌ ಆಗಿದ್ದಾರೆ ಅಂದ್ರೆ ಇವ್ರ ಹಿನ್ನೆಲೆ ಏನು.? ದೊಡ್ಮನೆಗೆ ಎಂಟ್ರಿ ಕೊಡ್ತಿರೋ ಈ ಮಲ್ಲಮ್ಮ ಕನ್ನಡಿಗರನ್ನು ರಂಜಿಸೋದ್ರಲ್ಲಿ ಯಶಸ್ವಿಯಾಗ್ತಾರಾ.? ಅಥವಾ ದೇಸಿತನದ ಸೊಗಡಲ್ಲಿ ಪ್ಯಾಟೆ ಮಂದಿ ಕೈಗೆ ಸಿಕ್ಕು ನರಳಾಡ್ತಾರಾ..? ಈ ಎಲ್ಲಾ ವಿಷಯಗಳೊಂದಿಗೆ ಮಲ್ಲಮ್ಮನ ಇಂಟ್ರಡಕ್ಷನ್‌ ಕೊಡ್ತಿವಿ.

ಕಳೆದ ಬಾರಿ ಉತ್ತರ ಕರ್ನಾಟಕ ಪ್ರತಿಭೆ ಹನುಮಂತ ಅವರಿಗೆ ಬಿಗ್ ಬಾಸ್ನಲ್ಲಿ ಅವಕಾಶ ಕೊಟ್ಟಿದ್ರು. ಅವ್ರ ಇನ್ನೋಸೆನ್ಸ್‌ ಅವ್ರಿಗೆ ಅವಾರ್ಡ್‌ ಕೂಡ ಸಿಗುವಂತೆ ಮಾಡಿತ್ತು. ಈ ಬಾರಿ ಮಲ್ಲಮ್ಮ ಅವರು ಬಿಗ್ ಬಾಸ್ಗೆ ಬಂದಿದ್ದಾರೆ. ಮಲ್ಲಮ್ಮ ಅವರು ಉತ್ತರ ಕರ್ನಾಟಕದ ಪ್ರತಿಭೆ ಅನ್ನೋದು ಕೆಲವ್ರಿಗೆ ಮಾತ್ರ ಗೊತ್ತಿದೆ. ಈಗಾಗ್ಲೇ ಮಂಜು ಭಾಷಿಣಿ, ಕಾಕ್ರೋಚ್ ಸುಧಿ ಹಾಗೂ ಮಲ್ಲಮ್ಮ ಹೆಸರು ರಿವೀಲ್ ಆಗಿದೆ. ಅದ್ರೆ, ಸಾಕಷ್ಟು ಗಮನ ಸೆಳೆದಿದ್ದು ಮಲ್ಲಮ್ಮ.

ಮಲ್ಲಮ್ಮ ಅವರು ಉತ್ತರ ಕರ್ನಾಟಕದ ಪ್ರತಿಭೆ. ಯಾದಗಿರಿ ಜಿಲ್ಲೆಯ, ಸುರಪುರ ತಾಲೂಕಿನ ಸಣ್ಣ ಹಳ್ಳಿಯವರು. ಕೆಲಸಕ್ಕೆಂದು ಬೆಂಗಳೂರಿಗೆ ಬಂದವರು. ಅವರು ತಮ್ಮ ಮಾತಿನ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ. ಮಲ್ಲಮ್ಮ ಅವರು ತಮ್ಮದೇ ಆದ ಇನ್ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ 1.69 ಲಕ್ಷ ಹಿಂಬಾಲಕರು ಅವರಿಗೆ ಇದ್ದಾರೆ. ಯೂಟ್ಯೂಬ್ ಚಾನೆಲ್ಗೆ 16 ಸಾವಿರ ಹಿಂಬಾಲಕರು ಇದ್ದಾರೆ. ಮಲ್ಲಮ್ಮ ಟಾಕ್ಸ್ ಅನ್ನೋದು ಅವರ ಯೂಟ್ಯೂಬ್ ಚಾನೆಲ್ ಹೆಸರು.

