Bengaluru: ಹಿಂದಿವಾಲ ಗಾಂಚಾಲಿ.! ಕನ್ನಡ್ ಗೊತ್ತಿಲ್ಲ.!ಪೊಲೀಸರ ಕ್ಲಾಸ್.!ಕುಡಿದು ದಾಂಧಲೆ
ಎಲ್ಲಿಂದಲೋ ಬಂದ ಫರ್ಡಿನಾಂಡ್ ಕಿಟಲ್ ಅವ್ರು ಧಾರವಾಡದಲ್ಲೇ ನೆಲೆಸಿ ಕನ್ನಡ ಮಣ್ಣಿನ ವಾಸನೆ ಸವಿದು, ಕನ್ನಡಿಗರ ಪ್ರೀತಿಗೆ ಮನಸೋತು ಕನ್ನಡವನ್ನೇ ಹಾಡಿ ಹೊಗಳಿ ಕನ್ನಡ ನಿಘಂಟನ್ನೇ ಬರೆದರು. ಆದ್ರೆ, ದುರಹಂಕಾರಿ ಉತ್ತರ ಭಾರತದ ಕೆಲವರು, ಇಲ್ಲೇ ನೆಲೆಸಿ, ಇಲ್ಲಿನ ಅನ್ನ ತಿಂದು, ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳಿಗೆ ಒಳ್ಳೆ ಬದುಕು ಕಟ್ಟಿ ಕೊಟ್ಟರು ಕೂಡ ಕರ್ನಾಟಕದ ಬಗ್ಗೆಯಾಗಲಿ, ಕನ್ನಡದ ಬಗ್ಗೆಯಾಗಲಿ ಅಕ್ಕರೆಯೂ ಇಲ್ಲ, ಪ್ರೀತಿಯೂ ಇಲ್ಲ, ಸೌಜನ್ಯಕ್ಕೆ ಕನ್ನಡದ ಬಗ್ಗೆ ಕಿಂಚಿತ್ತೂ ಗೌರರವೂ ಇಲ್ಲ.
ಹೊಟ್ಟೆಪಾಡಿಗೆ ಅಂತಾ ಐಟಿ ಸಿಟಿ ಬೆಂಗಳೂರಿಗೆ ಬರೋ ಹಿಂದಿ ಭಾಷಿಗರ ದರ್ಪ ದವಲತ್ತು ಡಬಲ್ ಆಗ್ತಿದೆ. ರಾಜಧಾನಿಯಲ್ಲಿ ತಾವೂ ಮಾಡಿದ್ದೇ ಆಟ ಎನ್ನವುಂತಾಗಿದೆ. ಕನ್ನಡ ಮಾತಾಡಿ ಎಂದರೆ ಉದ್ಧಟತನ ತೋರಿದ್ದಲ್ಲದೇ, ಹೊಯ್ಸಳನಾದ್ರೂ ಕರೆಸಿ, ಯಾರನ್ನಾದ್ರೂ ಕರೆಸಿ ಎಂದು ಸೊಕ್ಕಿನಿಂದ ಮಹಿಳಾ ಪೊಲೀಸ್ ವಿರುದ್ಧವೇ ಹರಿಹಾಯ್ದಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಈಗಾಗ್ಲೇ ಈ ವ್ಯಕ್ತಿಯೋರ್ವನನ್ನು ಬೆಂಗಳೂರು ಪೊಲೀಸರು ಇಂದಿರಾ ನಗರದಲ್ಲಿ ಬಂಧಿಸಿದ್ದಾರೆ. ಕನ್ನಡ ಬರ್ತಾ ಇಲ್ಲ.. ಕನ್ನಡ ಬರ್ತಾ ಇಲ್ಲ.. ಹಿಂದಿ ಮೇ ಬೋಲೋ.. ಹಿಂದಿ ಮೇ ಬೋಲೋ.. ಕನ್ನಡ ಬರ್ತಾ ಇಲ್ಲ.. ಕನ್ನಡ ಬರ್ತಾ ಇಲ್ಲ ಅಂತಾ ಪೊಲೀಸರ ವಿರುದ್ಧವೇ ಕಿರುಚಾಡಿರೋ ದೃಶ್ಯಗಳು ಕನ್ನಡಿಗರನ್ನು ಕೆರಳಿಸ್ತಾ ಇದೆ. ಕಂಠಮಟ್ಟ ಕುಡಿದಿದ್ದ ವ್ಯಕ್ತಿಯೋರ್ವ ಡ್ಯೂಟಿಯಲ್ಲಿದ್ದ ಮಹಿಳಾ ಪೊಲೀಸರೊಬ್ಬರ ಜೊತೆ ಅನುಚಿತವಾಗಿ ವರ್ತಿಸಿರೋ ಘಟನೆ ಇಂದಿರಾನಗರದಲ್ಲೆ ತಡರಾತ್ರಿ ನಡೆದಿದ್ದುಈತನ ವರ್ತನೆಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗ್ತಿದೆ.
