Chaithanyananda Swamiji: ಸ್ವಾಮೀಜಿ ರಾಸಲೀಲೆ.! ಲವ್ ಯು ಬೇಬಿ. ಸ್ವೀಟ್ ಗರ್ಲ್. ಅಶ್ಲೀಲ ಮೆಸೇಜ್.!ಯಾರ ಜತೆ ಮಲಗ್ತೀಯಾ.!
ಕಳ್ಳ ಸ್ವಾಮೀಜಿ ರಾಸಲೀಲೆ ಗೊತ್ತಾದ ತಕ್ಷಣ ಶೃಂಗೇರಿ ಆಡಳಿತ ಮಂಡಳಿ ಸ್ವಾಮೀಜಿಯನ್ನೇ ವಜಾ ಮಾಡಿದೆ. ರಹಸ್ಯ ಕ್ಯಾಮೆರಾಗಳು, ರಾತ್ರಿ ಮಂಚಕ್ಕೆ ಕರೀತಿದ್ದ ಕಳ್ಳ ಸ್ವಾಮೀಜಿಯ ಕಥೆ ಇದು. 300 ಪುಟಗಳ ಬೆಚ್ಚಿ ಬೀಳಿಸೋ ಸಾಕ್ಷಿ. ಸ್ವಾಮಿ ಚೈತನ್ಯಾನಂದ ಕಾಮದಾಟ ಸ್ಟೋರಿ ಕೇಳಿ ಇಡೀ ದೇಶದ ಶರಣರ ಸಮುದಾಯ ತಲೆತಗ್ಗಿಸುವ ಘಟನೆ ಇದು ಅಂತಾ ಛೀಮಾರಿ ಹಾಕಿದ್ದಾರೆ. ಅಸಲಿಗೆ ಈ ಸ್ವಾಮೀಜಿ ಮಾಡಿದ್ದೇನು.? ಈ ಸ್ವಾಮೀಜಿಗೆ ಒಬಮಾ, ಟ್ರಂಪ್ ಕೂಡ ಗೊತ್ತಾ..? ಅವ್ರೆಲ್ಲಾ ಮೆಚ್ಚುಗೆ ವ್ಯಕ್ತ ಪಡಿಸಿದ್ದ ಸ್ವಾಮೀಜಿ ಸಿಕ್ಕಿ ಬಿದ್ದಿದ್ದೇಗೆ ಅನ್ನೋದನ್ನು ಡಿಟೈಲ್ ಆಗಿ ಹೇಳ್ತಾ ಹೋಗ್ತೀನಿ.
ದಿಲ್ಲಿಯ ಪ್ರತಿಷ್ಟಿತ ಸಂಸ್ಥೆ ಶ್ರೀ ಶಾರದಾ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೆಜ್‌ಮೆಂಟ್‌ನಲ್ಲಿ ರಿಸರ್ಚ್ ಮ್ಯಾನೇಜ್‌ಮೆಂಟ್ ಎನ್ನುವ ಕೋರ್ಸ್ಗಳಿಗೆ. 70 ಕ್ಕೂ ಹೆಚ್ಚಿನ ಮಹಿಳಾ ವಿದ್ಯಾರ್ಥಿಗಳು ಇಲ್ಲಿ ಎರಡು ಬ್ಯಾಚ್‌ಗಳಲ್ಲಿ ಸ್ಟಡಿ ಮಾಡ್ತಾ ಇದ್ದರು. ಆದ್ರೆ, ಈ ಚೈತನ್ಯಾನಂದ ಸ್ವಾಮೀಜಿ ಸ್ಕಾಲರ್ ಪಡೆಯೋ ವಿದ್ಯಾರ್ಥಿನಿಯರನ್ನೇ ಟಾರ್ಗೆಟ್ ಮಾಡಿ, ಅವ್ರಿಗೆ ಅಶ್ಲೀಲ ಮೆಸೇಜ್ ಕಳಿಸೋ ಕೆಲಸ ಮಾಡ್ತಿದ್ದ. ರಾತ್ರಿ ಪ್ಲೀಜ್ ಕೋಣೆಗೆ ಬನ್ನಿ ಅಂತಾ ಒತ್ತಾಯ ಮಾಡ್ತಿದ್ದ. ಇದ್ಯಾವುದೂ ಕಟ್ಟು ಕಥೆಯಂತೂ ಅಲ್ಲ. ಆ ಸ್ವಾಮೀಜಿಯ ವಿರುದ್ಧ ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿರೋ ಭಯಾನಕ ಸಂಗತಿಗಳು.