ಮಾತಿನ ಮಲ್ಲಿ ಎಂದೇ ಫೇಮಸ್‌ ಆಗಿರುವ ಮಲ್ಲಮ್ಮ ಉತ್ತರ ಕರ್ನಾಟಕದವರು. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ರೀಲ್ಸ್‌ ಮೂಲಕ ವೈರಲ್‌ ಆಗಿರುವ ಮಲ್ಲಮ್ಮ ಇನ್ನೊಸೆಂಟ್‌ ಇನ್‌ಫ್ಲುಯೆನ್ಸರ್‌ ಅಂದರೆ ತಪ್ಪಾಗೋದಿಲ್ಲ. ತಮ್ಮ ಸರಳ ಜೀವನಶೈಲಿ, ಹಾಸ್ಯಮಯ ರೀಲ್ಸ್‌ ಮತ್ತು ಹಳ್ಳಿ ಸಂಸ್ಕೃತಿಯನ್ನ ಪ್ರತಿಬಿಂಬಿಸುವ ವಿಡಿಯೋಗಳ ಮೂಲಕ ಫೇಮಸ್‌ ಆಗಿದ್ದಾರೆ.

ಹಿನ್ನೆಲೆ ಏನು..?
ಮಲ್ಲಮ್ಮ ಬೇಸಿಕಲ್ಲಿ ಬೆಂಗಳೂರಿಗೆ ಕೆಲಸಕ್ಕೆ ಅಂತಾ ಬಂದವ್ರು. ಮನೆಯಲ್ಲಿ ಕಿತ್ತು ತಿನ್ನೋ ಬಡತನ. ಹೊಟ್ಟೆಪಾಡಿಗೆ ಅಂತಾ ಬಂದ ಮಲ್ಲಮ್ಮ ಇವತ್ತು ಇಷ್ಟು ಫೇಮಸ್‌ ಆಗಿದ್ದಾರೆ. ಇಬ್ಬರು ಸ್ನೇಹಿತರ ಸಹಾಯದಿಂದ ಈ ಲೆವೆಲ್‌ಗೆ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಆರಂಭದಲ್ಲಿ ಮೇಡಂ ಪಲ್ಲವಿ ಹಾಗೂ ಮನೋಜ್‌ ಅನ್ನೋರ ಸಂಪರ್ಕ ಇವ್ರಿಗೆ ಸಿಕ್ಕಿರೋದ್ರಿಂದ ಇವ್ರ ಮುಗ್ದತೆ ಅವ್ರಿಗೆ ಹಿಡಿಸಿದೆ.

ಗಾರೆ ಕೆಲಸಕ್ಕೆ ಅಂತಾ ಬೆಂಗಳೂರಿಗೆ ಬಂದಿದ್ದ ಮಲ್ಲಮ್ಮನಿಗೆ ಪಲ್ಲವಿ ಅವ್ರ ಬೂಟಿಕ್‌ ಶಾಪ್‌ ಕಟ್ಟಬೇಕಾದ್ರೆ ಕೆಲಸಕ್ಕೆ ಸೇರಿಕೊಳ್ಥಾರೆ. ಅಲ್ಲಿ ಸಿಮೆಂಟ್‌ ಮತ್ತು ಇಟ್ಟಿಗೆ ಕೊಡೋ ಕೆಲಸ ಮಾಡ್ತಾರೆ. ಕೂಲಿ 400 ರೂಪಾಯಿ ಕೊಡ್ತ ಇರೋ ಹಣದಲ್ಲಿ ಜೀವನ ನಡೆಸ್ತಿದ್ದ ಮಲ್ಲಮ್ಮ ತಿಂಗಳಿಗೆ 2000 ಖರ್ಚುಲ್ಲೇ ಜೀವನ ನಡೆಸಲು ನಿರ್ಧಾರ ಮಾಡಿದ್ರು. ಕೊನೆಗೆ ಇವ್ರು ಊರಿಗೆ ವಾಪಾಸ್‌ ಆಗ್ಬೇಕಾದ್ರೆ, ಪಲ್ಲವಿ ಮೇಡಂ ಇಲ್ಲೇ ಇರ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಆಗ ಬೋಟಿಕ್‌ ಶಾಪ್‌ನಲ್ಲೇ ಒಂದು ಕೆಲಸ ನೋಡಿ ಅವ್ರನ್ನು ಇಲ್ಲೇ ಉಳಿಸಿಕೊಂಡಿದ್ದಾರೆ.

