Geetha Shivarajkumar:ಇನ್ಮುಂದೆ ಚುನಾವಣೆಗೆ ಸ್ಪರ್ಧೆ ಮಾಡಲ್ಲ –ಗೀತಾ ಶಿವರಾಜ್‌ಕುಮಾರ್
ಪಾಲಿಟಿಕ್ಸ್ ಇಸ್ ದಿ ಲಾಸ್ಟ್ ಸ್ಟಾಪ್ ಆಫ್ ಸ್ಕೌಂಡ್ರಲ್ಸ್..!ಈ ಮಾತಿನ ತಾತ್ಪರ್ಯ ಏನು ಅನ್ನೋದು ನಿಮಗೆಲ್ಲಾ ತಿಳಿದಿದೆ ಎಂದೇ ಭಾವಿಸುತ್ತೇವೆ. ರಾಜಕೀಯ ಎಲ್ಲರಿಗೂ ರುಚಿಸೋದಿಲ್ಲ. ಇಲ್ಲಿ ನೆಲೆ ಊರಬೇಕಾದ್ರೆ ಕೆಲವು ತಂತ್ರ, ಪ್ರತಿತಂತ್ರಗಳು, ಚಾಣಕ್ಯನ ನೀತಿಗಳು, ಹೇಗೆ ನರಿ ಬುದ್ಧಿಯ ಉಪಾಯ ಮಾಡ್ಬೇಕು ಅನ್ನೋ ಚಾಣಾಕ್ಷತನ ಕೂಡ ಇರಬೇಕು.ಇದೀಗ 2024 ರ ಶಿವಮೊಗ್ಗ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ನಿಂದ ನಿಂತು ಸೋತಿದ್ದ ದೊಡ್ಮನೆಯ ಸೊಸೆ ಗೀತಾ ಶಿವರಾಜ್‌ಕುಮಾರ್ ಇನ್ಮುಂದೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡೋದಿಲ್ಲ ಎಂದು ಘೋಷಣೆ ಮಾಡಿದ್ದಾರೆ.
ಸಾಕಾಯ್ತು ರಾಜಕೀಯ.! ಹಿಂದೆ ಸರಿದ ಗೀತಾ ಶಿವರಾಜ್‌ಕುಮಾರ್
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಶ್ವೇತಾ ಬಂಡಿ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಗೀತಾ ಶಿವರಾಜ್ ಕುಮಾರ್, ನಾನು ಚುನಾವಣೆಗಳಲ್ಲಿ ಸ್ಪರ್ಧಿಸಲ್ಲ. ಆದರೆ ನಿಮ್ಮೆಲ್ಲರ ಜೊತೆ ನಿಲ್ಲುತ್ತೇನೆ. ಮುಂದಿನ ಚುನಾವಣೆಗೆ ಬಂದು ಪ್ರಚಾರ ಮಾಡುತ್ತೇನೆ ಎಂದು ಹೇಳಿದರು. ಮಹಿಳೆಯರು ಯಾರೂ ಅಬಲೆಯೆರಲ್ಲ, ಎಲ್ಲರೂ ಸಬಲೆಯರು. ಮಹಿಳೆಯರಿಗೆ ಶಕ್ತಿ ನೀಡಿದರೆ ಎಂತಹ ಕೆಲಸವನ್ನಾದರೂ ಮಾಡುತ್ತಾರೆ. ಇನ್ನು ನಿಮಗೆ ಯಾವುದೇ ಸಮಸ್ಯೆ, ಕಷ್ಟಗಳಿದ್ದರೂ ಸಚಿವ ಮಧು ಬಂಗಾರಪ್ಪ ಅವರನ್ನು ಹಿಡಿದುಕೊಂಡು ಕೆಲಸ ಮಾಡಿಸಿಕೊಳ್ಳಿ ಎಂದು ಹೇಳಿದರು.