ಯಾವಾಗ ವಿದ್ಯಾರ್ಥಿನಿಯರೆಲ್ಲಾ ರೊಚಿಗೆದ್ರೋ, ಆ ಸಂದರ್ಭದಲ್ಲೂ ಕೂಡ ವಾರ್ಡನ್‌ಗಳು, ಶಿಕ್ಷಕರು ಮೌನವಾಗಿರುವಂತೆ ಒತ್ತಡ ತಂದಿದ್ದರು ಅಂದ್ರೆ, ನಮ್ಮ ಸಮಾಜದಲ್ಲಿ ರಾಕ್ಷಸಕುಲ ಇನ್ನು ಜೀವಂತವಾಗಿದೆ ಅನ್ನೋದಕ್ಕೆ ಇದೇ ಸಾಕ್ಷಿ. ಈಗಾಗ್ಲೇ ಸ್ವಾಮೀಜಿಗೆ ಇದ್ದತಂಹ ಪವರ್ ಆಫ್ ಅಟಾರ್ನಿ ಕೂಡ ರದ್ದಾಗಿದೆ. ಸ್ವಾಮೀಜಿ ಎಸ್ಕೇಪ್ ಕೂಡ ಆಗಿದ್ದಾರೆ. 11 ಜನರ ಹೊಸ ಟೀಮ್ ಕೂಡ ರಚನೆ ಆಗಿದೆ. ಆದ್ರೆ, ಸ್ವಾಮೀಜಿಯ ಅಸಲಿ ಕಥೆ ಏನು ಅನ್ನೋದು ಜನ್ರಿಗೆ ಗೊತ್ತಾಗದಂತೆ ಮರೆಯಾಗಬಾರದಲ್ಲವೇ. ಅದಕ್ಕೆ ಈ ಸ್ಟೋರಿ.
ಯಾರೆಲ್ಲಾ ಅಸಹಾಯಕರು ಇರ್ತಾರೋ, ಅಂತವ್ರನ್ನು, ಬಡವ್ರ ಮಕ್ಕಳು ಚಂದ ಕಂಡ್ರೆ ಅಂತವ್ರ ಮೇಲೇ ಕಣ್ಣಾಕೋದನ್ನ ನಮ್ಮ ಸಮಾಜ ಹಿಂದಿನಿಂದ್ಲೂ ಮಾಡುತ್ತಲೇ ಬಂದಿದೆ.. ಇದೊಂದು ಕೆಟ್ಟ ಚಾಳಿ ಕೂಡ ಹೌದು. ಇಲ್ಲಿಯೂ ಕೂಡ ಸ್ವಾಮೀಜಿ ಇಂತ ಹೆಣ್ಣು ಮಕ್ಕಳಿಗೆ ಅಶ್ಲೀಲ ಸಂದೇಶಗಳನ್ನು ಕಳಿಸೋದು. ವಸತಿ ಗೃಹಕ್ಕೆ ವೆಲ್‌ಕಮ್ ಮಾಡೋದು. ಭದ್ರತೆಯ ಹೆಸ್ರಲ್ಲಿ, ಬಾಲಕಿಯರ ಹಾಸ್ಟೆಲ್‌ಗೂ ರಹಸ್ಯ ಕ್ಯಾಮೆರಾಗಳನ್ನು ಅಳವಡಿಸೋದು. ಈ ಎಲ್ಲಾ ಚೆಲ್ಲಾಟಗಳೇ ಈ ಸ್ವಾಮೀಜಿಯ ಲೀಲೆಗಳನ್ನು ಬಣ್ಣಿಸುತ್ತವೆ.
