Pakistan: ಪಾಕ್‌ಗೆ ಮತ್ತೆ ಮುಖಭಂಗ.! ಗಂಟೆಗಟ್ಟಲೆ ಪಾಕ್ ಪ್ರಧಾನಿ ಕಾಯಿಸಿದ ಟ್ರಂಪ್.!
ಪಾಕಿಸ್ತಾನ ಜಾಗತಿಕ ವೇದಿಕೆಗಳಲ್ಲಿ ತಲೆತಗ್ಗಿಸೋ ಘಟನೆಯೊಂದು ನಡೆದಿದೆ. ಭಾರತದ ಬಗ್ಗೆ ವಿಶ್ವಮಟ್ಟದ ವೇದಿಕೆಗಳ ಮುಂದೆ ನಿಂತು ಹಸಿ ಹಸಿ ಸುಳ್ಳು ಹೇಳಿ ಟೀಕೆಗೆ ಗುರಿಯಾಗ್ತಿರೋ ಪಾಕಿಸ್ಥಾನಕ್ಕೆ ಟ್ರಂಪ್ ಗಂಟೆಗಟ್ಟಲೆ ಕಾಯಿಸೋ ಮೂಲಕ ದೊಡ್ಡಣ್ಣನ ದರ್ಪ ಮೆರೆದಿದ್ದಾರೆ.
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಹಾಗೂ ಸೇನಾ ಮುಖ್ಯಸ್ಥ ಆಸಿಮ್ ಮುನೀರ್, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರನ್ನು ಭೇಟಿಯಾಗಲು ಅಮೆರಿಕ ತೆರಳಿದ್ದರು. ಆದರೆ ಟ್ರಂಪ್ ಭೇಟಿ ಮಾಡಲು ಗಂಟೆಗಟ್ಟಲೆ ಬಾಗಿಲ ಬಳಿಯೇ ಇಬ್ಬರೂ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಸಂಜೆ 5 ಗಂಟೆಗೆ ಸ್ವಲ್ಪ ಮೊದಲು ಷರೀಫ್ ಹೋಗಿದ್ದರು, ವೆಸ್ಟ್ ಎಕ್ಸಿಕ್ಯುಟಿವ್ ಅವೆನ್ಯೂ ಪ್ರವೇಶದ್ವಾರಕ್ಕೆ ಬಂದಿದ್ದರು. ಅಲ್ಲಿ ಹಿರಿಯ ಆಡಳಿತ ಅಧಿಕಾರಿಗಳು ಅವರನ್ನು ಸ್ವಾಗತಿಸಿದ್ದರು. ಅವರೊಂದಿಗೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಇದ್ದರು. ಓವಲ್ ಕಚೇರಿಯಲ್ಲಿ ಸಭೆ ನಡೆದಿದ್ದು, ಮಾಧ್ಯಮದವರಿಗೆ ಒಳಗೆ ಅವಕಾಶವಿರಲಿಲ್ಲ. ಇಸ್ಲಾಮಾಬಾದ್‌ನ ರಾಜತಾಂತ್ರಿಕ ಅಸಹಾಯಕತೆಯನ್ನು ಇಡೀ ಜಗತ್ತು ವೀಕ್ಷಿಸಿದ್ದು, ಉನ್ನತ ಮಟ್ಟದ ಸಭೆಗೋಸ್ಕರ ಎರಡೂ ಕಡೆಯವರು ನ್ಯೂಯಾರ್ಕ್‌ನಲ್ಲಿ ಬಹಳ ಸಮಯ ಕಾಯಬೇಕಾಯದ ಪರಿಸ್ಥಿತಿ ನಿರ್ಮಾಣವಾಗಿದ್ದನ್ನು ಭಾರತ ತನ್ನದೇ ಶೈಲಿಯಲ್ಲಿ ಬಣ್ಣಿಸ್ತಿದೆ.