Raichur: ಓಟದ ಸ್ಪರ್ಧೆ ಹೆಸ್ರಲ್ಲಿ ಧೋಖಾ.!ಖತರ್ನಾಕ್‌ ಕಳ್ಳರು.!

ಇತ್ತೀಚೆಗೆ ನಂಬೋರಿದ್ರೆ ಹೇಗೆ ಬೇಕಾದ್ರು ಯಾಮಾರಿಸಿ ದುಡ್ಡು ಮಾಡಬಹುದು ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ಅದಕ್ಕೆ ಕಣ್ಣಾರೆ ಕಂಡ್ರು ಪ್ರಾಮಾಣಿಸಿ ನೋಡಬೇಕು. ರಾಯಚೂರಿನಲ್ಲಿ ರಾಷ್ಟ್ರ ಮಟ್ಟದ ಓಟದ ಸ್ಪರ್ಧೆ ಇದೆ ಎಂದು ಯಾಮಾರಿಸಿ ಫ್ಲೆಕ್ಸ್‌ ಹಾಕಿ ಮಹಾವಂಚನೆ ಮಾಡಿದ್ದಾರೆ. ಈಗೂ ಹಣ ಮಾಡಬಹುದೇ ಎಂದು ಪೊಲೀಸರೇ ಶಾಕ್‌ ಆಗಿದ್ಧಾರೆ.

ರಾಯಚೂರಿನಲ್ಲಿ ಓಟದ ಸ್ಪರ್ಧೆಯ ನಕಲಿ ಫ್ಲೆಕ್ಸ್‌ ನಂಬಿ ಹಲವಾರು ಸ್ಪರ್ದಿಗಳು ಕೂಡಿಟ್ಟ ಕಾಸನ್ನು ಆಯೋಜಕ ಅಕೌಂಟ್‌ಗಳಿಗೆ ಹಾಕಿದ್ರು. ಬೇರೆ ಬೇರೆ ಜಿಲ್ಲೆ ಹಾಗೂ ರಾಜ್ಯದಿಂದ ಬಂದಿದ್ದ ಸ್ಪರ್ದಿಗಳು ತಲಾ 5 ಸಾವಿರ ಹಣ ಆಯೋಜಕರಿಗೆ ನೀಡಿ ಮೋಸ ಹೋಗಿದ್ದಾರೆ. ಅಸಲಿಗೆ ಕೊನೆಗೆ ಹಣ ಪಡೆದ ಆಯೋಜಕರು ಹೇಳದೇ ಕೇಳದೇ ಪರಾರಿಯಾಗಿದ್ದು, ದಿಕ್ಕು ತೋಚದೇ ಮೋಸ ಹೋದ ಸ್ಪರ್ದಿಗಳು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

ನಗರದ ಸ್ಟೇಶನ್ ರಸ್ತೆಯಲ್ಲಿ ಡಾ.ಅಬ್ದುಲ್ ಕಲಾಂ ಫೌಂಡೇಶನ್ ಮಸ್ಕಿ ಹೆಸರಿನಲ್ಲಿ ಒಂದು ಫ್ಲೆಕ್ಸ್ ಹಾಕಲಾಗಿತ್ತು. ಓಟದ ಸ್ಫರ್ಧೆಯ ಕುರಿತಾಗಿದ್ದ ಈ ಫ್ಲೆಕ್ಸ್ ನೋಡಿ ಹಲಾವರು ಸ್ಪರ್ಧಿಗಳು ನಂಬಿ ಹಣ ಕಟ್ಟಿ ಮೋಸ ಹೋಗಿದ್ದಾರೆ. ಫ್ಲೆಕ್ಸ್ನಲ್ಲಿ ರಾಯಚೂರಿನ ಮಸ್ಕಿಯಲ್ಲಿ ಓಟದ ಸ್ಪರ್ಧೆ ಏರ್ಪಡಿಸಲಾಗಿದ್ದು, ಸ್ಪರ್ಧಾಳುಗಳು ಐದು ಸಾವಿರ ಹಣ ಕೊಟ್ಟು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿ ಎಂದು ಬರೆಯಲಾಗಿತ್ತು.