ಇನ್ನು ಒಬ್ಬ ವಿದ್ಯಾರ್ಥಿನಿಯನ್ನು ಅವಳ ಇಚ್ಛೆಗೆ ವಿರುದ್ಧವಾಗಿ ಹೆಸ್ರನ್ನೇ ಬದಲಾಯಿಸುವಂತೆ ಒತ್ತಾಯಿಸಲಾಗಿತ್ತು ಎನ್ನುವ ಅಂಶವೂ ತಿಳಿದುಬಂದಿದೆ. ಪಾಲಿಸದಿದ್ದರೆ ಪದವಿ ತಡೆಹಿಡಿಯುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಎಫ್‌ಐಆರ್ ನಲ್ಲಿ ಉಲ್ಲೇಖ ಮಾಡಲಾಗಿದೆ. , ವಿದ್ಯಾರ್ಥಿಗಳ ಪೋಷಕರನ್ನು ಸಹ ಮಧ್ಯಪ್ರವೇಶಿಸದಂತೆ ತಡೆಯಲಾಯಿತ್ತು ಎಂದು ಆರೋಪ ಮಾಡಲಾಗಿದೆ. ಸ್ವಾಮಿ ಚೈತನ್ಯಾನಂದ ಸರಸ್ವತಿ ಮತ್ತು ಅವರ ಸಹಚರರು ವಿದ್ಯಾರ್ಥಿನಿಯರನ್ನು ಲೈಂಗಿಕ ಮತ್ತು ಮಾನಸಿಕ ಕಿರುಕುಳಕ್ಕೆ ಒಳಪಡಿಸಿದ್ದರು ಅನ್ನೋ ಸ್ಫೊಟಕ ಮಾಹಿತಿ ಹೊರಗೆ ಬರ್ತಿದ್ದಂತೆ, ಅನುಯಾಯಿಗಳೆಲ್ಲಾ ಛೀಮಾರಿ ಹಾಕ್ತಿದ್ದಾರೆ.
ವಿಚಾರ ಬೆಳಕಿಗೆ ಬಂದ ತಕ್ಷಣ ಶೃಂಗೇರಿ ಮಠದ ಆಡಳಿತ ತಕ್ಷಣ ಸ್ವಾಮೀಜಿಯನ್ನು ವಜಾ ಮಾಡಿದೆ. ಕೇಸ್ ದಾಖಲಾಗುತ್ತಿದ್ದಂತೆಯೇ ಚೈತನ್ಯಾನಂದ ಸರಸ್ವತಿ ಸ್ವಾಮೀಜಿ ಪರಾರಿ ಆಗಿದ್ದಾರೆ. ಪೊಲೀಸರು ತಲಾಶ್ ಕೂಡ ನಡೆಸ್ತಾ ಇದ್ದು ತಕ್ಷಣ ಬಂಧಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇನ್ನು ಶಾರದಾ ಇನ್‌ಸ್ಟಿಟ್ಯೂಟ್‌ನ ನೆಲಮಾಳಿಗೆಯಲ್ಲಿ ವೋಲ್ವೋ ಕಾರು ಪತ್ತೆಯಾಗಿದ್ದು ನಕಲಿ ನಂಬರ್ ಪ್ಲೇಟ್ ಹೊಂದಿದೆ. ಈ ಬಗ್ಗೆಯೂ ಪ್ರತ್ಯೇಕ ದೂರು ದಾಖಲಾಗಿದ್ದು, ಸ್ವಾಮೀಜಿಯ ಪರ್ಸನಲ್ ಲೈಫ್ ಇನ್ನಷ್ಟು ಕ್ಯೂರಿಯಸ್ ಆಗಿದೆ. ಆರೋಪಿ ವಿದೇಶಕ್ಕೆ ಪಲಾಯನ ಮಾಡುವುದನ್ನು ತಡೆಯಲು ಲುಕ್ ಔಟ್ ನೋಟಿಸ್ ಕೂಡ ಹೊರಡಿಸಲಾಗಿದೆ.
ಇನ್ನು, ವಿಚಾರಣೆಯ ವೇಳೆ ಶ್ರೀ ಶಾರದಾ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್ಮೆಂಟ್‌ನಲ್ಲಿ ಇಡಬ್ಲ್ಯೂಎಸ್ ವಿದ್ಯಾರ್ಥಿವೇತನ ಪಡೆಯುತ್ತಿದ್ದ 32 ವಿದ್ಯಾರ್ಥಿನಿಯರ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದು, ಸ್ವಾಮೀಜಿ ನಿಂದನೀಯ ಭಾಷೆ, ಅಶ್ಲೀಲ ವಾಟ್ಸಾಪ್ ಮೆಸೇಜ್ ಮತ್ತು ಅನಗತ್ಯ ದೈಹಿಕ ಸಂಪರ್ಕ ಹೊಂದಿದ್ದರು ಎಂದು 17 ವಿದ್ಯಾರ್ಥಿನಿಯರು ನೇರಾನೇರ ಆರೋಪಿಸಿದ್ದಾರೆ.
