Abhishek Sharma: ದಾಖಲೆ ಬರೆದ ಟೀಮ್‌ ಸ್ಫೋಟಕ ಬ್ಯಾಟ್ಸ್‌ಮನ್‌ ಅಭಿಶೇಕ್‌ ಶರ್ಮಾ

ಧಮ್‌ ಇದ್ದರೆ ಒಮ್ಮೆ ಅಭಿಶೇಕ್‌ ಶರ್ಮಾ ಕೆಣಕಿ ನೋಡು ಅನ್ನೋ ಮಾತು ಸದ್ಯ ಚಾಲ್ತಿಯಲ್ಲಿದೆ. ಯಾಕೆ ಅಂದ್ರೆ ಅಭಿಶೇಕ್‌ ಶರ್ಮಾ ಕೆಣಕೋದು ಅಷ್ಟು ಸುಲಭದ ಮಾತಲ್ಲ. ಏಷ್ಯಾಕಪ್‌ನಲ್ಲಿ ಹ್ಯಾಟ್ರಿಕ್‌ ಅರ್ಧಶತಕ ಬಾರಿಸಿ ಭರ್ಜರಿ ಪ್ರದರ್ಶನ ನೀಡ್ತಿರೋ ಅಭಿಶೇಕ್‌ ಸದ್ಯ ಭಾರತದ ಭವಿಷ್ಯದ ಕ್ರಿಕೆಟ್‌ಗೆ ಆಶಾಕಿರಣ. ಟಿ20 ಏಷ್ಯಾಕಪ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ನಿರ್ಮಿಸಿರೋ ಅಭಿಶೇಕ್‌ ಎಲ್ಲರ ಪಾಲಿಗೆ ಫೇವರಿಟ್‌ ಆಟಗಾರ ಕೂಡ ಹೌದು. ಮೊಹಮ್ಮದ್ ರಿಜ್ವಾನ್ ಮತ್ತು ವಿರಾಟ್ ಕೊಹ್ಲಿ ದಾಖಲೆ ಮುರಿದು, 282ಕ್ಕೂ ಹೆಚ್ಚು ರನ್ ಕಲೆಹಾಕಿ ಎಲೈಟ್ ಕ್ಲಬ್ ಸೇರಿರೋ ಅಭಿ ಬಗ್ಗೆ ಎಲ್ಲಾ ಕಡೆ ಟಾಕೋ ಟಾಕು.

ಶ್ರೀಲಂಕಾ ವಿರುದ್ಧದ ಸೂಪರ್ ಫೋರ್ ಪಂದ್ಯದಲ್ಲಿ 34 ರನ್ ಬಾರಿಸಿದ ಕೂಡಲೇ ಅಭಿಷೇಕ್ ಶರ್ಮಾ, ಟಿ20 ಏಷ್ಯಾಕಪ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಮುರಿದರು. ಈ ಸಾಧನೆ ಮಾಡುವ ಮೂಲಕ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಮತ್ತು ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರಂತಹ ಸ್ಟಾರ್ ಆಟಗಾರರ ದಾಖಲೆ ಮುರಿದು ಕ್ರಿಕೆಟ್‌ ಪ್ರಿಯರ ಫೇವರಿಟ್‌ ಆದ್ರು.

ಅಭಿಶೇಕ್‌ ಇದುವರೆಗೂ ಟೂರ್ನಿಮೆಂಟ್‌ನಲ್ಲಿ 282 ಕ್ಕೂ ಅಧಿಕ ರನ್‌ ಗಳಿಸಿದ್ದಾರೆ. ಯಾವುದೇ ಆಟಗಾರ ಇಲ್ಲಿವರೆಗೂ ಏಷ್ಯಾಕಪ್‌ ಟೂರ್ನಿಮೆಂಟ್‌ನಲ್ಲಿ ಗಳಿಸಿರದ ವೈಯಕ್ತಿಕ ಅಧಿಕ ಸ್ಕೋರ್‌ ಕೂಡ ಆಗಿದೆ. ಈ ಹಿಂದೆ, ರೋಹಿತ್ ಒಂದು ಟೂರ್ನಿಯಲ್ಲಿ 250 ರನ್ ಗಳಿಸಿದ್ದರೆ, ವಿರಾಟ್ ಕೊಹ್ಲಿ ನಾಲ್ಕು ಟಿ20 ಟೂರ್ನಿಗಳಲ್ಲಿ 250 ರನ್ ಗಳಿಸಿದ್ದಾರೆ. ಇದಲ್ಲದೆ, ಅಭಿಷೇಕ್ ಶರ್ಮಾ ಟಿ20 ಏಷ್ಯಾ ಕಪ್‌ನ ಒಂದೇ ಆವೃತ್ತಿಯಲ್ಲಿ 300 ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

Rakesh arundi

Leave a Reply

Your email address will not be published. Required fields are marked *