ಈ ಐದು ಸಾವಿರ ರೂಪಾಯಿ ಪೈಕಿ ಹೆಸರು ನೊಂದಾಯಿಸಿಕೊಳ್ಳಲು ರೂ.1500 ಮುಂಗಡ ಹಣ ಕೊಡಬೇಕೆಂದು ಹೇಳಲಾಗಿತ್ತು. ಮೊದಲನೇ ಬಹುಮಾನ 6 ಲಕ್ಷ, ಎರಡನೇ ಬಹುಮಾನ 5 ಲಕ್ಷ ಹಾಗೆಯೇ ಏಳನೇ ಬಹುಮಾನ 50 ಸಾವಿರ. ಹೀಗೆ ಸಾರ್ವಜನಿಕರನ್ನು ಅಬ್ದುಲ್ ಕಲಾಂ ಫೌಂಡೇಶನ್ ಹೆಸರಿನ ಆಯೋಜಕರು ನಂಬಿಸಿದ್ದರು. ಇದೇ ಫ್ಲೆಕ್ಸ್ ನಂಬಿ ರಾಜ್ಯದ ನಾನಾ ಕಡೆಗಳಿಂದ ಯುವಕರು ಮತ್ತು ಯುವತಿಯರು ಆಯೋಜಕರಿಗೆ ಹಣ ನೀಡಿದ್ದರು. ಓಟದ ಸ್ಪರ್ಧೆ ನಡೆಯುತ್ತದೆಯೆಂದು ನಂಬಿ ರಾಯಚೂರಿಗೆ ಬಂದಿರುವ ಸ್ಪರ್ಧಾಳುಗಳು ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ.

ಚಾಲಾಕಿಗಳು ಯಾಮಾರಿಸಿದ್ದೇಗೆ..?
ಆಯೋಜಕರ ಮಾತು ನಂಬಿ ಬಂದಿದ್ದ ಸ್ಪರ್ಧಾಳುಗಳಿಗೆ ಕೊಟ್ಟಿದ್ದ ವಿಳಾಸವೇ ತಪ್ಪಾಗಿದೆ. ಕೊನೆಗೆ ಆಯೋಜಕರ ಫೋನ್‌ ಕೂಡ ಸ್ವಿಚ್‌ ಆಫ್‌ ಆಗಿದೆ. ತಡ ರಾತ್ರಿ ಅನೇಕ ಯುವಕರು, ಯುವತಿಯರು ರಾಯಚೂರಿಗೆ ಬಂದು ಕಂಗಾಲಾಗಿದ್ದಾರೆ‌. ಒಂದು ಕಡೆ ಆಯೋಜಕರು ಪರಾರಿಯಾಗಿ ವಂಚಿಸಿದ್ದರೆ, ಇನ್ನೊಂದು ಕಡೆ ರಾಯಚೂರಿನಲ್ಲಿ ಉಳಿದುಕೊಳ್ಳಲು ಅವರಿಗೆ ಜಾಗವೂ ಗೊತ್ತಾಗದೇ ಪರದಾಡಿದ್ದಾರೆ. ಈ ಮಧ್ಯೆ ತಡ ರಾತ್ರಿಯಾಗಿದ್ದರಿಂದ ಊರುಗಳಿಗೆ ಮರಳಲು ಬಸ್ಗಳಿಲ್ಲದೇ ಒದ್ದಾಡಿದ್ದಾರೆ. ಹೆಚ್ಚಿನದಾಗಿ ಕೂಲಿ ಮಾಡುವ ಮತ್ತು ಕಡು ಬಡತನದಲ್ಲಿರುವ ಮಕ್ಕಳೇ ಈ ನಕಲಿ ಓಟದ ಸ್ಪರ್ಧೆ ನಂಬಿ ವಂಚನೆಗೊಳಾದವ್ರು. ಪೊಲೀಸರು ಸದ್ಯ ಪ್ರಕರಣ ದಾಖಲಿಸಿ ಮಾಹಿತಿ ಕಲೆ ಹಾಕ್ತಿದ್ದಾರೆ. ವಂಚಕರ ಸೂಕ್ತ ಜಾಲ ಪತ್ತೆ ಹಚ್ಚಿ ವಂಚಕರನ್ನು ಬಂಧಿಸೋದಾಗಿ ಪೊಲೀಸರು ಭರವಸೆ ಕೂಡ ನೀಡಿದ್ದಾರೆ.

Rakesh arundi

Leave a Reply

Your email address will not be published. Required fields are marked *