ಅಸಲಿಗೆ ಈ ಸ್ವಾಮೀಜಿ ಕಾಮಕೇಳಿಯ ಕಥೆ ಇಂದಿನದ್ದಲ್ಲ. ಬಹಳ ವರ್ಷಗಳ ಹಿಂದೆಯೇ ಎಫ್‌ಐಆರ್ ಕೂಡ ದಾಖಲಾಗಿದೆ. ಆದ್ರೆ, ಯಾವುದೇ ಕ್ರಮ ತೆಗೆದುಕೊಂಡಿಲ್ಲ. 2016 ರಲ್ಲಿ ಚೈತನ್ಯಾನಂದ ಸರಸ್ವತಿ, ಹಾಗೂ ಪಾರ್ಥಸಾರಥಿ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದ ಯುವತಿಯೊಬ್ಬರು, ಅಲ್ಲಿ ನಡೆದ ಆಘಾತಕಾರಿ ಅನುಭವವನ್ನು ವಿವರಿಸಿದ್ದರು. ಘಟನೆಗಳು ನಡೆದಾಗ 20 ವರ್ಷ ವಯಸ್ಸಿನವಳಾಗಿದ್ದ ಆ ಯುವತಿ, 2016 ರಲ್ಲಿ ಸಲ್ಲಿಸಲಾದ ಎಫ್‌ಐಆರ್ನಲ್ಲಿ ತನ್ನ ಸಂಕಷ್ಟವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಚೈತನ್ಯಾನಂದನ ನಿರಂತರ ಕಿರುಕುಳದಿಂದಾಗಿ ಕೇವಲ ಎಂಟು ತಿಂಗಳ ನಂತರ ತಾನು ಸಂಸ್ಥೆಯಿಂದ ಹೊರಬರಬೇಕಾಗಿ ಬಂತು ಎಂದು ಅವರು ಬಹಿರಂಗಪಡಿಸಿದ್ದಾರೆ. ತನಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಲ್ಲದೆ, ಬೇಬಿ ಮತ್ತು ಸ್ವೀಟ್ ಗರ್ಲ್ ಮುಂತಾದ ಕೆಟ್ಟ ಪದಗಳಿಂದ ಸಂಬೋಧಿಸಿದ್ದಾನೆ ಎಂದು ಆರೋಪಿಸಿದ್ದಾಳೆ. ಆಕೆಯ ಹೇಳಿಕೆಯ ಪ್ರಕಾರ, ಇದು ನನ್ನ ಜೀವನದ ಅತ್ಯಂತ ಡಿಫಕಲ್ಟ್ ಟೈಮ್ ಆಗಿತ್ತಂತೆ. ನಾನು ಸಂಸ್ಥೆಗೆ ಸೇರಿದ ತಕ್ಷಣ, ಸ್ವಾಮಿ ನನಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಲು ಶುರು ಮಾಡಿದರು ಎಂದು ಹೇಳಿದ್ದಾಳೆ ಸಂಜೆ 6.30 ಕ್ಕೆ ತರಗತಿಗಳು ಮುಗಿದ ನಂತರ, ನನ್ನನ್ನು ತನ್ನ ಕಚೇರಿಗೆ ಕರೆದು ಕಿರುಕುಳ ನೀಡುತ್ತಿದ್ದರು. ನೀನು ತುಂಬಾ ಪ್ರತಿಭಾನ್ವಿತೆ ಹಾಗಾಗಿ ಎಲ್ಲಾ ವೆಚ್ಚವನ್ನು ಭರಿಸಿ ದುಬೈಗೆ ಅಧ್ಯಯನಕ್ಕಾಗಿ ಕರೆದೊಯ್ಯುವುದಾಗಿ ಹೇಳಿದ್ದರಂತೆ.
ನನಗೆ ಇದು ಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದ್ದೆ, ಆದರೆ ಅವರ ಸಿಬ್ಬಂದಿ ನನ್ನ ಮೇಲೆ ಒತ್ತಡ ಹೇರುತ್ತಲೇ ಇದ್ದರು. ಬಾಬಾ ನನ್ನ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದ ಮತ್ತು ಹಾಸ್ಟೆಲ್‌ನಲ್ಲಿ ಒಬ್ಬಂಟಿಯಾಗಿ ಇರುವಂತೆ ಒತ್ತಾಯಿಸುತ್ತಿದ್ದ ಎಂದು ಘೋರ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.
