SaiPallavi: ಬಿಕಿನಿಯಲ್ಲಿ ಸಾಯಿಪಲ್ಲವಿ ಕಂಡು ದಂಗಾದ ಫ್ಯಾನ್ಸ್‌..! ಮಾಡರ್ನ್‌ ಸೀತೆಯ ಅವತಾರಕ್ಕೆ ಫ್ಯಾನ್ಸ್‌ ಗರಂ

ಸಿಂಪಲ್‌ ಉಡುಗೆ,ತೊಡುಗೆಯ ಮೂಲಕ ಅಪಾರ ಅಭಿಮಾನಿಗಳನ್ನು ಗಿಟ್ಟಿಸಿರೋ ಸಾಯಿ ಪಲ್ಲವಿ ಇದೀಗ ಫ್ಯಾನ್ಸ್‌ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮೊದಲ ಬಾರಿಗೆ ಸಿಂಪಲ್‌ ಬ್ಯೂಟಿ ಸಾಯಿ ಪಲ್ಲವಿ ಬಿಕಿನಿಯಲ್ಲಿ ಪ್ರತ್ಯಕ್ಷವಾಗಿದ್ದಾರೆ.ಫಾರಿನ್‌ ಟೂರ್‌ನಲ್ಲಿ ಬಿಕಿನಿ ತೊಟ್ಟು ಮಿಂಚಿರೋ ಸಾಯಿ ಪಲ್ಲವಿ ಅಭಿಮಾನಿಗಳ ವಿರೋಧಕ್ಕೆ ಗುರಿಯಾಗಿದ್ದಾರೆ. ಸಿಂಪಲ್‌ ಸ್ಟಾರ್‌, ಸಿಂಪಲ್‌ ಕ್ವೀನ್‌, ಸಿಂಪಲ್‌ ಬ್ಯೂಟಿ ಎಂದೇ ಖ್ಯಾತಿ ಪಡೆದಿದ್ದ ಸಾಯಿ ಪಲ್ಲವಿ ಹಿಂಗ್ಯಾಕಾದ್ರೂ ಅಂತಾ ಫ್ಯಾನ್ಸ್‌ ತಲೆಕೆಡಿಸಿಕೊಂಡಿದ್ದಾರೆ.


ಬೇರೆ ನಟಿಯರಂತೆ ಮಾಡ್ರನ್‌ ಡ್ರೆಸ್‌ ಹಾಕದೆ, ತುಂಡುಡುಗೆ ಧರಿಸದೇ ಸಿಂಪಲ್‌ ಲುಕ್‌ನಲ್ಲಿ ಕಂಗೊಳಿಸ್ತಿದ್ದ ನಟಿಗೇನು ಬಂತು ಅಂತಾ ಕಮೆಂಟ್ಸ್‌ ಹಾಕ್ತಿದ್ದಾರೆ. ಏನ್‌ ಸಾಯಿ ಪಲ್ಲವಿ, ಹಿಂಗಾ ಶಾಕ್‌ ಕೊಡೋದು ಅಂತಾ ಫ್ಯಾನ್ಸ್‌ ಪ್ರಶ್ನೆ ಮಾಡ್ತಿದ್ದಾರೆ. ಇತ್ತೀಚಿನ ಫೋಟೋಗಳು ವೈರಲ್‌ ಆಗಿದ್ದು ಈ ಎಲ್ಲಾ ಟೀಕೆಗಳಿಗೆ ಕಾರಣವಾಗಿದೆ. ಸಾಂಪ್ರದಾಯಿಕ ಗೆಟಪ್‌ನಲ್ಲಿ ಇಷ್ಟ ಪಡ್ತಿದ್ದ ಅಭಿಮಾನಿಗಳಿಗೆ ಇದನ್ನು ಅರಗಿಸಿಕೊಳ್ಳಲಾಗ್ತಿಲ್ಲ.


ಸಾಂಪ್ರದಾಯಿಕ ಡ್ರೆಸ್ ನಲ್ಲೇ ನೋಡಿ ಅಭಿಮಾನಿಗಳು ಇಷ್ಟಪಟ್ಟಿದ್ದರು. ಆದರೇ, ಈಗ ಇದ್ದಕ್ಕಿದ್ದಂತೆ, ಬಿಕಿನಿ ಧರಿಸಿ ಪೋಸ್ ಕೊಟ್ಟಿದ್ದು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಸಾಯಿ ಪಲ್ಲವಿ ಹಿಂಗ್ಯಾಕಾದ್ರು ಅಂತಿದ್ದಾರೆ.ಸದಾ ಕಾಲ ಸೀರೆಯಲ್ಲಿ ಟ್ರೆಡಿಷನಲ್ ಡ್ರೆಸ್ನಲ್ಲಿ ಮಿಂಚುವ ನಟಿ ಈಕೆ, ಆದರೆ, ಈಗ ಏಕ್ಧಮ್ ತುಂಡು ಬಟ್ಟೆ ಹಾಕೊಂಡಿರೋ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಲ್ಚಲ್ ಎಬ್ಬಿಸಿದೆ.


ಇವತ್ತಿಗೂ ಸಾಯಿ ಪಲ್ಲವಿಯನ್ನ ತುಂಬಾ ಜನ ಇಷ್ಟ ಪಡೋದೆ ಆಕೆ ಧರಿಸೋ ಬಟ್ಟೆಗೋಸ್ಕರ.. ಸಿನಿಮಾನೇ ಆಗ್ಲಿ, ಯಾವುದೇ ಇವೆಂಟ್ ಆಗ್ಲಿ ಇಲ್ಲಿತನಕ ಸಾಯಿ ಪಲ್ಲವಿ ಗ್ಲಾಮರಸ್ ಡ್ರೆಸ್ ಅಲ್ಲ ಮಾಡರ್ನ್ ಡ್ರೆಸ್ನಲ್ಲೂ ಕಾಣಿಸಿಕೊಂಡಿಲ್ಲ. ಒಂದು ಲಂಗ ದಾವಣಿಯಲ್ಲಿ ಮಿಂಚ್ತಿದ್ದ ಸಾಯಿ ಪಲ್ಲವಿ ಬಿಕಿನಿಯಲ್ಲಿ ಮಿಂಚ್ತಿರೋದೆ ಟಾಕ್‌ ಆಫ್‌ ದಿ ಟೌನ್‌ ಆಗಿದೆ.
ಇತ್ತೀಚೆಗೆ ರಾಮಾಯಣ ಸಿನಿಮಾದಲ್ಲಿ ಸೀತೆ ಪಾತ್ರದಲ್ಲಿ ಅಭಿನಯಿಸ್ತಿರೋ ಸಾಯಿ ಪಲ್ಲವಿ ಈ ಡ್ರೆಸ್‌ನಲ್ಲಿ ವೈರಲ್‌ ಆಗ್ತಿದ್ದರೆ, ಆ ಪಾತ್ರವನ್ನು ಹೇಗೆ ಜೀವಿಸೋದು ಅನ್ನೋದೆ ಅಭಿಮಾನಿಗಳ ಪ್ರಶ್ನೆ.

Rakesh arundi

Leave a Reply

Your email address will not be published. Required fields are marked *