Chaithanyananda Swamiji: ಚೈತನ್ಯಾನಂದ ಸ್ವಾಮೀಜಿ ಲೇಡಿ ಗ್ಯಾಂಗ್.!ಪಲ್ಲಂಗಕ್ಕೆ ಕಳಿಸೋ ಕಾರ್ಯ.! ಫಾರಿನ್ ಟೂರ್.!
ದಿಲ್ಲಿಯ ಶೃಂಗೇರಿ ಶಾರದಾ ಪೀಠದ ಇನ್ಸ್ಟಿಟ್ಯೂಟ್ ಡೈರೆಕ್ಟರ್ ಚೈತನ್ಯಾನಂದ ಸ್ವಾಮೀಜಿ ತನ್ನ ಪಲ್ಲಂಗದಾಸೆಗೆ ಲೇಡಿ ಗ್ಯಾಂಗ್ ಟೀಮ್ನಾ ಕಟ್ಟಿಕೊಂಡಿದ್ದ. ಈ ಗ್ಯಾಂಗ್ನ ಕೆಲಸವೇನೆಂದರೆ ಸ್ವಾಮೀಜಿಯ ಸೇವೆಗೆ ಬೆಡ್ ರೂಮ್ಗೆ ಕಳಿಸೋದು. ಇದೀಗ ಈ ಸ್ವಾಮೀಜಿ ಎಲ್ಲಿ ನಾಪತ್ತೆಯಾದ ಅನ್ನೋದನ್ನೇ ಪೊಲೀಸರು ಶೋಧ ನಡೆಸ್ತಿದ್ದಾರೆ. ನಮ್ಮ ದೇಶದಲ್ಲಿ ಸಾಧುಗಳು ಕಾವಿ ತೊಟ್ಟು ಕಾಮದಾಟ ಆಡ್ತಾ ಇರೋದನ್ನು ನಾವು ಪ್ರತಿನಿತ್ಯ ನೋಡ್ಥಾನೆ ಇದ್ದೇವೆ. ಅನೇಕರು ಪ್ರಾಮಾಣಿಕರಿದ್ದರೆ, ಇನ್ನು ಅನೇಕರು ಅಪ್ರಾಮಾಣಿಕರು ಹಾಗೂ ಕಾಮುಕರಾಗಿದ್ದಾರೆ. ಸದ್ಯ ಪೊಲೀಸರಿಗೆ ಸಿಕ್ಕಿರೋ ಸಾಕ್ಷ್ಯಗಳತ್ತ ದೃಷ್ಟಿ ನೆಟ್ಟರೆ ಈ ಸ್ವಾಮಿ ಸಖತ್ ಖತರ್ನಾಕ್.
ಸ್ವಾಮೀಜಿಯ ಕಾಮಕಾಂಡಕ್ಕೆ ಲೇಡಿಗ್ಯಾಂಗ್..!