ನನಗೆ ಯಾರೊಂದಿಗೂ ಮಾತನಾಡಲು ಅವಕಾಶವಿರಲಿಲ್ಲ. ಅವರು ರಾತ್ರಿಯಲ್ಲಿ ನನಗೆ ಕರೆ ಮಾಡುತ್ತಿದ್ದರು. ನನ್ನ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ನನ್ನನ್ನು ಹೋಟೆಲ್ಗೆ ಕರೆದುಕೊಂಡು ಹೋಗಿ ಅಲ್ಲಿಯೇ ನನ್ನ ಜತೆ ಉಳಿಯುವ ಬಗ್ಗೆ ಮಾತನಾಡಿದ್ದರು, ಅದು ನನಗೆ ಭಯ ಹುಟ್ಟಿಸಿತ್ತು. ಹಾಗಾಗಿ ತನ್ನೆಲ್ಲಾ ವಸ್ತುಗಳನ್ನು ಬಿಟ್ಟು ಆ ಸಂಸ್ಥೆಯಿಂದ ಓಡಿ ಬಂದೆ ಎಂದು ಯುವತಿ ಹೇಳಿಕೊಂಡಿದ್ದಾರೆ. ಸ್ವಲ್ಪ ದಿನದ ಬಳಿಕ ನನ್ನನ್ನು ಪತ್ತೆ ಹಚ್ಚಿದ್ದರು. ಅವರನ್ನು ನನ್ನ ತಂದೆ ಓಡಿಸಿದ್ದರು.
ಅವರ ವಿರುದ್ಧ 2009 ಮತ್ತು 2016 ರಲ್ಲಿ ಪ್ರಕರಣಗಳು ದಾಖಲಾಗಿವೆ, ಆ ಪ್ರಕರಣಗಳಲ್ಲಿ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಅವರು ತಮ್ಮ ಪ್ರಭಾವವನ್ನು ಬಳಸಿದ್ದಾರೆ ಎಂದು ವರದಿ ಕೂಡ ಆಗಿದೆ. ಆಗಸ್ಟ್ 2025 ರ ಆರಂಭದಲ್ಲಿ 17 ಮಹಿಳೆಯರು ಸಾಮೂಹಿಕವಾಗಿ ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿ ದೂರುಗಳನ್ನು ದಾಖಲಿಸಿರೋದ್ರಿಂದ ಇನ್ನಷ್ಟು ಸತ್ಯಾಂಶಗಳು ಬೆಳಕಿಗೆ ಬಂದಿವೆ.
ದೆಹಲಿ ಪೊಲೀಸರು ದೆಹಲಿ, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ರಾಜಸ್ಥಾನದಾದ್ಯಂತ ವ್ಯಾಪಕ ದಾಳಿ ನಡೆಸಿದ್ದಾರೆ. ಚೈತನ್ಯಾನಂದ ದೇಶದಿಂದ ಪಲಾಯನ ಮಾಡುವುದನ್ನು ತಡೆಯಲು ಲುಕ್ ಔಟ್ ಹೊರಡಿಸಲಾಗಿದೆ. ಚೈತನ್ಯಾನಂದ ಸರಸ್ವತಿ ಅವರು ಸಂಸ್ಥೆಯ ಹಾಸ್ಟೆಲ್‌ನ ಬಹುತೇಕ ಮೂಲೆ ಮೂಲೆಗಳಲ್ಲಿ, ಸ್ನಾನಗೃಹಗಳ ಸುತ್ತಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದರು ಎಂದು ಆರೋಪಿಸಲಾಗಿದೆ .
