Daisy Bopanna:13 ವರ್ಷಗಳ ಬಳಿಕ ಮತ್ತೆ ಕನ್ನಡ ನಿಸಿ ರಂಗಕ್ಕೆ ಕಂಬ್ಯಾಕ್ ಆದಾ ಡೈಸಿ ಬೋಪಣ್ಣ
ಕೆಲವು ನಟಿಯರು ಕನ್ನಡ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಇನ್ನು ಕೆಲವರು ಪರಭಾಷೆಯ ಕಡೆಗೆ ಮುಖ ಮಾಡಿ ಅಲ್ಲೇ ಉಳಿದುಕೊಂಡಿದ್ದಾರೆ. ಮತ್ತೆ ಕೆಲವರು ಮದುವೆ ಬಳಿಕ ನಟನೆಯಿಂದಲೇ ಅಂತರ ಕಾಯ್ದುಕೊಂಡಿದ್ದಾರೆ. ಅಂತಹವರಲ್ಲಿ ‘ಗಾಳಿಪಟ’ ಸಿನಿಮಾದ ನಾಯಕಿ ಡೈಸಿ ಬೋಪಣ್ಣ ಕೂಡ ಒಬ್ಬರು. ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ಈ ನಟಿ ಸಿನಿಮಾಗಳಿಂದ ದೂರ ಉಳಿದು ದಶಕವೇ ಆಗಿತ್ತು.
ಕೊಡಗಿನ ಬೆಡಗಿ ಡೈಸಿ ಬೋಪಣ್ಣ 13 ವರ್ಷಗಳ ಬಳಿಕ ಮತ್ತೆ ಕನ್ನಡ ನಿಸಿ ರಂಗಕ್ಕೆ ಕಂಬ್ಯಾಕ್ ಆಗಿದ್ದಾರೆ. ಸದ್ಯ ಕನ್ನಡದ ಬೀರ್ ಬಲ್ 02 ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಡೈಸಿ ಯಾವ ಸಿನಿಮಾಗಳಲ್ಲೂ ಕಾಣಿಸಿಕೊಂಡಿಲ್ಲ. ಅವರು ಕೊನೆಯದಾಗಿ ನಟಿಸಿದ ಕನ್ನಡ ಸಿನಿಮಾವೆಂದರೆ ಅದು ಕ್ರೇಜಿಲೋಕ.
2012ರಲ್ಲಿ ಈ ಸಿನಿಮಾ ತೆರೆಕಂಡಿತ್ತು. ಆ ನಂತರ ಡೈಸಿ ಯಾವ ಸಿನಿಮಾದಲ್ಲೂ ನಟಿಸಿರಲಿಲ್ಲ. ಈಗ ಬರೋಬ್ಬರಿ 13 ವರ್ಷಗಳ ನಂತರ ಡೈಸಿ ಬೋಪಣ್ಣ ಕನ್ನಡ ಸಿನಿಮಾವೊಂದರಲ್ಲಿ ನಟಿಸಿದ್ದಾರೆ. ಅದು ಬೀರ್ ಬಲ್ 02. ಶ್ರೀನಿ ನಿರ್ದೇಶನದ ಬೀರಬಲ್-2 ಸಿನಿಮಾದಲ್ಲಿ ಡೈಸಿ ಬೋಪಣ್ಣ ನಟಿಸಿದ್ದು, ಈಗಾಗಲೇ ತಮ್ಮ ಭಾಗದ ಚಿತ್ರೀಕರಣ ಮುಗಿಸಿದ್ದಾರೆ. ಡೈಸಿ ಕನ್ನಡ, ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ ‘ಗಾಳಿಪಟ’ ಚಿತ್ರದ ಮೂಲಕ ಮನೆ ಮಾತಾಗಿದ್ದರು.