ಒಗಟುಗಳನ್ನು ಮಲ್ಲಮ್ಮ ಟಾಕ್ಸ್‌ ಇನ್‌ಸ್ಟಾ ಹಾಗೂ ಯ್ಯೂಟ್ಯೂಬ್‌ ಪೇಜ್‌ನಲ್ಲಿ ಕೇಳೋ ಮೂಲಕ ಮನೆ ಮಾತಾಗಿದ್ದಾರೆ. ಒಂದು ವೀಡಿಯೋ ಕರಿಮಣಿ ಮಾಲೀಕ ರಾಹುಲ್ಲಾ ಅಂತಾ ಹಾಡನ್ನು ಅಜ್ಜಿ ಮುಂದೆ ಹೇಳಿದಾಗ, ಅಜ್ಜಿ ಕೊಟ್ಟ ರಿಯಾಕ್ಷನ್‌ ವಿಚಿತ್ರವಾಗಿದೆ. ಎಲ್ಲರಿಗೂ ಕರಿಮಣಿ ಮಾಲೀಕ ರಾಹುಲ್ಲಾ ಹೇಗಾಗ್ತಾನೆ ಎಂದು ಫನ್ನಿಯಾಗಿ ರೆಸ್ಪಾನ್ಸ್‌ ಮಾಡಿದ್ರು. ಅದೂ ಕೂಡ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಎಲ್ಲಾದಕ್ಕೂ ಎಲ್ಲಿಗೆ ಹೋಗ್ತಿದ್ರಿ ಹಳ್ಳಿಯಲ್ಲಿ ಅಂತಾ ಕೇಳಿದ್ರೆ ಹೊಲಕ್ಕೆ. ಹನಿಮೂನ್‌ ಎಲ್ಲಿಗೆ ಹೋಗಿದ್ರಿ ಅಂತಾ ಕೇಳಿದ್ರೆ, ಅದೂ ಕೂಡ ಹೊಲಕ್ಕೆ ಎಂದು ಹೇಳುವಷ್ಟು ಇನ್ನೋಸೆನ್ಸ್‌.

ಇನ್ನು ಮಲ್ಲಮ್ಮ ನೀವ್ಯಾಕೆ ಕುಳ್ಳ ಇದೀರಾ ಅಂತಾ ಯಾರಾದ್ರೂ ಕೇಳಿದ್ರೆ, ನಾನು ಹುಟ್ಟಿದಾಗ ಮಳೆ ಇರ್ಲಿಲ್ಲ. ಅಂಗಾಗಿ ನಾನು ಕುಳ್ಳ ಇದೀನಿ ಅನ್ನೋ ರಿಯಾಕ್ಷನ್‌ ಕೊಡ್ತಾ ಇದ್ದರು. ಅಂದ್ರೆ, ಮಳೆ ಬಂದಿಲ್ಲ, ಸಸಿ ಬೆಳೆದಿಲ್ಲ ಅನ್ನೋ ತರಹದ ಉತ್ತರ ಕೊಡುತ್ತಾರೆ.