ಕನ್ನಡ ಬರಲೇಬೇಕು ಅಂತಾ ಕನ್ನಡಿಗರೇನೂ ಪಟ್ಟು ಹಿಡಿದು ಕೂತಿಲ್ಲ. ಹಾಗಂತ ಎಷ್ಟು ಸಾರಿ ಸಹಿಷ್ಣುಗಳಾಗಿ ಇರಬೇಕು ಅನ್ನೋದೆ ನಮ್ಮ ಪ್ರಶ್ನೆ. ಬಂದವ್ರೆಲ್ಲಾ ಸಿಲಿಕಾನ್ ಸಿಟಿಯಲ್ಲಿ ಲಕ್ಷಗಟ್ಟಲೆ ಕಾಸು ಎಣಿಸಿ ಇಲ್ಲಿನ ನೆಲದ ಸಂಸ್ಕೃತಿಗೆ ಬೆಲೆ ಕೊಡದೇ ಇದ್ದರೆ ಎಂತವ್ರಿಗಾದ್ರೂ ರೋಷ ಉಕ್ಕಿ ಬರುತ್ತೆ.
ಡ್ರಿಂಕ್ ಪಾರ್ಟಿ.! ಪೊಲೀಸರಿಗೆ ಅವಾಜ್
ಈ ಘಟನೆ ನಡೆದಿದ್ದು, ಸಿ.ವಿ.ರಾಮನ್ ನಗರದ ವ್ಯಾಪ್ತಿಯ ಇಂದಿರಾನಗರದಲ್ಲಿ. ಜೀವನ್ ಭೀಮಾ ನಗರ ಸಂಚಾರಿ ಠಾಣೆಯ ಪೊಲೀಸರು ಸೆಪ್ಟೆಂಬರ್ 25 ರ ತಡರಾತ್ರಿ 100 ಫೀಟ್ ರಸ್ತೆಯಲ್ಲಿ ಡ್ರಿಂಕ್ ಅಂಡ್ ಡ್ರೈವ್ ನ ಪರೀಶೀಲನೆ ನಡೆಸ್ಥಾ ಇದ್ದರು. ಈ ವೇಳೆ ಆದಿತ್ಯ ಅಗರ್ವಾಲ್ ಎನ್ನುವ ವ್ಯಕ್ತಿ, ಪರಿಶೀಲನೆಗೆ ಸಹಕರಿಸದೇ ಉದ್ದಟತನವನ್ನು ತೋರಿದ್ದಲ್ಲದೇ ಏರುದನಿಯಲ್ಲೇ ಮಾತನಾಡಿದ್ದಾನೆ. ಆತನನ್ನು, ಇಂದಿರಾ ನಗರ ಪೊಲೀಸರು ಬಂಧಿಸಿ, ಜೈಲಿಗೆ ಅಟ್ಟಿದ್ದಾರೆ. ಲೇಡಿ ಪಿಎಸ್ಐ ಮೇಲೆ ಈ ಪರಿಯಾಗಿ ಹರಿಹಾಯುವ ಈ ವ್ಯಕ್ತಿ ಅದೆಷ್ಟು ಎಣ್ಣೆ ಹೊಟ್ಟೆಗೆ ಇಳಿಸಿರಬೇಕು ಅನ್ನೋದು ಗೊತ್ತಾಗುತ್ತೆ.
ಘಟನೆ ವೇಳೆ ಏನಾಯ್ತು..!?