ವೈಯಕ್ತಿಕ ಪ್ರಶ್ನೆಗಳನ್ನು ಕೇಳುತ್ತಿದ್ದ ಸ್ವಾಮೀಜಿ, ತಮ್ಮ ಬಳಿ ಅಶ್ಲೀಲ ಪ್ರಶ್ನೆಗಳನ್ನು ಕೇಳುತ್ತಿದ್ದರು, ಉದಾಹರಣೆಗೆ ಅವರು ಯಾರೊಂದಿಗಾದರೂ ಲೈಂಗಿಕ ಸಂಬಂಧ ಹೊಂದಿದ್ದೀರಾ ಮತ್ತು ಹಾಗಿದ್ದಲ್ಲಿ, ಅವರು ಕಾಂಡೋಮ್ ಬಳಸಿದ್ದಾರೆಯೇ ಎಂಬಂತಹ ಪ್ರಶ್ನೆಗಳನ್ನು ಕೇಳುತ್ತಿದ್ದರು. ವಿರೋಧಿಸಿದ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಲಾಯಿತು. ಅವರ ಹಾಜರಾತಿ ದಾಖಲೆಗಳನ್ನು ಕಡಿತಗೊಳಿಸಲಾಯಿತು, ಅಂಕಗಳನ್ನು ಕಡಿಮೆ ಮಾಡಲಾಯಿತು ಮತ್ತು ಪದವಿಗಳನ್ನು ತಡೆಹಿಡಿಯಲಾಯಿತು ಎಂದು ಆರೋಪಿಸಿದ್ದಾರೆ.
ಪ್ರಕರಣದ ಎಫ್‌ಐಆರ್‌ನಲ್ಲಿ ಅಸೋಸಿಯೇಟ್ ಡೀನ್ ಸೇರಿದಂತೆ ಮೂವರು ಮಹಿಳಾ ಸಿಬ್ಬಂದಿ ಸದಸ್ಯರ ಹೆಸರೂ ಇದೆ. ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಿದ, ಸಾಕ್ಷ್ಯಗಳನ್ನು ನಾಶಮಾಡುವಂತೆ ಒತ್ತಾಯಿಸಿದ ಮತ್ತು ತಮ್ಮ ಗುರುತನ್ನು ಮರೆಮಾಡಲು ತಮ್ಮ ಹೆಸರುಗಳನ್ನು ಬದಲಾಯಿಸುವಂತೆ ಒತ್ತಾಯಿಸಿದ ಆರೋಪ ಅವರ ಮೇಲಿದೆ. ಚೈತನ್ಯಾನಂದ ಸ್ವಾಮಿ ಆಗಸ್ಟ್ನಿಂದ ತಲೆ ಮರೆಸಿಕೊಂಡಿದ್ದಾರೆ.
ಆದರೆ, ಇದೇ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಲ್ಲಿ ಆ ಸ್ವಾಮೀಜಿ ತುಂಬಾ ಓದಿದವರು ಹಾಗೂ ಆ್ಯಪಲ್ ಸಂಸ್ಥೆಯ ಸಂಸ್ಥಾಪಕ ಸ್ಟೀವ್ ಜಾಬ್ಸ್, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರಿಂದಲೇ ಮೆಚ್ಚುಗೆ ಗಳಿಸಿಕೊಂಡಂಥವರು ಎಂಬಂಥ ವಿಚಾರಗಳು ಆ ಸ್ವಾಮೀಜಿಯವರು ರಚಿಸಿರುವ ಪುಸ್ತಕಗಳಲ್ಲಿರುವ ಲೇಖಕರ ಪರಿಚಯದಲ್ಲಿ ಹೇಳಲಾಗಿದೆ ಎಂಬ ವಿಚಾರಗಳು ಕೂಡ ಹರಿದಾಡುತ್ತಿವೆ. ಒಟ್ಟಾರೆಯಾಗಿ, ಆತ ವಿದ್ಯಾವಂತ, ಪ್ರತಿಭಾವಂತ, ತನ್ನದೇ ಆದ ಘನತೆಯಿರುವಂಥ ವ್ಯಕ್ತಿ ಎಂದು ಹೇಳಲಾಗಿದೆ ಆತನ ಬಗ್ಗೆಯೇ ಹೊಗಳಲಾಗಿದೆ.