ಈ ಕಿತಾಪತಿ ಸ್ವಾಮಿಜಿ ತನ್ನ ರಾಸಲೀಲೆಗೆ ಒಂದು ಲೇಡಿ ಗ್ಯಾಂಗ್ ಅನ್ನೇ ಕ್ರಿಯೇಟ್ ಮಾಡಿಕೊಂಡಿದ್ದ. ಭಲೇ ಕಿಲಾಡಿ ಸ್ವಾಮಿ ಈ ಲೇಡಿ ಗ್ಯಾಂಗ್ನಲ್ಲಿದ್ದವರಿಗೆಲ್ಲಾ ಒಂದು ಟಾಸ್ಕ್ ಕೊಟ್ಟಿದ್ದ. ಅದ್ರಲ್ಲಿ ಹಾಸ್ಟೆಲ್ ವಾರ್ಡನ್ ಸೇರಿದಂತೆ ಮೂರ್ನಾಲ್ಕು ಮಹಿಳೆಯರನ್ನು ಈ ಗ್ಯಾಂಗ್ನಲ್ಲಿ ನೇಮಕ ಮಾಡಿದ್ದ. ಈ ಬಾಬಾ ಏನು ಹೇಳ್ತಾನೋ ಅದನ್ನು ಚಾಚು ತಪ್ಪದೇ ಮಾಡ್ಬೇಕು. ಯಾವ ಹುಡುಗಿ ಕಡೆ ಬೊಟ್ಟು ಮಾಡಿ ತೋರಿಸ್ಥಾನೋ ಅವ್ರನ್ನು ಪುಸಲಾಯಿಸಿ, ಒಪ್ಪಿಸಿ, ಬಲವಂತಕ್ಕಾದ್ರೂ ಈತರನ ರೂಮಿಗೆ ಕರೆದುಕೊಂಡು ಬಿಡಬೇಕು.ಆಮೇಲೆ ಬಾಬಾನ ರೂಮ್ಗೆ ಕರ್ಕೊಂಡ್ ಹೋಗಿ ಬಿಡ್ತಾ ಇದ್ದರು. ಹಾಗೇ ಬಾಬಾ ರೂಮ್ನಿಂದ ರಿಟರ್ನ್ ಬಂದ್ಮೇಲೆ ಹುಡ್ಗೀರ ಮೊಬೈಲ್ ಚೆಕ್ ಮಾಡ್ತಾ ಇತ್ತು ಈ ಲೇಡಿ ಗ್ಯಾಂಗ್. ಒಂದ್ ವೇಳೆ ಮೊಬೈಲ್ನಲ್ಲಿ ಬಾಬಾ ಮಾಡಿರೋ ಮೆಸೇಜ್, ಸ್ಕ್ರೀನ್ ಶಾಟ್ಗಳು ಇದ್ರೆ ಅದೆಲ್ಲವನ್ನು ಡಿಲೀಟ್ ಮಾಡ್ತಿದ್ರು. ಸ್ವಾಮಿ ರೂಮ್ನಲ್ಲಿ ಏನಾದ್ರೂ ವಿಡಿಯೋ ಮಾಡ್ಕೊಂಡಿದ್ರೂ ಅದನ್ನು ಡಿಲೀಟ್ ಮಾಡ್ತಿದ್ರು.
ಸ್ವಾಮೀಜಿಗೆ ಸಹಕರಿಸಿದ್ರೆ ಫಾರಿನ್ ಟೂರ್..!
ಈ ಸ್ವಾಮೀಜಿಯ ಅಸಲಿ ಅಶ್ಲೀಲತೆ ಅಂದ್ರೆ, ಮೊಬೈಲ್ನಲ್ಲಿ ಮಾತನಾಡುತ್ತಾ ನಿಂತ್ರೆ ಬಾಯಲ್ಲಿ ಬರೀ ಕೊಳಕು ಪದಗಳೇ ಬರ್ತಾ ಇದ್ದವು. ನರನಾಡಿಗಳೆಲ್ಲಾ ಅಶ್ಲೀಲ ರಕ್ತವನ್ನೇ ತುಂಬಿಕೊಂಡಿದ್ದ. ಈ ಸ್ವಾಮೀಜಿ ಜೊತೆ ಚಾಟಿಂಗ್ ಮಾಡಿದ್ರೆ ಆ ಹುಡುಗಿಗೆ ಫಾರಿನ್ ಟೂರ್ ಫಿಕ್ಸ್. ಸ್ವಾಮೀಜಿ ಜತೆ ಫಾರಿನ್ ಟೂರ್ಗೆ ಒಪ್ಪಿದ್ರೆ ಮುಂದಿನ ಖರ್ಚನ್ನೆಲ್ಲಾ ಬಾಬಾ ಸ್ವಾಮೀಜಿಯೇ ನೋಡಿಕೊಳ್ತಿದ್ದ. ವಿರೋಧಿಸಿದ್ರೆ, ವೃತ್ತಿ ಜೀವನವನ್ನೇ ಹಾಳು ಮಾಡೋ ಧಮ್ಕಿ ಹಾಕ್ತಿದ್ದ ಅನ್ನೋ ಆರೋಪ ಕೇಳಿಬರ್ತಿದೆ.