ಕರ್ತವ್ಯದಲ್ಲಿ ಮಹಿಳಾ ಪಿಎಸ್ಐ ಕವಿತಾ ಮತ್ತು ಇತರ ಸಿಬ್ಬಂದಿಗಳು ಇದ್ದರು. ಆ ವೇಳೆ, ವರ್ನಾ ಕಾರಿನಲ್ಲಿ ಬರುತ್ತಿದ್ದ ಆದಿತ್ಯ ಅಗರ್ವಾಲ್, ಪೊಲೀಸರು ತಪಾಸಣೆ ನಡೆಸುತ್ತಿರುವುದನ್ನು ನೋಡಿದ್ದಾನೆ. ಕೂಡಲೇ, ವ್ಯಾಲೆಟ್ ಡ್ರೈವರ್ ನನ್ನು ಕರೆಸಿಕೊಂಡಿದ್ದಾನೆ. ಅದನ್ನು ಗಮನಿಸಿದ ಪೊಲೀಸರು, ಆತನನ್ನೇ ಬರಲು ಸೂಚಿಸಿದ್ದಾರೆ. ಅಲ್ಲಿಗೆ ಬಂದ ಆದಿತ್ಯ ಅಗರ್ವಾಲ್ ಗೆ, ತಪಾಸಣೆ ಮಾಡಬೇಕು ಎಂದು ಬ್ಲೋವರ್ ಮೆಷಿನ್ ನಲ್ಲಿ ಉಸಿರು ಊದಲು ಹೇಳಿದ್ದಾರೆ. ಆ ವೇಳೆ, ಬ್ಲೋ ಮಾಡಲು ಆತ ನಿರಾಕರಿಸಿದ್ದಾನೆ. ಜೊತೆಗೆ, ಮಹಿಳಾ ಪೊಲೀಸರಿಗೆ ಆವಾಜ್ ಹಾಕಲು ಶುರು ಮಾಡಿದ್ದಾನೆ. ಹಿಂದಿ, ಇಂಗ್ಲಿಷ್ ಮಾತನಾಡು ಎಂದು ಪೊಲೀಸರಿಗೆ ಕೂಗಾಡಲು ಆರಂಭಿಸಿದ್ದಾನೆ.
ಇನ್ನು ಮಹಿಳಾ ಪಿಎಸ್ಐ ಕನ್ನಡದಲ್ಲಿ ಮಾತನಾಡಿದ್ದಕ್ಕೆ , ಕನ್ನಡ ಯಾವನಿಗೆ ಬರುತ್ತೆ, ಹಿಂದಿ..ಹಿಂದಿ ಎಂದು ಫುಲ್ ಸೀನ್ ಕ್ರಿಯೇಟ್ ಮಾಡಿ ಅರಚಲು ಆರಂಭಿಸಿದ್ದಾನೆ. ಒಂದು ಹಂತಕ್ಕೆ, ಮಹಿಳಾ ಪೊಲೀಸ್ ಮೇಲೆ ನುಗ್ಗಲು ಹೋಗಿದ್ದಾನೆ. ನೀವು ಕುಡಿದಿಲ್ಲ ಎಂದ ಮೇಲೆ, ಬ್ಲೋ ಮಾಡಲು ನಿಮಗೇನು ಸಮಸ್ಯೆ ಎಂದು ಶಾಂತವಾಗಿ ಪೊಲೀಸರು ಹೇಳುತ್ತಿದ್ದರೂ, ಅದ್ಯಾವುದಕ್ಕೂ ಬೆಲೆಕೊಡದೇ, ಹಿಂದಿಯಲ್ಲಿ ದರ್ಪ ತೋರಲು ಆರಂಭಿಸಿದ್ದಾನೆ. ಈತ, ಅರಚಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ಕರ್ತವ್ಯ ನಿರ್ವಹಣೆಗೆ ತೊಂದರೆ ಕೊಟ್ಟ ಹಿನ್ನಲೆಯಲ್ಲಿ ಈತನ ವಿರುದ್ದ ದೂರು ದಾಖಲಾಗಿದೆ. ಸದ್ಯ, ಇಂದಿರಾ ನಗರ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಈ ರೀತಿಯ ವಿದ್ಯಮಾನಗಳು, ನಗರದ ಕೆಲವೊಂದು ಭಾಗದಲ್ಲಿ ವಿಪರೀತ ಎನ್ನುವ ಮಟ್ಟಿಗೆ ನಡೆಯುತ್ತಿವೆ. ಇನ್ನು ಮುಂದಾದ್ರೂ ನಾರ್ತಿಸ್ಟ್ಗಳಿಗೆ ತಕ್ಕ ಪಾಠ ಕಲಿಸಬೇಕು ಅಂತಾ ಹಲವರು ತರಹೇವಾರಿ ಕಮೆಂಟ್ಸ್ ಗಳನ್ನು ಹಾಕ್ತಿದ್ದಾರೆ.