ತಾವೊಬ್ಬ ಎಂಬಿಎ ಪದವೀಧರರಾಗಿದ್ದು ಪಿಎಚ್ ಡಿಯನ್ನೂ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಭಾರತದಲ್ಲಿ ಎಂಬಿಎವರೆಗೆ ವ್ಯಾಸಂಗ ಮಾಡಿದ್ದು ಯೂನಿವರ್ಸಿಟಿ ಆಫ್ ಚಿಕಾಗೋ ಬೂತ್ ಸ್ಕೂಲ್ ಆಫ್ ಬ್ಯುಸಿನೆಸ್ ನಲ್ಲಿ ಪಿಎಚ್ ಡಿ ಅಧ್ಯಯನ ಮಾಡಿರುವುದಾಗಿ ಹೇಳಿದ್ದಾರೆ. ಪಿಎಚ್ ಡಿಯ ನಂತರವೂ ತಮ್ಮ ವ್ಯಾಸಂಗವನ್ನು ಮುಂದುವರಿಸಿದ್ದು, ಏಳು ಡಿ-ಲಿಟ್ ಪದವಿಗಳನ್ನು ಪಡೆದಿದ್ದಾಗಿ ಹೇಳಿಕೊಂಡಿದ್ದಾರೆ.
ಈ ಎಲ್ಲಾ ಮಾಹಿತಿಗಳು ಸಿಗೋದು ಅವರು ಬರೆದಿರುವ ಪುಸ್ತಕಗಳಲ್ಲಿರುವ ಲೇಖಕರ ಪರಿಚಯ ವಿಭಾಗದಲ್ಲಿ. ಆ ಪರಿಚಯದ ಲೇಖನಗಳಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ತಮ್ಮದೊಂದು ಭಾಷಣದಲ್ಲಿ ತಮ್ಮ ಪುಸ್ತಕವೊಂದರ ಅಂಶವನ್ನು ಉಲ್ಲೇಖಿಸಿದ್ದರು ಎಂದೂ ಹೇಳಿಕೊಂಡಿದ್ದಾರೆ. ಅಚ್ಚರಿಯೆಂಬಂತೆ, ಇವರ ಪುಸ್ತಕವಾದ ಫರ್ಗೆಟ್ ಕ್ಲಾಸ್ ರೂಂ ಲರ್ನಿಂಗ್ ಎಂಬ ಪುಸ್ತಕಕ್ಕೆ ಆ್ಯಪಲ್ ಕಂಪನಿಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರೇ ಮುನ್ನುಡಿ ಬರೆದಿದ್ದಾರೆ. ಆ ಪುಸ್ತಕವು ಯೂರೋಪ್ ಹಾಗೂ ಉತ್ತರ ಅಮೆರಿಕದ ಮಾರುಕಟ್ಟೆಯಲ್ಲಿ 2007ರಲ್ಲಿ ಅತ್ಯಂತ ಜನಪ್ರಿಯ ಪುಸ್ತಕ ಎನಿಸಿಕೊಂಡು ಹೇರಳವಾಗಿ ಮಾರಾಟವಾಗಿದೆ ಎಂದು ಅವರು ತಮ್ಮ ಲೇಖಕರ ಪರಿಚಯದಲ್ಲಿ ತಿಳಿಸಿದ್ದಾರೆ.
ಸ್ನೇಹಿತರೆ ಬೆಳ್ಳಗಿರೋದೆಲ್ಲಾ ಹಾಲಲ್ಲ. ಕಾವಿ ತೊಟ್ಟವರೆಲ್ಲಾ ಸ್ವಾಮೀಜಿಗಳಲ್ಲ ಅನ್ನೋ ಮಾತನ್ನು ಮತ್ತೆ ಒತ್ತಿ ಹೇಳ್ತಾ, ಈ ಎಲ್ಲಾ ಆರೋಪಗಳಿಂದ ಕೂಡ ಕ್ಲಿನ್ ಚಿಟ್ ಪಡೆದು ಮತ್ತದೇ ಧರ್ಮಗುರುವಾಗಿ ವಾಪಾಸ್ ಬಂದ್ರು ಅಚ್ಚರಿ ಏನಿಲ್ಲ. ಅವ್ರ ಅನುಯಾಯಿಗಳು ಅವ್ರನ್ನು ಆದರದಿಂದ ಸ್ವಾಗತ ಮಾಡಲು ಕಾಯ್ತಿರಬಹುದು. ಎಲ್ಲರಿಗೂ ಒಳ್ಳೆಯದಾಗಲಿ. ಇನ್ನಾದ್ರೂ ಸ್ವಲ್ಪ ಎಚ್ಚರವಾಗಿರಿ. ಎಲ್ಲದನ್ನು ಅಷ್ಟು ಸುಲಭವಾಗಿ ನಂಬಲು ಹೋಗಬೇಡಿ.