ಇವ್ರ ಜತೆ ಕೇಳಿ ಬರೋ ಮನೋಜ್‌ ವಾಯ್ಸ್‌ ಯಾರದ್ದು ಅನ್ನೋ ಕುತೂಹಲಕ್ಕೆ ಇಲ್ಲಿದೆ ಉತ್ತರ. ತೆಲುಗಿನಲ್ಲಿ ಪಾಪ್ಯೂಲರ್‌ ಸೀರಿಯಲ್‌ ಕಾರ್ತಿಕ ದೀಪಂ ಸೀರಿಯಲ್‌ ಮಾಡಿರೋ ಮನೋಜ್‌ ಆಗಾಗ ಬೆಂಗಳೂರಿಗೆ ಬರ್ತಾ ಇರ್ತಾರೆ. 15 ದಿವಸ ಬೆಂಗಳೂರಿಗೆ ಬಂದಾಗ ಮಲ್ಲಮ್ಮನ ವೀಡಿಯೋ ಮಾಡೋದು ಟೈಮ್‌ ಪಾಸ್‌ ಮಾಡೋದು ಮಾಡ್ತಿರ್ತಾರೆ.

ಫಸ್ಟ್‌ ಮೀಟ್‌ ಆದಾಗ ನಾರ್ಮಲ್‌ ಆಗೇ ಇದ್ದರಂತೆ ಮಲ್ಲಮ್ಮ ಕೊನೆಗೆ ತುಂಬಾ ಇಷ್ಟವಾದ್ರಂತೆ. ಬೋಟಿಕ್‌ನಲ್ಲಿ ಕೆಲಸ ಮಾಡ್ತಿರೋ ಮಲ್ಲಮ್ಮನ ಜತೆ ಮನೋಜ್‌ ಎಲ್ಲಾ ಟೈಮ್‌ನಲ್ಲೂ ರೀಲ್ಸ್‌ ಮಾಡಲ್ಲ. ಬೆಳಗ್ಗೆ ಹಾಗೂ ಸಂಜೆ ಫ್ರೀ ಇರಬೇಕಾದ್ರೆ ರೀಲ್ಸ್‌ ಮಾಡೋದು. ಈಗೇ ಫ್ರೀ ಟೈಮ್‌ನಲ್ಲಿ ವೀಡಿಯೋ ಮಾಡ್ತಾರೆ. ಅವ್ರಿಗೆ ಪಲ್ಲವಿ ಮೇಡಂ ಸ್ವಂತ ಮನೆ ಕೂಡ ಮಾಡಿಕೊಟ್ಟಿದ್ದಾರೆ. 10 ವರ್ಷದಿಂದ ಮಲ್ಲಮ್ಮ ಪಲ್ಲವಿ ಅವ್ರ ಜೊತೆಗೆ ಇದ್ದಾರೆ. ಯಾರಾದ್ರು ಪಲ್ಲವಿ ಮೇಡಂಗಿಂತ ಹೆಚ್ಚು ಸಂಬಳ ಕೊಡ್ತಾರೆ ಅಂದ್ರು ಪಲ್ಲವಿ ಮೇಡಂನಾ ಬಿಟ್ಟು ಹೋಗೋಕೆ ಇಷ್ಟ ಪಡೋದಿಲ್ಲ ಮಲ್ಲಮ್ಮ.

ಅವ್ರು ಊರಲ್ಲಿ ಇರಬೇಕಾದ್ರು ಮನೆ ಸುಟ್ಟೋಗಿತ್ತು. ಇಲ್ಲಿ ಬೆಂಗಳೂರಲ್ಲಿ ವಾಸವಾಗಿದ್ದ ಮನೆ ಕೂಡ ಸುಟ್ಟೋಗಿತ್ತು. ಇಂತ ಟೈಮ್ ನಲ್ಲಿ ಪಲ್ಲವಿ ಮೇಡಂ ಮನೆ ಮಾಡಿಕೊಟ್ಟರು ಅಂತಾ ಪ್ರೀತಿ ವ್ಯಕ್ತಿಪಡಿಸ್ತಾರೆ.

for the .!

Rakesh arundi

Leave a Reply

Your email address will not be published. Required fields are marked *