ಕಾನೂನು ಪಾಲನೆಗೆ ಅಡ್ಡಿಪಡಿಸುವುದಲ್ಲದೆ, ಸ್ಥಳೀಯ ಭಾಷೆ ಮತ್ತು ಪೊಲೀಸ್ ಅಧಿಕಾರಿಯೊಂದಿಗೆ ಅನುಚಿತವಾಗಿ ವರ್ತಿಸಿದ ಈ ಘಟನೆಯು ಬೆಂಗಳೂರಿನಲ್ಲಿ ಸ್ಥಳೀಯರ ಸ್ವಾಭಿಮಾನಕ್ಕೆ ಧಕ್ಕೆ ತರುವಂತಿವೆ. ಇಂತದ್ದೇ ಘಟನೆಗಳು ಪದೇ ಪದೇ ನಡೆಯುತ್ತಿರುವುದಕ್ಕೆ ಮತ್ತೊಂದು ಉದಾಹರಣೆಯಾಗಿದೆ. ಇಂತಹ ಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕನ್ನಡ ಪರ ಹೋರಾಟಗಾರರು ಒತ್ತಾಯಿಸಿದ್ದಾರೆ.
ಕನ್ನಡ ನಾಡಲ್ಲೇ ಜಾಂಡಾ ಊರಿ, ಕನ್ನಡ್ ಗೊತ್ತಿಲ್ಲ ಎಂದು ಬೀಗುವ ಕೆಲವರಿಗೆ ಇಲ್ಲಿನ ಆಚಾರ ವಿಚಾರಗಳ ಬಗ್ಗೆ ತಿಳಿದುಕೊಳ್ಳಿ. ಉಂಡ ಮನೆಗೆ ಎರಡು ಬಗೆಯದೇ ಕರುನಾಡಿಗೆ ಋಣಿಯಾಗಿರಿ ಎನ್ನೋದಷ್ಟೆ ನಮ್ಮ ಸಲಹೆ. ಕಾವೇರಿ ನೀರು ಕುಡಿದ ಮೇಲೆ ಕನ್ನಡವನ್ನಾದ್ರೂ ಅಲ್ಪ ಸ್ವಲ್ಪ ಕಲೀರಿ ಎಂದಿದ್ದಾರೆ.
ಇತ್ತೀಚೆಗೆ ಟಿಬೇಟಿನ ವ್ಯಕ್ತಿಯೊಬ್ಬ ಸರಾಗವಾಗಿ ಕನ್ನಡ ಮಾತನಾಡುತ್ತಾ, ನನಗೆ ಕನ್ನಡ ಗೊತ್ತಿಲ್ಲ ಎಂಬುದೇನಿಲ್ಲ. ಒಂದು ಲೋಟ ಕಾವೇರಿ ನೀರು ಕುಡಿದರೆ ಸಾಕು, ನೀವು ಸರಾಗವಾಗಿ ಕನ್ನಡ ಮಾತನಾಡಬಲ್ಲಿರಿ ಎಂದು ಭಾಷೆ ಮೇಲಿನ ಪ್ರೀತಿ ವ್ಯಕ್ತಪಡಿಸಿದ್ದರು. ಈ ಮೂಲಕ ಬೆಂಗಳೂರಿನಲ್ಲೇ ಇದ್ದು ಕೊಂಡು ಉದ್ಯೋಗ, ಜೀವನ ರೂಪಿಸಿಕೊಂಡರೂ ಸ್ಥಳೀಯ ಭಾಷೆ ಮೇಲೆ ಪ್ರಹಾರ ಮಾಡುವವರಿಗೆ ಕಿವಿ ಮಾತು ಕೂಡ ಹೇಳಿದ್ದರು. ಇಂತಹ ಘಟನೆಗಳು ಇದೀಗ ಎಲ್ಲರಿಗೂ ಮಾದರಿಯಾಗುತ್ತವೆ.